ಸಿ.ಡಿ. ಪ್ರಕರಣದ ತನಿಖೆ ರಾಜಕಾರಣಿಗಳತ್ತ?
Team Udayavani, Mar 18, 2021, 12:20 AM IST
ಬೆಂಗಳೂರು : ರಮೇಶ್ ಜಾರಕಿಹೊಳಿ ಸಿ.ಡಿ. ಸಂಬಂಧ ಪೊಲೀಸ್ ವಿಚಾರಣೆಗೆ ಒಳಗಾಗಿರುವ ಟಿವಿ ಚಾನೆಲ್ ಸಿಬಂದಿ ನೀಡಿರುವ ಮಾಹಿತಿಗಳು ರಾಜಕಾರಣಿಯೊಬ್ಬರತ್ತಲೇ ಬೊಟ್ಟು ಮಾಡುತ್ತಿವೆ.
ಮೂಲಗಳ ಪ್ರಕಾರ, “ಸೆಕ್ಸ್ ಸಿ.ಡಿ.’ ಡೀಲ್ ಮಾಡುತ್ತಿರುವ ಚಾನೆಲ್ ಸಿಬಂದಿ “ಸ್ಟಿಂಗ್ ಆಪರೇಷನ್’ ಹೆಸರಿನಲ್ಲಿ ಈ ಹಿಂದೆಯೂ ಹಲವು ರಾಜಕಾರಣಿಗಳು ಹಾಗೂ ಗಣ್ಯರನ್ನು ವೀಡಿಯೋ ಮೂಲಕ ಬ್ಲ್ಯಾಕ್‌ವೆುಲ್ ಮಾಡುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಈ ಹಿಂದೆಯೂ ಮೂವರು ರಾಜಕಾರಣಿಗಳ ವೀಡಿಯೋಗಳನ್ನು ಆರೋಪಿಗಳ ತಂಡ ಸಂಗ್ರಹಿಸಿಕೊಂಡಿದ್ದು, 2019ರಲ್ಲಿ ಇಬ್ಬರು ಪ್ರಮುಖ ರಾಜಕಾರಣಿಗಳಿಂದ ತಲಾ 1 ಕೋ. ರೂ. ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಪ್ರಮುಖನ ಜತೆ ಆರೋಪಿಗಳು
ಪ್ರಕರಣದಲ್ಲಿ ಸಿಲುಕಿರುವ ಆರೋಪಿಗಳ ಪೈಕಿ ಇಬ್ಬರು ರಾಷ್ಟ್ರೀಯ ಪಕ್ಷವೊಂದರ ಇಬ್ಬರು ನಾಯಕರ ಜತೆ ಗುರುತಿಸಿಕೊಂಡಿದ್ದಾರೆ. ಆ ಪಕ್ಷದ ಒಬ್ಬ ಮಹಾನಾಯಕನ ಹೆಸರು ಪ್ರಕರಣದಲ್ಲಿ ತಳುಕು ಹಾಕಿಕೊಂಡಿದೆ.
ಪ್ರಮುಖ ಆರೋಪಿ ಈ ಹಿಂದೆ ಕೆಲವು ಸುದ್ದಿ ವಾಹಿನಿಗಳ ಸ್ಟಿಂಗ್ ಆಪರೇಷನ್ ತಂಡದಲ್ಲಿದ್ದ. ಈ ವೇಳೆ ಹಲವು ಮಂದಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ಸಂಪಾದಿಸಿದ್ದಾನೆ. ಈ ವಸೂಲಿ ದಂಧೆ ವಿಚಾರ ತಿಳಿದ ಸಂಸ್ಥೆಯ ಮುಖ್ಯಸ್ಥರು ಮೂರು ತಿಂಗಳ ಹಿಂದೆ ಆತನನ್ನು ಕೆಲಸದಿಂದ ಕಿತ್ತು ಹಾಕಿದ್ದರು ಎನ್ನಲಾಗಿದೆ.
ಇದನ್ನೂ ಓದಿ :ಮಸೀದಿ ಮತ್ತು ದರ್ಗಾಗಳಲ್ಲಿ ಧ್ವನಿವರ್ಧಕ ಬಳಕೆಗೆ ಅವಕಾಶವಿದೆ: ವಕ್ಫ್ ಬೋರ್ಡ್ ಸ್ಪಷ್ಟನೆ
ಚಿಕ್ಕಮಗಳೂರಿನ ಮತ್ತೂಬ್ಬ ಆರೋಪಿಯೂ ಈ ಹಿಂದೆ ಕೆಲವು ಸುದ್ದಿವಾಹಿನಿಗಳ ಸ್ಟಿಂಗ್ ಆಪರೇಷನ್ ತಂಡದಲ್ಲಿದ್ದ. ಈತ, ಚಿಕ್ಕಮಗಳೂರಿನ ಆಲ್ದೂರಿನಲ್ಲಿ ಸ್ವಂತ ಹೋಮ್ ಸ್ಟೇ ನಡೆಸುತ್ತಿದ್ದಾನೆ. ಈ ಮಧ್ಯೆ ಬೆಂಗಳೂರಿನಲ್ಲಿ ವಾಸವಾಗಿದ್ದುಕೊಂಡು ರಾಷ್ಟ್ರೀಯ ಪಕ್ಷದ ಇನ್ನೊಬ್ಬ ನಾಯಕರೊಬ್ಬರ ಸಾಮಾಜಿಕ ಜಾಲತಾಣಗಳ ನಿರ್ವಹಣೆ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.
ನಿರ್ಭಯಾ ಗೈಡ್‌ಲೈನ್ಸ್ ಉಲ್ಲಂಘನೆ ಆರೋಪ
ಸಿ.ಡಿ. ಪ್ರಕರಣ ಸಂಬಂಧ “ನಿರ್ಭಯಾ ನಿಯಮ’ ಉಲ್ಲಂಘಿಸಿದ ಆರೋಪದಡಿ ನಗರ ಪೊಲೀಸ್ ಆಯುಕ್ತರಿಗೆ ಕೊಡಿಗೇ ಹಳ್ಳಿಯ ವಕೀಲ ಜಗದೀಶ್ ಎಂಬವರು ದೂರು ನೀಡಿದ್ದಾರೆ. ಯುವತಿಗೆ ಇದುವರೆಗೂ ಯಾವುದೇ ರಕ್ಷಣೆ ನೀಡಿಲ್ಲ. ಸಂತ್ರಸ್ತೆಯ ವೀಡಿಯೋ ಹೇಳಿಕೆ ಮೇಲೂ ಕ್ರಮ ಕೈಗೊಂಡಿಲ್ಲ. ಜಾರಕಿಹೊಳಿ ದೂರಿಗೆ ಮನ್ನಣೆ ನೀಡಿದಂತೆ ಯುವತಿಗೂ ಮನ್ನಣೆ ಕೊಡಬೇಕಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು
Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.