ಏನೂ, ಇದೂ ಹೆಣ್ಣಾ!? ಗಂಡು ಹೆರದಿದ್ದರೆ ಅಷ್ಟೇ…


Team Udayavani, Mar 17, 2021, 6:30 PM IST

ಏನೂ, ಇದೂ ಹೆಣ್ಣಾ!? ಗಂಡು ಹೆರದಿದ್ದರೆ ಅಷ್ಟೇ…

ಸಾಂದರ್ಭಿಕ ಚಿತ್ರ

ಈಗಾಗಲೇ ನಾಲ್ಕು ವರ್ಷದ ಮುದ್ದಾದ ಹೆಣ್ಣು ಮಗುವಿನ ತಾಯಿಯಾದ ಆಕೆ ಮತ್ತೂಮ್ಮೆಬಸಿರು ಹೊತ್ತಿದ್ದಳು. ನಾನು ನೋಡಿದಂತೆ ಎಲ್ಲಾ ರೀತಿಯಲ್ಲೂ ಆರೋಗ್ಯವಂತ ಹೆಣ್ಣು ಮಗಳಾಕೆ. ಆದರೂ ಮುಖದಲ್ಲಿ ಇರಬೇಕಾದ ಲವಲವಿಕೆಯಾಗಲಿ, ತಾಯ್ತನದ ಸಂಭ್ರಮವಾಗಲಿಅವಳಲ್ಲಿ ಕಾಣುತ್ತಿರಲಿಲ್ಲ. ಪುಟಿದು ಬರುವ ಹೊಟ್ಟೆಸವರುವಾಗಲೆಲ್ಲ ಪುಳಕಗೊಳ್ಳುವ ಬದಲು ಇದೂಹೆಣ್ಣು ಮಗುವಾದರೆ! ಎಂಬ ಆತಂಕ. ಒಮ್ಮೆಯಂತೂಹನಿಗಣ್ಣಾಗಿ, ಪ್ರತಿ ದಿನ ದೇವರಿಗೆ ದೀಪ ಹಚ್ಚುವಾಗ,ದೇವ್ರೇ.. ಅಂಗವಿಹೀನ ಮಗುವೇ ಹುಟ್ಟಲಿ ಅಥವಾ ಮಗು ಹುಟ್ಟಿದ ಕೂಡಲೇ ಸಾಯಲಿ. ಆದರೂ ಅದುಗಂಡೇ ಆಗಿರಲಿ ಅಂತ ಬೇಡ್ಕೋತಿನಿ ಕಣೇ ಎಂದಾಗ ನನ್ನ ಮೈಬೆವರಿತ್ತು.

ಹೆಣ್ಣು ಇಂದಿನ ಎಲ್ಲಾ ಕಾರ್ಯಕ್ಷೇತ್ರವನ್ನೂ ಸಲೀಸಾಗಿ ನಿಭಾಯಿಸುತ್ತಾಳೆ. ಹೆತ್ತವರ ಬಗ್ಗೆ ಪ್ರೇಮ, ಕಾಳಜಿ, ಮಮತೆ ಹೆಣ್ಣು ಮಕ್ಕಳಿಗೇ ಹೆಚ್ಚು ತಾನೇ? ಈಗೆಲ್ಲ ವರದಕ್ಷಿಣೆ ಕೊಟ್ಟು, ಸಾಲಾಂಕೃತ ಕನ್ಯಾದಾನ ಮಾಡಬೇಕಿಲ್ಲ. ಮೇಲಾಗಿ ತನ್ನ ಜವಾಬ್ದಾರಿಯನ್ನು ಮತ್ತು ಖರ್ಚು ವೆಚ್ಚಗಳನ್ನು ಸ್ವತಃ ತೂಗಿಸಿಕೊಳ್ಳುವಷ್ಟು ದುಡಿದು ಆರ್ಥಿಕ ಸ್ವಾವಲಂಬಿಯೂ ಆಗುತ್ತಿದ್ದಾಳೆ.. ಮುಂತಾದ ನನ್ನ ಯಾವುದೇ ಸಮಾಧಾನದ ಮಾತುಗಳು, ಈ ಸಲ ಗಂಡು ಮಗುವೇ ಬೇಕು ಎನ್ನುವ ಗಂಡನ, ಅತ್ತೆ ಮನೆಯವರ ನಿರೀಕ್ಷೆಯ ಮುಂದೆ ಸೋತು ಹೋಗುತ್ತಿದ್ದವು.

