ಡಬ್ಬಾ ಅಂಗಡಿ ತೆರವಿಗೆ ಸದಸ್ಯರ ಆಗ್ರಹ
Team Udayavani, Mar 19, 2021, 7:09 PM IST
ತಾಳಿಕೋಟೆ : ಪಟ್ಟಣದ ರಸ್ತೆಗೆ ಹೊಂದಿಕೊಂಡು ಹಾಗೂ ರಸ್ತೆಯ ಮೇಲೆ ಡಬ್ಟಾ ಅಂಗಡಿಗಳನ್ನು ಇಟ್ಟು ಕೆಲವರು ವ್ಯಾಪಾರ ನಡೆಸುತ್ತಿದ್ದಾರೆ. ಇದು ಜನ ಸಂಚಾರ, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಾ ಸಾಗಿದ್ದು, ಸಂಪೂರ್ಣವಾಗಿ ಡಬ್ಟಾ ಅಂಗಡಿ ತೆರವುಗೊಳಿಸಬೇಕು ಎಂದು ಪುರಸಭೆ ಸದಸ್ಯರು ಆಗ್ರಹಿಸಿದರು.
ಪುರಸಭಾ ಸಭಾ ಭವನದಲ್ಲಿ ಪುರಸಭಾ ಅಧ್ಯಕ್ಷ ಸಂಗಮೇಶ ಇಂಗಳಗಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪುರಸಭೆಯ ಪ್ರಥಮ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮಾತನಾಡಿ, ಕೆಲವೆಡೆ ರಸ್ತೆಗಳನ್ನು ತಮ್ಮ ಸ್ವಂತ ಆಸ್ತಿಯಂತೆ ಕೆಲವರು ಗೂಡಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದರೆ ಇನ್ನೂ ಕೆಲವರು ಡಬ್ಟಾ ಅಂಗಡಿಗಳನ್ನು ಎಲ್ಲೆಂದರಲ್ಲಿ ಇಟ್ಟು ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಪಟ್ಟಣದ ಸೌಂದಯೀìಕರಣದ ಜತೆಗೆ ಪುರಸಭೆ ಮಳಿಗೆ ಬಾಡಿಗೆ ಹಿಡಿದ ಗ್ರಾಹಕರಿಗೂ ನಷ್ಟ ಉಂಟಾಗುತ್ತಾ ಸಾಗಿದೆ. ಶಿವಾಜಿ ವೃತ್ತದಿಂದ ವಿದ್ಯಾಭಾರತಿ ಶಾಲೆಯವರೆಗೆ ಮತ್ತು ಮದರಕಲ್ಲ ಮೇಘಾ ಮಾರ್ಟ್‌ದಿಂದ ಮೈಲೇಶ್ವರ ಹಳ್ಳದವರೆಗೆ, ಡೋಣಿ ಬ್ರಿಜ್‌ದಿಂದ ಸ್ಮಶಾನದ ದಾರಿಯವರೆಗೆ ಅಲ್ಲದೇ ಟಿಪ್ಪು ಸರ್ಕಲ್‌ದಿಂದ ಸೋಮನಾಳ ರಸ್ತೆಯವರೆಗೆ, ಹಳೆ ಮಿಣಜಗಿ ರಸ್ತೆ, ಡಿಎಲ್‌ಬಿ ರಸ್ತೆ ಒಳಗೊಂಡು ಸುಮಾರು ನೂರಾರು ಡಬ್ಟಾ ಅಂಗಡಿ ಇಟ್ಟಿದ್ದಾರೆ. ಕೆಲವೆಡೆ ತಮ್ಮ ಸ್ವಂತ ಆಸ್ತಿಯಂತೆ ಶೆಡ್‌ಗಳನ್ನೂ ಕೂಡಾ ನಿರ್ಮಾಣ ಮಾಡಿಕೊಂಡಿದ್ದಾರೆ.
