ಬೈಕ್ ಸ್ಟಂಟ್ ಕುರಿತು ವಿಡಿಯೋ ಸಂದೇಶದ ಮೂಲಕ ಜಾಗೃತಿ ಮೂಡಿಸಿದ ಪೊಲೀಸರು
Team Udayavani, Mar 20, 2021, 3:54 PM IST
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ಯುವಕ ಯುವತಿಯರು ಸಾರ್ವಜನಿಕ ಸ್ಥಳಗಳಲ್ಲಿ ಅತ್ಯಂತ ಅಪಾಯಕಾರಿಯಾದ ಬೈಕ್ ಸ್ಟಂಟ್ ಗಳನ್ನು ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸ್ ಇಲಾಖೆಯು ಸಾಮಾಜಿಕ ಜಾಲತಾಣವಾದ ಟ್ವೀಟರ್ ಮೂಲಕ ಸಾಮಾಜಿಕ ಕಳಕಳಿಯ ಸಂದೇಶಗಳನ್ನು ಪೋಸ್ಟ್ ಮಾಡಿದೆ.
“Doom or Doomed?” ಎಂಬ ಶೀರ್ಷಿಕೆಯ ಅಡಿಯಲ್ಲಿ ಟ್ವೀಟ್ ಸಂದೇಶಗಳನ್ನು ರವಾನಿಸಿರುವ ಪೊಲೀಸ್ ಇಲಾಖೆ, ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಈ ವಿಡಿಯೋದಲ್ಲಿ ಬೈಕ್ ಸ್ಟಂಟ್ ಗೆ ಸಂಬಂಧಿಸಿರುವ ಎರಡು ಬೇರೆ ಬೇರೆ ಸನ್ನಿವೇಶಗಳನ್ನು ಕಾಣಬಹುದಾಗಿದೆ. ಹಿಂದಿಯ ದೂಮ್ ಸಿನಿಮಾದ ಹಾಡೊಂಡನ್ನು ಹಿನ್ನೆಲೆ ಸಂಗೀತಕ್ಕಾಗಿ ಬಳಸಿಕೊಳ್ಳಲಾಗಿದ್ದು, ಈ ನಡುವೆ ಪೊಲೀಸ್ ಇಲಾಖೆ ಈ ಘಟನೆಯ ಬಳಿಕ ವ್ಯಕ್ತಿಗಳ ವಿರುದ್ಧ ಯಾವ ರೀತಿ ಕ್ರಮ ಕೈಗೊಂಡಿದೆ ಎಂಬುದನ್ನು ತಿಳಿಸಿದೆ.
ಇದನ್ನೂ ಓದಿ:ರಾಮ ಮಂದಿರ ನಿರ್ಮಾಣಕ್ಕೆ ಶ್ರೀಲಂಕಾದಿಂದ “ಸೀತಾ ಎಲಿಯಾ” ಶಿಲೆ ಉಡುಗೊರೆ
ಈ ವಿಡಿಯೋದ ಕುರಿತಾಗಿ ಮಾಹಿತಿ ನೀಡಿರುವ ಪೊಲೀಸ್ ಇಲಾಖೆ ಇದು ಖಂಡಿತವಾಗಿಯೂ ಅಪರಾಧ. ನಾವು ಇಂತಹ ಕಾರ್ಯಗಳನ್ನು ತಡೆಹಿಡಿದಿದ್ದೇವೆ ಎಂದು ತಿಳಿಸಿದೆ.
Dhoom or Doomed ?#RoadSafety #DriveSafe #StaySafe pic.twitter.com/mp3RlJcsNn
— UP POLICE (@Uppolice)
#RoadSafety, #DriveSafe, #StaySafe ಹ್ಯಾಷ್ ಟ್ಯಾಗ್ ಗಳನ್ನು ಬಳಸಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋದ ಪೋಸ್ಟ್, ಕೇವಲ ಒಂದು ದಿನದಲ್ಲಿ ಬರೊಬ್ಬರಿ ಒಂದು ಲಕ್ಷ ವೀಕ್ಷಣೆಯನ್ನು ಗಳಿಸಿಕೊಂಡಿದ್ದು, ಪೋಲೀಸರ ಈ ಕಾರ್ಯಕ್ಕೆ ಜನರು ಮಚ್ಚುಗೆಯನ್ನು ಸೂಚಿಸುವುದರೊಂದಿದೆ. ಪೊಲೀಸ್ ಇಲಾಖೆಯ ಅತ್ಯುತ್ತಮ ಕೆಲಸ ಇದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.