ಸಾವಿನ ಚಿತ್ರವಲ್ಲ, ಬದುಕಿಸುವ ಚಿತ್ರ!


Team Udayavani, Mar 16, 2021, 7:15 PM IST

ಸಾವಿನ ಚಿತ್ರವಲ್ಲ, ಬದುಕಿಸುವ ಚಿತ್ರ!

ಹಲ್ಲುನೋವು ಎನ್ನುತ್ತ ವೈದ್ಯರ ಬಳಿ ಹೋದೆವೆನ್ನಿ. ಇದಕ್ಕೊಂದು ಎಕ್ಸ್ ರೇ ತೆಗೆಯಬೇಕಲ್ಲ ಎನ್ನುತ್ತಾರೆ. ಆಟವಾಡುತ್ತ ಬಿದ್ದು ಮೂಳೆ ಮುರಿಸಿಕೊಂಡ ಹುಡುಗ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ನ ದಬ್ಬೆಕಟ್ಟಿಸಲು ಆಸ್ಪತ್ರೆಗೆ ಹೋದರೆ ಅಲ್ಲಿ ಚಿಕಿತ್ಸೆಗೆ ಮೊದಲು ಎಕ್ಸ್ ರೇ ತೆಗೆಸುತ್ತಾರೆ. ಎದೆಗೂಡಿನ ಸಮಸ್ಯೆ ಇರಲಿ, ಬೆನ್ನುಮೂಳೆಯ ನೋವಿರಲಿ, ಇಳಿಪ್ರಾಯಕ್ಕೆ ಕಾಣಿಸಿಕೊಂಡ ಸಂಧಿವಾತವಿರಲಿ, ಮಗುವಿನ ಅಸಮರ್ಪಕ ದೇಹ ಬೆಳವಣಿಗೆಯೇ ಇರಲಿ, ಏನನ್ನೇ ಪರೀಕ್ಷಿಸಿ ಚಿಕಿತ್ಸೆ ಕೊಡಬೇಕಾದರೂ ವೈದ್ಯರು ಮೊದಲು ಸೂಚಿಸುವುದು ಒಂದೇ ಸಂಗತಿ: ಎಕ್ಸ್ ರೇ ತೆಗೆಸಿ! ಈಗೇನೋ ಎಕ್ಸ್ ರೇ ಅನಕ್ಷರಸ್ಥರ ಬಾಯಲ್ಲೂ ಆರಾಮಾಗಿ ಓಡಾ ಡುವ ವೈಜ್ಞಾನಿಕ ಪದ. ಅದು ಮೂಲತಃ ಎಕ್ಸ್ ರೇ ಎಂಬ ಎರಡು ಪದಗಳಿಂದಾಗಿದೆ. ಹೆಸರು ಗೊತ್ತಿಲ್ಲದ/ ಹೆಸರಿಡದ/ಅಜ್ಞಾತ ಕಿರಣ ಎಂದು ಅದರರ್ಥ. ಒಂದು ರೀತಿಯಲ್ಲಿ ಹೆಸರಿಟ್ಟಿಲ್ಲ ಎಂದೇ ಹೆಸರಿಟ್ಟ ಹಾಗೆ! ಹಾಗೆ ಆ ಕಿರಣಗಳಿಗೆ ಎಕ್ಸ್ ಎಂಬ ಅನಿರ್ದಿಷ್ಟ ಹೆಸರಿಟ್ಟವನು ಆ ಕಿರಣಗಳನ್ನು ಮೊದಲ ಬಾರಿ ಪತ್ತೆಹಚ್ಚಿದ ವಿಲ್ಹೆಮ್‌ ಕಾನ್ರಾಡ್‌ ರಾಂಟಜನ್‌ ಎಂಬಾತ.

