ವಿಶ್ವದೆಲ್ಲೆಡೆ ರಂಗುರಂಗಿನ ಉತ್ಸವ


Team Udayavani, Mar 20, 2021, 11:04 AM IST

ವಿಶ್ವದೆಲ್ಲೆಡೆ ರಂಗುರಂಗಿನ ಉತ್ಸವ

ಹೋಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ವಿಶ್ವದೆಲ್ಲೆಡೆ ಸಂಭ್ರಮ ನೆಲೆಯಾಗಿದೆ. ಕಳೆದ ವರ್ಷ ಕೊರೊನಾ ಕಾರಣದಿಂದ ಹಬ್ಬದ ಸಂಭ್ರಮ ಕಳೆಗುಂದಿತ್ತು. ಆದರೆ ಈ ಬಾರಿ ಒಂದಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ವಿಶ್ವದ ಕೆಲವೆಡೆ ಹಬ್ಬದ ಆಚರಣೆಗೆ ಸಿದ್ಧತೆ ನಡೆದಿದ್ದರೂ ಬಹು ತೇಕ ಕಡೆಗಳಲ್ಲಿ ರದ್ದುಪಡಿಸಲಾಗಿದೆ. ಇನ್ನು ಒಂದೇ ಕಡೆ ಹೆಚ್ಚು ಜನ ಸೇರಲು ನಿರ್ಬಂಧಗಳಿರುವುದರಿಂದ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಪಡಿಸಿ ಮನೆಯಲ್ಲೇ ಹಬ್ಬ ಆಚರಿಸುವ ಯೋಜನೆ ಹಲವರದ್ದು.

ವಸಂತ ಹಬ್ಬ, ಬಣ್ಣಗಳ ಹಬ್ಬ ಮತ್ತು ಪ್ರೀತಿಯ ಹಬ್ಬವೆಂದೇ ಕರೆಯಲ್ಪಡುವ ಹೋಳಿ ಹಬ್ಬ ವಸಂತ ಕಾಲದ ಆರಂಭಕ್ಕೆ ಮುನ್ನುಡಿ. ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಬರು ವ ಹೋಳಿ ಅಥವಾ ಕಾಮನಹಬ್ಬವನ್ನು ಈ ಬಾರಿ ಮಾ. 28, 29ರಂದು ವಿಶ್ವದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಜಾತಿ, ಮತ, ಧರ್ಮ ಬೇಧವಿಲ್ಲದೆ ಎಲ್ಲರೂ ಬೆರೆತು ಆಚರಿಸುವುದು ಈ ಹಬ್ಬದ ವಿಶೇಷತೆಯಾಗಿದೆ. ಭಾರತೀಯ ಸಂಸ್ಕೃತಿಯನ್ನು ಪ್ರತಿ ಬಿಂಬಿಸುವ ಹೋಳಿ ಹಬ್ಬ ಈಗ ವಿಶ್ವದೆಲ್ಲೆಡೆ ವ್ಯಾಪಿಸಿದ್ದು, ಆಸ್ಟ್ರೇಲಿಯ, ಯುರೋಪ್‌, ಅಮೆರಿಕಗಳಲ್ಲಿ ಬಣ್ಣಗಳ ಉತ್ಸವ ಎಂದೇ ಕರೆಯಲ್ಪಡುತ್ತಿದೆ.

