ಮಹಿಳೆಯರು ಸುಸಂಸ್ಕೃತ ಕುಟುಂಬದ ಭದ್ರ ಬುನಾದಿ: ಇಂದ್ರಾಳಿ ದಿವಾಕರ ಶೆಟ್ಟಿ
Team Udayavani, Mar 14, 2021, 7:15 PM IST
ಡೊಂಬಿವಲಿ: ಮಹಿಳೆ ಸಂಸಾರದ ಎರಡು ಕಣ್ಣುಗಳ ಜತೆ ಸುಸಂಸ್ಕೃತ ಕುಟುಂಬದ ಭದ್ರ ಬುನಾದಿಯಾಗಿದ್ದಾಳೆ ಎಂದು ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಹೇಳಿ¨ªಾರೆ.
ಅವರು ಮಾ. 9ರಂದು ಡೊಂಬಿವಲಿ ಕರ್ನಾಟಕ ಸಂಘದ ಮಹಿಳಾ ವಿಭಾಗ ವತಿಯಿಂದ ಸಂಘದ ಮುಖ್ಯಾಲಯದ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವಿದೆ. ಪ್ರತಿಯೋರ್ವ ತಾಯಿ ತನ್ನ ಸೊಸೆಯನ್ನು ಹೆತ್ತ ಮಗಳಂತೆ ಹಾಗೂ ಪ್ರತಿಯೊಬ್ಬ ಸೊಸೆ ತನ್ನ ಅತ್ತೆಯನ್ನು ಹೆತ್ತ ತಾಯಿಯಂತೆ ಕಾಣುವುದರಿಂದ ಆ ಮನೆ ಶಾಂತಿ ಸೌಹಾರ್ದತೆಯ ನೆಲೆಯಾಗುತ್ತದೆ ಎಂದು ಹೇಳಿ ವಿಶ್ವದ ಸಮಸ್ತ ಮಹಿಳೆಯರಿಗೆ ಶುಭ ಹಾರೈಸಿದರು.
ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಸುಕುಮಾರ್ ಎನ್. ಶೆಟ್ಟಿ ಅವರು ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ನಿತ್ಯವೂ ಮಹಿಳಾ ದಿನವಾಗಿರಲಿ ಎಂದರು. ಮಹಿಳೆ ಪ್ರೀತಿ, ವಾತ್ಸಲ್ಯದ ಹಾಗೂ ಮಮತೆಯ ಸಾಕಾರ ಮೂರ್ತಿಯಾಗಿದ್ದಾಳೆ. ಇವತ್ತು ಪುರುಷರು ಜೀವನದಲ್ಲಿ ಏನನ್ನದರೂ ಸಾಧಿಸಿದ್ದರೆ ಅದರ ಹಿಂದೆ ಮಹಿಳೆಯ ಪ್ರೇರಣಾ ಶಕ್ತಿ ಇರುತ್ತದೆ ಎಂಬುದನ್ನು ಮರೆಯಬಾರದು ಎಂದು ಹೇಳಿ ಶುಭಕೋರಿದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಷ್ಮಾ ಡಿ. ಶೆಟ್ಟಿ ಅವರು, ಹೆಣ್ಣು ಮಕ್ಕಳನ್ನು ಗೌರವಿಸುವ ಸಂಸ್ಕಾರವನ್ನು ಪ್ರತಿಯೋರ್ವ ತಾಯಿಯು ತಮ್ಮ ಮಕ್ಕಳಿಗೆ ಮನೆಯಿಂದಲೇ ಕಲಿಸಬೇಕು. ಇತ್ತೀಚೆಗೆ ನಡೆದ ಡೊಂಬಿವಲಿ ಕರ್ನಾಟಕ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಜಯಗಳಿಸಿದ ನೂತನ ಆಡಳಿತ ಮಂಡಳಿಯ ಸದಸ್ಯರನ್ನು ಅಭಿನಂದಿಸಿ, ಮಹಿಳಾ ವಿಭಾಗದ ವತಿಯಿಂದ ಪುಷ್ಪಗುತ್ಛವನ್ನಿತ್ತು ಗೌರವಿಸಿದರು.
ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳಾದ ಇಂದ್ರಾಳಿ ದಿವಾಕರ ಶೆಟ್ಟಿ, ಸುಕುಮಾರ್ ಎನ್. ಶೆಟ್ಟಿ, ಡಾ| ವಿಜಯ್ ಕುಮಾರ್ ಶೆಟ್ಟಿ, ದೇವದಾಸ್ ಕುಲಾಲ್, ಲೋಕನಾಥ ಶೆಟ್ಟಿ, ದಿನೇಶ್ ಕುಡ್ವ, ನ್ಯಾಯವಾದಿ ಆರ್. ಎಂ. ಭಂಡಾರಿ, ವಸಂತ ಸುವರ್ಣ, ರಮೇಶ್ ಕಾಖಂಡಕಿ, ಸತೀಶ್ ಆಲಗೂರ, ಅಜೀತ ಉಮರಾಣಿ, ಆನಂದ ಶೆಟ್ಟಿ, ರಾಜೀವ್ ಭಂಡಾರಿ, ರಮೇಶ್ ಶೆಟ್ಟಿ ಹಾಗೂ ಮಹಿಳಾ ವಿಭಾಗದ ಸುಷ್ಮಾ ಶೆಟ್ಟಿ, ಮಧುರಿಕಾ ಬಂಗೇರ, ಗೀತಾ ಮೆಂಡನ್, ವಿದ್ಯಾ ಆಲಗೂರ ಮೊದಲಾದವರು ಉಪಸ್ಥಿತರಿದ್ದರು.
ಮಹಿಳಾ ವಿಭಾಗದ ಪದಾಧಿಕಾರಿಗಳು ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಭಜನೆ, ಗಾಯನ ಮುಂತಾದ ಕಾರ್ಯಕ್ರಮಗಳು ಜರಗಿತು. ಮಹಿಳಾ ವಿಭಾಗದ ಗೌರವ ಕಾರ್ಯದರ್ಶಿ ಮಧುರಿಕಾ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಜತೆ ಕೋಶಾಧಿಕಾರಿ ಗೀತಾ ಮೆಂಡನ್ ವಂದಿಸಿದರು. ಮಹಿಳಾ ಸದಸ್ಯೆಯರು ಪ್ರಾರ್ಥನೆಗೈದರು. ವಾಚನಾ ಲಯ ವಿಭಾಗದ ಗೀತಾ ಕೋಟೆಕಾರ್ ಹಾಗೂ ಚಂಚಲಾ ಸಾಲ್ಯಾನ್ ಸಹಕರಿಸಿದರು.
ಚಿತ್ರ-ವರದಿ: ಗುರುರಾಜ ಪೋತನೀಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.