ಆತ ಕ್ಯಾಥೋಡ್‌ ಕೊಳವೆಗಳಲ್ಲಿ ಕಿರಣಗಳನ್ನು ಹಾಯಿಸಿ ಒಂದಷ್ಟು ಪ್ರಯೋಗಗಳನ್ನು ನಡೆಸುತ್ತಿದ್ದ. ಅಲ್ಲಿ ಉತ್ಸರ್ಜನೆಯಾಗುತ್ತಿದ್ದ ಕಿರಣಗಳು ಎದುರಿನ ಯಾವ ತಡೆಯನ್ನೂ ಹಾದು ಅಥವಾ ತೂರಿ ಹೋಗುತ್ತವೆ ಎಂಬುದನ್ನು ಪತ್ತೆ ಹಚ್ಚಿದ. ಆದರೆ, ಹೀಗೆ ಎದುರು ಇರುವ ಎಲ್ಲವನ್ನೂ ತೂರಿಕೊಂಡು ಹೋಗಬಲ್ಲ ಪ್ರಬಲ ಕಿರಣಗಳಿಂದ ಏನು ಉಪಯೋಗ ಎಂಬುದೇ ಅವನ ದೊಡ್ಡ ಚಿಂತೆಯಾಗಿತ್ತು! ಒಂದು ದಿನ ಗಂಡನ ಕೆಲಸ ಕಾರ್ಯಗಳನ್ನು ನೋಡಿಕೊಂಡು ಹೋಗೋಣ ಎಂದು ವಿಲ್‌ ಹೆಮ್‌ನ ಪತ್ನಿ ಅನ್ನಾ ಪ್ರಯೋಗಾಲಯಕ್ಕೆ ಬಂದಳು. ಆ ಸಮಯದಲ್ಲಿ ವಿಲ್ಹೆಮ್‌ ಎಕ್ಸ್ ಕಿರಣಗಳನ್ನು ಕಂಡು ಹಿಡಿದಾಗಿತ್ತು. ಆತ ಮ್ಯಾಜಿಕ್‌ ತೋರಿಸುತ್ತೇನೆಂದು ಹೇಳಿ ಪತ್ನಿಯನ್ನು ಕ್ಯಾಥೋಡ್‌ ಕೊಳವೆಯ ಮುಂದೆ ಕೂರಿಸಿ, ಆಕೆಯ ಕೈಯನ್ನು ಕೊಳವೆಯ ಬಾಯಿಗೆ ಅಡ್ಡಲಾಗಿ ಇಡಿಸಿದ. ಕಿರಣಗಳು ಹಾದು ಎದುರಿದ್ದ ಪರದೆಯ ಮೇಲೆ ಬಿದ್ದು, ಕೈಯ ಛಾಯೆ ಮೂಡುವಂತೆ ವ್ಯವಸ್ಥೆ ಮಾಡಿದ. ಎಕ್ಸ್ ಕಿರಣಗಳಿಂದ ಪರದೆಯಲ್ಲಿ ಮೂಡಿದ ಛಾಯಾಚಿತ್ರವನ್ನು ಕಂಡವಳೇ ಅನ್ನಾ ಬೆಚ್ಚಿಬಿದ್ದಳು. ಅವಳ ಕೈಯ ಅಷ್ಟೂ ಮೂಳೆಗಳು ಸ್ಪಷ್ಟವಾಗಿ ಕಾಣುವಂಥ ಫೋಟೋಗ್ರಾಫ್ ಅಲ್ಲಿತ್ತು.

ಒಂದು ಬೆರಳಲ್ಲಿ ಆಕೆಯ ಉಂಗುರದ ಅಚ್ಚು ಕೂಡ ಸ್ಪಷ್ಟವಾಗಿ ಮೂಡಿಬಂದಿತ್ತು. ನಾನು ನನ್ನ ಸಾವಿನ ಚಿತ್ರ ನೋಡುತ್ತಿದ್ದೇನೆ ಎಂದಳು ಅನ್ನಾ ಗಾಬರಿಯಿಂದ. ವ್ಯಕ್ತಿಗಳನ್ನು ಬದುಕಿಸಲು ಈ ಚಿತ್ರಗಳು ಬಳಸಲ್ಪಡಲಿವೆ ಎಂಬ ಭವಿಷ್ಯವಾದರೂ ಆಕೆಗೆ ಹೇಗೆ ತಿಳಿಯಬೇಕು! ಎಕ್ಸ್ ರೇ ಹಾಯಿಸಿ ತೆಗೆವ ಫೋಟೋಗಳನ್ನಿಟ್ಟುಕೊಂಡು ವೈದ್ಯರು ವ್ಯಕ್ತಿಯ ರೋಗ ನಿದಾನ ಮಾಡಬಹುದೆಂದು ತಿಳಿದದ್ದು ಅನಂತರ. ಆನಂತರದಲ್ಲಿ ವಿಲ್ಹೆಮ್‌ನ ಸಾಧನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು. ಚರ್ಮ ಕತ್ತರಿಸಿ ಒಳಗಿಣುಕಬೇಕಿದ್ದ ಎಷ್ಟೋ ಕೆಲಸಗಳನ್ನು ವಿಲ್ಹೆಮ್‌ನ ಎಕ್ಸ್ ರೇ ಕಿರಣಗಳು ಪರಿಹರಿಸಿಬಿಟ್ಟವು. ಅದರ ಜನಪ್ರಿಯತೆ ಮತ್ತು ಉಪಯುಕ್ತತೆ ಎಷ್ಟಿತ್ತೆಂದರೆ ಕೆಲವೇ ವರ್ಷಗಳಲ್ಲಿ, ವಿಲ್ಹೆಮ್, ಮೊತ್ತ ಮೊದಲ ಭೌತವಿಜ್ಞಾನದ ನೊಬೆಲ್‌ ಪುರಸ್ಕಾರ(1901) ಕೂಡ ಪಡೆದ! ತನ್ನ ಆವಿಷ್ಕಾರದ ಉಪಯೋಗ ಇಡಿಯ ಮನುಕುಲಕ್ಕಾಗಲಿ ಎಂದು ಯೋಚಿಸಿದ ಆತ, ಎಕ್ಸ್ ರೇ ಗೆ ಪೇಟೆಂಟ್‌ ಮಾಡಲು ಒಪ್ಪಲಿಲ್ಲ.

