ಏಷ್ಯನ್‌-ಅಮೆರಿಕನ್ನರಲ್ಲಿ ಹೆಚ್ಚುತ್ತಿದೆ ದಾಳಿ ಭೀತಿ

Team Udayavani, Mar 19, 2021, 6:15 AM IST

ಏಷ್ಯನ್‌-ಅಮೆರಿಕನ್ನರಲ್ಲಿ ಹೆಚ್ಚುತ್ತಿದೆ ದಾಳಿ ಭೀತಿ

ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಏಷ್ಯಾ ಮೂಲದ ಅಮೆರಿಕನ್ನರ ಮೇಲೆ ದಾಳಿ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಉದಾಹರಣೆ ಎಂಬಂತೆ ಬುಧವಾರವಷ್ಟೇ ಮೂರು ಕಡೆ ದಾಳಿಯಾಗಿದ್ದು ಎಂಟು ಮಂದಿ ಅಸುನೀಗಿದ್ದಾರೆ. ಸಾವನ್ನಪ್ಪಿದವರಲ್ಲಿ ಆರು ಮಂದಿ ಏಷ್ಯಾದವರಾಗಿದ್ದಾರೆ ಎಂಬುದು ಆತಂಕದ ವಿಚಾರ.

ಇದು ಕೇವಲ ಬುಧವಾರದ ಘಟನೆಗಷ್ಟೇ ಸೀಮಿತವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಏಷ್ಯಾ ಮೂಲದ ಅಮೆರಿಕನ್ನರು ದಾಳಿಯಾಗುತ್ತಿರುವುದು ಮಾಮೂಲಾಗಿದೆ ಎಂಬ ವಿಚಾರವೂ ಬೆಳಕಿಗೆ ಬಂದಿದೆ. ಬುಧವಾರದ ದಾಳಿಗೂ ಮುನ್ನ ಸಮೀಕ್ಷೆಯೊಂದರ ವರದಿ ಬಿಡುಗಡೆಯಾಗಿದ್ದು, ಇದರ ಪ್ರಕಾರ, ಶೇ.70ರಷ್ಟು ಏಷ್ಯಾ ಮೂಲದ ಅಮೆರಿಕನ್ನರು ಒಂದಲ್ಲ ಒಂದು ರೀತಿ ಕಿರುಕುಳಕ್ಕೆ ಈಡಾಗುತ್ತಿದ್ದೇವೆ ಎಂದು ಹೇಳಿದ್ದಾರೆ.

ಇವೆಲ್ಲದಕ್ಕಿಂತ 2020ರಲ್ಲೇ ಹೆಚ್ಚು ದಾಳಿ ಪ್ರಕರಣಗಳಾಗಿವೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ. ಅಂದರೆ, ಕೊರೊನಾ ಕಾಣಿಸಿಕೊಂಡ ಮೇಲೆ ಈ ರೀತಿಯ ಪ್ರಕರಣಗಳು ಹೆಚ್ಚಾಗಿವೆಯಂತೆ. ಇದಕ್ಕೆ ಕಾರಣ, ಕೊರೊನಾ ವೈರಸ್‌ ಮೂಲ ಚೀನದ್ದು ಎಂಬುದು. ಕೊರೊನಾ ವೈರಸ್‌ ಉಗಮವಾದ ಮೇಲೆ ಚೀನದವರ ಮೇಲೆ ಅಮೆರಿಕನ್ನರ ದ್ವೇಷ ತುಸು ಹೆಚ್ಚಾಗಿದೆ. ಆದರೆ ಚೀನಿಯರ ಮೇಲಿನ ಕೋಪ ಇತರ ದೇಶದವರ ನೆಮ್ಮದಿಗೂ ಭಂಗ ತಂದಿದೆ. ಅಂದರೆ ಜಪಾನ್‌, ದಕ್ಷಿಣ ಕೊರಿಯಾ ಸೇರಿದಂತೆ ಚೀನದವರಂತೆಯೇ ಕಾಣುವ ಇತರದೇಶಗಳ ಮಂದಿಗೂ ಇಂಥ ಕಿರುಕುಳಗಳು ಸಾಮಾನ್ಯವಾಗಿವೆ.

ಬಿಡುಗಡೆಗೊಂಡಿರುವ ಅಂಕಿ ಅಂಶಗಳ ಪ್ರಕಾರ, ಈ ವರ್ಷದ ಮೊದಲ 2 ತಿಂಗಳೇ 500 ಬಾರಿ ಏಷ್ಯಾ ಮೂಲದ ಅಮೆರಿಕನ್ನರನ್ನು ಟಾರ್ಗೆಟ್‌ ಮಾಡಲಾಗಿದೆ. ಕಳೆದ ಒಂದು ವರ್ಷದಲ್ಲಿ 3,795 ಕೇಸು ದಾಖಲಾಗಿವೆ. ಇದರಲ್ಲಿ ಶೇ.68ರಷ್ಟು ಮಂದಿ ನಮ್ಮ ಮೇಲೆ ನಿಂದನೆಗಳಾಗುತ್ತಿವೆ ಎಂದಿದ್ದರೆ, ಶೇ.11­ರಷ್ಟು ಮಂದಿ ನಮ್ಮ ಮೇಲೆ ದೈಹಿಕ ಹಲ್ಲೆಗಳಾಗಿವೆ ಎಂದಿದ್ದಾರೆ.

1918ರಲ್ಲೂ ಇದೇ ರೀತಿ ಅಮೆರಿಕದಲ್ಲಿ ದ್ವೇಷದ ವಾತಾವರಣ ನಿರ್ಮಾಣವಾಗಿತ್ತು. ಆಗ ಕಂಡು ಬಂದಿದ್ದ ಸಾಂಕ್ರಾಮಿಕ ರೋಗಕ್ಕೆ ಸ್ಪ್ಯಾನಿಷ್‌ ಫ‌ೂ ಎಂದು ಹೆಸರಿಡಲಾಗಿತ್ತು. ಈ ಮೂಲಕ ದೇಶವೊಂದರ ಮೇಲೆ ದ್ವೇಷ ಸಾಧಿಸಲಾಗಿತ್ತು. ಈಗ ಕೊರೊನಾ ವೈರಸ್‌ಗೂ ಹಿಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕುಂಗ್‌ ಫ‌ೂé ಎಂದು ಕರೆದಿದ್ದು, ಇದು ಚೀನದವರ ಮೇಲೆ ಮತ್ತಷ್ಟು ದ್ವೇಷ ಹೆಚ್ಚಲು ಕಾರಣವಾಗಿದೆ ಎಂದು ಹೇಳುತ್ತಾರೆ ತಜ್ಞರು.

ಇಂಥ ದಾಳಿಗಳು, ದ್ವೇಷ ಸರಿಯಲ್ಲ ಎಂದು ಹೇಳುತ್ತಾರೆ ತಜ್ಞರು. ಮೊದಲೇ ಅಮೆರಿಕ ವಲಸಿಗರ ದೇಶ. ವಲಸಿಗರ ದೇಶವಾಗಿರುವುದರಿಂದಲೇ ಬಹಳಷ್ಟು ವೈವಿಧ್ಯತೆಯನ್ನು ನೋಡುತ್ತಿದ್ದೇವೆ. ಆದರೆ ಇಂಥ ದಾಳಿಗಳು ಈ ವೈವಿಧ್ಯತೆಯನ್ನೇ ಹಾಳು ಮಾಡುತ್ತವೆ ಎಂಬ ಆತಂಕ ಇವರದ್ದು.

ಟಾಪ್ ನ್ಯೂಸ್

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.