30ರಿಂದ ಕೊಂಡ್ಲಿ ಮಾರಿಕಾಂಬಾ ಜಾತ್ರೆ
Team Udayavani, Mar 14, 2021, 3:47 PM IST
ಸಿದ್ದಾಪುರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿತಾಲೂಕಿನ ಇಲಾಖಾ ಅಧಿಕಾರಿಗಳ ಸಭೆ ನಡೆಸಿದರು.
ಪ್ರಮುಖವಾಗಿ ಮಾ.30 ರಿಂದ ಏ.6 ರವರೆಗೆ ನಡೆಯಲಿರುವ ಕೊಂಡ್ಲಿಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕುರಿತು ಇಲಾಖೆಗಳೊಂದಿಗೆ ಚರ್ಚಿಸಿ, ಜಾತ್ರೆ ಸಂದರ್ಭದಲ್ಲಿ ಯಾವುದೇತೊಂದರೆ ಆಗದಂತೆ ಮುನ್ನೆಚ್ಚರಿಕಾಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಹೆಸ್ಕಾಂ ಇಲಾಖೆಯಿಂದನಿರಂತರ ವಿದ್ಯುತ್ ಒದಗಿಸುವ ಬಗ್ಗೆ,ಪಪಂದಿಂದ ಕುಡಿಯುವ ನೀರಿನ ವ್ಯವಸ್ಥೆ,ಸ್ವಚ್ಛತೆ, ಸುವ್ಯವಸ್ಥಿತ ನೈರ್ಮಲೀಕರಣದ ವ್ಯವಸ್ಥೆ, ಆರೋಗ್ಯ ಇಲಾಖೆಯಿಂದ ಕೋವಿಡ್ ರೋಗ ನಿಯಂತ್ರಣ ಕುರಿತು ಜಾಗೃತಿ ಮತ್ತು ತುರ್ತು ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಬಗ್ಗೆ, ಪೊಲೀಸ್‌ಇಲಾಖೆಯಿಂದ ಜಾತ್ರೆ ಸಂದರ್ಭದಲ್ಲಿಅಹಿತಕರ ಘಟನೆಗಳು ಆಗದಂತೆ ಭಕ್ತಾದಿಗಳ ಸುರಕ್ಷತೆ, ಶಾಂತತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಮತ್ತು ವಾಹನ ಸಂಚಾರ ದಟ್ಟಣೆಯಾಗದಂತೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಪ್ರಸ್ತಾಪಿಸಿ, ಆಯಾ ಇಲಾಖೆಯವರು ಜವಾಬ್ದಾರಿಯಿಂದ ಯಾವುದೇ ರೀತಿಯ ಸಮಸ್ಯೆಗಳು ಆಗದಂತೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಬಗ್ಗೆ, ವ್ಯಾಕ್ಸಿನ್ ತೆಗೆದುಕೊಳ್ಳುವ ಬಗ್ಗೆ, ಮಂಗನ ಕಾಯಿಲೆಯ ಜಾಗೃತಿ ಮತ್ತುಮುನ್ನೆಚ್ಚಿರಿಕಾ ಕ್ರಮ ತೆಗೆದುಕೊಳ್ಳುವ ಬಗ್ಗೆ ಚರ್ಚಿಸಿದರು. ಕಂದಾಯ ಇಲಾಖೆಯಿಂದ ಆಧಾರ ಕಾರ್ಡ್ ತಿದ್ದುಪಡಿ ಮಾಡುವಕುರಿತು, ಪಹಣಿ ಪತ್ರಿಕೆಯಲ್ಲಿ ತಪ್ಪಾದ ಹೆಸರುಗಳನ್ನು ಸರಿಪಡಿಸುವ ಬಗ್ಗೆ, ಶಾಲಾವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆಆದಾಯ ಪ್ರಮಾಣ ಪತ್ರ ಹಾಗೂ ಇಘಖಪ್ರಮಾಣ ಪತ್ರಗಳನ್ನು ವಿತರಿಸುವ ಬಗ್ಗೆ ಅಗತ್ಯಕ್ರಮ ತೆಗೆದುಕೊಳ್ಳಲು ತಿಳಿಸಿದರು.
ತಾಲೂಕಿನಲ್ಲಿ ಕುಡಿಯುವ ನೀರಿನ ಅಭಾವ ಇರುವ ಗ್ರಾಮಗಳನ್ನು ಗುರುತಿಸಿ,ಅಂತಹ ಗ್ರಾಮಗಳ ಜನರಿಗೆ ತುರ್ತು ಕುಡಿಯುವ ನೀರನ್ನು ಒದಗಿಸಲು ಕ್ರಮತೆಗೆದುಕೊಳ್ಳುವ ಬಗ್ಗೆ ಹಾಗೂ ಜಲಜೀವನಮಿಷನ್ ಯೋಜನೆಯಡಿ ಕಾಮಗಾರಿಗಳಅನುಷ್ಠಾನ ತುರ್ತಾಗಿ ಪ್ರಾರಂಭಿಸಲುತಿಳಿಸಿದರು.
ಅಲ್ಲದೆ ತಾಪಂ, ಪಂಚಾಯತ ರಾಜ್ ಇಂಜಿನೀಯರಿಂಗ್ ಹಾಗೂಲೋಕೋಪಯೋಗಿ ಇಲಾಖೆಗಳಿಗೆಸರಕಾರದಿಂದ ಬಂದ ಅನುದಾನವನ್ನುಸಂಪೂರ್ಣವಾಗಿ ಬಳಕೆ ಮಾಡಬೇಕೆಂದುಅಧಿಕಾರಿಗಳಿಗೆ ಸೂಚಿಸಿದರು. ಒಟ್ಟಾರೆಯಾಗಿತಾಲೂಕಿನ ಅಭಿವೃದ್ಧಿ ಕುಂಠಿತವಾಗಬಾರದು. ಸಾರ್ವಜನಿಕರ ಅಗತ್ಯ ಸೌಕರ್ಯಗಳನ್ನುಒದಗಿಸಲು ಹಾಗೂ ತಾಲೂಕಿನಸರ್ವಾಂಗೀಣ ಅಭಿವೃದ್ಧಿಗೆ ನಾವೆಲ್ಲರೂಪ್ರಯತ್ನಿಸಬೇಕು ಎಂದು ತಿಳಿಸಿದರು.
ಜಿಪಂ ಸದಸ್ಯ ಎಂ.ಜಿ. ಹೆಗಡೆ ಗೆಜ್ಜೆ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರಹೆಗಡೆ, ಪಪಂ ಸದಸ್ಯರಾದ ಮಾರುತಿನಾಯ್ಕ, ಗುರುರಾಜ ಶಾನಭಾಗ, ನಂದನಬೋರ್ಕರ್, ತಹಶೀಲ್ದಾರ್ ಪ್ರಸಾದ, ತಾಪಂ ಇಒ ಪ್ರಶಾಂತರಾವ್, ಸಿಪಿಐ ಮಹೇಶ,ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ,ಎಇಇ ಮುದಕಣ್ಣನವರ, ಕೊಂಡ್ಲಿ ಶ್ರೀ ಮಾರಿಕಾಂಬಾ ದೇವಸ್ಥಾನದ ಮೊಕ್ತೇಸರರಮೇಶ ರಾಯ್ಕರ, ಇಲಾಖಾ ಅಧಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.