ಈ ನಾಲ್ಕು ದೇಶಗಳ ಮಹಿಳೆಯರಿಗೆ ವಿವಾಹ ನಿಷೇಧ
ಸೌದಿ ಅರೇಬಿಯಾ ಪುರುಷರಿಗೆ ಸರ್ಕಾರ ಆದೇಶ
Team Udayavani, Mar 21, 2021, 12:09 AM IST
ಸಾಂದರ್ಭಿಕ ಚಿತ್ರ
ರಿಯಾದ್: “ಪಾಕಿಸ್ತಾನ ಸೇರಿದಂತೆ ನಾಲ್ಕು ದೇಶಗಳ ಮಹಿಳೆಯರನ್ನು ಮದುವೆಯಾಗುವುದೇ ಬೇಡ’ ಹೀಗೆಂದು ಪುರುಷರಿಗೆ ಫರ್ಮಾನು ಹೊರಡಿಸಲಾಗಿದೆ. ಅಂದ ಹಾಗೆ ಇಂಥ ಆದೇಶ ಜಾರಿಯಾಗಿರುವುದು ಸೌದಿ ಅರೇಬಿಯಾದಲ್ಲಿ. ವಿದೇಶಿ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮದುವೆಯಾಗುವುದನ್ನು ತಪ್ಪಿಸಲು ಇಂಥ ಕ್ರಮ ಕೈಗೊಳ್ಳಲಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಛಾಡ್ ಮತ್ತು ಮ್ಯಾನ್ಮಾರ್‌ನ ಮಹಿಳೆಯರಿಗೆ ಈ ಆದೇಶ ಅನ್ವಯವಾಗಲಿದೆ. ಈ ನಾಲ್ಕು ದೇಶಗಳ ಸುಮಾರು 5 ಲಕ್ಷ ಮಹಿಳೆಯರು ಸೌದಿಯಲ್ಲಿ ಇದ್ದಾರಂತೆ.
ಬಂದಿವೆ ಕಠಿಣ ನಿಯಮ: ಒಂದು ವೇಳೆ, ಪುರುಷರು ವಿದೇಶಿ ಮಹಿಳೆಯರನ್ನು ಮದುವೆಯಾಗುವುದಿದ್ದರೆ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಮೊದಲನೇಯದಾಗಿ ವಿದೇಶದ ಮಹಿಳೆಯನ್ನು ಮದುವೆಯಾಗುವುದರ ಬಗ್ಗೆ ಅರ್ಜಿ ಬರೆದು ಸರ್ಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ. ಅರ್ಜಿಯ ಜತೆಯಲ್ಲಿ ಸರ್ಕಾರದ ವತಿಯಿಂದ ನೀಡುವ ಕುಟುಂಬದ ಗುರುತಿನ ಚೀಟಿಯ ಪ್ರತಿ ಮತ್ತು ಇತರ ದಾಖಲೆ, ಅರ್ಜಿಗೆ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥ ಸಹಿ ಬೇಕಾಗುತ್ತದೆ ಎಂದು ಮಕ್ಕಾ ಪೊಲೀಸ್ ಮಹಾನಿರ್ದೇಶಕ ಅಸಫ್ ಅಲಿ- ಖುರೇಷಿ ಹೇಳಿದ್ದಾರೆ. ಜತೆಗೆ ವಯೋಮಿತಿ 25 ವರ್ಷಕ್ಕಿಂತ ಮೇಲ್ಪಟ್ಟು ಇರಬೇಕು.
6 ತಿಂಗಳು ಇಲ್ಲ: ವಿವಾಹ ವಿಚ್ಛೇದನ ಪಡೆದುಕೊಂಡವರಿಗೆ ಆರು ತಿಂಗಳ ವರೆಗೆ ಮದುವೆಗೆ ಅವಕಾಶ ಇಲ್ಲ. ಈ ಹಿಂದೆಯೇ ಮದುವೆಯಾಗಿದ್ದ ವ್ಯಕ್ತಿಯ ಪತ್ನಿಯ ಜತೆಗೆ ದಾಂಪತ್ಯ ನಡೆಸಲು ವೈದ್ಯಕೀಯವಾಗಿ ಅರ್ಹಳಾಗಿಲ್ಲ, ವಿಶೇಷವಾಗಿ ಆಕೆ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾಳೆ ಅಥವಾ ಇನ್ನಿತರ ಸಮಸ್ಯೆ ಬಗ್ಗೆ ಆಸ್ಪತ್ರೆಯಿಂದ ವೈದ್ಯಕೀಯ ಪ್ರಮಾಣ ಪತ್ರ ಹಾಜರುಪಡಿಸಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.