ನಟನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ : ನಟಿ ಮೀಶಾಗೆ 3 ವರ್ಷ ಜೈಲು ಶಿಕ್ಷೆ
Team Udayavani, Mar 15, 2021, 2:55 PM IST
ನವದೆಹಲಿ : ನಟ ಮತ್ತು ಗಾಯಕ ಅಲಿ ಜಾಫರ್ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಪಾಕ್ ಮೂಲದ ಗಾಯಕಿ ಹಾಗೂ ಬಾಲಿವುಡ್ ಚಿತ್ರನಟಿ ಮಿಶಾ ಶಫಿ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
2018 ರಲ್ಲಿ ವಿಶ್ವಾದ್ಯಂತ ಶುರುವಾಗಿದ್ದ ‘ಮೀಟೂ’ ಅಭಿಯಾನದ ವೇಳೆ ಮಿಶಾ ಶಫಿ, ಅಲಿ ಜಾಫರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಹಾಡು ರೆಕಾರ್ಡಿಂಗ್ ವೇಳೆ ಸ್ಟುಡಿಯೋದಲ್ಲಿ ಜಾಫರ್ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂದು ಆರೋಪ ಮಾಡಿದ್ದರು. ಈ ಆರೋಪ ಅಲ್ಲಗಳೆದಿದ್ದ ಅಲಿ, ಶಫಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಗಾಯಕಿ ಮಿಶಾ ವಿರುದ್ಧ ಜಾಫರ್ ನಡೆಸಿದ್ದ ಕಾನೂನಾತ್ಮಕ ಹೋರಾಟದಲ್ಲಿ ಇದೀಗ ಜಯ ಸಿಕ್ಕಿದೆ. ಈ ಪ್ರಕರಣದ ವಿಚಾರಣೆ ನಡೆಸಿರುವ ಪಾಕ್ ನ್ಯಾಯಾಲಯ, ಶಫಿ ಆರೋಪ ಆಧಾರ ರಹಿತ ಎಂದು ಹೇಳಿದೆ. ಸುಳ್ಳು ಆರೋಪ ಮಾಡಿ, ವ್ಯಕ್ತಿಯೊಬ್ಬರ ಗೌರವಕ್ಕೆ ಚ್ಯುತಿ ತರಲು ಪ್ರಯತ್ನಿಸಿದ ಕೃತ್ಯಕ್ಕೆ ಮೂರು ವರ್ಷಗಳ ವರೆಗೆ ಕಾರಾಗೃಹದ ಶಿಕ್ಷೆ ಪ್ರಕಟಿಸಿದೆ. ನ್ಯಾಯಾಲಯದ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿರುವ ಶಫಿ, ಈ ಸಮಾಜದದಲ್ಲಿ ಇಂತಹ ಪ್ರಕರಣಗಳಲ್ಲಿ ಯಾವ ಮಹಿಳೆಗೆ ನ್ಯಾಯ ಸಿಕ್ಕಿದೆ ಹೇಳಿ ಎಂದು ಪ್ರಶ್ನಿಸಿದ್ದಾರೆ.
ಇನ್ನು ಕಾನೂನು ಹೋರಾಟದಲ್ಲಿ ತಮಗೆ ಸಿಕ್ಕಿರುವ ಜಯದ ಬಗ್ಗೆ ಮಾತಾಡಿರುವ ಅಲಿ, ನನ್ನ ಮೇಲಿನ ಆರೋಪವನ್ನು ಕಾನೂನು ಮೂಲಕ ಸುಳ್ಳಾಗಿಸುವುದು ನನ್ನ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಆಕೆಯ ಮೇಲೆ ಯಾವುದೇ ಆರೋಪ, ಹೇಳಿಕೆಗಳನ್ನು ನೀಡಲಿಲ್ಲ. ಬದಲಾಗಿ ನ್ಯಾಯಾಲಯದ ಮೊರೆ ಹೋದೆ. ಕೊನೆಗೂ ಸತ್ಯಕ್ಕೆ ಜಯ ಸಂದಿದೆ ಎಂದಿದ್ದಾರೆ. ಇನ್ನು ಬಾಲಿವುಡ್ನ ‘ಭಾಗ್ ಮಿಲ್ಕಾ ಭಾಗ್’ ಸಿನಿಮಾಗಳಲ್ಲಿ ಮಿಶಾ ಶಫಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.