ಯುವತಿ ಜತೆ ಮತ್ತೂಬ್ಬ ಉತ್ತರದ ಶಾಸಕನಿಗೆ ಸಂಪರ್ಕ?
Team Udayavani, Mar 22, 2021, 7:22 AM IST
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿ ಮತ್ತೂಂದು ಸುದ್ದಿ ಬಹಿರಂಗವಾಗಿದ್ದು, ಅದರಲ್ಲಿರುವ ಯುವತಿಯು ಉತ್ತರ ಕರ್ನಾಟಕ ಮೂಲದ ಶಾಸಕರೊಬ್ಬರ ಜತೆ ಸುಮಾರು 4 ತಿಂಗಳುಗಳಿಂದ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ.
ಆ ಶಾಸಕರು ಯುವತಿಯ ಪ್ರತಿ ನಡೆಯನ್ನು ಮತ್ತೂಂದು ಪಕ್ಷದ ಶಾಸಕರೊಬ್ಬರೊಂದಿಗೆ ಹಂಚಿಕೊಳ್ಳುತ್ತಿದ್ದರು ಎಂಬುದು ಗೊತ್ತಾಗಿದೆ. ಆದರೆ, ಬಿಜೆಪಿಯ ಆ ಶಾಸಕ ಜಾರಕಿಹೊಳಿ ಸಹೋದರರ ಜತೆ ಗುರುತಿಸಿಕೊಂಡಿಲ್ಲ. ಅವರ ರಾಜಕೀಯ ವಿರೋಧಿ ಬಣದಲ್ಲಿದ್ದಾರೆ. ಹೀಗಾಗಿ ಉತ್ತರ ಕರ್ನಾಟಕದ ಆ ಶಾಸಕರೊಬ್ಬರಿಗೆ ಸಿ.ಡಿ. ಹಿಂದಿನ ರಹಸ್ಯ ನಾಲ್ಕೈದು ತಿಂಗಳ ಹಿಂದೆಯೇ ಗೊತ್ತಿತ್ತು ಎಂಬುದು ಮೂಲಗಳಿಂದ ತಿಳಿದು ಬಂದಿದೆ.
ಶಾಸಕನು ತನ್ನ ಅವರ ಮೊಬೈಲ್‌ನಿಂದಲೇ ನೇರವಾಗಿ ಮತ್ತೂಂದು ಪಕ್ಷದ ಶಾಸಕರ ಮೊಬೈಲ್‌ಗೆ ಕರೆ ಮಾಡುತ್ತಿದ್ದರು ಎನ್ನಲಾಗಿದೆ.
ಸಿಡಿಆರ್‌ನಲ್ಲಿ ಬಹಿರಂಗ :
ಯುವತಿಯ ಸಿಡಿಆರ್ ಶೋಧಿಸಿದಾಗ ಆ ಶಾಸಕರ ಮೊಬೈಲ್‌ಗೆ ನಿರಂತರವಾಗಿ ಕರೆಗಳು ಹೋಗಿರುವುದು ಪತ್ತೆಯಾಗಿದೆ. ಶಾಸಕನು ಯುವತಿಗೆ ವಾಟ್ಸ್‌ಆ್ಯಪ್ ಕಾಲ್‌ಗಳನ್ನು ಹೆಚ್ಚು ಮಾಡಿರುವುದು ತಿಳಿದು ಬಂದಿದೆ. ಯುವತಿಯಿಂದ ನರೇಶ್ ಗೌಡ ಹಾಗೂ ಶ್ರವಣ್‌ಗೂ ಕರೆಗಳು ಹೋಗಿರುವುದು ಗೊತ್ತಾಗಿದೆ.
ಪದೇಪದೆ ಲೊಕೇಷನ್ ಬದಲಾವಣೆ :
ಸಿ.ಡಿ. ಪ್ರಕರಣದ ಶಂಕಿತ ಆರೋಪಿಗಳು ಆಗಾಗ ಸ್ಥಳ ಬದಲಾಯಿಸುತ್ತಿದ್ದಾರೆ ಎಂಬುದು ತನಿಖಾಧಿಕಾರಿಗಳಿಗೆ ತಿಳಿದು ಬಂದಿದೆ.ಪ್ರಕರಣದ ಕಿಂಗ್‌ಪಿನ್‌ಗಳು ಎನ್ನಲಾದ ಇಬ್ಬರು ಪತ್ರಕರ್ತರು ಹಾಗೂ ಯುವತಿ ಗಂಟೆಗೊಮ್ಮೆ ಲೊಕೇಷನ್ ಬದಲಾಯಿಸುತ್ತಿದ್ದು, ಹೀಗಾಗಿ ಆರೋಪಿತರ ಪತ್ತೆ ಸಾಧ್ಯವಾಗುತ್ತಿಲ್ಲ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಕೆಲವು ದಿನಗಳ ಹಿಂದೆ ತನ್ನ ಹೇಳಿಕೆಯ ವೀಡಿಯೋ ಬಿಡುಗಡೆ ಮಾಡಿದ್ದ ನರೇಶ್ ಗೌಡನ ಜಾಡು ಹಿಡಿದಾಗ ಆತ ದಿಲ್ಲಿಯಿಂದ ಸುಮಾರು 200 ಕಿ.ಮೀ. ದೂರದಲ್ಲಿರುವುದು ತಿಳಿದುಬಂದಿತ್ತು. ಆತನನ್ನು ವಶಕ್ಕೆ ಪಡೆಯುಲ ಎರಡು ತಂಡಗಳು ದಿಲ್ಲಿಗೆ ತೆರಳಿದ್ದವು. ಆದರೆ ಪ್ರಯೋಜನವಾಗಲಿಲ್ಲ. ನರೇಶ್ ಗೌಡ ಜತೆ ಶ್ರವಣ್ ಹಾಗೂ ಯುವತಿಯೂ ಇದ್ದಾಳೆ. ಶ್ರವಣ್ ಹ್ಯಾಂಕರ್ ಆಗಿದ್ದು, ಸಾಫ್ಟ್ವೇರ್, ಮೊಬೈಲ್, ಲೊಕೇಷನ್ ಸೇರಿ ಎಲ್ಲವನ್ನು ಹ್ಯಾಕ್ ಮಾಡುವ ನೈಪುಣ್ಯ ಹೊಂದಿದ್ದಾನೆ. ಈ ಹಿಂದೆ ಮಾಜಿ ಸಚಿವರ ವೀಡಿಯೋವನ್ನು ಕರ್ನಾಟಕದಲ್ಲಿ ಪ್ರಾಕ್ಸಿ ಸರ್ವರ್ ಬಳಸಿ ಅಪ್‌ಲೋಡ್ ಮಾಡಿ ರಷ್ಯಾದಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಬಿಂಬಿಸಲಾಗಿತ್ತು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ
Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.