ಅಡುಗೆ-ಹೆರಿಗೆಗೆ ಹೆಣ್ಣು ಸೀಮಿತವಲ್ಲ: ಡಾ| ಮಲ್ಲಿಕಾ ಘಂಟಿ


Team Udayavani, Mar 15, 2021, 2:57 PM IST

ಅಡುಗೆ-ಹೆರಿಗೆಗೆ ಹೆಣ್ಣು ಸೀಮಿತವಲ್ಲ: ಡಾ| ಮಲ್ಲಿಕಾ ಘಂಟಿ

ಬಾಗಲಕೋಟೆ: ಸಮಾಜದಲ್ಲಿ ಜ್ಞಾನದ ಮೂಲವನ್ನೆಲ್ಲ ಪುರುಷರು ಗುತ್ತಿಗೆ ಹಿಡಿದಿದ್ದೇವೆ ಎಂದು ಭಾವಿಸಿದ್ದಾರೆ. ಹೀಗಾಗಿ ಸಮಾಜದಲ್ಲಿ ಹೆಣ್ಣನ್ನು ಹೆರಿಗೆ ಮತ್ತು ಅಡುಗೆ ಮನೆಯ ಜವಾಬ್ದಾರಿ ನಿಭಾಯಿಸಲು ಸೀಮಿತಗೊಳಿಸುತ್ತಿದ್ದಾರೆ ಎಂದು ಹಂಪಿ ಕನ್ನಡವಿವಿಯ ವಿಶ್ರಾಂತ ಕುಲಪತಿ ಡಾ| ಮಲ್ಲಿಕಾ ಘಂಟಿ ವಿಷಾದ ವ್ಯಕ್ತಪಡಿಸಿದರು.

ಶಿರೂರದಲ್ಲಿ ರವಿವಾರ ಆರಂಭಗೊಂಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಂಡಸಿನ ಪ್ರಪಂಚವೆಂದರೆ ಅದುಹೊರಲೋಕ ಮತ್ತು ಪರಲೋಕ. ಇದರ ಸಾಧನೆಗಾಗಿ ಗಂಡಸು ಲೌಕಿಕ-ಅಲೌಕಿಕ ಜ್ಞಾನ ಸಂಪತ್ತನೆಲ್ಲ ಬಳಸಿಕೊಳ್ಳಬಹುದು. ಆದರೆ ಹೆಣ್ಣಿಗೆ ಮಾತ್ರ ಹೊರಲೋಕವೆಂಬುದೆ ಇಲ್ಲ. ಈ ಹೊರಲೋಕದ ಜ್ಞಾನಕ್ಕಾಗಿ ಹೆಣ್ಣು-ಗಂಡೆಂಬ ಭೇದ ಮಾಡಿದ್ದನ್ನು ಪ್ರಶ್ನಿಸುವ ಪ್ರಬುದ್ಧತೆ ಇರಲಿಲ್ಲ. ಜ್ಞಾನ ಮಾರ್ಗವಿಲ್ಲದೆ ಆತ್ಮ-ಪರಮಾತ್ಮನನ್ನು ಅರಿಯುವುದಾದರೂ ಹೇಗೆ? ಇಂದಿಗೂ ಅಕ್ಷರ, ಅರಿವು, ಜ್ಞಾನದ ಸಾಧನಗಳನ್ನೆಲ್ಲ ಪುರೋಹಿತಶಾಹಿ ಮತ್ತು ನವ ಬಂಡವಾಳ ಶಾಹಿಗಳು ತಮ್ಮ ಕೈ ತಪ್ಪಿ ಹೋಗದ ಹಾಗೆ ಕಾಯಲಾಗುತ್ತಿದೆ ಎಂದು ಹೇಳಿದರು.

