ತಂತ್ರಜ್ಞಾನ ಬಳಕೆಗೆ ಮಿತಿ ಅಗತ್ಯ : ಅರುಣ ರಾಮನ್
Team Udayavani, Mar 21, 2021, 8:09 PM IST
ಸಾಗರ: ವಿನ್ಯಾಸಕ್ಕೂ ಮತ್ತು ತಂತ್ರಜ್ಞಾನಕ್ಕೂ ನಿಕಟ ಸಂಬಂಧವಿದೆ. ಆದರೆ ಕೈಮಗ್ಗ ನೇಕಾರಿಕೆ ಉತ್ಪನ್ನಗಳ ವಿನ್ಯಾಸದ ವಿಷಯ ಬಂದಾಗ ತಂತ್ರಜ್ಞಾನಗಳ ಬಳಕೆಗೆ ಮಿತಿ ಹೇರಿಕೊಳ್ಳುವ ಅಗತ್ಯವಿದೆ ಎಂದು ಉದ್ಯಮಿ ಅರುಣ್ ರಾಮನ್ ಪ್ರತಿಪಾದಿಸಿದರು.
ತಾಲೂಕಿನ ಹೊನ್ನೇಸರ ಗ್ರಾಮದ ಶ್ರಮಜೀವಿ ಆಶ್ರಮದಲ್ಲಿ ಚರಕ ಸಂಸ್ಥೆ ಕೈಮಗ್ಗ ನೇಕಾರಿಕೆ ಉತ್ಪನ್ನಗಳ ವಿನ್ಯಾಸದ ಕುರಿತು ಏರ್ಪಡಿಸಿದ್ದ ವಿವಿಧ ಕ್ಷೇತ್ರಗಳ ಪರಿಣತರ ಸಮಾಲೋಚನಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕೈಮಗ್ಗ ನೇಕಾರಿಕೆ ಉತ್ಪನ್ನಗಳಿಗೆ ವಿನ್ಯಾಸ ರೂಪಿಸುವಾಗ ಯಾವುದು ಸುಸ್ಥಿರ, ಯಾವುದರಿಂದ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ. ಯಾವುದು ಮಿತವ್ಯಯ ಮಾರ್ಗ.
ಯಾವುದರಿಂದ ಪರಿಸರಕ್ಕೆ ಧಕ್ಕೆ ಉಂಟಾಗುವುದಿಲ್ಲ ಎನ್ನುವ ಅಂಶಗಳನ್ನು ಪರಿಗಣಿಸಿ “ಬಹುಶಿಸ್ತೀಯ’ ಅಧ್ಯಯನ ಮಾರ್ಗ ಅನುಸರಿಸುವುದು ಮುಖ್ಯವಾದ ಸಂಗತಿಯಾಗಿದೆ ಎಂದು ಹೇಳಿದರು. ದೇಸಿ ಚಿಂತಕ ಪ್ರಸನ್ನ ಮಾತನಾಡಿ, ಗ್ರಾಮಗಳ ಕರಕುಶಲಕರ್ಮಿಗಳು ಹಾಗೂ ನಗರ ಪ್ರದೇಶದಲ್ಲಿರುವ ವಿನ್ಯಾಸಕಾರರನ್ನು ಒಗ್ಗೂಡಿಸುವ ಕೆಲಸ ಆಗಬೇಕಿದೆ. ಕರ್ನಾಟಕಕ್ಕೆ ಹೋಲಿಸಿದರೆ ಇತರ ರಾಜ್ಯಗಳಲ್ಲಿ ಈ ಕೆಲಸ ಪರಿಣಾಮಕಾರಿಯಾಗಿ ನಡೆದಿದೆ. ಕರ್ನಾಟಕದಲ್ಲೂ ಈ ಕೆಲಸವನ್ನು ಮಾಡಲು ಚರಕ ಸಂಸ್ಥೆ ಮುಂದಾಗಿದೆ ಎಂದು ತಿಳಿಸಿದರು.
