ರಬಕವಿ-ಬನಹಟ್ಟಿಯಲ್ಲಿ ಕೋವಿಡ್ 2ನೇ ಅಲೆ: ಬಾಗಲಕೋಟೆಗೂ ಬಂತು `ಮಹಾ ಆತಂಕ’
Team Udayavani, Mar 17, 2021, 1:32 PM IST
ಬನಹಟ್ಟಿ: ನೇಕಾರ ನಗರಿ ರಬಕವಿ-ಬನಹಟ್ಟಿ ಕಳೆದ ಮೂರು ತಿಂಗಳಿಂದ ಕೊರೊನಾ ಜಂಜಾಟವಿಲ್ಲದೆ ಶಾಂತಗೊಂಡಿತ್ತು. ಆದರೆ ಮಂಗಳವಾರ (16-3-2021) ತಾಲೂಕಿನ ರಬಕವಿಯಲ್ಲಿ ಒಂದೇ ಕುಟುಂಬದ ಇಬ್ಬರಿಗೆ ಕೋವಿಡ್ ಸೋಂಕು ತಗುಲಿದ್ದು, ಎರಡನೇ ಅಲೆ ಒಕ್ಕರಿಸಿದ್ದರ ಹಿನ್ನಲೆ ಜನ ಆತಂಕಗೊಂಡಿದ್ದಾರೆ.
ಈಚೆಗೆ ಮಹಾರಾಷ್ಟ್ರದ ಸೊಲ್ಲಾಪೂರಕ್ಕೆ ತೆರಳಿದ್ದ ಇಲ್ಲಿನ ಕುಟುಂಬ ವಾಪಸ್ ರಾಜ್ಯಕ್ಕೆ ಬರುವ ಸಂದರ್ಭ ಸೊಲ್ಲಾಪೂರದ ಗಡಿಯಲ್ಲಿ ಸ್ವ್ಯಾಬ್ ಪರೀಕ್ಷೆ ನಡೆಸಿತ್ತು. ನಂತರ ಅವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಬೇಕೆಂದು ಸೂಚಿಸಲಾಗಿದೆ.
ಇದನ್ನೂ ಓದಿ: ಕೇಂದ್ರ ಮಾಜಿ ಸಚಿವ, ಬಿಜೆಪಿ ಮುಖಂಡ ದಿಲೀಪ್ ಗಾಂಧಿ ಕೋವಿಡ್ ನಿಂದ ಸಾವು
ಬುಧವಾರ ಮಧ್ಯಾಹ್ನ ಇವರಿಬ್ಬರ ಸ್ವ್ಯಾಬ್ ಪರೀಕ್ಷೆಯು ಫಲಿತಾಂಶ ಪಾಸಿಟಿವ್ ಬಂದ ಕಾರಣ ಎರಡನೇ ಅಲೆಯಿಂದ ರಬಕವಿ-ಬನಹಟ್ಟಿ ಜನತೆ ಕಟ್ಟೆಚ್ಚರ ವಹಿಸಬೇಕಾದುದು ಅನಿವಾರ್ಯವಾಗಿದೆ.
‘ಈಗಾಗಲೇ ಸೋಂಕು ಕಂಡು ಬಂದ ಇಬ್ಬರನ್ನು ಹೋಂ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಇವರಿಬ್ಬರಿಗೂ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಲ್ಲಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಒದಗಿಸಲಾಗುವದು’ಎಂದು ತಾಲೂಕು ವೈದ್ಯಾಧಿಕಾರಿ ಗೈಬುಸಾಬ ಗಲಗಲಿ ತಿಳಿಸಿದ್ದಾರೆ
ಲಸಿಕೆ ಹಾಕಿಸದವರಿಗೆ ಕಾದಿದೆಯಾ ಆಪತ್ತು
ತಾಲೂಕಿನಾದ್ಯಂತ ರಬಕವಿ-ಬನಹಟ್ಟಿ, ತೇರದಾಳ ಹಾಗು ಮಹಾಲಿಂಗಪೂರ ಸಮುದಾಯ ಆಸ್ಪತ್ರೆಗಳಲ್ಲಿ ದಿನಂಪ್ರತಿ ಮೂನ್ನೂರಕ್ಕೂ ಅಧಿಕ ಜನರಿಗೆ ಕೊರೊನಾ ಲಸಿಕೆ ಹಾಕಲಾಗುತ್ತಿದೆ. ಆದರೂ ಜನತೆ ನಿರ್ಲಕ್ಷ್ಯ ಹಾಗು ಬೇಸರದಿಂದ ಲಸಿಕೆ ಪಡೆಯುವಲ್ಲಿ ಹಿಂದೇಟು ಹಾಕುವಲ್ಲಿ ಕಾರಣವಾಗಿದೆ.
ಇದನ್ನೂ ಓದಿ: ಮೂಲ ಸೌಕರ್ಯಗಳೊಂದಿಗೆ ಹಣಕಾಸು ಸಂಸ್ಥೆಗಳ ಅಭಿವೃದ್ಧಿ : ನಿರ್ಮಲಾ ಸೀತಾರಾಮನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Railway;ನನೆಗುದಿಗೆ ಬಿದ್ದಿದ್ದ 9 ಯೋಜನೆಗಳಿಗೆ ವೇಗ: ಸೋಮಣ್ಣ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.