ಕೆಲವು ಪುರಸಭೆ ಮಳಿಗೆದಾರರೂ ಕೂಡಾ ಫುಟ್‌ಪಾತ್ ನ್ನು ಅತಿಕ್ರಮಿಸಿದ್ದಾರೆ. ಕೂಡಲೇ 15 ದಿನಗಳ ಕಾಲಾವಕಾಶದಲ್ಲಿ ಎಲ್ಲ ಅತಿಕ್ರಮಣ ತೆರವುಗೊಳಿಸಿ ಕೊಡಲು ಸೂಚಿಸಿದರು. ತೆರವು ಕಾರ್ಯಾಚರಣೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಪಡೆದುಕೊಳ್ಳಿ ಈ ತೆರವು ಕಾರ್ಯಚರಣೆಗೆ ಪುರಸಭೆಯ ಎಲ್ಲ ಸದಸ್ಯರ ಸಹಕಾರವಿದೆ. ಯಾವುದೇ ಕಾರಣಕ್ಕೂ ಹಿಂಜರಿಕೆ ಮಾಡಬೇಡಿ ಎಂದು ಪುರಸಭೆ ಮುಖ್ಯಾಧಿಕಾರಿ ಸಿ.ವಿ.ಕುಲಕರ್ಣಿಗೆ ಸೂಚಿಸಿದರು. ಸಾಮಾನ್ಯ ಸಭೆಯಲ್ಲಿ ಈಗಿರುವ ಪುರಸಭೆಯ ಖುಲ್ಲಾ ಜಾಗೆಯಲ್ಲಿ ಮೇಘಾ ಮಾರುಕಟ್ಟೆ ನಿರ್ಮಾಣ ಮಾಡಲು ಮತ್ತು ಪುರಸಭೆ ಸಂಬಂಧಿತ ಇನ್ನುಳಿದ ಮಾಲ್ಕಿ ಜಾಗೆಗಳಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಲು ಚರ್ಚಿಸಲಾಯಿತು. ಸದರಿ ಸಭೆಯಲ್ಲಿ ಮೇಘಾ ಮಾರುಕಟ್ಟೆ ಮತ್ತು ಮಳಿಗೆ ನಿರ್ಮಾಣ ಕುರಿತು ಡಿಪಿಆರ್ ರೇಡಿ ಮಾಡಿ ಅಂದಾಜು ಪತ್ರಿಕೆ ತಯಾರಿಸಿ ಮುಂದಿನ ಸಭೆಯಲ್ಲಿ ಅನುಮತಿ ಪಡೆದುಕೊಳ್ಳಲು ಮುಖ್ಯಾ ಧಿಕಾರಿಗೆ ಸದಸ್ಯರು ಸೂಚಿಸಿದರು.
ತೆರಿಗೆ ಹೆಚ್ಚಳ ಕುರಿತು ಚರ್ಚೆಗೆ ಬಂದಾಗ ಸರ್ಕಾರದ ನಿಯಮದಂತೆ ಏಪ್ರಿಲ್‌ನಿಂದ ಯಾವ ರೀತಿ ತೆರಿಗೆ ಹೆಚ್ಚಿಸಬೇಕಾಗಿದೆ. ಆ ರೀತಿ ಕ್ರಮ ಕೈಗೊಳ್ಳಲು ಅನುಮತಿ ನೀಡಲಾಯಿತು. ಈಗಾಗಲೇ ಮಳಿಗೆ ಬಾಡಿಗೆ ಪಡೆದವರು ಬಾಡಿಗೆ ಪಾವತಿಸಿಲ್ಲಾ ಅಂತಹ ಮಳಿಗೆಗೆ ಬೀಗ ಹಾಕಿ ಇಲ್ಲಾ ಸಂಪೂರ್ಣ ಬಾಡಿಗೆ ವಸೂಲಿಗೆ ಕ್ರಮ ಜರುಗಿಸಲು ಸದಸ್ಯರು ಸೂಚಿಸಿದರು. ಬಸ್ ಶೆಲ್ಟರ್ ನಿರ್ಮಾಣಕ್ಕೆ ಅನುಮತಿ: ಪಟ್ಟಣದ ವಿಜಯಪುರ ಸರ್ಕಲ್, ವಿದ್ಯಾಭಾರತಿ ಶಾಲೆಯ ಹತ್ತಿರ, ಅಂಬೇಡ್ಕರ್ ಸರ್ಕಲ್, ಗಡಿಸೋಮನಾಳ ರಸ್ತೆ ಈ ನಾಲ್ಕು ಕಡೆಗಳಲ್ಲಿ ಬಸ್ ಶೆಲ್ಟರ್ ಗಳನ್ನು ನಿರ್ಮಿಸಲು ಪಟ್ಟಣದ ದಿ.ಸಹಕಾರಿ ಬ್ಯಾಂಕ್ ನಿ,ದವರು ಪುರಸಭೆ ಅನುಮತಿಗೆ ಅರ್ಜಿ ಸಲ್ಲಿಸಿದ್ದಾರೆಂಬ ವಿಷಯಕ್ಕೆ ಸಂಬಂಧಿಸಿ ಬಸ್ ಶೆಲ್ಟರ್ ನಿರ್ಮಾಣ ಪುರಸಭೆಯಿಂದಲೇ ಮಾಡಿ ಅನುಕೂಲ ಕಲ್ಪಿಸಬೇಕಾಗಿತ್ತು.
