ಸ್ವಾರ್ಥದಿಂದ ಅವಿಭಕ್ತ ಕುಟುಂಬಗಳು ಕಣ್ಮರೆ
Team Udayavani, Mar 22, 2021, 3:05 PM IST
ಅರಸೀಕೆರೆ: ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ಬದುಕಿ ಬಾಳುವ ಉದಾತ್ತ ಚಿಂತನೆ ಹಾಗೂಪರೋಪಕಾರ ಮಾಡುವ ಸದ್ಗುಣಗಳ ಮಾನವೀಯ ಮೌಲ್ಯಗಳನ್ನು ನಮ್ಮ ಸಂಸ್ಕೃತಿಯಲ್ಲಿ ಕಾಣುತ್ತಿದ್ದೇವು,
ಆದರೆ ಇಂದು ಮನುಷ್ಯನಲ್ಲಿ ನಾನು ನನ್ನದು ಎಂಬ ಸ್ವಾರ್ಥಭಾವನೆ ಮನೆ ಮಾಡುತ್ತಿರುವ ಕಾರಣ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿದೆ ಎಂದು ಕೆರೆಗೋಡಿ ರಂಗಾಪುರ ಸುಕ್ಷೇತ್ರದ ಶ್ರೀಗುರುಪರದೇಶಿ ಕೇಂದ್ರ ಸ್ವಾಮೀಜಿ ವಿಷಾದಿಸಿದರು.ತಾಲೂಕಿನ ಕಣಕಟ್ಟೆ ಹೋಬಳಿ ರಾಂಪುರ ತಾಂಡ್ಯದಲ್ಲಿ ಆಯೋಜಿಸಿದ್ದ ದೊಡ್ಡಮ್ಮ ದೇವಿಯವರನೂತನ ವಿಗ್ರಹ ಪ್ರತಿಷ್ಠಾಪನೆ ದೇವಾಲಯದ ಉದ್ಘಾಟನಾ ಸಮಾರಂಭದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಇಂತಹ ಕೋವಿಡ್ ಸಂಕಷ್ಟದಲ್ಲೂ ಗ್ರಾಮಸ್ಥರು ಲಕ್ಷಾಂತರ ರೂ. ವೆಚ್ಚ ಮಾಡಿ ದೇವಾಲಯವನ್ನು ಕಟ್ಟಿಭಕ್ತಿ ಮಾರ್ಗದಲ್ಲಿ ಮುನ್ನೆಡೆಯುತ್ತಿರುವುದು ಸಂತಸದಸಂಗತಿ ಎಂದರು.
ಯುವಜನತೆಯಲ್ಲಿ ಧಾರ್ಮಿಕತೆ ಕಡಿಮೆ: ಇಂದಿನ ಯುವ ಪೀಳಿಗೆ ದೇವರು ಧರ್ಮ ಭಕ್ತಿ ಪೂಜ್ಯಮನೋಭಾವ ಕ್ಷೀಣಿಸುತ್ತಿದೆ ಹಿಂದಿನಿಂದಲೂ ದೇವಾಲಯಗಳು, ಮಠ ಮಾನ್ಯಗಳು,ಧಾರ್ಮಿಕ ಶ್ರದ್ಧಾ ಭಕ್ತಿಕೇಂದ್ರಗಳ ಉಳಿವಿಗೆ ಭಕ್ತರೇ ಕಾರಣರಾಗುತ್ತಿದ್ದಾರೆ.ಮನುಷ್ಯ ಇಂದಿನ ಆಧುನಿಕ ಯುಗದಲ್ಲಿ ಎಷ್ಟೇಬೆಳೆದರೂ ದೇವರು ಧರ್ಮ ಮತ್ತು ಪೂಜೆ ಸೇರಿದಂತೆಧಾರ್ಮಿಕ ವಿಧಿ-ವಿಧಾನಗಳು ನೇರವೇರುತ್ತವೆ.ಆದರೆ ಇಂದಿನ ಯುವ ಪೀಳಿಗೆಯಲ್ಲಿ ಧಾರ್ಮಿಕತೆ ಹಾಗೂ ಆಧ್ಯಾತ್ಮಿಕ ಮನೋಭಾವ ಕ್ಷೀಣಿಸುತ್ತಿರುವುದು ವಿಷಾದನೀಯ ಎಂದರು.
