ಶ್ರೀಕೃಷ್ಣಮಠ: ಅಕ್ಷರಲಕ್ಷ ಮಂತ್ರ ಜಪ ;ನಿರಂತರ ಚತುರ್ವೇದ ಪಾರಾಯಣ

Team Udayavani, Mar 19, 2021, 5:15 AM IST

ಶ್ರೀಕೃಷ್ಣಮಠ: ಅಕ್ಷರಲಕ್ಷ ಮಂತ್ರ ಜಪ ;ನಿರಂತರ ಚತುರ್ವೇದ ಪಾರಾಯಣ

ಉಡುಪಿ: ಶ್ರೀಕೃಷ್ಣಮಠದಲ್ಲಿ ಅಕ್ಷರಲಕ್ಷ ಮಂತ್ರ ಜಪದ ಅನುಷ್ಠಾನ ಆರಂಭವಾಗಿದೆ. ಸುಮಾರು 60 ಲಕ್ಷ ಆವರ್ತಿಯಾಗುವಷ್ಟು ಅನುಷ್ಠಾನವಾಗಲಿದೆ.

ಮಾ. 7ರಂದು ಆರಂಭಗೊಂಡ ಇದು ಎ. 24ರ ವರೆಗೆ ನಡೆಯಲಿದೆ. ಕೃಷ್ಣ ಷಡಕ್ಷರ ಮಂತ್ರ (ಆರು ಅಕ್ಷರ, ಆರು ಲಕ್ಷ ಜಪ), ಧನ್ವಂತರಿ ಮಂತ್ರ (ಎಂಟು ಅಕ್ಷರ, ಎಂಟು ಲಕ್ಷ ಜಪ), ವೇದವ್ಯಾಸ ಮಂತ್ರ (ಎಂಟು ಅಕ್ಷರ, ಎಂಟು ಲಕ್ಷ ಜಪ), ರಾಮಮಂತ್ರ (ಆರು ಅಕ್ಷರ, ಆರು ಲಕ್ಷ ಜಪ), ಹಯಗ್ರೀವ ಮಂತ್ರ (ಎಂಟು ಅಕ್ಷರ, ಎಂಟು ಲಕ್ಷ ಜಪ), ಭೂವರಾಹ ಮಂತ್ರಗಳ (ಏಳು ಅಕ್ಷರ, ಏಳು ಲಕ್ಷ ಜಪ) ಜಪಾನುಷ್ಠಾನ 25ರಿಂದ 50 ವೈದಿಕರಿಂದ ನಿತ್ಯ ನಡೆಯುತ್ತಿದೆ.

ಇದೇ ರೀತಿ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಈ ನಾಲ್ಕು ವೇದಗಳ ಪಾರಾಯಣಗಳೂ ನಡೆಯುತ್ತಿವೆ. ವಿವಿಧ ಕಡೆ ಇರುವ ವೇದ ವಿದ್ವಾಂಸರನ್ನು ಆಹ್ವಾನಿಸಿ ಅವರಿಂದ ಪಾರಾಯಣ ನಡೆಸಲಾಗುತ್ತಿದೆ. ಪರ್ಯಾಯ ಅವಧಿ ಮುಗಿಯುವವರೆಗೆ ಸುಮಾರು 500 ವಿದ್ವಾಂಸರು ಬರುವ ನಿರೀಕ್ಷೆ ಇದೆ. ಈ ವಿದ್ವಾಂಸರ ವೇದ ಪಾರಾಯಣವಲ್ಲದೆ ನಿತ್ಯ ಬೆಳಗ್ಗೆ ಮಠದ ಸಿಬಂದಿ ವಿದ್ವಾಂಸರು ಪಂಚಾಮೃತ ಅಭಿಷೇಕ, ಕಲಶ ಪೂಜೆಯ ಹೊತ್ತಿಗೆ ನಡೆಸುತ್ತಾರೆ.

ಭಕ್ತರ ದೇವರ ದರ್ಶನದ ವ್ಯವಸ್ಥೆ ಪುನಾರಚನೆ ಮಾಡಿದ ಬಳಿಕ ಕೃಷ್ಣಮಠದ ಎದುರಿನ ಚಂದ್ರಶಾಲೆಯ ಮಹಡಿಯಲ್ಲಿ ಸ್ಥಳಾವಕಾಶ ಲಭ್ಯವಾಗಿದ್ದು, ಅಲ್ಲಿ ಅಕ್ಷರ ಲಕ್ಷ ಜಪ, ವೇದ ಪಾರಾಯಣಗಳನ್ನು ನಡೆಸಲಾಗುತ್ತಿದೆ.

ಸ್ವಾಮೀಜಿಯವರ ಇಚ್ಛೆ
ಶ್ರೀಕೃಷ್ಣನ ಸನ್ನಿಧಿಯಲ್ಲಿ ಮಂತ್ರ ಜಪಾನುಷ್ಠಾನ ನಡೆಯಬೇಕೆಂಬುದು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರ ಅಪೇಕ್ಷೆ. ಬೇರೆ ಬೇರೆ ಊರಿನಲ್ಲಿ ವೇದಾಧ್ಯಯನ ನಡೆಸಿ, ವಿದ್ಯಾರ್ಥಿಗಳಿಗೆ ಪಾಠ ಹೇಳುವ ವಿದ್ವಾಂಸರು ಇದ್ದಾರೆ. ಇವರಿಗೆ ಬೇರೆ ಆದಾಯಗಳಿಲ್ಲದಿದ್ದರೂ ವೇದ ಪಾಠವನ್ನು ಸಂರಕ್ಷಣೆ ಮಾಡಿ ಕೊಂಡು ಬಂದಿರುವುದರಿಂದ ವಿಶೇಷ ವಾಗಿ ಇವರನ್ನು ಕರೆಸಿ ಪಾರಾಯಣ ಮಾಡಿಸ ಬೇಕೆಂಬುದು ಸ್ವಾಮೀಜಿಯವರ ಇಚ್ಛೆ.
– ಭಾರತೀಶ ಬಲ್ಲಾಳ್‌, ವೇದ ವಿದ್ವಾಂಸರು, ಜಪ, ಪಾರಾಯಣದ ಉಸ್ತುವಾರಿ, ಶ್ರೀಕೃಷ್ಣಮಠ, ಉಡುಪಿ

ಟಾಪ್ ನ್ಯೂಸ್

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-udupi

Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್‌.ಆರ್‌.

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.