ನಿಮಗೆ ಆಶ್ಚರ್ಯವೆನ್ನಿಸಬಹುದು. ಆಲೂಗಡ್ಡೆಗಿಂತ ಅದರ ಸಿಪ್ಪೆ ಪ್ರಯೋಜನಕಾರಿ..!


Team Udayavani, Mar 18, 2021, 6:58 PM IST

Aloo Health Tips

ಆಲೂಗಡ್ಡೆಯನ್ನು ಇಷ್ಟಪಡದವರ ಸಂಖ್ಯೆ ತೀರಾ ಕಡಿಮೆ ಎಂದೇ ಹೇಳಬಹುದು. ಆದರೆ ಆಲೂಗಡ್ಡೆಯನ್ನು ಅಡುಗೆಗೆ ಬಳಸಿಕೊಳ್ಳುವ ಮೊದಲು ನಾವು ಗಡ್ಡೆಯಲ್ಲಿನ ಮಣ್ಣಿನಾಂಶವನ್ನು ತೆಗೆಯಲು ಸಾಮಾನ್ಯವಾಗಿ ಅದನ್ನು ತೊಳೆದು ಸಿಪ್ಪೆ ತೆಗೆದುಕೊಳ್ಳುತ್ತೇವೆ.  ತದನಂತರ ಅಡುಗೆಗೆ ಬಳಸಿಕೊಳ್ಳುತ್ತೇವೆ.

ಆದರೇ, ಆಲೂಗೆಡ್ಡೆ ಸಿಪ್ಪೆಯನ್ನು ಡಸ್ಟ್‌ ಬಿನ್‌ ಗೆ  ಎಸೆಯುವ ಮೊದಲು ಒಮ್ಮೆ ಯೋಚಿಸಿ. ಆಲೂಗೆಡ್ಡೆ ಸಿಪ್ಪೆ ಅಪ್ರಯೋಜಕ ಎಂದು ನಿಮಗೆ ಅನ್ನಿಸಿದರೆ ಅದು ಅಪ್ಪಟ ಸುಳ್ಳು. ಕೆಲವು ಖಾದ್ಯಗಳನ್ನು ತಯಾರಿಸುವಾಗ ಆಲೂಗಡ್ಡೆಯ ಸಿಪ್ಪೆ ತೆಗೆಯುವುದು ಅನಿವಾರ್ಯ. ಹಾಗೆಂದು ಪ್ರತಿಬಾರಿಯೂ ಅದನ್ನೇ ರೂಢಿಸಿಕೊಳ್ಳದಿರಿ. ಆಲೂಗಡ್ಡೆ ಸಿಪ್ಪೆಯಲ್ಲೂ ಸಾಕಷ್ಟು ಪೌಷ್ಟಿಕ ಅಂಶಗಳಿವೆ.

ನಿಮಗೆ ಆಶ್ಚರ್ಯವೆನ್ನಿಸಬಹುದು. ಆಲೂಗಡ್ಡೆಗಿಂತ ಅದರ ಸಿಪ್ಪೆ ಪ್ರಯೋಜನಕಾರಿ :

ಆಲೂಗಡ್ಡೆಗಳನ್ನು ಪ್ರೋಟೀನ್, ಕಾರ್ಬ್ಸ್, ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್ ಬಿ 6 ಹಾಗೂ ಥಯಾಮಿನ್ ನಂತಹ ಪೋಷಕಾಂಶಗಳ ಅತ್ಯುತ್ತಮ ಆಹಾರ ಪದಾರ್ಥವೆಂದು ಪರಿಗಣಿಸಲಾಗಿದೆ.  ಈ ಎಲ್ಲಾ ಪೋಷಕಾಂಶಗಳು ಆಲೂಗಡ್ಡೆಗಿಂತ ಹೆಚ್ಚಾಗಿ ಅದರ ಸಿಪ್ಪೆಯಲ್ಲಿ  ಕಂಡುಬರುತ್ತವೆ, ಆದ್ದರಿಂದ ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ಬಳಸುವ ಬದಲಿಗೆ ಅದರ ಸಿಪ್ಪೆಯೊಂದಿಗೆ ಬಳಸುವುದು ಆರೋಗ್ಯ ದೃಷ್ಟಿಯಿಂದ ಬಹಳ ಉತ್ತಮ ಎನ್ನುತ್ತಾರೆ ತಜ್ಞ ವೈದ್ಯರು.

ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮಾಡುತ್ತದೆ ಆಲೂಗಡ್ಡೆ ಸಿಪ್ಪೆ :

ನೀವು ಆಲೂಗೆಡ್ಡೆ ಸಿಪ್ಪೆಯನ್ನು ತೆಗೆದು ಆಲೂಗಡ್ಡೆಯನ್ನು ಸೇವಿಸುವಾಗ, ಆಲೂಗಡ್ಡೆ ಸರಳ ಕಾರ್ಬೋಹೈಡ್ರೇಟ್ ಆಗಿ ಪರಿವರ್ತಿತವಾಗುತ್ತದೆ. ತಿಂದ ನಂತರ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಹೆಚ್ಚಳ ಮಾಡುತ್ತದೆ. ಆದರೆ ಸಿಪ್ಪೆ ಸಮೇತ ಆಲೂಗಡ್ಡೆ ತಿನ್ನುವಾಗ, ದೇಹವು ಹೆಚ್ಚುವರಿ ಫೈಬರ್ ಅನ್ನು ಪಡೆಯುತ್ತದೆ, ಇದು ರಕ್ತದಲ್ಲಿನ ಸಕ್ಕರೆ  ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.

