ಹೈಟೆಕ್ ಬಾಲಭವನ ನಿರ್ಮಾಣ ಶೀಘ್ರ
ಪುಟಾಣಿ ರೈಲು ಅಳವಡಿಕೆಗೆ 6 ಎಕರೆ ಜಾಗ ನೀಡಲು ಡಿಸಿಗೆ ಮನವಿ: ಚಿಕ್ಕಮ್ಮ ಬಸವರಾಜ್
Team Udayavani, Mar 17, 2021, 8:20 PM IST
ಚಿತ್ರದುರ್ಗ: ಐತಿಹಾಸಿಕ ನಗರಿ ಚಿತ್ರದುರ್ಗದಲ್ಲಿಇತಿಹಾಸವಾಗಿ ಉಳಿಯುವಂತೆ ಹೈಟೆಕ್ ಬಾಲಭವನ ನಿರ್ಮಾಣ ಮಾಡಲಾಗುವುದು ಎಂದು ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್ ಹೇಳಿದರು.
ನಗರದ ಬಾಲಭವನ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಬಾಲಭವನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಬಾಲಭವನದಿಂದ ಮಕ್ಕಳಿಗಾಗಿ ನಿರ್ಮಾಣ ಮಾಡಲಿರುವ ಪುಟಾಣಿ ರೈಲಿಗೆ 6 ಎಕರೆಜಾಗದ ಅವಶ್ಯಕತೆ ಇದೆ. ಸುಮಾರು 1 ಕೋಟಿರೂ. ವೆಚ್ಚದಲ್ಲಿ ರೈಲು ಹಳಿಗಳನ್ನು ಅಳವಡಿಸಿ ಮಕ್ಕಳಿಗೆ ಆಟವಾಡುವಂತೆ ರೈಲು ನಿರ್ಮಿಸುವ ಉದ್ದೇಶವಿದೆ. ಇದಕ್ಕಾಗಿ ಜಾಗ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ ಎಂದರು.
ಈಗಾಗಲೇ ರಾಜ್ಯದ 5 ಜಿಲ್ಲೆಗಳಲ್ಲಿ ಪುಟಾಣಿ ರೈಲು ಇದೆ. ಜಿಲ್ಲೆಯಲ್ಲೂ ಪುಟಾಣಿ ರೈಲು ನಿರ್ಮಾಣಕ್ಕೆ ಮುಂದಾಗಿದ್ದೇವೆ. ರೈಲುನಿರ್ಮಾಣದಿಂದ ಬಾಲಭವನಕ್ಕೆ ಆದಾಯ ಮತ್ತು ಮಕ್ಕಳಿಗೆ ಮನರಂಜನೆ ನೀಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ದಾನಿಗಳಿಂದ ದೇಣಿಗೆಯನ್ನೂ ಪಡೆಯಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ 30 ಬಾಲಭವನಗಳಿದ್ದು, ಅನುದಾನದ ಕೊರತೆಯಿಲ್ಲ, 18 ಸ್ವಂತ ಕಟ್ಟಡ,12 ಬಾಡಿಗೆ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯ ಬಾಲಭವನಕ್ಕೆ 3.10 ಎಕರೆ ಜಮೀನು ಇದೆ. ಇಲ್ಲಿ ಮಕ್ಕಳಿಗೆ ಜಾರುಬಂಡಿ, ಉಯ್ನಾಲೆ, ಸೀಸಾ, ತಿರುಗುಬಂಡಿ, ಕೊಕ್ಕರೆ ಹಾಗೂ ಕಾರು, ಕುದುರೆ ಆಟಿಕೆಗಳನ್ನು ಅಳವಡಿಸಲಾಗಿದೆ. ಅವುಗಳನ್ನುಉನ್ನತೀಕರಿಸಲಾಗುತ್ತದೆ ಎಂದರು.
ಬಾಲಭವನದಲ್ಲಿ ನಾಲ್ಕು ಸಿಸಿ ಕ್ಯಾಮರಾ ಅಳವಡಿಕೆ, ಬಾಲ ವೇದಿಕೆ ಉನ್ನತೀಕರಣ,ಗ್ರೀನ್ ರೂಮ್ ನಿರ್ಮಾಣ, ಸ್ಕ್ರೀನ್ ಫೆಸಿಲಿಟಿ, ಉತ್ತಮವಾದ ನೀರಿನ ಸೌಕರ್ಯದಿಂದಗಾರ್ಡನ್ ಉನ್ನತೀಕರಣ ಮಾಡಲಾಗುತ್ತದೆ. ಮಕ್ಕಳಿಗೆ ಅನುಕೂಲವಾಗುವಂತೆ ಕ್ರೀಡೆ,ಚಿತ್ರಕಲೆ, ನಾಟಕ, ಗ್ರಂಥಾಲಯದ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ನಂದಿನಿದೇವಿ ಮಾತನಾಡಿ, ಬಾಲ ಭವನಸಭಾಂಗಣ ಉನ್ನತೀಕರಣ, ಗ್ರಂಥಾಲಯನಿರ್ಮಾಣ, ಬಯಲು ರಂಗಮಂದಿರ ಉನ್ನತೀಕರಣ ಸೇರಿದಂತೆ ಬಾಲಭವನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದುತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣಇಲಾಖೆ ಉಪನಿರ್ದೇಶಕ ರಾಜಾ ನಾಯ್ಕ,ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸೇರಿದಂತೆ ಮತ್ತಿತರರುಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ
Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್ ಅರ್ಜಿ ತಿರಸ್ಕೃತ
Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ
MUST WATCH
ಹೊಸ ಸೇರ್ಪಡೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.