ಜನಸಮುದಾಯ ನಿಯಂತ್ರಿಸುವ ಕೆಲಸ: ಪ್ರಭು ಪ್ರಭುತ್ವದಿಂದ ಪ್ರಜಾಪ್ರಭುತ್ವದವರೆಗಿನ ಚರಿತ್ರೆಯಲ್ಲಿನಿಚ್ಚಳವಾಗಿ ಕಾಣಿಸುವ ಸಂಗತಿಗಳೆಂದರೆಧರ್ಮಪ್ರಭುತ್ವ ಮತ್ತು ರಾಜಪ್ರಭುತ್ವಗಳು ಸೇರಿಯೆಪ್ರಜೆ ಮತ್ತು ಜನಸಮುದಾಯ ನಿಯಂತ್ರಿಸುವಕೆಲಸ ಮಾಡಿವೆ. ಜನ ವಿರೋಧಿ ನೀತಿ ಪ್ರಶ್ನಿಸುವ ಪ್ರತಿಭಟಿಸುವ ಶಕ್ತಿಗಳು ಅದರೊಳಗಿನಿಂದಲೇಹುಟ್ಟಿವೆ ಎಂದರು.

ಗುಡಿ-ಗುಂಡಾರ, ಮಂದಿರ- ಮಸೀದಿ,ಮಠ- ಚರ್ಚ್‌ಗಳ ಸ್ಥಾಪನೆಯ ಹಿಂದೆ ಜನಹಿತಇದೆ ಎಂದು ಸುಳ್ಳನ್ನು ಸತ್ಯದ ರೂಪದಲ್ಲಿ ಜನರ ಮೆದುಳಿನಲ್ಲಿ ಹುಳಬಿಡಲಾಗಿದೆ. ಈ ಹುಳಗಳನ್ನುಸರ್ಜರಿ ಮಾಡಿ ತೆಗೆಯುವ ಕೆಲಸ ಸಾಹಿತಿಗಳಿಂದಸಾಧ್ಯ. ಕೇವಲ ಸಾಹಿತಿಗಳು ಮಾಡುವುದಾದರೆಓದುಗರ ಕೆಲಸವೇನು. ಓದಿ ಓದದೆ ಹಾಗೆ ನಟಿಸುವರಾಜಕಾರಣಿಗಳ ಪಾತ್ರವೇನು, ಧಾರ್ಮಿಕ ಕ್ಷೇತ್ರದವಾರಸುದಾರಿಕೆ ಹೊತ್ತವರೇನು ಮಾಡಬೇಕು.ಭಕ್ತರೇನು ಮಾಡಬೇಕು, ರೈತರ ಪಾತ್ರವೇನು,ಮಹಿಳಾ ಲೋಕ ಇದರಿಂದ ಹೊರಗುಳಿಯಬೇಕೋ, ಒಳಗಿರಬೇಕೋ ಎಂದು ಪ್ರಶ್ನಿಸಿದರು.

ಇಂದು ಉಗ್ರ, ವ್ಯಗ್ರಗೊಂಡಿರುವ ಸಾಂಸ್ಕೃತಿಕ ರಾಷ್ಟ್ರೀಯವಾದ, ನವಬಂಡವಾಳಶಾಹಿವಾದ, ದೀರ್ಘ‌ ಕಾಲದಿಂದ ನಮ್ಮ ಮೆದುಳನ್ನು ಮೇಯ್ದಿರುವ ಜಾತಿವರ್ಗ, ಧರ್ಮದ ಶ್ರೇಷ್ಠತೆಯ ವ್ಯಸನ,ಹೊಸ ಪಾಳೆಗಾರಿಕೆ ಇವುಗಳಿಗೆಲ್ಲ ಉತ್ತರಕೊಡುವಬಹುದೊಡ್ಡ ಜವಾಬ್ದಾರಿಯನ್ನು ಜನ ಸಂಸ್ಕೃತಿಯೇಹೊತ್ತುಕೊಳ್ಳಬೇಕು ಎಂದು ಹೇಳಿದರು.

