BPL‌ ಹಂತಕ್ಕೆ ಇಳಿದ ಅನುಕೂಲಸ್ಥರು! ಕಾನೂನಿನ ತೊಡಕು, ವ್ಯರ್ಥವಾಗುತ್ತಿರುವ ಆಸ್ತಿ ಹೂಡಿಕೆ


Team Udayavani, Mar 17, 2021, 6:00 AM IST

BPL‌ ಹಂತಕ್ಕೆ ಇಳಿದ ಅನುಕೂಲಸ್ಥರು! ಕಾನೂನಿನ ತೊಡಕು, ವ್ಯರ್ಥವಾಗುತ್ತಿರುವ ಆಸ್ತಿ ಹೂಡಿಕೆ

1995ರಲ್ಲಿ ಉಡುಪಿ ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿತು. 1997ರಲ್ಲಿ ಜಿಲ್ಲೆ ಉದಯವಾದಾಗ ಉಡುಪಿಯು ಜಿಲ್ಲಾ ಕೇಂದ್ರವಾಯಿತು. ಆಗ ವಿದೇಶಗಳಲ್ಲಿ ದುಡಿಯುತ್ತಿದ್ದ ಸಾವಿರಾರು ಮಂದಿ ನಿವೃತ್ತಿ ಬಳಿಕ ನೆಲೆ ಕಂಡುಕೊಳ್ಳಬಹುದೆಂದು ಉಡುಪಿ ಸುತ್ತಮುತ್ತ ನಿವೇಶನಗಳನ್ನು ಖರೀದಿಸಿದರು. ಈ ಸಂಖ್ಯೆ ಸುಮಾರು 20,000 ಇರಬಹುದು ಎಂಬ ಅಂದಾಜಿದೆ. ಇವರೆಲ್ಲರೂ ಈಗ ಕಾನೂನಿನ ಬಲೆಗೆ ಸಿಲುಕಿ ಅತ್ತ ಮನೆ ಕಟ್ಟಲೂ ಆಗದೆ ಇತ್ತ ಮಾರಾಟ ಮಾಡಲೂ ಆಗದೆ ಬಡತನದ ರೇಖೆಗೆ ಇಳಿದಿದ್ದಾರೆ.

ಉಡುಪಿ: ಉಡುಪಿ ಸುತ್ತಮುತ್ತ ಸುಮಾರು ಎರಡು ದಶಕಗಳ ಹಿಂದೆ ಹೂಡಿಕೆ ಮಾಡಿ ಆಸ್ತಿ ಖರೀದಿಸಿದವರು ಈಗ ಅದು ಪ್ರಯೋಜನಕ್ಕೆ ಬಾರದೆ ಬಡತನದ ಹಂತಕ್ಕೆ ಇಳಿದಿದ್ದಾರೆಂದರೆ ನಂಬುವುದು ಕಷ್ಟ, ಆದರೆ ಸತ್ಯ.

ಲೇಔಟ್‌, ಬಡಾವಣೆಗಳಲ್ಲಿ ಸಣ್ಣ ಸಣ್ಣ ಆಸ್ತಿ ಖರೀದಿಸಿ ಸಂತ್ರಸ್ತರಾದವರು ಮಧ್ಯಮ ವರ್ಗದವರು, ಅನಿವಾಸಿ ಭಾರತೀಯರು, ಸಣ್ಣಪುಟ್ಟ ಉದ್ಯೋಗಿಗಳು. ಭವಿಷ್ಯದಲ್ಲಿ ಹೂಡಿಕೆ ನೆರವಾಗಬಹುದು ಎಂಬುದು ಇವರ ಅಂದಾಜಾಗಿತ್ತು. ಇವರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರಾಗಿ ಆರ್ಥಿಕ ಹೊಡೆತದಿಂದ ಕಂಗಾಲಾಗಿದ್ದಾರೆ.

