ಸರಕಾರದ ವಿರುದ್ಧ ಸಮರ ನಿಲ್ಲಲ್ಲ
Team Udayavani, Mar 21, 2021, 7:22 PM IST
ಶಿವಮೊಗ್ಗ: ಸರಕಾರದ ವಿರುದ್ಧ ರೈತರ ಹೋರಾಟ ನಿಲ್ಲುವುದಿಲ್ಲ. ಕೇವಲ ಮೂರು ಕಾಯ್ದೆಗಳಿಗಷ್ಟೇ ಇದು ಸೀಮಿತವಲ್ಲ. ಹೋರಾಟ ನಿರಂತರವಾಗಿರಲಿದೆ ಎಂದು ಕಿಸಾನ್ ಸಂಯುಕ್ತ ಮೋರ್ಚಾ ಅಧ್ಯಕ್ಷ ರಾಕೇಶ್ ಸಿಂಗ್ ಟಿಕಾಯತ್ ಘೋಷಿಸಿದರು.
ಅವರು ನಗರದಲ್ಲಿ ಶನಿವಾರ ಬೃಹತ್ ರೈತ ಮಹಾಪಂಚಾಯತ್ ಸಭೆಯಲ್ಲಿ ಮಾತನಾಡಿದರು. ರೈತ ವಿರೋ ಧಿ ಕಾನೂನುಗಳ ವಿರುದ್ಧ ಹೋರಾಟ ಮಾಡಲು ನೀವು ದೆಹಲಿಗೆ ಬರಬೇಕಿಲ್ಲ. ಬೆಂಗಳೂರನ್ನೇ ನಾಲ್ಕು ಕಡೆಗಳಿಂದ ಸುತ್ತುವರೆದು ಪ್ರತಿಭಟನೆ ನಡೆಸಿ. ಬೆಂಗಳೂರನ್ನೇ ದೆಹಲಿ ಮಾಡಬೇಕು. ಮೂರು ಕಾಯ್ದೆಗಳು ವಾಪಾಸ್ ಆಗುವವರೆಗೂ ಹೋರಾಟ ನಡೆಯಬೇಕು ಎಂದರು. ಡೀಸೆಲ್ ವಾಹನಗಳಿಗೆ 10 ವರ್ಷ ನಿಗದಿಪಡಿಸಿ ರೈತರ ಟ್ರ್ಯಕ್ಟರ್‌ಗಳನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಮಾರುಕಟ್ಟೆ ಹೊರಗೆ ನಿಮ್ಮ ಉತ್ಪನ್ನ ಮಾರಬಹುದು ಎಂದು ಹೇಳುತ್ತಿದ್ದಾರೆ. ಸರಕಾರ ನಿಗದಿಪಡಿಸಿದ ದರಕ್ಕೆ ಖರೀದಿ ಮಾಡಿ ಎಂದರೆ ಬೇಡ ಎನ್ನುತ್ತಾರೆ.
ಇಂತಹ ಕಾನೂನು ವಾಪಾಸ್ ಪಡೆಯಲು ನಾವು ಹೋರಾಟ ಮಾಡಬೇಕು. ಕೇವಲ ಮೂರು ಕಾನೂನುಗಳಿಗಾಗಿ ಮಾತ್ರ ನಾವು ಹೋರಾಟ ಮಾಡಿದರೆ ಸಾಲದು. ಹಾಲು, ಬೀಜ, ರಸಗೊಬ್ಬರ, ವಿದ್ಯುತ್ಛಕ್ತಿಯ ಮೇಲಿನ ಕಾಯ್ದೆ ಬರಲಿದೆ. ಅದಕ್ಕಾಗಿ ನಮ್ಮ ಹೋರಾಟ ಸುದೀರ್ಘವಾಗಿರಲಿದೆ ಎಂದರು. ರೈತರ ಹೋರಾಟದ ಮೂಲಕ ಯುವಕರನ್ನು ನಾವು ವರ್ಷಾನುಗಟ್ಟಲೆ ಕಾಪಾಡಿಕೊಂಡು ಬಂದ ಭೂಮಿಯೊಂದಿಗೆ ಬೆಸೆಯುವ ಕೆಲಸ ಸಹ ಆಗಬೇಕಿದೆ.
ನಮ್ಮ ಭೂಮಿಯ ಹಿಂದೆ ಸರ್ಕಾರ ಕಾನೂನು ತರುವ ಮೂಲಕ ಖಾಸಗಿ ಸಂಸ್ಥೆಗೆ ಮಾರಲಾಗುತ್ತಿದೆ. ಇದನ್ನು ಉಳಿಸಬೇಕಿದೆ. ಇದನ್ನು ಯುವಕರಿಗೆ ತಿಳಿಸಿ ಕೃಷಿಗೆ ಅವರನ್ನು ಕರೆದುಕೊಳ್ಳಬೇಕಿದೆ ಎಂದರು. ದೇಶವನ್ನು ಲೂಟಿ ಹೊಡೆಯುತ್ತಿರುವ ಕಂಪನಿಗಳ ನಾಯಕರು ಇವತ್ತು ಸರಕಾರವನ್ನು ನಡೆಸುತ್ತಿದ್ದಾರೆ. ಅದಕ್ಕಾಗಿ ರೈತರ ಜತೆ ಮಾತುಕತೆ ಆಗುತ್ತಿಲ್ಲ. ನಮಗೆ ಜಯ ಸಿಗುವವರೆಗೂ ಹೋರಾಟ ಮುಂದುವರೆಯಬೇಕು. ಕೇವಲ ಜೈ ಭೀಮ್ ಘೋಷಣೆಯಿಂದ ಗುರಿ ಮುಟ್ಟಲು ಸಾಧ್ಯವಿಲ್ಲ.