ತಾಯ್ತನಕ್ಕೆ ಎಲ್ಲಾ ರೀತಿಯಲ್ಲೂ ಸಿದ್ಧವಿದ್ದ ಅವಳ ದೇಹ ಈ ಆತಂಕದಿಂದಾಗಿಯೇ ದಿನೇ ದಿನೆಸವೆದದ್ದಲ್ಲದೇ ರಕ್ತದೊತ್ತಡ ಹೆಚ್ಚಾಗಿ ಪ್ರಸವದಸಂದರ್ಭದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದಳು. ಅದೃಷ್ಟವಶಾತ್‌ ಆರೋಗ್ಯವಂತ ಗಂಡು ಮಗುವನ್ನೇ ಹೆತ್ತಳು. ಒಂದು ವೇಳೆ ಮತ್ತೆ ಹೆಣ್ಣೇ ಹುಟ್ಟಿದ್ದರೆಅವಳಸ್ಥಿತಿ ಏನಾಗುತ್ತಿತ್ತು? ಯೋಚಿಸಿಯೇ ಮೈನಡುಕ ಹುಟ್ಟುತ್ತದಲ್ಲ?

ಖನ್ನತೆ ಜೊತೆಯಾಗಬಹುದು:

ಮನೆಯವರ ಇಂತಹ ನಿರೀಕ್ಷೆಯ ಒತ್ತಡಗಳಿಂದಾಗಿ ಜೀವನದಲ್ಲಿ ಒಂದೆರಡು ಸಲ ಮಾತ್ರ ಅನುಭವಕ್ಕೆ ದಕ್ಕುವ ಒಂದು ಜೀವದ ಸೃಷ್ಟಿ ಕ್ರಿಯೆಯ ಪ್ರತಿಯೊಂದು ಅನೂಹ್ಯ, ರೋಮಾಂಚಕ ಕ್ಷಣಗಳನ್ನು ಆ ಹೆಣ್ಣು ಕಳೆದುಕೊಳ್ಳುತ್ತಾಳೆ. ಅವಳ ಇಂತಹ  ವಿಹ್ವಲತೆಯಿಂದಾಗಿಯೇ ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಮಾನಸಿಕ ಬೆಳವಣಿಗೆ ಕುಂಠಿತವಾಗಬಹುದು. ಒಂದು ಬಗೆಯ ಅಸ್ಥಿರತೆಯಭಾವ, ಬೇಗ ಖನ್ನತೆಗೆ ಒಳಗಾಗುವ ಗುಣ ಮಗುವಿನ ವ್ಯಕ್ತಿತ್ವದಲ್ಲೂ ಬಂದು ಬಿಡಬಹುದು. ಎಂಥಹ ದುರಂತವಿದು.