ಭಾರತದಲ್ಲಿ ಹೋಳಿ ಆಚರಣೆಯಲ್ಲಿ ಹೋಲಿ ದಹನ್‌ ಅಥವಾ ಲಿಟಲ್‌ ಹೋಳಿ ಹಿಂದಿನ ರಾತ್ರಿ ಆರಂಭವಾಗುತ್ತದೆ. ಸಂಜೆಯಾಗುತ್ತಿದ್ದಂತೆ ಪ್ರತಿ ಮನೆಮನೆಗಳಲ್ಲಿ ದೀಪ ಬೆಳಗಿಸಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಜನರೆಲ್ಲ ಸೇರಿ ಹೋಳಿ ದಹನ (ಉರುವಲು, ಒಣ ಪೈರುಗಳನ್ನು ಸುಡುವುದು)ನಡೆಸಿ, ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹಾಡು, ನೃತ್ಯ ಕಾರ್ಯಕ್ರಮಗಳು ನಡೆಯುತ್ತವೆ. ಮರುದಿನ ರಂಗ್ವಾಲಿ ಹೋಳಿಯನ್ನು ಆಚರಿಸಲಾಗುತ್ತದೆ. ಈ ದಿನ ಬಣ್ಣದ ಪುಡಿಗಳನ್ನು ಒಬ್ಬರ ಮೇಲೊಬ್ಬರು ಎರಚಿ ಸಂಭ್ರಮ ಪಡುವುದು ವಿಶೇಷ. ಬೀದಿ ಬದಿ ಸಂಗೀತ, ನೃತ್ಯ ಕಾರ್ಯಕ್ರಮಗಳು ನಡೆಯುತ್ತದೆ, ವಿಧ ವಿಧದ ಖಾದ್ಯ ಗಳು, ಮಾದಕ ಪಾನೀಯಗಳ ಸೇವನೆ ಈ ಹಬ್ಬದ ಮತ್ತೂಂದು ವಿಶೇಷವಾಗಿದೆ. ಒಟ್ಟಿನಲ್ಲಿ ಕೆಟ್ಟದರ ವಿರುದ್ಧ ಜಯ ಸಾಧಿಸುವುದು ಇದರ ಆಚರಣೆಯ ಹಿಂದಿರುವ ಉದ್ದೇಶ.

ನೇಪಾಳದ ಕಠ್ಮಂಡುವಿನಲ್ಲಿ ಮೂರು ದಿನಗಳ ಕಾರ್ಯಕ್ರಮ ನಡೆಯುತ್ತದೆ. ಮೊದಲ ದಿನ ವರ್ಣರಂಜಿತ ಬಟ್ಟೆಗಳಿಂದ ಕಟ್ಟಿದ ಕಂಬಗಳನ್ನು ರಾತಿಯೀಡಿ ಸುಟ್ಟು ಹಳೆಯ ದಿನಗಳ ಅಂತ್ಯ, ಹೊಸ ದಿನದ ಆರಂಭ ವನ್ನು ಸೂಚಿಸುತ್ತಾರೆ. ಎರಡನೇ ದಿನ ಹೋಲಿಕಾ ರಾಕ್ಷಸನ ಸಾವಿನ ಸಂಕೇತವಾಗಿ ದೀಪಗಳನ್ನು ಬೆಳಗಲಾಗುತ್ತದೆ. ಮೂರನೇ ದಿನ ವರ್ಣರಂಜಿತ ನೀರಿನ ಆಕಾಶಬುಟ್ಟಿಗಳು, ಬಣ್ಣದ ಪುಡಿಗಳನ್ನು ಪರಸ್ಪರ ಎರಚಿ ಸಂಭ್ರಮಿಸಲಾಗುತ್ತದೆ.

ಯುಕೆಯ ನಗರಗಳಲ್ಲಿ ವಿಶೇಷವಾಗಿ ವಿಶ್ವಾವಿದ್ಯಾಲಯಗಳಿರುವಂಥ ಪ್ರದೇಶಗಳಲ್ಲಿ ಹೋಳಿ ಆಚರಣೆ ನಡೆಯುತ್ತದೆ. ದಕ್ಷಿಣ ಏಷ್ಯಾದ ಖಾದ್ಯ ಲಭ್ಯವಾಗುತ್ತದೆ. ಬಣ್ಣಗಳನ್ನು ಎರಚಿ ಸಂಭ್ರಮಿಸಲಾಗುತ್ತದೆ. ವಿವಿಧ ಮನೋರಂಜನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಲೀಸೆಸ್ಟರ್‌ನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಭಾರತೀಯರು ವಾಸವಾಗಿದ್ದು, ಇಲ್ಲಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇಲ್ಲಿರುವ ಉದ್ಯಾನವನಗಳಲ್ಲಿ ನಡೆಯುವ ಹೋಲಿಕಾ ದೀಪೋತ್ಸವದಲ್ಲಿ ಪಾಲ್ಗೊಳ್ಳಲು ದೂರದ ಊರುಗಳಿಂದ ಜನರು ಬರುತ್ತಾರೆ. ಅಬ್ಬೆ ಪಾರ್ಕ್‌ನಲ್ಲಿ ನಡೆಯುವ ಉತ್ಸವದಲ್ಲಿ ಹಿಂದೂ ಕುಟುಂಬಗಳು ಸೇರಿ ಹಬ್ಬವನ್ನು ಆಚರಿಸುತ್ತಾರೆ.