ಇವರೆಲ್ಲರೂ ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸಿದ ಭೂಮಿಯನ್ನು ಡೆವಲಪರ್ನಿಂದ ಖರೀ ದಿಸಿದ್ದರು. ಉಡುಪಿ ಸುತ್ತಮುತ್ತ ಕಾನೂನು ಸುವ್ಯವಸ್ಥೆ, ನೀರು, ವಿದ್ಯುತ್‌ ಧಾರಾಳ ಇದೆ ಎಂಬ ಕಾರಣಕ್ಕೆ ಆಸ್ತಿ ಖರೀದಿಸಿದ್ದರು. ಇದು ಕಾನೂನುಬದ್ಧವಾಗಿ ನೋಂದಣಿಯೂ ಆಗಿದೆ. ಆದರೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿರುವ ಕಾನೂನಿನಿಂದ ಇವರಿಗೆ ಮನೆ ಕಟ್ಟಲು ಅನುಮತಿ ಸಿಗುತ್ತಿಲ್ಲ. ನೋಂದಣಿಯಾಗು ವಾಗಲೇ ಜಿಲ್ಲಾಡಳಿತ ಸಮನ್ವಯಗೊಳಿಸಬೇಕಿತ್ತು. ಈಗ ನಾವೇನು ಮಾಡುವುದು ಎನ್ನುತ್ತಾರೆ ಸಂತ್ರಸ್ತರಾದ ತಾರಾನಾಥ ಹೆಗ್ಡೆ, ರಾಬರ್ಟ್‌ ಡಿ’ಸೋಜಾ, ರಮೇಶ್‌ ಪೈ ಮೊದಲಾದವರು.

ನಾವು ಇಷ್ಟು ದಿನ ಮರ್ಯಾದೆಯಿಂದ ಬದುಕಿದವರು. ಈಗ ಹಾಕಿದ ಬಂಡವಾಳ ಹೂಡಿಕೆ ಪ್ರಯೋಜನಕ್ಕೆ ಬಾರದಿದ್ದಾಗ ನಾವು ಇನ್ನೊಬ್ಬರಲ್ಲಿ ಕೈಚಾಚಲು ಆಗು ತ್ತದೆಯೆ? ಸಾವಿರಾರು ಮಂದಿ ಈ ಸ್ಥಿತಿ ಎದುರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ ತಾರಾನಾಥ ಹೆಗ್ಡೆ.

2012ರ ವರೆಗೆ ಅನಧಿಕೃತ ಲೇಔಟ್‌ (ರಸ್ತೆ, ಪಾರ್ಕಿಂಗ್‌ ಇತ್ಯಾದಿಗಳಿಗೆ ನಿಯಮಾವಳಿ ಪ್ರಕಾರ ಬಿಟ್ಟಿರದ ಲೇಔಟ್‌) ಕಾನೂನನ್ನು ಸರಕಾರ ಕಟ್ಟುನಿಟ್ಟಾಗಿ ಪಾಲಿಸಿರ ಲಿಲ್ಲ. ಬಳಿಕ ಒಮ್ಮೆಗೆ ಕಾನೂನನ್ನು ಬಿಗಿಗೊಳಿಸಿದ ಕಾರಣ ಮನೆ ಕಟ್ಟಲು ಹೊರಟವರಿಗೆ ಕಾನೂನು ಅಡ್ಡಿಯಾಗಿದೆ. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿಯೇ ಇಂತಹ 7,000 ಅರ್ಜಿಗಳಿವೆ. ರಾಜ್ಯದಲ್ಲಿ ಸುಮಾರು 17 ಲಕ್ಷ ಕಡತಗಳಿವೆ. ಒಮ್ಮೆ ಉಚ್ಚ ನ್ಯಾಯಾಲಯದಲ್ಲಿ ಇದು ಇತ್ಯರ್ಥವಾದರೂ ಪ್ರಕರಣ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿದೆ. ಇದನ್ನು ಆದಷ್ಟು ಶೀಘ್ರ ಇತ್ಯರ್ಥಪಡಿಸುವ ಹೊಣೆಗಾರಿಕೆ ಈಗ ರಾಜ್ಯ ಸರಕಾರದ ಮೇಲಿದೆ. ಒಂದು ವೇಳೆ ಇದನ್ನು ಇತ್ಯರ್ಥಪಡಿಸಿದರೆ ಕೊರೊನಾ ಕಾಲಘಟ್ಟದಲ್ಲಿ ಆರ್ಥಿಕ ಹೊಡೆತ ಅನುಭವಿಸಿದ ಸರಕಾರಕ್ಕೂ ವರದಾನವಾಗುವ ಸಾಧ್ಯತೆ ಇದೆ.

