ನೀರಿನ ಸಮಸ್ಯೆ ನಿವಾರಣೆ ನಿಟ್ಟುಸಿರು


Team Udayavani, Mar 18, 2021, 12:58 PM IST

ನೀರಿನ ಸಮಸ್ಯೆ ನಿವಾರಣೆ ನಿಟ್ಟುಸಿರು

ಹಾವೇರಿ: ಪ್ರತಿವರ್ಷ ಬೇಸಿಗೆ ದಿನಗಳು ಎದುರಾದರೆ ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಗೊಂಡು ನೀರಿನಸಮಸ್ಯೆ ಉಲ್ಬಣಗೊಳ್ಳುತ್ತಿತ್ತು. ಆದರೆ ಈ ಬಾರಿಅಂತರ್ಜಲಮಟ್ಟ ಹೆಚ್ಚಿರುವ ಜೊತೆಗೆ ಬಹುತೇಕಶುದ್ಧ ಕುಡಿಯುವ ನೀರಿನ ಘಟಕಗಳು ಸುಗಮವಾಗಿಕಾರ್ಯನಿರ್ವಹಿಸುತ್ತಿದ್ದರಿಂದ ಗ್ರಾಮೀಣ ಭಾಗದ ಜನರು ನಿಟ್ಟುಸಿರು ಬಿಡುವಂತಾಗಿದೆ.

ಜಿಪಂ ಸಿಇಒ ಆಗಿ ಡಿಸೆಂಬರ್‌ನಲ್ಲಿ ಅಧಿಕಾರಸ್ವೀಕರಿಸಿದ ಮಹ್ಮದ್‌ ರೋಶನ್‌ ಅವರು ಆರಂಭದಲ್ಲೇಜಿಲ್ಲೆಯಲ್ಲಿ ಬೇಸಿಗೆ ದಿನಗಳಲ್ಲಿ ಎದುರಾಗಬಹುದಾದಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಿದರು. ಈ ಮೂಲಕ ಜಲಜೀವನ್‌ಮೀಷನ್‌ ಯೋಜನೆಯಡಿ ಅಂಗನವಾಡಿ,ಶಾಲಾ-ಕಾಲೇಜುಗಳಿಗೂ ನಳಗಳ ಮೂಲಕ ನೀರು ಪೂರೈಸಲು ಕ್ರಮಕೈಗೊಂಡು ಶಾಶ್ವತವಾಗಿ ನೀರುಪೂರೈಸಲು ಮುಂದಾಗಿದ್ದಾರೆ. ಅಲ್ಲದೇ ಗ್ರಾಮೀಣಭಾಗದಲ್ಲಿ ದುರಸ್ತಿಯಲ್ಲಿದ್ದ ಶುದ್ಧಕುಡಿಯುವ ನೀರಿನಘಟಕಗಳನ್ನು ಕಾಲಮಿತಿಯೊಳಗೆ ದುರಸ್ತಿ ಮಾಡಲುಗ್ರಾಮೀಣ ಕುಡಿಯುವ ನೀರು ಸರಬರಾಜುಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರ ಪರಿಣಾಮ ಜಿಲ್ಲೆಯ ಬಹುತೇಕ ಘಟಕಗಳು ಕಾರ್ಯನಿರ್ವಹಿಸುವಂತಾಗಿದೆ.

750 ಶುದ್ಧ ಕುಡಿಯುವ ನೀರಿನ ಘಟಕ: ಜಿಲ್ಲೆಯಲ್ಲಿವಿವಿಧ ಇಲಾಖೆಯಿಂದ ಒಟ್ಟು 750 ಶುದ್ಧಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು,ಅದರಲ್ಲಿ 720 ಘಟಕಗಳು ಕಾರ್ಯನಿರ್ವಹಿಸುತ್ತಿದ್ದರೆ30 ಘಟಕಗಳು ದುರಸ್ತಿಯಲ್ಲಿವೆ. 4 ಘಟಕಗಳಿಗೆಗಡಸು ನೀರಿನ ಸಮಸ್ಯೆ ಎದುರಾಗಿದ್ದರೆ, 1 ಘಟಕಕ್ಕೆವಿದ್ಯುತ್‌ನ ಸಮಸ್ಯೆ, 5 ಘಟಕಗಳಿಗೆ ಏಜೆನ್ಸಿಸಮಸ್ಯೆ ಉಂಟಾಗಿದ್ದರೆ ಇನ್ನುಳಿದ 20 ಘಟಕಗಳು ದುರಸ್ತಿಯಲ್ಲಿವೆ.

ಜಿಲ್ಲೆಯಲ್ಲಿ ಆರ್‌ಡ್ಲ್ಯೂಎಸ್‌ ಇಲಾಖೆಯಿಂದ 286 ಘಟಕ, ಕೆಆರ್‌ಐಡಿಎಲ್‌ನಿಂದ 213, ಸಹಕಾರಿಸಂಘದಿಂದ 120, ಇತರೆ 131 ಘಟಕಗಳು ಸೇರಿ ಒಟ್ಟು 750 ಘಟಕಗಳನ್ನು ನಿರ್ಮಿಸಲಾಗಿದ್ದು, ಅದರಲ್ಲಿ ಆರ್‌ ಡ್ಬ್ಲ್ಯೂ ಎಸ್‌ನ 10, ಕೆಆರ್‌ಐಡಿಎಲ್‌ನ 14, ಸಹಕಾರಿ ಸಂಘದ 5, ಇತರೆ 1ಘಟಕ ದುರಸ್ತಿಯಲ್ಲಿದೆ.