ಗುರು ಶಿಷ್ಟರದ್ದು ದೈವ ಸಂಬಂಧ: ದೊಡ್ಡಮೇಟಿ ಕುರ್ಕೆ ಬೂದಿಹಾಳ್ ವಿರಕ್ತ ಮಠದ ಶಶಿಶೇಖರ ಸಿದ್ಧ ಬಸವ ಸ್ವಾಮೀಜಿ ಮಾತನಾಡಿ, ಗುರು ಪರಂಪರೆಯ ಮೇಲೆ ನಂಬಿಕೆ ಇಟ್ಟು ಗುರುವಿನ ಮೂಲಕ ದೈವವನ್ನು ಕಾಣುವ ನಮ್ಮ ಸಂಸ್ಕೃತಿ ಆಚಾರ ವಿಚಾರಕ್ಕೆ ಅದರದ್ದೇ ಆದ ಮಹತ್ವವಿದೆ. ಹರ ಮುನಿದರೂ ಗುರು ಕಾಯುವನು ಎಂಬ ನಂಬಿಕೆಯೇ ಶಿಷ್ಯ ಕುಲವನ್ನು ಕೈಹಿಡಿದು ನಡೆಸುತ್ತಿದೆ. ಗುರುವಿನ ಅನುಗ್ರಹ ಹಾಗೂ ಮಾರ್ಗ ದರ್ಶನವಿಲ್ಲದೇ ಯಾರ ಬದುಕು ಪೂರ್ಣವಾಗುವುದಿಲ್ಲ. ಆಗಾಗಿಯೇ ನಮ್ಮ ಹಿರಿಯರು ಹೇಳಿದರು
ಮುಂದೆ ಗುರಿ ಹಿಂದೆ ಗುರು ಬದುಕಿನಲ್ಲಿ ಯಾರು ಹೊಂದಿರುತ್ತಾರೋ ಅವರ ಬದುಕು ಇತರರಿಗೆ ಮಾದರಿಯಾಗಿರುತ್ತದೆ. ಹಾಗಾಗಿ ಗುರು ಶಿಷ್ಯರ ಸಂಬಂಧ ದೈವ ಸಂಬಂಧ ಎಂದು ಹೇಳಿದರು.
ಭಕ್ತರು ಮಠದ ಆಸ್ತಿ: ಭಕ್ತ ದೈವ ಅಧೀನ ದೈವ ಭಕ್ತ ಅದೀನ ಅದೇ ರೀತಿ ಮಠ ಮಂದಿರಗಳು ಭಕ್ತರ ಆಸ್ತಿಯಾದರೆ ಭಕ್ತರು ಮಠದ ಆಸ್ತಿ ಇದ್ದಂತೆ. ಯಾವುದೇ ಮಠ ಮಂದಿರದ ಗುರುವಿನ ಕಾಯಕವೆಂದರೆ ಜಾತಿ, ಮತ, ಧರ್ಮ, ಬಡವ-ಬಲ್ಲಿಗ, ಮೇಲು-ಕೀಳು ನೋಡದೆ ಎಲ್ಲಾ ಭಕ್ತರನ್ನು ಒಪ್ಪಿಕೊಳ್ಳುವ ಹಾಗೂ ಅಪ್ಪಿ ಕೊಳ್ಳುವ ಆ ಮೂಲಕ ಭಕ್ತರ ಒಳಿತಿಗೆ ಮಾರ್ಗದರ್ಶನ ನೀಡುವ ಮಹತ್ತರ ಜವಬ್ದಾರಿ ಮಠಾಧೀಶರ ಮೇಲಿದೆ ಎಂದು ಕಿವಿಮಾತು ಹೇಳಿದರು.
