ನೀರು ಉಳಿಸಿಸುವ ಕೆಲಸ ಸರ್ಕಾರವೇ ಮಾಡಬೇಕೆಂಬ ಭಾವನೆ ಹೋಗಬೇಕು: ಮೋದಿ ಕರೆ
ಮೋದಿ ಜತೆ ಧೂಪತಮಹಾಗಾಂವ್ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀನಿವಾಸ ಜೊನ್ನೆಕೇರಿ ಸಂವಾದ
Team Udayavani, Mar 22, 2021, 4:02 PM IST
ಬೀದರ್: ವಿಶ್ವ ಜಲ ದಿನಾಚರಣೆ ಪ್ರಯುಕ್ತ ಸೋಮವಾರ ನೀರಿನ ಸಂರಕ್ಷಣೆಯ ಮಹತ್ವದ ಕಾರ್ಯದಲ್ಲಿ ಯಶಸ್ಸು ಸಾಧಿಸಿರುವ ಜಿಲ್ಲೆಯ ಧೂಪತಮಹಾಗಾಂವ್ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀನಿವಾಸ ಜೊನ್ನೆಕೇರಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಸಂವಾದ ನಡೆಸಿದರು.
ದೇಶದ ಕೇವಲ ಐದು ಗ್ರಾ.ಪಂ ಅಧ್ಯಕ್ಷರ (ಸರಪಂಚ್) ಜತೆ ಪ್ರಧಾನಿ ನಡೆಸಿದ ಸಂವಾದದಲ್ಲಿ ಕರ್ನಾಟಕದಿಂದ ಧೂಪತಮಹಾಗಾಂವ್ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ ಒಬ್ಬರಾಗಿ ಭಾಗವಹಿಸಿದ್ದು ವಿಶೇಷ. ನೀರಿನ ಸಂರಕ್ಷಣೆಗಾಗಿ ತಮ್ಮ ಗ್ರಾ.ಪಂಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡ ಪ್ರಧಾನಿ ಮೋದಿ ಅವರು, ಬರುವ ದಿನಗಳಲ್ಲಿ ಅಂತರ್ಜಲ ವೃದ್ಧಿಸಲು ಅಗತ್ಯ ಸಲಹೆಗಳನ್ನು ಆಲಿಸಿದರು.
ಇದನ್ನೂ ಓದಿ:ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಜ್ವಾಲಾಮುಖಿ ಸ್ಪೋಟದ ವಿಡಿಯೋ!
ಧೂಪತಮಹಾಗಾಂವ್ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ ಅವರು ಸುಮಾರು 6 ನಿಮಿಷಗಳ ಕಾಲ ಪ್ರಧಾನಿ ಜತೆಗೆ ಸಂವಾದ ನಡೆಸಿ, ಪಂಚಾಯತ್ ವ್ಯಾಪ್ತಿಯಲ್ಲಿನ ನೀರಿನ ಸಂರಕ್ಷಣೆಯ ಯಶೋಗಾಥೆಯನ್ನು ವಿವರಿಸಿದರು. ಗ್ರಾಮದ ಸೂಕ್ತ ನಿರ್ವಹಣೆ ಇಲ್ಲದೇ ಹೂಳು ತುಂಬಿಕೊಂಡಿದ್ದ ಗೊಗ್ಗವ್ವೆ ಕೆರೆಯನ್ನು ನರೇಗಾದಡಿ ಕೆಲಸ ಮಾಡಿ, ಇದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿ ನೀರಿನ ದಾಹ ತಣಿಸಲು ಆಗುತ್ತಿರುವ ಉಪಯುಕ್ತತೆ, ಇದಕ್ಕೆ ಗ್ರಾಮಸ್ಥರಿಂದ ದೊರೆತ ಸಹಕಾರ ಕುರಿತು ತಿಳಿಸಿದರಲ್ಲದೇ ಮಾದರಿ ಕಾರ್ಯವನ್ನು ಸುತ್ತಲಿನ ಗ್ರಾಮಸ್ಥರು ಬಂದು ವೀಕ್ಷಿಸುತ್ತಿದ್ದಾರೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಪ್ರಧಾನಿ ಮೊದಿ, ನೀರು ಪ್ರಕೃತಿ ನಮಗಾಗಿ ನೀಡಿರುವ ಅಮೂಲ್ಯ ಸಂಪತ್ತು. ನೀರನ್ನು ಉಳಿಸಿ ಸಂರಕ್ಷಿಸುವ ಕೆಲಸ ಸರ್ಕಾರವೇ ಮಾಡಬೇಕು ಎಂಬ ಭಾವನೆ ಹೋಗಬೇಕು. ಜನರ ಸಹಭಾಗಿತ್ವದಲ್ಲಿ ಅಗುವ ಪ್ರತಿ ಕಾರ್ಯ ಮಹತ್ವ ಪಡೆದುಕೊಳ್ಳುತ್ತವೆ. ಹಾಗಾಗಿ ಗ್ರಾಮದ ಜನರನ್ನು ವಿಶ್ವಾಸಕ್ಕೆ ಪಡೆದು ನೀರಿನ ಸಂರಕ್ಷಣೆ ಕೆಲಸ ಆಗಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ: ಅಂತರ್ಜಲ ವೃದ್ಧಿಗೆ ದೀಕ್ಷೆ ತೊಟ್ಟ ಭಗೀರಥ
ಭಾರತದ ಅಭಿವೃದ್ಧಿ ಜಲ ಸೂತ್ರಗಳ ಮೇಲೆ ನಿಂತಿದೆ. ಹಾಗಾಗಿ ಮಳೆಗಾಲ ಆರಂಭ ಆಗುವ ಮೊದಲು ದೇಶದ ಪ್ರತಿ ಗ್ರಾಮ ಪಂಚಾಯತ್ ಅಧ್ಯಕ್ಷರು ಗ್ರಾಮ ಸಭೆಗಳನ್ನು ನಡೆಸಿ, ಮಳೆ ನೀರನ್ನು ಹಿಡಿದಿಟ್ಟುಕೊಂಡು ಸಂರಕ್ಷಿಸಿ ಕೊಳ್ಳಲು ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಬೇಕು. ಇದಕ್ಕಾಗಿ ಸರ್ಕಾರದ ಸುತ್ತೋಲೆಗಳಿಗಾಗಿ ಕಾಯಬಾರದು. ಎಲ್ಲರೂ ಗಂಭೀರತೆ ಅರಿತು ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.
ಸಂವಾದದಲ್ಲಿ ಕೇಂದ್ರ ಜಲ ಶಕ್ತಿ ಮಂತ್ರಾಲಯದ ಸಚಿವರು, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Amparu: ಬೈಕ್ ಸ್ಕಿಡ್; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು
KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್ ರಾಜ್ ಮೌರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.