ಮೆಚ್ಚಿಸಲು ಪುಂಗಿ ಊದುತ್ತಾರೆ: ಕರ್ನಾಟಕದಲ್ಲಿಕನ್ನಡವೇ ಸಾರ್ವಭೌಮ ಭಾಷೆ. ಆದರೆ ಆಗಾಗ ದೆಹಲಿಯ ಗದ್ದುಗೆಯ ಮೇಲಿರುವ ವ್ಯಕ್ತಿಗಳನ್ನುಮೆಚ್ಚಿಸಲು ನಮ್ಮ ರಾಜಕಾರಣಿಗಳು, ಹಿಂದಿರಾಷ್ಟ್ರ ಭಾಷೆಯೆಂದು ಪುಂಗಿ ಊದುವುದನ್ನುಕೇಳುತ್ತಿರುತ್ತೇವೆ. ಹಿಂದಿ ಎನ್ನುವ ಭಾಷೆಯು ಸಹರಾಜ್ಯಭಾಷೆ. ಹೀಗಾಗಿ ಒಂದು ರಾಜ್ಯ ಭಾಷೆ ಇನ್ನೊಂದು ರಾಜ್ಯ ಭಾಷೆಯ ಮೇಲೆ ಸವಾರಿಮಾಡುವುದು ಸಂವಿಧಾನ ವಿರೋಧಿ ನಡೆ. ಹೀಗಾಗಿ ಕನ್ನಡ ದೇಶದ, ರಾಜ್ಯದ, ಪ್ರಜಾಪ್ರತಿನಿಧಿಗಳು ಮೊದಲು ಕನ್ನಡ, ದೇಶ ಭಾಷೆಯಲ್ಲಿಸಂವಿಧಾನದ ಚೌಕಟ್ಟಿನಲ್ಲಿ ಆಡಳಿತ ನಡೆಸುವಷ್ಟುವಿವೇಕವಂತರಾಗಬೇಕು ಎಂದು ಹೇಳಿದರು.

ಯಶಸ್ವಿ ಪುರುಷನ ಹಿಂದೆ ಮಹಿಳೆಯೊಬ್ಬಳಿರುತ್ತಾಳೆ ಎಂದು ಹೇಳಿ ಮಹಿಳೆ ಕಪಾಳಕ್ಕೆ ಹೊಡೆಯುತ್ತಿರುವುದನ್ನು ಮರೆತಿರುತ್ತೇವೆ.12ನೇ ಶತಮಾನದಲ್ಲಿ ಬಸವಾದಿ ಶರಣರೊಂದಿಗೆಸರಿದೊರೆಯಾದ ಮಹಿಳೆಯರು ಆಧುನಿಕಕಾಲದಲ್ಲಿ ಕಾಣೆಯಾಗಿರುವುದಕ್ಕೆ ಕಾರಣಗಳೇನು? ಮಹಿಳೆಯರನ್ನು ವ್ಯವಸ್ಥಿತವಾಗಿ ಅಂಚಿಗೆ ತಳ್ಳುತ್ತಿರುವ ಹಳೆಯ ಕೈಗಳೊಂದಿಗೆ ಜಾಗತಿಕ ಕೈಗಳು ಸೇರಿಕೊಂಡಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಶೋಷಣೆಗೆ ಒಳಪಡಿಸಿದವರು ಯಾರು: ಶೂದ್ರಸಮುದಾಯ ಮತ್ತು ಮಹಿಳೆಯರನ್ನು ಶತಶತಮಾನಗಳಿಂದ ಶೋಷಣೆಗೆ ಒಳಪಡಿಸಿದವರು ಯಾರು ಎಂಬುದನ್ನು ನಮ್ಮ ಜನಪದ ಮಹಿಳೆಕರಾರುವಕ್ಕಾಗಿ ಹೇಳಿರುವಳು. ಪಂಚಾಂಗವೆಂಬುದು ಮೋಸಗಾರರು ಸೃಷ್ಟಿಸಿದ ಬಹುದೊಡ್ಡ ಸಂಚು. ಈ ಸಂಚಿಗೆ ಬಲಿಯಾಗದ ಹಾಗೆ ಸಮಾಜವನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ಹುಡುಗರ ಕಣ್ಣಲ್ಲಿ ಬಾದಾಮಿ ಹುಡುಗಿಯರು! :

