![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Mar 15, 2021, 12:25 PM IST
ಚಿಕ್ಕಮಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದಲ್ಲಿ ಡಿ ಕೆ ಶಿವಕುಮಾರ್ ತನ್ನ ಹೆಸರನ್ನ ಯಾಕೆ ತಳುಕು ಹಾಕುತ್ತಿದ್ದಾರೆಂದು ಗೊತ್ತಾಗುತ್ತಿಲ್ಲ. ಪ್ರಕರಣದ ತನಿಖೆಯಾಗಲಿ, ಪ್ರೊಡ್ಯೂಸರ್, ಡೈರಕ್ಟರ್, ಆ್ಯಕ್ಟರ್ ಯಾರೆಂದು ಗೊತ್ತಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಡಿ ಕೇಸ್ ಕರ್ನಾಟಕ ರಾಜಕಾರಣಕ್ಕೆ ಗೌರವ ತರುವ ವಿಷಯವಲ್ಲ, ಹಿಂದೆ ಮೌಲ್ಯಧಾರಿತ ರಾಜಕೀಯದ ಚರ್ಚೆ ನಡೆಯುತ್ತಿತ್ತುಆದರೆ ಈಗ ಸಿ.ಡಿ ಆಧಾರಿತ ರಾಜಕೀಯದ ಚರ್ಚೆ ನಡೆಯುತ್ತಿದೆ. ಮೌಲ್ಯಧಾರಿತವೋ, ಸಿಡಿ ಆಧಾರಿತ ರಾಜಕಾರಣ ಬೇಕೋ ಎನ್ನುವ ಬಗ್ಗೆ ಎಲ್ಲರೂ ಯೋಚಿಸಬೇಕು ಎಂದರು.
ಇದನ್ನೂ ಓದಿ:ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿಯಾದ ನಟ ಶಿವರಾಜ್ ಕುಮಾರ್
ಸಾರ್ವಜನಿಕ ಜೀವನದಲ್ಲಿರುವ ನಾವು ಪರಿಶುದ್ಧ ರಾಜಕಾರಣದ ಬಗ್ಗೆ ಆಲೋಚಿಸಬೇಕು. ರಾಜಕಾರಣಿಗಳಿಗೆ ಜನ ಲಜ್ಜೆ-ಮನಲಜ್ಜೆ ಎರಡೂ ಇರಬೇಕು. ನಮಗೆ ನಾವೇ ಪರಿಮಿತಿ ಹಾಕಿಕೊಳ್ಳುವುದು ಮನಲಜ್ಜೆ, ಜನರಿಗೆ ಹೆದರುವುದು ಜನಲಜ್ಜೆ ಎಂದು ಸಿ.ಟಿ ರವಿ ಹೇಳಿದರು.
ತಮಿಳುನಾಡು ರಾಜಕೀಯದ ಬಗ್ಗೆ ಮಾತನಾಡಿದ ಅವರು, ಅಣ್ಣಾಮಲೈ ತಮಿಳುನಾಡಿಗೆ ಒಳ್ಳೆಯ ನಾಯಕತ್ವ ನೀಡುತ್ತಾರೆ. 234 ಸ್ಥಾನದಲ್ಲಿ 20 ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಸಿದೆ. ಎಐಡಿಎಂಕೆ ನೇತೃತ್ವದ ಎನ್ ಡಿಎ ಈ ಬಾರಿ ಅಧಿಕಾರಕ್ಕೆ ಬರುತ್ತದೆ. ಬಿಜೆಪಿ 10 ಸ್ಥಾನ ದಾಟಿ ಗೆಲುವು ಸಾಧಿಸುತ್ತದೆ. ಅಣ್ಣಾಮಲೈಗೆ ಭಾರೀ ಜನಬೆಂಬಲ ವ್ಯಕ್ತವಾಗ್ತಿದೆ, ಅವರು ಗೆಲ್ಲುತ್ತಾರೆ ಎಂದರು.
ಇದನ್ನೂ ಓದಿ: ಚಿಕ್ಕಮಗಳೂರು: ಮೆಣಸು ಕೊಯ್ಯವಾಗ ವಿದ್ಯುತ್ ತಗುಲಿ ಯುವಕ ಸಾವು!
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
You seem to have an Ad Blocker on.
To continue reading, please turn it off or whitelist Udayavani.