ಆದಷ್ಟು ಶೀಘ್ರ ಇತ್ಯರ್ಥ
ಯಾರೋ ಮಾಡಿದ ತಪ್ಪಿಗೆ ಯಾರೋ ಕಷ್ಟ ಅನುಭವಿಸುತ್ತಿರುವುದು ಸತ್ಯ. ಪ್ರಸ್ತುತ ಸನ್ನಿವೇಶದಲ್ಲಿ ಸರ್ವೋಚ್ಚ ನ್ಯಾಯಾಲಯ ಪ್ರಕರಣ ಇತ್ಯರ್ಥಗೊಳಿಸದೆ ಬೇರೆ ದಾರಿ ಇಲ್ಲ. ರಾಜ್ಯ ಸರಕಾರ ಪೂರಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ ಮತ್ತು ಇದಕ್ಕೆ ಬೇಕಾದ ಎಲ್ಲ ಕ್ರಮಗಳನ್ನೂ ತೆಗೆದುಕೊಂಡಿದೆ. ಆದಷ್ಟು ಶೀಘ್ರ ಪ್ರಕರಣ ಇತ್ಯರ್ಥವಾಗಿ ಹಿರಿಯ ನಾಗರಿಕರೂ ಸೇರಿದಂತೆ ಎಲ್ಲ ಸಂತ್ರಸ್ತರ ಸಮಸ್ಯೆ ಬಗೆಹರಿಯುತ್ತದೆ ಎಂಬ ವಿಶ್ವಾಸವಿದೆ.

– ಕೆ.ರಾಘವೇಂದ್ರ ಕಿಣಿ, ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ, ಉಡುಪಿ

ಟಾಪ್ ನ್ಯೂಸ್

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

1-ani

Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಇದು ವಿಶ್ವದ ಅತಿ ಎತ್ತರದ ಏಕಶಿಲಾ ಬೆಟ್ಟ… Online ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ

ಇದು ವಿಶ್ವದ ಅತಿ ಎತ್ತರದ ಏಕಶಿಲಾ ಬೆಟ್ಟ… Online ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Udupi: ಜಿಲ್ಲಾಧಿಕಾರಿ ಕಚೇರಿಯಲ್ಲೇ ನೆಟ್‌ವರ್ಕ್‌ ಸಮಸ್ಯೆ!

byndoor

Padubidri: ಮೃತ್ಯುವಿನ ಹೆದ್ದಾರಿಯಾಗುತ್ತಿದೆ ಪಡುಬಿದ್ರಿ ಪರಿಸರ!

9(1

Manipal: ಮಣ್ಣಪಳ್ಳ ಕೆರೆ 155 ಪಕ್ಷಿ ಪ್ರಭೇದಗಳ ತಾಣ!

6(1

Karkala: ಬೆನ್ನು ಹತ್ತುತ್ತಿರುವ ಎಂಡೋ ಪೀಡೆ

Vishnu Sahasranama Stotra chanting at 108 places from Kannur to Shirur on Jan. 26

ಜ. 26 ರಂದು ಕಣ್ಣೂರಿನಿಂದ ಶಿರೂರುವರೆಗೆ 108 ಸ್ಥಳಗಳಲ್ಲಿ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-wl

ಅಖಿಲ ಭಾರತ ಅಂತರ್‌ ವಿ.ವಿ.ವೇಟ್‌ಲಿಫ್ಟಿಂಗ್‌:ಮಂಗಳೂರು ವಿವಿ ರನ್ನರ್ ಅಪ್‌

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.