ಚಿತ್ರ ವಿಮರ್ಶೆ: ಒಂದು ಗಂಟೆಯ ನಂತರ ಒಂದು ಸಂದೇಶ!


Team Udayavani, Mar 20, 2021, 9:43 AM IST

ondu gante kathe kannada movie

“ಒಂದು ಗಂಟೆಯ ಕಥೆ’ ಎಂಬ ಸಿನಿಮಾದಲ್ಲಿ ಏನಿರಬಹುದು, ಯಾವ ವಿಷಯವನ್ನು ಹೇಳಿರಬಹುದು ಎಂಬ ಒಂದು ಕುತೂಹಲವಿತ್ತು. ಈ ವಾರ ಚಿತ್ರ ತೆರೆಕಂಡು ಕುತೂಹಲಕ್ಕೆ ತೆರೆಬಿದ್ದಿದೆ. ಈ ಸಿನಿಮಾದಲ್ಲೊಂದು ಕಥೆ ಇದೆ. ಜೊತೆಗೆ ಚಿಂತಿಸಬೇಕಾದ, ಎಚ್ಚೆತ್ತುಕೊಳ್ಳಬೇಕಾದ ಸಾಕಷ್ಟು ಅಂಶಗಳನ್ನು ಕೂಡಾ ನಿರ್ದೇಶಕರು ಹೇಳಿದ್ದಾರೆ.

ಆದರೆ, ಈ ಎಲ್ಲಾ ಗಂಭೀರ ಅಂಶಗಳು ಸಿನಿಮಾ ಶುರುವಾಗಿ “ಒಂದು ಗಂಟೆಯ ನಂತರವೇ’ ತೆರೆಮೇಲೆ ಬರುತ್ತದೆ. ಹಾಗಾಗಿ, ಪ್ರೇಕ್ಷಕರು ಕೂಡಾ ತಾಳ್ಮೆಯಿಂದ, ಶಾಂತಚಿತ್ತರಾಗಿ ಕಾಯುವ ಅನಿವಾರ್ಯತೆಯನ್ನು ಈ ಚಿತ್ರ ದಯಪಾಲಿಸಿದೆ.

ಇದನ್ನೂ ಓದಿ:ಚಿತ್ರ ವಿಮರ್ಶೆ: ಆದಿತ್ಯ ಅಧ್ಯಾಯದಲ್ಲಿ ತನಿಖೆಯ ಜಾಡು

ನಿರ್ದೇಶಕ ದ್ವಾರ್ಕಿ ರಾಘವ್‌ ಅವರ ಉದ್ದೇಶ ಇಲ್ಲಿ ಸ್ಪಷ್ಟವಾಗಿದೆ. ಆರಂಭದಿಂದ ಕೊನೆಯವರೆಗೆ ಇಡೀ ಸಿನಿಮಾವನ್ನು ಸಿಕ್ಕಾಪಟ್ಟೆ ತುಂಟಾಟಿಕೆಯೊಂದಿಗೆ ಕಟ್ಟಿಕೊಟ್ಟು, ಕೊನೆಯ 10 ನಿಮಿಷದಲ್ಲಿ ಸಿನಿಮಾಕ್ಕೆ ಗಂಭೀರ ಸ್ವರೂಪ ನೀಡಬೇಕೆಂಬುದು. ಆ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿದ್ದಾರೆ. ಮೊದಲೇ ಹೇಳಿದಂತೆ ಇಲ್ಲಿ ಸೀರಿಯಸ್‌ ಆದ, ಹಾರ್ಟ್‌ಗೆ ತಗೊಂಡ್‌ ನೋಡುವಂತಹ ದೃಶ್ಯಗಳಿಲ್ಲ. ಕ್ಲೈಮ್ಯಾಕ್ಸ್‌ನ ಪೂರ್ವ ದವರೆಗೂ ಇಡೀ ಸಿನಿಮಾವನ್ನು ಕಾಮಿಡಿಯಾಗಿಯೇ ನಿರೂಪಿಸಿದ್ದಾರೆ.

