ರಾಘಣ್ಣನ ಜೊತೆ ‘ಕರ್ನಾಟಕದ ಅಳಿಯ’
Team Udayavani, Mar 22, 2021, 4:34 PM IST
ಕೆಲ ದಿನಗಳ ಹಿಂದಷ್ಟೇ ಆರೋಗ್ಯದಲ್ಲಿ ಏರುಪೇರಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಹಿರಿಯ ನಟ ರಾಘವೇಂದ್ರ ರಾಜಕುಮಾರ್, ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಮತ್ತೆ ಮೊದಲಿನಂತೆ ಚಿತ್ರೀಕರಣಕ್ಕೆ ಇಳಿದಿದ್ದಾರೆ. ಕೆಲ ದಿನಗಳ ವಿಶ್ರಾಂತಿ ಬಳಿಕ ರಾಘವೇಂದ್ರ ರಾಜಕುಮಾರ್, ಯುವ ನಿರ್ದೇಶಕ ಜೈ ಶೇಖರ್ ಆ್ಯಕ್ಷನ್-ಕಟ್ ಹೇಳಿರುವ ಪ್ರಥಮ್ ಹೀರೋ ಆಗಿ ನಟಿಸುತ್ತಿರುವ “ಕರ್ನಾಟಕದ ಅಳಿಯ’ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ಸದ್ಯ ಈ ಚಿತ್ರದಲ್ಲಿ ರಾಘಣ್ಣ ಭಾಗದ ಚಿತ್ರೀಕರಣ ನಡೆಯುತ್ತಿದ್ದು, ರಾಘಣ್ಣ ಕೂಡ ಜೋಶ್‌ನಿಂದಲೇ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇನ್ನು ಶೂಟಿಂಗ್ ಸೆಟ್‌ನಲ್ಲಿ ಬಿಡುವು ಮಾಡಿಕೊಂಡು ರಾಘಣ್ಣ, ಚಿತ್ರತಂಡದ ಸದಸ್ಯರ ಜೊತೆ ಕ್ರಿಕೆಟ್ ಕೂಡ ಆಡುತ್ತಿದ್ದಾರೆ.
ಇದನ್ನೂ ಓದಿ:ಪ್ರೇಕ್ಷಕರ ಮುಂದೆ “ನನ್ನ ಗುರಿ ವಾರೆಂಟ್’ : ಮಾ.26ಕ್ಕೆ ರಿಲೀಸ್
ರಾಘಣ್ಣ ಅವರೊಂದಿಗೆ ನಾಯಕ ನಟ ಪ್ರಥಮ್ ಸೇರಿದಂತೆ, “ಕರ್ನಾಟಕದ ಅಳಿಯ’ ಚಿತ್ರತಂಡ ಕೂಡ ಸಾಥ್ ನೀಡುತ್ತಿದ್ದು, ಶೂಟಿಂಗ್ ಸೆಟ್‌ನಲ್ಲಿ ರಾಘವೇಂದ್ರ ರಾಜಕುಮಾರ್ ಕ್ರಿಕೆಟ್ ಆಡುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.