ರಕ್ತದೊತ್ತಡ ನಿಯಂತ್ರಣಕ್ಕೆ ದಿ ಬೆಸ್ಟ್ ಆಲುಗಡ್ಡೆ ಸಿಪ್ಪೆ :

ಆಲೂಗಡ್ಡೆ ಸಿಪ್ಪೆ ಪೊಟ್ಯಾಸಿಯಮ್‌ ಯುಕ್ತವಾಗಿದೆ. ಪೊಟ್ಯಾಸಿಯಮ್ ಸೇವನೆಯಿಂದ ದೇಹದಲ್ಲಿ ಸೋಡಿಯಂ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ರಕ್ತನಾಳಗಳ ಒತ್ತಡವನ್ನು ಕಡಿಮೆ ಮಾಡುತ್ತದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

ಚರ್ಮ ಮತ್ತು ಕೂದಲಿಗೆ ಅಗ್ಗದ ಔಷಧಿ :

ಆಲೂಗಡ್ಡೆ ಸಿಪ್ಪೆಯಿಂದ, ನೀವು ಕಣ್ಣುಗಳ ಕೆಳಗೆ ಮೂಡುವ ಡಾರ್ಕ್ ಸರ್ಕಲ್  ನಿವಾರಿಸಬಹುದಾಗಿದೆ. ಇದಲ್ಲದೆ ನಿಮ್ಮ  ಚರ್ಮವು ಎಣ್ಣೆಯುಕ್ತವಾಗಿದ್ದರೆ, ಮೊಡವೆ ಮತ್ತು ಬ್ಲ್ಯಾಕ್‌ ಹೆಡ್‌ ಗಳಂತಹ ಸಮಸ್ಯೆಗಳನ್ನು ಹೊಂದಿದ್ದರೆ, ಆಲೂಗೆಡ್ಡೆ ಸಿಪ್ಪೆ ಸಹ ನಿಮಗೆ ಸಹಕಾರಿಯಾಗಿದೆ. ಆಲೂಗೆಡ್ಡೆ ಸಿಪ್ಪೆಯನ್ನು ಪುಡಿಮಾಡಿ ಅದರ ಜ್ಯೂಸ್ ಅನ್ನು ಕೂದಲ ಬುಡಕ್ಕೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.

ಆಲೂಗಡ್ಡೆ ಸಿಪ್ಪೆ ರಕ್ತಹೀನತೆಯಿಂದ ರಕ್ಷಣೆ ಮಾಡುತ್ತದೆ :

ರಕ್ತಹೀನತೆಯಿಂದ ಬಳಲುತ್ತಿರುವವರು ಆಲೂಗೆಡ್ಡೆ ಸಿಪ್ಪೆಯನ್ನು ಇತರ ಹಸಿರು ತರಕಾರಿಗಳೊಂದಿಗೆ ಸೇವಿಸುವುದು ಉತ್ತಮ. ಆಲೂಗಡ್ಡೆ ಸಿಪ್ಪೆಯಲ್ಲಿ ಕಬ್ಬಿಣದ  ಅಂಶವಿದೆ, ಇದು ಕೆಂಪು ರಕ್ತ ಕಣಗಳ  ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಮಲಬದ್ದತೆಯ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಆಲೂಗಡ್ಡೆ ಸಿಪ್ಪೆ :

ಮಲಬದ್ಧತೆಯ ಸಮಸ್ಯೆ ನಿವಾರಣೆ ಆಲೂಗೆಡ್ಡೆ ಸಿಪ್ಪೆಯಲ್ಲಿ ಫೈಬರ್  ಕೂಡ ಇದೆ, ಇದು ಚಯಾಪಚಯವನ್ನು ಸರಾಗೊಳಿಸುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಯವುದಕ್ಕೆ ಸಹಕಾರಿಯಾಗಿದೆ.

ಓದಿ :  ಟ್ರಕ್ ಚಲಾಯಿಸುವಾಗ ಹೆಲ್ ಮೆಟ್ ಧರಿಸದ ಕಾರಣ 1000 ರೂ. ದಂಡ ವಿಧಿಸಿದ RTO

ಟಾಪ್ ನ್ಯೂಸ್

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ

3-health

Mother: ತಾಯಂದಿರ ಮಾನಸಿಕ ಆರೋಗ್ಯ

Lip Care Routine; How much do you know about keeping your lips healthy?

Lip Care Routine; ನಿಮ್ಮ ತುಟಿಗಳ ಆರೋಗ್ಯ ಕಾಪಾಡುವ ಬಗ್ಗೆ ನಿಮಗೆಷ್ಟು ಗೊತ್ತು?

16

Vaccines: ವಯಸ್ಕರಿಗೆ ಲಸಿಕೆಗಳು

5-

ಅಂತಾರಾಷ್ಟ್ರೀಯ ಫ್ಲೂ ದಿನ: ಇನ್‌ಫ್ಲುಯೆಂಜಾ ಅರಿವು ಮತ್ತು ತಡೆ: ಕಾರ್ಯಾಚರಣೆಯ ಕರೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

4-siruguppa

Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್‌; ಎತ್ತು ಸಾವು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.