 

-ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

Marsh-webster

Border-Gavaskar Trophy: ಮಿಚೆಲ್‌ ಮಾರ್ಷ್‌ ಗಾಯಾಳು; ವೆಬ್‌ಸ್ಟರ್‌ ಬ್ಯಾಕಪ್‌ ಆಟಗಾರ

Bajarang-Poonia

Doping Test: ಕುಸ್ತಿಪಟು ಬಜರಂಗ್‌ ಪೂನಿಯಾಗೆ ನಾಲ್ಕು ವರ್ಷ ನಿಷೇಧ

ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ

DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ

MNG-Falnir

Mangaluru: ಬೊಲೆರೋ ವಾಹನಕ್ಕೆ ಆಕಸ್ಮಿಕ‌ ಬೆಂಕಿ

Udupi: ಗೀತಾರ್ಥ ಚಿಂತನೆ-107: ಮರಣವೂ- ನಾಟಕದ ಅಲಂಕಾರವೂ…

Udupi: ಗೀತಾರ್ಥ ಚಿಂತನೆ-107: ಮರಣವೂ- ನಾಟಕದ ಅಲಂಕಾರವೂ…

Punjalkatte ಸರಪಾಡಿ: ತೆಂಗಿನಮರದಿಂದ ಬಿದ್ದ ವ್ಯಕ್ತಿ ಸಾವು

Punjalkatte ಸರಪಾಡಿ: ತೆಂಗಿನಮರದಿಂದ ಬಿದ್ದ ವ್ಯಕ್ತಿ ಸಾವು

Hebri: ಕಬ್ಬಿನಾಲೆ: ಮರದಿಂದ ಬಿದ್ದು ಕೃಷಿಕ ಸಾವು

Hebri: ಕಬ್ಬಿನಾಲೆ: ಮರದಿಂದ ಬಿದ್ದು ಕೃಷಿಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Marsh-webster

Border-Gavaskar Trophy: ಮಿಚೆಲ್‌ ಮಾರ್ಷ್‌ ಗಾಯಾಳು; ವೆಬ್‌ಸ್ಟರ್‌ ಬ್ಯಾಕಪ್‌ ಆಟಗಾರ

Bajarang-Poonia

Doping Test: ಕುಸ್ತಿಪಟು ಬಜರಂಗ್‌ ಪೂನಿಯಾಗೆ ನಾಲ್ಕು ವರ್ಷ ನಿಷೇಧ

ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ

DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ

MNG-Falnir

Mangaluru: ಬೊಲೆರೋ ವಾಹನಕ್ಕೆ ಆಕಸ್ಮಿಕ‌ ಬೆಂಕಿ

Udupi: ಗೀತಾರ್ಥ ಚಿಂತನೆ-107: ಮರಣವೂ- ನಾಟಕದ ಅಲಂಕಾರವೂ…

Udupi: ಗೀತಾರ್ಥ ಚಿಂತನೆ-107: ಮರಣವೂ- ನಾಟಕದ ಅಲಂಕಾರವೂ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.