ಜೈ ಭೀಮ್ ಮತ್ತು ಜೈ ರಾಮ್ ಜೊತೆ ಜೊತೆಯಲ್ಲಿ ಹೋದಾಗ ಮಾತ್ರ ಗುರಿ ತಲುಪಲು ಸಾಧ್ಯ ಎಂದು ಹೇಳಿದರು. ಸರಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ. ಸರಕಾರಿ ನೌಕರರಿಗೆ ಇದ್ದ ಪೆನÒನ್ ತೆಗೆದು ಎಂಎಲ್‌ಎ, ಎಂಪಿಗಳಿಗೆ ಅನೇಕ ಸವಲತ್ತುಗಳನ್ನು ನೀಡಲಾಗುತ್ತಿದೆ. ಪೊಲೀಸರು, ಯೋಧರು ಅನೇಕ ಸಮಸ್ಯೆಗಳ ಈಡೇರಿಕೆಗಾಗಿ ಸಂಘಟಿತರಾಗಿ ಹೋರಾಡಲು ಸಾಧ್ಯವಿಲ್ಲ. ಅವರ ಪರವಾಗಿಯೂ ನಾವು ಹೋರಾಟ ಮಾಡಬೇಕಿದೆ ಎಂದರು.
ಸಂಯುಕ್ತ ಕಿಸಾನ್ ಮೋರ್ಚಾ ಹೋರಾಟವನ್ನು ಇಂದು ನಾವು ತೀರ್ಮಾನ ಮಾಡುತ್ತಿದ್ದೇವೆ. ಸರಕಾರ ಅಲ್ಲ. ನಮ್ಮ 40 ಜನರ ಕಮಿಟಿಯಲ್ಲಿ ಯಾರಲ್ಲಾದರೂ ಕೊರತೆ ಸಿಕ್ಕರೆ ಅವರನ್ನು ಹೇಗಾದರೂ ಮುಗಿಸಬೇಕೆಂಬ ಪ್ರಯತ್ನ ಸರಕಾರದಿಂದ ನಡೆಯಿತು. ಅವರಿಗೆ ಏನೂ ಸಿಗಲಿಲ್ಲ. ಹಾಗಾಗಿ ಯುವಕರು ಇಂದು ಕಾಯ್ದೆ ವಾಪಾಸ್ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಸರಕಾರ ವಾಪಾಸಾತಿ ಬಗ್ಗೆ ಮಾತನಾಡಿದರೆ ಏನಾಗಬಹುದು ಎಂಬುದರ ಬಗ್ಗೆ ಸರಕಾರ ಆಲೋಚಿಸಬೇಕು.
ಯುವಸಮೂಹ ಸರಕಾರದ ವಿರುದ್ಧ ಮುಗಿಬೀಳುವ ಮೊದಲು ರೈತ ಮುಖಂಡರ ಜತೆ ಮಾತುಕತೆ ನಡೆಸಲಿ ಎಂದರು. ಹಸಿವಿನ ಉದ್ದಿಮೆ ನಡೆಯಬಾರದು, ಹಸಿವಿನ ಮೇಲೂ ಉದ್ದಿಮೆ ನಡೆಸಬಾರದು. ನಾವು ಬೆಳೆದ ಬೆಳೆಯನ್ನು ಅನ್ನ ಮಾಡಿಕೊಳ್ಳುತ್ತೇವೆ. ಈ ಅನ್ನವನ್ನು ಕಾನೂನಿನ ಮೂಲಕ ಲಾಕರ್‌ನಲ್ಲಿ ಬೀಗ ಹಾಕಲು ಸರ್ಕಾರ ಮುಂದಾಗಿದೆ. ಕೃಷಿ ಕಾಯ್ದೆ ಅಡಿ ಪ್ರತಿಭಟನೆ ನಡೆಯದಿದ್ದರೆ 20 ವರ್ಷಗಳಲ್ಲಿ ರೈತರು ಜಮೀನು ಕಳೆದುಕೊಳ್ಳಲಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosanagar: ನಾಪತ್ತೆಯಾದ 78 ದಿನದ ಬಳಿಕ ವ್ಯಕ್ತಿಯ ಮೃತದೇಹ ಪತ್ತೆ, ತನಿಖೆಗೆ ಪತ್ನಿಯ ಆಗ್ರಹ
Ripponpet ಬೀದಿ ನಾಯಿ ಕೊಂದು ಆಟೋಗೆ ಕಟ್ಟಿಕೊಂಡು ಎಳೆದೊಯ್ದ ಕ್ರೂರಿ
Shimoga: ಬೀದಿ ನಾಯಿಯನ್ನು ಕ್ರೂರವಾಗಿ ಕೊಂದು ಆಟೋದಲ್ಲಿ ಎಳೆದೊಯ್ದ ವ್ಯಕ್ತಿ
ಅಡಿಕೆ ಬೆಳೆಗಾರರು ಆತಂಕವಿಲ್ಲದೆ ಕೃಷಿಯಲ್ಲಿ ತೊಡಗಿಕೊಳ್ಳಿ: ಶಿವರಾಜ್ ಸಿಂಗ್ ಚೌಹಾಣ್
Sagara: ಜ. 22ರಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಡಾಕ್ಟರೇಟ್ ಪ್ರದಾನ