ನಮ್ಮ ಸುಶಿಕ್ಷಿತ ಸಮಾಜ ಇಷ್ಟು ಮುಂದುವರೆದಿರುವಾಗ, ಗಂಡು ಹೆಣ್ಣೆಂಬ ಭೇದ ತೆಳು ಗೆರೆಯಾಗಿ ಉಳಿದಾಗ, ಇಂದಿನ ಹೆಣ್ಣು ಮಗಳು ಎಲ್ಲಾಕ್ಷೇತ್ರಗಳಲ್ಲೂ ಕಾಲೂರಿ ನಿಂತು ತನ್ನ ಸಾಮರ್ಥ್ಯಸಾಬೀತು ಪಡಿಸಿಕೊಂಡಾಗ ಗಂಡು ಮಗುವೇ ಬೇಕುಎಂಬ ವ್ಯಾಮೋಹ ಕೀಳು ಮಟ್ಟದ್ದು ಎನ್ನಿಸದೇ ಇರಲಿಲ್ಲ. ಮೊದಲು ಮನೆಗೊಬ್ಬ ವಂಶೋದ್ಧಾರಕಇರಬೇಕು ಎಂಬುವುದೊಂದು ಸಾಮಾನ್ಯವಿಚಾರವಾಗಿತ್ತು. ಹಾಗಂತ ಮೊದಲು ಹುಟ್ಟುವ ಹೆಣ್ಣುಮಕ್ಕಳ ಬಗ್ಗೆ ತಾತ್ಸಾರವಿರಲಿಲ್ಲ. ಎಂಥ ಬಡವರೇಆಗಿರಲಿ, ಗಂಡು ಹುಟ್ಟುವವರೆಗೆ ಅಥವಾ ಹುಟ್ಟಿದ ನಂತರವೂ ಸಂತಾನಾಭಿವೃದ್ದಿ ನಿಲ್ಲಿಸುತ್ತಿರಲಿಲ್ಲ.ಹೀಗಾಗಿಯೇ ಏನೋ ಮೊದಲು ಎರಡು ಮೂರು ಹೆಣ್ಣು ಮಕ್ಕಳು ಹುಟ್ಟಿದರೂ ಮುಂದೆ ಗಂಡಾದೀತು ಎಂಬ ನಿರಾಳತೆಯಲ್ಲೇ ಬದುಕು ಸಾಗುತ್ತಿತ್ತು.

ಕಾಲ ಬದಲಾದಂತೆ…

ಕಾಲ ಬದಲಾದಂತೆ ಎಲ್ಲವೂ ಪಲ್ಲಟವಾಗಿ, ಎರಡು ಮಕ್ಕಳಷ್ಟೇ ಸಾಕು ಎನ್ನುವ ಆಧುನಿಕ ವಿಚಾರ ತಲೆದೂರಿದಾಗ ಹುಟ್ಟುವ ಎರಡರಲ್ಲಿ ಒಂದು ಗಂಡು ಮಗುವೇ ಆಗಬೇಕಾದದ್ದು ಅನಿವಾರ್ಯವೆನ್ನು ವಂತಾಯ್ತು. ಅದರ ಪರಿಣಾಮ ಹಳ್ಳಿಗಳು ಬಿಡಿ, ಸುಶಿಕ್ಷಿತ ಸಮಾಜ ಎನ್ನಿಸಿಕೊಂಡ ನಗರಗಳಲ್ಲೂ ಗಂಡು ಮಗುವಿನ ಸಂತಾನಕ್ಕಾಗಿ ಹೆಂಡತಿಯ ಮೇಲೆ ಒತ್ತಡ ಆರಂಭವಾಯಿತು. ಯಾವುದೇ ಸಂತಾನದ ಲಿಂಗ

