ಪಾದುವ ಬಳಿ ಅವೈಜ್ಞಾನಿಕ ಹಂಪ್ಸ್; ಅಪಘಾತ ಭೀತಿ
Team Udayavani, Mar 22, 2021, 4:10 AM IST
ಮಹಾನಗರ: ವಾಹನಗಳ ಅಪಘಾತ ನಿಯಂ ತ್ರಿಸುವ ನಿಟ್ಟಿನಲ್ಲಿ ರಸ್ತೆಗೆ ಹಂಪ್ಸ್ ಅಳವಡಿ ಸುವುದು ಸಾಮಾನ್ಯ. ಆದರೆ ಪಾದುವ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿರುವ ಹೊಸ ಹಂಪ್ಸ್ ವಾಹನ ಸವಾರರಿಗೆ ಅಪಾಯ ಆಹ್ವಾನಿಸುತ್ತಿದೆ.
ಸಾಮಾನ್ಯವಾಗಿ ರಾ.ಹೆ.ಯಲ್ಲಿ ದಿನ ಪೂರ್ತಿ ವಾಹನ ಸಂಚಾರ ಅಧಿಕವಿದ್ದು, ಅದರಲ್ಲಿಯೂ ಸರಕು ವಾಹನಗಳು ಬಹಳ ವೇಗವಾಗಿ ಸಂಚರಿಸುತ್ತಿರುತ್ತವೆ. ಆದರೆ ಇದೀಗ ಪಾದುವ ಸಮೀಪ ನಂತೂರು ಕಡೆಯಿಂದ ಬರುವ ವಾಹನಗಳು ತಿರುವು ಪಡೆಯುವ ಕಾರಣ ಸುರಕ್ಷೆ ದೃಷ್ಟಿಯಿಂದ ಹಂಪ್ಸ್ ಹಾಕಲಾಗಿದೆ. ಹೆದ್ದಾರಿಯಲ್ಲಿ ಅಳವಡಿ ಸಿರುವ ಅವೈಜ್ಞಾನಿಕ ಮಾದರಿಯ ಹಂಪ್ಸ್ ಗಳೇ ವಾಹನ ಸವಾರರಿಗೆ ಸಮಸ್ಯೆ ಸೃಷ್ಟಿಸುತ್ತಿವೆ.
ತೆರವಿಗೆ ಆಗ್ರಹ :
ನಂತೂರು ಬಳಿಯ ಪಾದುವ ಶಿಕ್ಷಣ ಸಂಸ್ಥೆಯ ಬಳಿ ಕೆಲವು ದಿನಗಳ ಹಿಂದೆ ಈ ಹಂಪ್ಸ್ ಅಳವಡಿಸಲಾಗಿದೆ. ಒಂದೇ ಭಾಗದಲ್ಲಿ ನಾಲ್ಕು ಹಂಪ್ಸ್ ಇದ್ದು, ಅದನ್ನು ಸಾಮಾನ್ಯ ಹಂಪ್ಸ್‌ನಿಂದಲೂ ಹೆಚ್ಚಿನ ಎತ್ತರದಲ್ಲಿ ಹಾಕಲಾಗಿದೆ. ಅದರಲ್ಲಿಯೂ ರಸ್ತೆಯ ಒಂದೇ ಭಾಗದಲ್ಲಿ ನಾಲ್ಕು
ಹಂಪ್ಸ್ ಇರುವ ಕಾರಣ ವೇಗವಾಗಿ ಬರುವ ವಾಹನಗಳು ಚಾಲಕನ ನಿಯಂತ್ರಣ ತಪ್ಪುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಅವೈಜ್ಞಾನಿಕ ಹಂಪ್ಸ್ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಹಂಪ್ಸ್‌ನಲ್ಲಿ ಸಂಚರಿಸುವ ವೇಳೆ ಕೆಲವು ವಾಹನಗಳ ಇಂಜಿನ್ ಅರ್ಧದಲ್ಲಿಯೇ ಸ್ಥಗಿತಗೊಳ್ಳುತ್ತದೆ. ಇದರಿಂದಾಗಿ ಹಿಂದುಗಡೆಯಿಂದ ಬರುವ ವಾಹನಗಳು ಮುಂದಿನ ವಾಹನಕ್ಕೆ ಢಿಕ್ಕಿ ಹೊಡೆಯುವ ಅಪಾಯವೂ ಇದೆ. ಸುತ್ತಮುತ್ತ ಶಿಕ್ಷಣ ಸಂಸ್ಥೆ ಇರುವ ಕಾರಣ, ನಂತೂರು ಕಡೆಯಿಂದ ಬರುವ ವಾಹನಗಳು ತಿರುವು ಪಡೆಯುವ ಕಾರಣ ಅಲ್ಲಿ ಹಂಪ್ಸ್ ಹಾಕುವ ಅಗತ್ಯವಿದೆ. ಆದರೆ ಹಂಪ್ಸ್‌ಗಳು ವೈಜ್ಞಾನಿಕ ರೀತಿಯಿಂದ ಕೂಡಿರಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.
ಹಂಪ್ಸ್ ಬಳಿ ಮರಳು :
ದಿನನಿತ್ಯ ಹತ್ತಾರು ಸಂಖ್ಯೆಯಲ್ಲಿ ಟ್ಯಾಂಕರ್‌ಗಳು ಇದೇ ಹೆದ್ದಾರಿ ಮುಖೇನ ಸಂಚರಿಸುತ್ತವೆೆ. ಆ ವೇಳೆ ಟ್ಯಾಂಕರ್‌ನಿಂದ ಆಯಿಲ್ ಲೀಕೇಜ್ ಆಗಿ ರಸ್ತೆಗೆ ಬಿದ್ದ ಅನೇಕ ಘಟನೆಗಳು ಈ ಭಾಗದಲ್ಲಿ ಸಂಭವಿಸಿವೆ. ಇದೇ ಕಾರಣಕ್ಕೆ ಹಂಪ್ಸ್ ಬಳಿ ಮರಳು ಹಾಕಿದ್ದಾರೆ.
ಇದು ಕೂಡ ವಾಹನ ಸ್ಕಿಡ್ ಆಗಲು ಕಾರಣವಾಗುತ್ತಿದೆ. ಹೀಗಿ ರುವಾಗ, ಜನರ ಪ್ರಾಣಕ್ಕೆ ಕುತ್ತು ತರುವ ಮಾದರಿಯ ಅಪಾಯಕಾರಿ ಹಂಪ್‌ಗ್ಳನ್ನು ಬದಲಿಸುವುದಕ್ಕೆ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಗಮನಹರಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.