ಇಂಗ್ಲೆಂಡ್‌ ನಲ್ಲಿ ಹೋಳಿ ಹಬ್ಬ ಕಳೆದ ಕೆಲವು ವರ್ಷಗಳಿಂದ ಆಚರಿಸ್ಪಡುತ್ತಿದೆ. ಲಂಡ ನ್‌ನ ವಾಟ್ಫಾರ್ಡ್‌ನ ಇಸ್ಕಾನ್‌ ಮಂದಿರ ಹಾಗೂ ಸ್ವಾಮಿನಾರಾಯಣ ಮಂದಿರದ ಹೋಳಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಸ್ಕಾನ್‌ ಮಂದಿರದ ಉದ್ಯಾನದಲ್ಲಿ ಹೋಲಿಕಾ ದಹನ, ಹಾಡು, ನೃತ್ಯದೊಂದಿಗೆ ಬಣ್ಣ ಆಡುವ ವ್ಯವಸ್ಥೆಯು ಇರುತ್ತದೆ. ಸೆಂಟ್ರಲ್‌ ಲಂಡನ್‌ನ ಟ್ರಫಾಲ್ಗರ್‌ ಸ್ಕ್ವೇರ್‌ನಲ್ಲೂ ಹೋಳಿಯ ಸಂಭ್ರಮವಿದೆ. ಆದರೆ ಕೊರೊನಾ ಆತಂಕದ ಕಾರಣದಿಂದ ಕಳೆದ ಬಾರಿ ನಡೆದಿಲ್ಲ. ಈ ಬಾರಿಯೂ ನಡೆಯುವ ಸಾಧ್ಯತೆ ಇಲ್ಲ.

ಸಿಂಗಾಪುರದಲ್ಲಿ ರಂಗ್‌ ಬರ್ಸೆ, ರಂಗ್‌ ದೇ ಹೋಳಿ

ರಂಗ್‌ ಬಾರ್ಸೆ ಸಿಂಗಾಪುರದ ಅತ್ಯಂತ ಪ್ರಸಿದ್ಧ ಹೋಳಿ ಕಾರ್ಯಕ್ರಮವಾಗಿದ್ದು, ಈ ಬಾರಿ ಮಾ. 29ರಂದು ನಡೆಯಲಿದೆ. ಇಲ್ಲಿಗೆ ದೂರ ದೂರುಗಳಿಂದ ಬರುವ ಜನರು ಡಿಜೆ ಪಾರ್ಟಿ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ಮತ್ತು ಪರಸ್ಪರ ಬಣ್ಣದ ಪುಡಿಯನ್ನು ಎಸೆದು ಸಂಭ್ರಮಿಸುತ್ತಾರೆ. ನೀರಿನ ಸ್ನಾನದೊಂದಿಗೆ ಮಳೆ ನೃತ್ಯ, ವೊಡಾ, ಶ್ಯಾಂಪೇನ್‌ಗಳ ಸ್ನಾನವನ್ನೂ ಮಾಡುತ್ತಾರೆ. ಈ ಪಾರ್ಟಿಯಲ್ಲಿ ವಿವಿಧ ಖಾದ್ಯಗಳು, ಕಾಕ್ಟೈಲ್‌ಗಳೂ ಸೇರಿರುತ್ತವೆ. ಇಲ್ಲಿನ ಇನ್ನೊಂದು ಪ್ರಮುಖ ಆಚರಣೆ ಎಂದರೆ ರಂಗ್‌ ದೇ ಹೋಳಿ. ಇದನ್ನು ವೇವ್‌ ಹೌಸ್‌ ಸೆಂಟೋಸಾದಲ್ಲಿ ಈ ಬಾರಿ ಮಾ. 23ರಂದು ನಡೆಯಲಿದೆ. ಹಾಡು, ನೃತ್ಯದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಲಾಗಿದೆ.

ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿರುವ ಆಸ್ಟ್ರೇಲಿಯದಲ್ಲಿ ಹೋಳಿ ದಿನ ಮೆಲ್ಬೋರ್ನ ನಲ್ಲಿ ವರ್ಣರಂಜಿತ ಪುಡಿಗಳನ್ನು ಎರಚಿ ಸಂಭ್ರಮಿಸಲಾಗುತ್ತದೆ. ಇಲ್ಲಿ ಹೋಳಿ ಹಬ್ಬವು ಆಲ್ಕೋ ಹಾಲ್‌ ಮುಕ್ತ, ಕುಟುಂಬ ಸ್ನೇಹಿಯಾಗಿದ್ದು, ಸಂಗೀತ, ಸಾಂಸ್ಕೃತಿಕ ಪ್ರದರ್ಶನಕ್ಕೆ ಖ್ಯಾತಿ ಪಡೆದಿದೆ. ಬೀದಿಗಳಲ್ಲಿ ಮಳೆಬಿಲ್ಲಿನ ವರ್ಣ ಚಿತ್ರಗಳನ್ನು ಕಾಣಬಹುದು. ಭಾರತೀಯರು ಸಾಂಪ್ರದಾಯಿಕ ಧಿರುಸು ಧರಿಸಿ ಸಂಭ್ರಮಿಸುತ್ತಾರೆ. ಬಣ್ಣಗಳನ್ನು ಹಚ್ಚಿ ಪರಸ್ಪರ ಶುಭ ಹಾರೈ ಸುವುದು ಇಲ್ಲಿನ ವಿಶೇಷ.

ಅಡಿಲೈಡ್‌ ನಲ್ಲಿ ಹೋಳಿ ಸಂಭ್ರಮ

ಅಡಿಲೈಡ್‌ನಲ್ಲಿ ಮಾ. 28ರಂದು ಬೀಚ್‌ ನಲ್ಲಿ ಹೋಳಿ ಉತ್ಸವವನ್ನು ಆಯೋಜಿಸಲಾಗಿದೆ. ಎಸ ಪ್ಲೇಂಡ್‌ ರಸ್ತೆಯ ಕೊನೆಯಲ್ಲಿರುವ ಸೆಮಾ ಫೋರ್‌ ಬೀಚ್‌, ಸೆಮಾಫೋರ್‌ ಫೋರ್‌ ಶೇರ್‌, ಸೆಮಾ ಫೋರ್‌, ಅಡಿಲೈಡ್‌ನ‌ಲ್ಲಿ ನಡೆಯುವ ಹಬ್ಬಕ್ಕೆ  ಹೊರಗಿನಿಂದ ಬಣ್ಣಗಳನ್ನು ತರಲು ಅನುಮತಿ ನೀಡಿಲ್ಲ. ಎಲ್ಲರಿಗೂ ಮುಕ್ತ ಪ್ರವೇ ಶ ಕಲ್ಪಿಸಲಾಗಿದೆ.

ಕೆನಡಾ

2017ರಿಂದ ಕೆನ ಡಾದ ಸಂಸದೀಯ ಸಂಕೀರ್ಣವೂ ಹೋಳಿ ಹಬ್ಬದ ಭಾಗವಾಗಿದೆ. ಇಲ್ಲಿ ಇಂಡೋ, ಕೆನಡಿಯನ್‌ ಸಮುದಾಯದವರು ಸೇರಿ ಹಬ್ಬವನ್ನು ಆಚರಿಸುತ್ತಿರುವುದು ವಿಶೇಷ. ಪ್ರತಿ ವರ್ಷ ಹೋಳಿಯಲ್ಲಿ ಏನಾದರೊಂದು ಹೊಸತು ಆಯೋಜಿಸುವುದು ಇಲ್ಲಿನ ವೈಶಿಷ್ಟ್ಯ.