ನಿರ್ಣಯವಾಗುವುದೇ ಗಂಡಸಿನ ವೀರ್ಯದ ಮೇಲೆ ಎಂಬ ಸತ್ಯ ಮರೆಯಾಗಿ ಹೆಣ್ಣು ತಾನು ಬಯಸಿದಸಂತಾನ ಕೊಡಲೇಬೇಕಾದ ಯಂತ್ರವೆಂಬಂತೆ ಭಾವಿಸಲಾಯ್ತು. ಇದರಿಂದ ಅಕ್ಷರಶಃ ನಲುಗಿದ್ದುಹೆಣ್ಣು. ಮತ್ತವಳ ಮೊದಲ ಸಂತಾನವಾದ ಹೆಣ್ಣುಮಗು. ಕೂಡು ಕುಟುಂಬಗಳಲ್ಲಿ ಗಂಡು ಹೆತ್ತ ಸೊಸೆಯನ್ನು ಅಭಿಮಾನಿಸುವುದು, ಹೆಣ್ಣು ಹೆರುವ ಸೊಸೆಯನ್ನು ಕೀಳಾಗಿ ಕಾಣುವುದು, ಹಂಗಿಸಿ ಮಾತನಾಡುವಂತಹ ಮಾನಸಿಕ ಆಘಾತದೊಂದಿಗೆ ಆರಂಭಗೊಂಡು ದೈಹಿಕವಾಗಿ ಚಿತ್ರ ಹಿಂಸೆ ಕೊಡುವುದು, ಹೆಣ್ಣು ಭ್ರೂಣ ಹತ್ಯೆ, ಹುಟ್ಟಿದಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಬರುವುದು, ಕಸದ ಬುಟ್ಟಿಗೆ ಎಸೆದು ಬರುವುದು, ಮತ್ಯಾರಿಗೋ ನಿರ್ದಯವಾಗಿ ಕೊಟ್ಟು ಬಿಡುವುದು, ಹೆಂಡತಿ ಇರುವಾಗಲೇ ಮತ್ತೂಂದು ಮದುವೆಯಾಗುವುದು ಅಷ್ಟೇ ಯಾಕೆ, ಅವಳನ್ನು ಕೊಂದು ಬಿಡುವಂತಹ ಕ್ರೂರ ಕೃತ್ಯಗಳೂ ನಡೆದದ್ದುಂಟು.

ಕಾನೂನುಗಳಿವೆ ನಿಜ, ಆದರೆ…

ಈಗ ಇಂತಹ ಅಮಾನವೀಯತೆ ಕಡಿಮೆಯಾದರೂತೀರಾ ಇಲ್ಲವಾಗಿಲ್ಲ. ಇಂದಿನ ಬಹುತೇಕರು ಮೊದಲುಹೆಣ್ಣು ಹುಟ್ಟಿದರೆ ಮನೆಗೆ ಲಕ್ಷ್ಮೀ ಬಂದಳು ಎಂದುಖುಷಿಯಿಂದ ಸ್ವೀಕರಿಸು ವುದು ನಿಜ, ಎರಡನೇ ಮಗುವಿನ ವಿಷಯ ಬಂದಾಗ ಮಾತ್ರ ಮತ್ತೆ ಹೆಣ್ಣೇಆದರೆ? ಅದರ ಬದಲಿಗೆ ಒಬ್ಬಳೇ ಮಗಳು ಸಾಕುಎಂದು ಮತ್ತೂಂದು ಮಗುವನ್ನು ಮಾಡಿಕೊಳ್ಳುವವಿಚಾರವನ್ನೇ ಕೈಬಿಡುತ್ತಾರೆ. ಹೆಣ್ಣು ಭ್ರೂಣ ಹತ್ಯೆನಿಷೇಧ, ಹೆಣ್ಣುಮಕ್ಕಳ ಸುರಕ್ಷತೆ ಮತ್ತು ಆಕೆಯ ಸಮಗ್ರಅಭಿವೃದ್ಧಿಯ ದೃಷ್ಟಿಯಿಂದ ಏನೆಲ್ಲ ಕಾನೂನುಗಳುಬಂದಿವೆ. ಆದರೆ ಮನುಷ್ಯನ ಹಳಸಲು ಭಾವನೆಗಳಿಗೆಎಲ್ಲಿಯ ಕಾನೂನು? ಎಂದಿನವರೆಗೆ ಮನೆಗೆ ಕೀರ್ತಿತರುವವನು, ಹೆತ್ತವರನ್ನು ಸಾಕುವವನು, ಸತ್ತಾಗ ಪಿಂಡಇಡುವವನು ಗಂಡು ಮಗನಷ್ಟೇ ಎನ್ನುವ ಆಲೋಚನೆಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಇದೂಹೆಣ್ಣಾ? ಎಂಬ ಮೂದಲಿಕೆ, ಇದೂ ಹೆಣ್ಣಾದರೆ… ಎಂಬ ಆತಂಕ ನಿಲ್ಲುವುದಿಲ್ಲವೇನೋ.

 

ಅಮೃತಾ

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.