ಪ್ಲ್ಯಾಸ್ಟಿಕ್ ನೀತಿ ಬೆಂಬಲಿಸಿ : ಹ್ಯಾರಿಸ್ ಗೆ ಭಾರತಿಯ ಅಮೇರಿಕನ್ ಮಹಿಳಾ ಉದ್ಯಮಿಗಳ ಮನವಿ
Team Udayavani, Mar 17, 2021, 11:15 AM IST
ವಾಷಿಂಗ್ಟನ್ : ಭಾರತೀಯ ಅಮೇರಿಕಾದ ಮಹಿಳಾ ಉದ್ಯಮಿ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಅಮೇರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಅವರಲ್ಲಿ ಜಾಗತಿಕ ಪ್ಲ್ಯಾಸ್ಟಿಕ್ ನೀತಿಗೆ ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ.
ಸ್ಟೇನ್ ಲೆಸ್ ಸ್ಟೀಲ್, ಬರ್ಚ್ ವುಡ್ ನಂತಹ ಸುಸ್ಥಿರ ಉತ್ಪನ್ನಗಳ ಸಗಟು ವ್ಯಾಪಾರದಲ್ಲಿ ತೊಡಗಿರುವ ಸಣ್ಣ ವ್ಯವಹಾರೋದ್ಯಮ ಈಕೊ ಆಲ್ ಟ್ರೇಡಿಂಗ್ ಎಲ್ ಎಲ್ ಸಿ ಸಂಸ್ಥೆಯ ಮುಖ್ಯಸ್ಥೆ ಲಲಿತಾ ಚಿತ್ತೂರು, ಕಮಲಾ ಹ್ಯಾರಿಸ್ ಉಪಸ್ಥಿತರಿದ್ದ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಈ ಮನವಿಯನ್ನು ಇಟ್ಟಿದ್ದಾರೆ.
ಆಡಳಿತ ಹವಾಮಾನ ಬದಲಾವಣೆ(ಕ್ಲೈಮೇಟ್ ಚೇಂಜ್)ಪ್ರಯತ್ನಗಳನ್ನು ಮಾಡಲಾಗಿದೆ ನೀತಿ ನಿಯಮಾವಳಿಗಳ ಸಿಬ್ಬಂಧಿಗಳು ಆ ಬಗ್ಗೆ ಗಮನಹರಿಸುತ್ತಾರೆ ಎಂದು ಕಮಲಾ ಹ್ಯಾರಿಸ್ ಪ್ರತಿಕ್ರಿಯಿಸಿದ್ದಾರೆ.
ಓದಿ : ದೆಹಲಿ ಜಗತ್ತಿನ ಅತಿ ಮಲಿನ ರಾಜಧಾನಿ: ಜಾಗತಿಕ ವಾಯು ಗುಣಮಟ್ಟ ವರದಿಯಲ್ಲೇನಿದೆ?
ಮಹಿಳಾ ಮಾಲಿಕತ್ವದ ಲಲಿತಾ ಚಿತ್ತೂರ್ ಅವರ ವ್ಯವಹಾರ ಭಾರತದಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವುದರ ಜೊತೆಗೆ ಭಾರತದ ವಿಧವಾ ಮಹಿಳೆಯರಿಗೆ ಬೆಂಬಲ ನೀಡುವ ಸಾಮಾಜಿಕ ಜವಾಬ್ದಾರಿಯನ್ನು 2019ರಿಂದ ಮಾಡುತ್ತಾ ಬಂದಿದೆ.
ಸಣ್ಣ ಉದ್ಯಮಗಳು ಎಲ್ಲಾ ಸಮುದಾಯಗಳ ನಾಡಿ ಮಿಡಿತ. ನಮ್ಮ ಸಣ್ಣ ಉದ್ಯಮಗಳ ಮಾಲಿಕರು ಕೇವಲ ಉದ್ಯಮಪತಿಗಳಲ್ಲ, ನಾಗರಿಕ ನಾಯಕರು, ಸಮುದಾಯದ ನಾಯಕರು, ಆದರ್ಶಪ್ರಾಯರು ಎಂದು ಲಲಿತಾ ಹೇಳಿದ್ದಾರೆ.
ಸಣ್ಣ ಉದ್ಯಮಗಳು ಎಲ್ಲವನ್ನೂ ಸಮುದಾಯದಿಂದ ಪಡೆದುಕೊಳ್ಳುತ್ತದೆ. ಸಮುದಾಯವನ್ನು ಉನ್ನತೀಕರಿಸುತ್ತದೆ. ಅದು ನಿಯಮಿತ ಗ್ರಾಹಕರನ್ನು ಹೊಂದಿದೆ. ಎಂದು ಲಲಿತಾ ಹೇಳಿದ್ದಾರೆ.
ಏಕಾಏಕಿ ನಾವು ನೀವು ಹೀಗೆ ಇರಬೇಕು ಎಂದು ಹೇರಿಕೆ ಹಾಕುವುದಕ್ಕಾಗುವುದಿಲ್ಲ. ಪ್ಲ್ಯಾಸ್ಟಿಕ್ ಗೆ ಪರ್ಯಾಯವಾಗಿ ಇರುವ ವಸ್ತುಗಳನ್ನು ಬಳಸುವಂತೆ ನಾವು ಸೂಚನೆಗಳನ್ನು ನೀಡಬೇಕಾಗುತ್ತದೆ. ಅವರ ಕೆಲಸವನ್ನು ನಾವು ಗೌರವಿಸಬೇಕು. ಪರಿಸರವನ್ನು ಉಳಿಸುತ್ತಿರುವ ಅವರ ಕಾರ್ಯ ಶ್ಲಾಘನೀಯ ಎಂದು ಕಮಲಾ ಹ್ಯಾರೀಸ್ ಹೇಳಿದ್ದಾರೆ.
ಒಟ್ಟಿನಲ್ಲಿ, ಚೆನ್ನೈ ಮೂಲದ ಭಾರತೀಯ ಅಮೇರಿಕನ್ ಮಹಿಳೆ ಲಲಿತಾ ಚಿತ್ತೂರು, ದುಂಡು ಮೇಜಿನ ಸಭೆಯಲ್ಲಿ ಪ್ಲ್ಯಾಸ್ಟಿಕ್ ನೀತಿಯನ್ನು ಬೆಂಬಲಿಸಬೇಕು ಎಂದು ಕಮಲಾ ಹ್ಯಾರಿಸ್ ಅವರಲ್ಲಿ ಕೇಳಿಕೊಂಡಿದ್ದಾರೆ.
ಓದಿ :ಹುಟ್ಟುಹಬ್ಬದ ಸಂಭ್ರಮದಲ್ಲಿ ಜಗ್ಗೇಶ್: ಬರ್ತ್‌ಡೇಗೆ ‘ತೋತಾಪುರಿ’ ಪೋಸ್ಟರ್ ಗಿಫ್ಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Kasragodu: ನರ್ಸಿಂಗ್ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್ ತನಿಖೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
ನಮ್ಮಲ್ಲಿಗೆ ಬಂದರೆ ಇಸ್ರೇಲ್ ಪ್ರಧಾನಿ ಬಂಧನ: ಬ್ರಿಟನ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.