ಸ್ವಾಭಿಮಾನದ ಬದುಕು ನಡೆಸುವವರು ಬಂಜಾರರು: ಚಿತ್ರದುರ್ಗ ಬಂಜಾರ ಗುರು ಪೀಠದ ಸರ್ದಾರ್ ಸೇವಾ ಲಾಲ್ ಸ್ವಾಮೀಜಿ ಮಾತನಾಡಿ, ಇಡೀ ಭಾರತ ದೇಶದಲ್ಲೆ ಬಂಜಾರ ಸಮಾಜಶ್ರೇಷ್ಠತೆಯನ್ನು ಪಡೆದಿದೆ ಬಂಜಾರರು ಪ್ರಕೃತಿ ಪ್ರಿಯರು ಯಾವುದೇ ಮೂಲ ಸೌಲಭ್ಯವಿಲ್ಲದ ಗ್ರಾಮ ಗಳಲ್ಲಿ ಬಂಜಾರ ಸಮಾಜದವರು ಬದುಕುತ್ತಿದ್ದಾರೆ.ಯಾರಿಗೂ ತೊಂದರೆ ಕೊಡದ ಸಮಾಜವೆಂದರೆ ಬಂಜಾರ ಸಮಾಜವಾಗಿದೆ. ಗ್ರಾಮಗಳಿಂದ ಹೊರಗೆ ತಂಡೋಪ ತಂಡವಾಗಿ ವಾಸಿಸುತ್ತಿರುವುದರಿಂದಬಂಜಾ ರರು ವಾಸಿಸುವ ಗ್ರಾಮಗಳನ್ನು ತಾಂಡ್ಯ ಎಂದು ಕರೆಯಾಗುತ್ತದೆ. ಬಂಜಾರರು ಸ್ವಾಭಿಮಾನದ ಬದುಕು ನಡೆಸುವ ಸಮಾಜವಾಗಿದೆ ಎಂದರು.
ಮಾಡಾಳು ವಿರಕ್ತಮಠದ ರುದ್ರಮುನಿ ಸ್ವಾಮೀಜಿ, ಕುಪ್ಪೂರು ಗದ್ದಿಗೆ ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ತಿಪಟೂರು ತಾಲೂಕು ಹೊನ್ನವಳ್ಳಿ ಗುರುಕರಿಸಿದ್ದೇಶ್ವರ ಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಬಳ್ಳಾರಿ ಜಿಲ್ಲೆಯ ಕೊಟ್ಟೂರು ಬಸಾಪುರತಾಂಡ್ಯದ ಶಕ್ತಿ ಬಂಜಾರ ಗುರುಪೀಠದ ಶಿವಪ್ರಕಾಶ ಮಹಾರಾಜ್ ಸ್ವಾಮೀಜಿ, ರಾಂಪುರ ಗ್ರಾಪಂ ಅಧ್ಯಕ್ಷಸುರೇಶ, ಮಾಡಾಳು ಗ್ರಾಪಂ ಸದಸ್ಯ ಬಸವರಾಜ್, ಸುಕ್ಷೇತ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಓಂಕಾರಮೂರ್ತಿ ಹಾಗೂ ಎಸ್.ಪಿ.ಎಸ್.ವಿದ್ಯಾಪೀಠದಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯು.ಎಸ್. ಬಸವರಾಜು ಉಪಸ್ಥಿತರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
Party Clean: ಹೊಂದಾಣಿಕೆ ರಾಜಕಾರಣ ಮಾಡೋರಿಗೆ ಬಿಜೆಪಿಯಿಂದ ಗೇಟ್‌ಪಾಸ್: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.