ನನ್ನ ತಾಯಿಯ ಊರು ಬಾದಾಮಿ ತಾಲೂಕಿನ ಹಂಗರಗಿ. ಬಾದಾಮಿಯಲ್ಲಿ ಪದವಿ ಕಾಲೇಜು ಇರಲಿಲ್ಲ. ಹೀಗಾಗಿ ನಾವು 12 ಜನ ಹುಡುಗಿಯರು ಬಾದಾಮಿ, ಹೊಳೆಆಲೂರಿನ ಹಲವುಹುಡುಗಿಯರು ಕಾಲೇಜು ಶಿಕ್ಷಣಕ್ಕೆ ಬಾಗಲಕೋಟೆಯ ಬಸವೇಶ್ವರ ಕಾಲೇಜಿಗೆ ಬರುತ್ತಿದ್ದೇವು. ಅದಕ್ಕೆ ಹುಬ್ಬಳ್ಳಿ-ಸೊಲ್ಲಾಪುರ ರೈಲಿನಲ್ಲಿ ಬಾಗಲಕೋಟೆಗೆ ಬಂತು, ಕಾಲೇಜು ಆವರಣದ ಹುಡುಗರವಸತಿ ನಿಲಯದ ಎದುರು ಹಾದು ಹೋಗುತ್ತಿದ್ದೇವು. ಆಗ ಹಾಸ್ಟೇಲ್‌ ಹುಡುಗರು ನಮ್ಮನ್ನುಬಾದಾಮಿ ಗಾಡಿ ಬಂತು ನೋಡ್ರಿ ಅಂತ ಕರೆಯುತ್ತಿದ್ದರು. ನಮ್ಮಲ್ಲಿ 12 ಜನ ಹುಡುಗಿಯರಲ್ಲಿಒಬ್ಬರು ಕಾಲೇಜಿಗೆ ಬರದಿದ್ದರೂ ಯಾಕ್‌ ಬಾದಾಮಿ ಟ್ರೇನಿನ ಒಂದ ಡಬ್ಬಿ ಕಾಣವಲ್ಲದು ನೋಡ ಎಂದು ನಮ್ಮ ಕಿವಿಗೆ ಕಾಣುವ ಹಾಗೆ ರೇಗಿಸುತ್ತಿದ್ದರು ಎಂದು ಡಾ| ಮಲ್ಲಿಕಾ ಘಂಟಿ ಹೇಳಿದರು.

ಟಾಪ್ ನ್ಯೂಸ್

SC: ಬಿಯಾಂತ್‌ ಹಂತಕ ಬಲ್ವಂತ್‌ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ

SC: ಬಿಯಾಂತ್‌ ಹಂತಕ ಬಲ್ವಂತ್‌ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Gaviyappa-MLA

Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್‌ ಶಾಸಕ

Chennai: ತೆರಿಗೆಯಲ್ಲಿ ಶೇ.50 ಪಾಲಿಗೆ ತಮಿಳ್ನಾಡು ಮತ್ತೆ ಆಗ್ರಹ

Chennai: ತೆರಿಗೆಯಲ್ಲಿ ಶೇ.50 ಪಾಲಿಗೆ ತಮಿಳ್ನಾಡು ಮತ್ತೆ ಆಗ್ರಹ

Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ

Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತEducation Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Snake

Vitla: ಹಾವು ಕಡಿದು ಪೆರುವಾಯಿ ಯುವಕ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ

ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

SC: ಬಿಯಾಂತ್‌ ಹಂತಕ ಬಲ್ವಂತ್‌ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ

SC: ಬಿಯಾಂತ್‌ ಹಂತಕ ಬಲ್ವಂತ್‌ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ

Arrest

Mangaluru: ಮದ್ಯ ಅಕ್ರಮ ದಾಸ್ತಾನು: ಮನೆ ಮೇಲೆ ಅಬಕಾರಿ ದಾಳಿ; ಮದ್ಯ ಸಹಿತ ಇಬ್ಬರು ವಶಕ್ಕೆ

1

Brahmavara: ಉದ್ಯೋಗ ಭರವಸೆ ನೀಡಿ ಹಣ ವಂಚನೆ

12

Manipal: ರೈಲಿನಲ್ಲಿ ಲಕ್ಷಾಂತರ ರೂ. ಒಡವೆ ಕಳ್ಳತನ

2

Mulki: ವ್ಯಕ್ತಿ ನಾಪತ್ತೆ; ಸೂಚನೆ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.