ಸರ್ಕಾರ ಬೀಳಿಸಿ ಬಾಂಬೆಗೆ ಹೋಗಿದ್ದೇ ಸಿ.ಡಿ ಆಗಲು ಕಾರಣ: ಕುಮಾರಸ್ವಾಮಿ
Team Udayavani, Mar 22, 2021, 12:02 PM IST
ಬೆಂಗಳೂರು: ಸಿ.ಡಿ ವಿಚಾರದ ತನಿಖೆಯನ್ನುಎಸಿಬಿ, ಎಸ್ಐಟಿ, ಸರ್ಕಾರ ನೋಡಿಕೊಳ್ಳಲಿದೆ. ತನಿಖೆ ನಡೆಸುವುದು ಸರ್ಕಾರದ ಜವಾಬ್ದಾರಿ. ಯಾವ್ಯಾವ ಅಧಿಕಾರಿಯನ್ನು ಬೇಕು ಕರೆಸಿಕೊಂಡು ಮಾಹಿತಿ ಪಡೆಯಲಿ. ಆದರೆ ಸರ್ಕಾರ ಬೀಳಿಸಿ ಬಾಂಬೆಗೆ ಹೋಗಿದ್ದೇ ಸಿ.ಡಿ ಆಗಲು ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಬೀಳಿಸಿದ ಬಗ್ಗೆ ಹೆಚ್ ವಿಶ್ವನಾಥ್ ಅಸಮಾಧಾನಗೊಂಡ ವಿಚಾರಕ್ಕೂ ಪ್ರತಿಕ್ರಯಿಸಿದರು. “ವಿಶ್ವನಾಥ್ ಮಾತ್ರವಲ್ಲ, ಮಂತ್ರಿ ಆಗಿರುವವರೇ, ಆಂತರಿಕವಾಗಿ ಕೇಳಿದರೆ ಸರ್ಕಾರ ಮಾಡಿದ್ದು ಸರಿಯಲ್ಲ ಎಂದು ಹೇಳುತ್ತಾರೆ ಎಂದರು.
ನಾನು ಮೊನ್ನೆ ದಿನ ಬಿಜೆಪಿ ಹೇಳಿಕೆ ನೋಡಿದೆ. ಮಸ್ಕಿ ಅಭಿವೃದ್ಧಿಗೆ ಬಿಜೆಪಿಗೆ ಅಧಿಕಾರ ಕೊಡಿ ಎಂದು ಹೇಳಿದ್ದಾರೆ. ಈಗಾಗಲೇ ಅಧಿಕಾರಕ್ಕೆ ಬಂದು ಎರಡು ವರ್ಷ ಆಗಿದೆ. ಇವರೇ ತಾನೆ ಎರಡು ವರ್ಷದಿಂದ ಅಧಿಕಾರ ನಡೆಸುತ್ತಿರುವುದು. ನಾನು ಅಧಿಕಾರದಲ್ಲಿದ್ದಾಗ 500 ಕೋಟಿಗೂ ಹೆಚ್ಚಿನ ಅನುದಾನ ನೀಡಿದ್ದೆ. ಎರಡು ವರ್ಷದಲ್ಲಿ ಕೆಲಸ ಮಾಡಿಸಿದ್ದೇನೆ ಎಂದರು.
ಇದನ್ನೂ ಓದಿ:ಚುನಾವಣಾ ಕಾಲದ ನಿಮ್ಮ ಅಭಿವೃದ್ಧಿಯ ಜಪ ಬೂಟಾಟಿಕೆತನದ್ದು: ಸಿಎಂ ವಿರುದ್ಧ ಎಚ್ ಡಿಕೆ ಟೀಕೆ
ಮಸ್ಕಿ ಬಿಜೆಪಿ ಅಭ್ಯರ್ಥಿ ಅಧಿಕಾರ ತ್ಯಾಗ ವಿಚಾರದ ಬಗ್ಗೆ ಮಾತನಾಡಿದ ಅವರು, ಜನಕ್ಕೆ ತ್ಯಾಗ ಮಾಡಿಲ್ಲ, ಬಿಜೆಪಿ ಅಧಿಕಾರಕ್ಕೆ ಬರಲು ತ್ಯಾಗ ಮಾಡಿದ್ದಾರೆ ಎಂದರು.
ಹೋದಕಡೆ ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವುದಾಗಿ ಹೇಳುತ್ತಿದ್ದರು. ಶಿರಾದಲ್ಲಿ ಮಗದೂರು ಕೆರೆ ತೋಡಿ ಈಗ ಬತ್ತಿಹೋಗಿದೆ. ರಾಜ್ಯ ಅಭಿವೃದ್ಧಿ ಲೂಟಿ ಆಗುತ್ತಿದೆ, ಜನರು ಸರಿಯಾದ ತೀರ್ಮಾನ ತೆಗೆದುಕೊಳ್ಳಿ. ನಷ್ಟ ನಮಗಲ್ಲ, ಜನರಿಗೆ ಆಗುವುದು ಎಂದರು.
ಕೋವಿಡ್ ವಿಚಾರದಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಎಚ್ ಡಿಕೆ, ಸೋಂಕು ವಿಚಾರದಲ್ಲಿ ಆಟ ಆಡಬೇಡಿ. ನಿಮಗಿಷ್ಟ ಬಂದ ಗೈಡ್ ಲೈನ್ಸ್ ತಂದು, ಜನರ ಜೊತೆ ಚಕ್ಕಂದ ಆಡಬೇಡಿ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್ ಡೌನ್ ಜಾರಿ ಮಾಡುವುದಿಲ್ಲ: ಬಿ.ಸಿ.ಪಾಟೀಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್ ಜಾರಕಿಹೊಳಿ
Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್ ಟೀಕೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?
Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.