ಯುಎಇ

ಯುಎಇಯಲ್ಲಿರುವ ಭಾರತೀಯ ವಲಸಿಗರು, ಸಾಂಪ್ರದಾಯಿಕ ಭಾರತೀಯರು ಹೊಸ ಬಟ್ಟೆ ಧರಿಸಿ ಸಂಭ್ರಮಿಸುತ್ತಾರೆ. ನೀರಿನಿಂದ ಆಕಾಶ ಬುಟ್ಟಿಗಳನ್ನು ಮಾಡಿ ಅಥವಾ ಬಣ್ಣಗಳನ್ನು ದಾರಿಯಲ್ಲಿ ಬರುವವರ ಮೇಲೆ ಎಸೆದು ಮಕ್ಕಳು ಸಂಭ್ರಮಿಸುತ್ತಾರೆ. ಇದರೊಂದಿಗೆ ಇಲ್ಲಿ ಭಾರತೀಯ ಖಾದ್ಯಗಳಾದ ಮಾಲ್ಪುವಾಸ್‌, ಗುಜಿಯಾ, ಪುರನ್‌ ಪೋಲಿ, ದಹಿವಡಾವನ್ನು ಹೋಲಿಯ ವಿಶೇಷತೆ. ಒಮನ್‌ ದೇಶದ ದೇವಸ್ಥಾನಗಳಲ್ಲಿ  ಹೋಳಿ ಹಬ್ಬಗಳು ನಡೆಯುತ್ತವೆ. ಆದರೆ ಈ ಬಾರಿ ಕೊರೊನಾ ಕಾರಣದಿಂದ ಯಾವುದೇ ಆಚರಣೆಗಳು ನಡೆಯುವ ಸಾಧ್ಯತೆಗಳಿಲ್ಲ.

ಅಮೆರಿಕ

ಹೋಳಿ ಹಬ್ಬದ ಸಂಭ್ರಮ ಹೆಚ್ಚಿಸಲು ಇಲ್ಲಿ ಸಂಗೀತ, ಹೋಳಿ ಭೇಟಿ ಕಾರ್ಯಕ್ರಮಗಳು ವಿಶೇಷವಾಗಿರುತ್ತವೆ. ನ್ಯೂಯಾರ್ಕ್‌ನಲ್ಲಿ  ಹೋಳಿ ಮೆರವಣಿಗೆಯನ್ನೂ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಬಣ್ಣಗಳನ್ನು ಎರಚಿ ಸಂಭ್ರಮಿಸಲಾಗುತ್ತದೆ. ನೃತ್ಯ ಪ್ರದರ್ಶನ, ಫ್ಯಾಷನ್‌ ಶೋ, ಸಂಗೀತ ಕಛೇರಿಗಳು ಹಬ್ಬದ ಭಾಗವಾಗಿರುತ್ತದೆ.  ಗವರ್ನರ್ಸ್‌ ದ್ವೀಪದ ಪ್ಲೇಲಾನ್‌ ನಲ್ಲಿ ನಡೆಯುವ ಜನಪ್ರಿಯ ಹೋಳಿ ಕಾರ್ಯಕ್ರಮದಲ್ಲಿ ವಿವಿಧ ಮನೋರಂಜನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.  ಉತಾಹ್‌ನ ಸ್ಪ್ಯಾನಿಷ್‌ ಫೋರ್ಕ್‌ ಪಟ್ಟಣದ ಶ್ರೀರಾಧಾಕೃಷ್ಣ ದೇವಸ್ಥಾನದಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಇಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಸಂಗೀತ, ಯೋಗ, ನೃತ್ಯ, ಬಗೆಬಗೆಯ ಖಾದ್ಯ, ದೀಪೋತ್ಸವ, ಹೋಲಿಕಾ ದಹನ ಇಲ್ಲಿನ ವಿಶೇಷತೆಯಾಗಿದೆ.  ಇನ್ನು ಸ್ಪೇನ್‌, ಬ್ರೆಜಿಲ್‌,  ಮಾರಿಷಸ್‌ ದೇಶಗಳಲ್ಲೂ ಅದ್ಧೂರಿಯಾಗಿ ಹೋಳಿ ಹಬ್ಬ ವನ್ನು ಆಚರಿಸಲಾಗುತ್ತದೆ.

ಟಾಪ್ ನ್ಯೂಸ್

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.