30 ಘಟಕಗಳು ಬಂದ್‌: ಬ್ಯಾಡಗಿ ತಾಲೂಕಿನಲ್ಲಿ 87 ಘಟಕಗಳಲ್ಲಿ 84 ಕಾರ್ಯನಿರ್ವಹಿಸುತ್ತಿದ್ದ 3 ದುರಸ್ತಿಯಲ್ಲಿವೆ. ಹಾನಗಲ್ಲ ತಾಲೂಕಿನಲ್ಲಿ 126 ಘಟಕಗಳಲ್ಲಿ 122 ಕಾರ್ಯನಿರ್ವಹಿಸುತ್ತಿದ್ದರೆ 4ದುರಸ್ತಿಯಲ್ಲಿವೆ. ಹಾವೇರಿ ತಾಲೂಕಿನಲ್ಲಿ 108 ಘಟಕಗಳಲ್ಲಿ 8 ಘಟಕಗಳು ದುರಸ್ತಿಯಲ್ಲಿವೆ. ಹಿರೇಕೆರೂರಿನಲ್ಲಿ 125 ಘಟಕಗಳಲ್ಲಿ 119ಘಟಕಗಳು ಕಾರ್ಯನಿರ್ವಹಿಸುತ್ತಿದ್ದ 6 ಘಟಕಗಳು ದುರಸ್ತಿಯಲ್ಲಿವೆ. ರಾಣೆಬೆನ್ನೂರಿನಲ್ಲಿ 158 ಘಟಕಗಳಲ್ಲಿ 6 ಘಟಕಗಳು ದುರಸ್ತಿಯಲ್ಲಿವೆ. ಸವಣೂರಿನಲ್ಲಿ 63 ಘಟಕಗಳಲ್ಲಿ 61 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 2ಘಟಕಗಳ ದುರಸ್ತಿಯಲ್ಲಿವೆ. ಶಿಗ್ಗಾವಿಯಲ್ಲಿ 83 ಘಟಕಗಳಲ್ಲಿ 82 ನಿರ್ವಹಸುತ್ತಿದ್ದು, 1 ಘಟಕ ದುರಸ್ತಿಯಲ್ಲಿದೆ. ಜಿಲ್ಲೆಯಲ್ಲಿ ಒಟ್ಟು 698 ಹಳ್ಳಿಗಳಿದ್ದು, ಗ್ರಾಮಾಂತರ ಪ್ರದೇಶದಲ್ಲಿ 12,42,167 ಜನಸಂಖ್ಯೆ ಇದೆ. ಜಿಲ್ಲೆಯ ವಿವಿಧ ತಾಲೂಕುಗಳ ಬಹು ಗ್ರಾಮ ನದಿ ನೀರುಯೋಜನೆಯಿಂದ ನೂರಾರು ಹಳ್ಳಿಗಳಿಗೆ ನದಿ ನೀರುಪೂರೈಕೆ ಮಾಡಲಾಗುತ್ತಿದೆ. ದುರಸ್ತಿಯಲ್ಲಿರುವ 30 ಘಟಕಗಳನ್ನೂ ಸರಿಪಡಿಸಿ ಬೇಸಿಗೆಯಲ್ಲಿ ಜನತೆಗೆನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕಾದ ಹೊಣೆಗಾರಿಕೆ ಜಿಲ್ಲಾ ಪಂಚಾಯಿತಿ ಮೇಲಿದೆ.

ಜಿಲ್ಲೆಯಲ್ಲಿ ಯಾವುದೇ ಶುದ್ಧಕುಡಿಯುವ ನೀರಿನ ಘಟಕ ಹಾಳಾಗದಂತೆ ನೋಡಿಕೊಳ್ಳಲು ಸೂಚನೆನೀಡಲಾಗಿದೆ. ಈಗಾಗಲೇ ದುರಸ್ತಿಯಲ್ಲಿದ್ದಘಟಕಗಳನ್ನು ಸರಿಪಡಿಸಲಾಗಿದೆ. ಹಾಳಾದ ಆರ್‌ಒ ಘಟಕಗಳನ್ನು 72 ಗಂಟೆಗಳಲ್ಲಿ ದುರಸ್ತಿಗೊಳಿಸಲು ಕ್ರಮಕೈಗೊಳ್ಳಲಾಗಿದೆ.ನಿರ್ವಹಣೆ ಕೊರತೆಯಿಂದಾಗಿಸಹಕಾರಿ ಸಂಘದ ಘಟಕಗಳು ಹಾಳಾಗುತ್ತಿದ್ದು, ಅವುಗಳನ್ನು ಸಹನಮ್ಮ ಇಲಾಖೆಗೆ ತೆಗೆದುಕೊಂಡು ನಿರ್ವಹಿಸಲು ಅನುಮತಿ ನೀಡುವಂತೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. – ಮಹ್ಮದ್‌ ರೋಶನ್‌, ಜಿಪಂ ಸಿಇಒ

 

-ವೀರೇಶ ಮಡ್ಲೂರ

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ

Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ

1-bbb

Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ

ajjamper-Qadri

Adi Jambava Samavesha: ಅಂಬೇಡ್ಕರ್‌ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ

Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.