ಕಾಮಿಡಿ ದೃಶ್ಯಗಳಿಗೆ ಡಬಲ್‌ ಮೀನಿಂಗ್‌ ಡೈಲಾಗ್‌ ಗಳನ್ನು ಸೇರಿಸಿ, ಪಡ್ಡೆಗಳಿಗೆ ಖುಷಿ ನೀಡಲು ಪ್ರಯತ್ನಿಸಿದ್ದಾರೆ. ಆದರೆ, ಚಿತ್ರದಲ್ಲಿ ಬರುವ ಡಬಲ್‌ ಮೀನಿಂಗ್‌ ಡೈಲಾಗ್‌ಗಳು ಕೆಲವೊಮ್ಮೆ ಅತಿರೇಕ ಎನಿಸುತ್ತವೆ. ಹೇಳಿದ “ಪದ’ವೊಂದನ್ನೇ ಎಲ್ಲಾ ಪಾತ್ರಗಳಿಂದಲೂ ಹೇಳಿಸಿ ಅದನ್ನೇ “ಬ್ರಾಂಡ್‌’ ಮಾಡಲು ಹೊರಟಿದ್ದಾರೇನೋ ಎಂಬ ಸಂದೇಹ ಬರುವಂತಿದೆ.

ಇನ್ನು, ಕಥೆಯ ಎಳೆ ಹೊಸದಾಗಿದೆ. ಆ ಮಟ್ಟಿಗೆ ಅವರ ಪ್ರಯತ್ನವನ್ನು ಮೆಚ್ಚ ಬೇಕು. ಆದರೆ, ಸಿನಿಮಾವನ್ನು ಅದೇ ಹಳೆಯ “ಸಿದ್ಧಸೂತ್ರ’ಗಳೊಂದಿಗೆ ಕಟ್ಟಿಕೊಟ್ಟಿ ದ್ದಾರೆ. ಅದೇ ವಾಹಿನಿಗಳ ಚರ್ಚೆ, ಜ್ಯೋತಿಷಿಗಳು ಹೇಳುವ ಭವಿಷ್ಯ, ಇನ್ಯಾರದೋ ಧ್ವನಿಯ ಮಿಮಿಕ್ರಿ… ಈ ತರಹದ ದೃಶ್ಯಗಳು ತೀರಾ ಹೊಸದೇನಲ್ಲ.

ಒಂದೇ ಮಾತಲ್ಲಿ ಹೇಳುವುದಾದರೆ, ಒಂದು ಗಂಭೀರವಾದ ಕಥೆಯನ್ನು ಕಾಮಿಡಿ ಹಿನ್ನೆಲೆಯಲ್ಲಿ ಹೇಳಿದ್ದಾರೆ ದ್ವಾರ್ಕಿ. ಅವರ ಪ್ರಯತ್ನದಲ್ಲಿ ಪ್ಲಸ್‌ ಮೈನಸ್‌ ಎರಡೂ ಇದೆ. ಚಿತ್ರದಲ್ಲಿ ನಟಿಸಿರುವ ಅಜಯ್‌ ರಾಜ್‌, ಶನಾಯ, ಪ್ರಕಾಶ್‌ ತುಮ್ಮಿನಾಡು ಸೇರಿದಂತೆ ಎಲ್ಲಾ ಕಲಾವಿದರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಆರ್‌.ಪಿ ರೈ

ಟಾಪ್ ನ್ಯೂಸ್

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dheera Bhagat Roy Review

Dheera Bhagat Roy Review: ಹೋರಾಟದ ಕಿಚ್ಚಲ್ಲಿ ಧೀರ ಮಿಂಚು

Gumti Movie Review

Gumti Movie Review: ಸಂಸ್ಕೃತಿ ಸುತ್ತ ʼಗುಂಮ್ಟಿʼ

Megha Movie Review

Megha Movie Review: ʼಮೇಘʼ ತಂದ ಸಂದೇಶ

Jalandhara movie review

Jalandhara Movie Review; ನದಿಯ ಸುಳಿಯಲ್ಲಿ ಸಾವಿನ ಸೆಲೆ

Naa Ninna Bidalare Movie Review

Naa Ninna Bidalare Review: ಬಿಟ್ಟೆನೆಂದರೂ ಬಿಡದೀ ಮಾಯೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

7

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.