ಆದರೆ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ನವರು ಯಾವಾಗಲು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸ್ವಇಚ್ಚೆಯಿಂದಲೇ ಬಸ್ ಶೆಲ್ಟರ್ ನಿರ್ಮಾಣಕ್ಕೆ ಬಂದಿರುವುದು ಸಂತೋಷದಾಯಕವಾಗಿದೆ. ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಅವರ ಸಾಮಾಜಿಕ ಕಾರ್ಯಕ್ಕೆ ಅನುಮತಿ ಕೊಡಲು ಎಲ್ಲ ಸದಸ್ಯರು ಅನುಮತಿಸಿದರು. ಪುರಸಭಾ ಉಪಾಧ್ಯಕ್ಷ ಮುಸ್ತಫಾ ಚೌದ್ರಿ, ಸದಸ್ಯರಾದ ಅಣ್ಣಾಜಿ ಜಗತಾಪ, ಪರಶುರಾಮ ತಂಗಡಗಿ, ಅಕ್ಕಮಹಾದೇವಿ ಕಟ್ಟಿಮನಿ, ವಾಸುದೇವ ಹೆಬಸೂರ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಮುತ್ತಣ್ಣ ಚಮಲಾಪೂರ, ಡಿ.ವಿ.ಪಾಟೀಲ, ಮೋಹನ ಬಡಿಗೇರ, ಸೈದಾಬಿ ಚಿತ್ತರಗಿ, ಕಸ್ತೂರಿಬಾಯಿ ಬಿರಾದಾರ, ಇಸ್ಮಾಯಿಲಬಿ ಮಕಾಂದಾರ, ಶಾಂತಾಬಾಯಿ ಹೊಟ್ಟಿ, ಸಾಹಿದಾಬೇಗಂ ಬೇಪಾರಿ, ಮೈಹಿಬೂಬಿ ಲಾಹೋರಿ, ಗೌರಮ್ಮ ಕುಂಬಾರ, ನಿಂಗು ಕುಂಟೋಜಿ, ಜೈಸಿಂಗ್ ಮೂಲಿಮನಿ, ಯಾಸೀನ ಮಮದಾಪೂರ, ಜುಬೇದಾ ಜಮಾದಾರ, ಫಾತಿಮಾಬಿ ಖಾಜಾಬಸರಿ, ಮುಖ್ಯಾಧಿ ಕಾರಿ ಸಿ.ವಿ.ಕುಲಕರ್ಣಿ, ವ್ಯವಸ್ಥಾಪಕ ಎಚ್.ಎ.ಢಾಲಾಯತ್, ಆರ್.ವೈ.ನಾರಾಯಣಿ, ಶ್ರೀಪಾದ ಜೋಶಿ, ಸಿದ್ದಲಿಂಗ ಚೋಂಡಿಪಾಟೀಲ, ಎಸ್.ಎ.ಘತ್ತರಗಿ, ಎನ್.ಎಸ್.ಪಾಟೀಲ, ಐ.ಎಚ್.ಮಕಾಂದಾರ, ಶಂಕರಗೌಡ ಪಾಟೀಲ, ರಜೀಯಾಸುಲ್ತಾನ, ರೋಖಡೆ, ಜಾನ್ವೇಕರ, ಶಿವು, ಬಸು, ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.