“ಕಲೆ, ಕುಶಲಕರ್ಮ, ವಿನ್ಯಾಸ, ಕುಶಲಕರ್ಮಿ, ಪರಂಪರೆ, ಆಧುನಿಕತೆ, ತಂತ್ರಜ್ಞಾನ, ದೇಸಿ ಜ್ಞಾನ ಇವುಗಳ ನಡುವೆ ಸಾವಯವ ಸಂಬಂಧ ಕಲ್ಪಿಸಿ ಕುಶಲಕರ್ಮಿಗಳು ಕೀಳಲ್ಲ, ವಿನ್ಯಾಸಕಾರರು ಮೇಲಲ್ಲ ಎಂಬ ವಾತಾವರಣ ಸೃಷ್ಟಿಸುವ ಅಗತ್ಯವಿದೆ. ಈ ಉದ್ದೇಶದ ಈಡೇರಿಕೆಗಾಗಿ ಚರಕ ಸಂಸ್ಥೆ ವಿನ್ಯಾಸ ತರಬೇತಿ ಕೇಂದ್ರವೊಂದನ್ನು ತೆರೆಯಲು ಉದ್ದೇಶಿಸಿದೆ ಎಂದು ತಿಳಿಸಿದರು. ಸಮಾಜಶಾಸ್ತ್ರಜ್ಞ ಚಂದನ್ ಗೌಡ ಮಾತನಾಡಿ, ವಿನ್ಯಾಸ ಎಂಬುದರ ಹಿಂದೆ ಭೂತ ಮತ್ತು ಭವಿಷ್ಯ ಎರಡೂ ಅಡಗಿವೆ. ಈ ಪ್ರಕ್ರಿಯೆಯಲ್ಲಿ ಕುಶಲಕರ್ಮಿಗಳು ವಿನ್ಯಾಸಕಾರರು ಮಾತ್ರವಲ್ಲದೆ ಅನುಭವದ ನೆಲೆಗಳಿಗೆ ಸ್ಪಂದಿಸುವ ಸಮಾಜ ಶಾಸ್ತ್ರಜ್ಞರು, ಇತಿಹಾಸಕಾರರು ಕೂಡ ಭಾಗವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ವಿನ್ಯಾಸಕಾರ ಗೋಪಿಕೃಷ್ಣ ಮಾತನಾಡಿ, ವಿನ್ಯಾಸದ ಸಂದರ್ಭದಲ್ಲಿ ಸಾಮಾಜಿಕ ಅಂಶವೇ ಪ್ರಧಾನವಾಗಿರಬೇಕು. ಭಾರತೀಯ ಆಲೋಚನಾ ಧಾರೆಗಳನ್ನು ವಿನ್ಯಾಸದ ಮುಖ್ಯವಾಹಿನಿಗೆ ತರಬೇಕಿದೆ. ಗ್ರಾಮೀಣ ಜಗತ್ತಿನ ಜನಪದೀಯ ಸ್ಪರ್ಶ ವಿನ್ಯಾಸಕ್ಕೆ ದೊರಕಬೇಕು. ಮಾರುಕಟ್ಟೆಯ ಒತ್ತಡದಿಂದ ವಿನ್ಯಾಸಕಾರರು ಮುಕ್ತವಾಗಿರುವುದು ಕೂಡ ಅಷ್ಟೇ ಮುಖ್ಯ ಎಂದರು. ಬಫೆಲೊ ಬ್ಯಾಗ್ ಸಂಸ್ಥೆಯ ವಿಶಾಲಾ ಮಾತನಾಡಿ, ವಿನ್ಯಾಸ ಎಂಬುದು ಕೇವಲ ವಸ್ತು ಕೇಂದ್ರಿತವಾಗಬಾರದು. ಬದಲಾಗಿ ಸಂಬಂಧಪಟ್ಟ ಉದ್ಯೋಗದಲ್ಲಿ ತೊಡಗಿರುವವರ ಜೀವನ ಕೇಂದ್ರಿತ ದೃಷ್ಟಿಕೋನವನ್ನು ಅದು ಒಳಗೊಳ್ಳಬೇಕು ಎಂದು ಹೇಳಿದರು.
ಟೈಟಾನ್ ಸಂಸ್ಥೆಯ ರಿತಿಕಾ ಗಾಂಧಿ ಮಾತನಾಡಿ , ಕೈಮಗ್ಗ ನೇಕಾರಿಕೆ ಉತ್ಪನ್ನಗಳಿಗೆ ಅಪಾರವಾದ ಧಾರಣಾ ಶಕ್ತಿ ಇದೆ. ವಿನ್ಯಾಸದ ವಿಷಯದಲ್ಲಿ ಬದಲಾವಣೆಯಾದರೆ ಈ ಉತ್ಪನ್ನಗಳ ಮಾರುಕಟ್ಟೆ ಸೇರಿ ಹಲವು ವಿಷಯಗಳಲ್ಲಿ ಕೂಡ ಬದಲಾವಣೆಯಾಗುವುದು ನಿಶ್ಚಿತ ಎಂದರು. ಚರಕ ಸಂಸ್ಥೆ ಅಧ್ಯಕ್ಷೆ ಗೌರಮ್ಮ, ಪದ್ಮಶ್ರೀ, ಮಹಾಲಕ್ಷಿ$¾, ರುದ್ರಪ್ಪ, ಮಧುರಾ, ರಾಷ್ಟ್ರೀಯ ವಿನ್ಯಾಸ ಸಂಸ್ಥೆಯ ಶಶಿಕಲಾ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಾಗರಕ್ಕೆ ಆಗಮಿಸಿದ ಡಾ.ನಾ.ಡಿಸೋಜಾ ಪಾರ್ಥಿವ ಶರೀರ; ಗಣ್ಯರು, ಅಧಿಕಾರಿಗಳಿಂದ ಅಂತಿಮ ದರ್ಶನ
Hosanagar: ಪ್ರಪಾತಕ್ಕೆ ಉರುಳಿದ ಬಸ್; ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು
Sarji sweet box case: ಲವ್ ಫೈಲ್ಯೂರ್ ಆಗಿದ್ದಕ್ಕೆ ಸೇಡಿಗಾಗಿ ಕೃತ್ಯ ಮಾಡಿದ್ದ ಲಾಯರ್!
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.