ಯತ್ನಾಳ್ ಹೇಳಿಕೆಗೆ ಬಣಜಿಗರ ಖಂಡನೆ
Team Udayavani, Mar 16, 2021, 7:21 PM IST
ತಾಳಿಕೋಟೆ: ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸಬೇಕೆಂದು ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಮಾಡುತ್ತಿರುವ ಹೋರಾಟಕ್ಕೆ ನಮ್ಮ ತಕರಾರು ಇಲ್ಲ. ಮೀಸಲಾತಿ ಕೇಳುವ ಭರದಲ್ಲಿ ಬಣಜಿಗ ಸಮಾಜದ ಬಗ್ಗೆ ಅತ್ಯಂತ ವ್ಯಂಗ್ಯ ಮತ್ತು ದ್ವೇಷ ಭಾವನೆ ಕಾರುತ್ತಿರುವ ಯತ್ನಾಳ ಅವರ ಹೇಳಿಕೆಗಳು ಖಂಡನೀಯವಾಗಿವೆ ಎಂದು ಬಣಜಿಗ ಸಮಾಜದ ರಾಜ್ಯ ಕಾರ್ಯಕಾರಿಣಿ ಸದಸ್ಯ ಜಿ.ಎ. ಕಸ್ತೂರಿ ಹೇಳಿದರು.
ಶಾಸಕ ಯತ್ನಾಳ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಸೋಮವಾರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಸಲ್ಲಿಸಿ ಅವರು ಮಾತನಾಡಿದರು. ಬಣಜಿಗ ಸಮಾಜದ ಬಗ್ಗೆ ಯತ್ನಾಳ ಅವರು ಕಾರುತ್ತಿರುವ ದ್ವೇಷ ಏತಕ್ಕಾಗಿ ಮತ್ತು ಬಣಜಿಗ ಸಮಾಜದಿಂದ ಅವರಿಗೆ ಏನಾದರೂ ಅನ್ಯಾಯವಾಗಿದೆಯೇ ಎಂದು ಪ್ರಶ್ನಿಸಿದ ಅವರು, ಬಣಜಿಗ ಸಮಾಜದವರಿಗೆ ಹಿಂದುಳಿದ ವರ್ಗದಲ್ಲಿ ಮೀಸಲಾತಿ ಸಿಕ್ಕಿದ್ದು ನಿನ್ನೆ ಮೊನ್ನೆಯಲ್ಲ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರೇನೂ ಕಲ್ಪಿಸಿಕೊಟ್ಟಿಲ್ಲ.
1976ರಲ್ಲಿ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾಗಿದ್ದ ಲಕ್ಷ್ಮಣ ಹಾವನೂರ ಅವರು ಕಲ್ಪಿಸಿಕೊಟ್ಟಿದ್ದಾರೆ. ಯತ್ನಾಳ ಅವರು ಒಮ್ಮೆ ಆಯೋಗದ ವರ ದಿಯನ್ನು ಅಧ್ಯಯನ ಮಾಡಲಿ. 2013ರಲ್ಲಿ ಬಣಜಿಗ ಸಮಾಜದ ಮುಖಂಡರುಗಳು ಅಂದಿನ ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ ಅವರಿಗೆ ಮೀಸಲಾತಿ ಪ್ರಮಾಣ ಪತ್ರ ಸಿಗದಿರುವ ಕುರಿತು ಮನವಿ ಸಲ್ಲಿಸಿದ್ದರು. ಆ ಸಮಯದಲ್ಲಿ ಶೆಟ್ಟರ ಅವರು ಸರ್ಕಾರದ ನಿಯಮಾನುಸಾರ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದರು. ಮೀಸಲಾತಿ ಪ್ರಮಾಣ ಪತ್ರ ಕೊಡಲೇ ಬೇಕೆಂದು ಎಲ್ಲಿಯೂ ಕೂಡಾ ಆದೇಶ ಮಾಡಿಲ್ಲ.
ಅಂತಹ ಆದೇಶವಿದ್ದರೆ ಸಾರ್ವತ್ರಿಕ ಬಹಿರಂಗಗೊಳಿಸಲಿ ಎಂದರು. ಈರಣ್ಣ ಕಲಬುರ್ಗಿ, ಶಿವಲಿಂಗಪ್ಪ ಪಾಲ್ಕಿ, ರಮೇಶ ಸಾಲಂಕಿ, ಮುರುಗೇಶ ಕಡಕೋಳ, ಪ್ರಭು ಕತ್ತಿ, ಎಂ.ಎಸ್. ಸರಶೆಟ್ಟಿ, ಗುರುಸಂಗಪ್ಪ ಜಮ್ಮಲದಿನ್ನಿ, ಮಹಾಂತೇಶ ಬಳಗಾನೂರ, ಸತೀಶ ಸರಶೆಟ್ಟಿ, ಶೇಖಪ್ಪ ಪಟ್ಟಣಶೆಟ್ಟಿ, ಮಲ್ಲು ಸರಶೆಟ್ಟಿ, ಮಹೇಶ ಸರಶೆಟ್ಟಿ, ಸುಭಾಷ್ ಕಾಜಗಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.