ಸಗಣಿಯಿಂದ ಸಂಪತ್ತು! : ಕೊಪ್ಪಳದ ದಂಪತಿಯ ಯಶೋಗಾಥೆ
Team Udayavani, Mar 22, 2021, 6:27 PM IST
ಈ ದಿನಗಳಲ್ಲಿ ಎಲ್ಲೆಲ್ಲೂ ರಾಸಾಯನಿಕಗಳನ್ನು ಬಳಸಿ ತಯಾರಿಸಿದ ಉತ್ಪನ್ನಗಳು ಕಣ್ಣಿಗೆರಾಚುತ್ತವೆ. ಅವುಗಳ ಬಳಕೆಯೂ ಹೆಚ್ಚಾಗಿಯೇ ಇದೆ. ಹೀಗಾಗಿ ಪರಿಸರಕ್ಕೆ ಮತ್ತು ಮನುಷ್ಯನ ಆರೋಗ್ಯಕ್ಕೂ ಹಾನಿಯಾಗುತ್ತಿದೆ. ಇಂಥ ಸಂದರ್ಭದಲ್ಲಿ, ದೇಸೀ ಉತ್ಪನ್ನಗಳ ತಯಾರಿಕೆಗೆಮುಂದಾಗಿರುವ ಶ್ರೀನಿವಾಸ ದಿವಾಕರ ಎಂಬ ಯುವಕನೊಬ್ಬ ಅದರಲ್ಲಿ ದೊಡ್ಡ ಯಶಸ್ಸು ಕಂಡಿದ್ದಾನೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುರಡಿ ಗ್ರಾಮದ ದಿವಾಕರ, ಡಿಪ್ಲೊಮಾಪದವೀಧರ. ಈತ ಆಯುರ್ವೇದ ಸಂಪನ್ಮೂಲಗಳನ್ನು ಕಚ್ಚಾವಸ್ತುಗಳನ್ನಾಗಿಬಳಸಿಕೊಂಡು ಹಸುವಿನ ಗೋಮಯದಿಂದ ಗೃಹ ಅಲಂಕಾರಿಕ ವಸ್ತುಗಳು ಹಾಗೂ ವಿಶಿಷ್ಟ ಬಗೆಯ ಹಲವು ಉತ್ಪನ್ನಗಳನ್ನು ಮನೆಯಲ್ಲೇ ತಯಾರಿಸಿ ಯಶಸ್ಸು ಕಂಡಿದ್ದಾನೆ. ಬಿ.ಕಾಂ ಪದವೀಧರೆಯಾಗಿರುವ ಪತ್ನಿ ಅಶ್ವಿನಿ, ಪತಿಯ ಎಲ್ಲಾ ಕೆಲಸದಲ್ಲೂ ಕೈ ಜೋಡಿಸುತ್ತಿದ್ದಾರೆ.
ಸಗಣಿಯಿಂದ ಅಗರಬತ್ತಿ ದೂಪದ ಬತ್ತಿ (ಅಗರಬತ್ತಿ): ದೇಶಿ ಹಸುವಿನ ಸಗಣಿಯನ್ನು ತಂದು ಅದನ್ನು ಮೂರು ದಿನ ಒಣಗಿಸಿ, ಬಳಿಕ ಅದನ್ನು ಮಿಶ್ರಣ ಯಂತ್ರದಲ್ಲಿ ಪುಡಿಮಾಡಿಕೊಂಡು, ಕೇರಳದಿಂದ ತಂದದೇಸೀ ಕೊಬ್ಬರಿ ಎಣ್ಣೆ,ಆಯುರ್ವೇದಯುಕ್ತ ಕರ್ಪೂರ,ಹಸುವಿನ ತುಪ್ಪ, ಲವಂಗದ ಪುಡಿ, ಅರಿಶಿಣ ಪುಡಿ, ಗುಗ್ಗಳ (ಲೋಬಾನಮಾದರಿಯದ್ದು), ಭದ್ರಮುಷ್ಟಿ ಎಂಬ ವಸ್ತುಗಳನ್ನುಮಿಶ್ರಣ ಮಾಡಿ ಹದವಾಗಿಸಿ ಅಗರಬತ್ತಿಯನ್ನು ತಯಾರು ಮಾಡುತ್ತಾರೆ.
ಗೋಮಯ ದಂತ ಮಂಜನ (ಹಲ್ಲಿನ ಪುಡಿ) : ಗೋವಿನ ಸಗಣಿಯಿಂದ ತಯಾರಿಸುವವಿಭೂತಿ, ಭಸ್ಮ ಆಧ್ಯಾತ್ಮಿಕವಾಗಿಯೂ,ಆರೋಗ್ಯಕ್ಕೂ ಒಳ್ಳೆಯದು. ಅದರಂತೆಯಾವುದೇ ರಾಸಾಯನಿಕ ವಸ್ತುಗಳಮಿಶ್ರಣ ಮಾಡದೆ ದಿನಬಳಕೆಯಸಾಮಾನ್ಯ ಸಾಮಗ್ರಿಗಳಾದ ಪುದಿನಾ,ಕರಿಬೇವು, ತುಳಸಿ, ಅಜ್ವಾನ, ಅರಿಶಿಣಮಿಶ್ರಣ ಮಾಡಿ ತಯಾರಿಸಿದ ಟೂತ್‌ಪೇಸ್ಟ್ ತಯಾರಿಸಲಾಗುತ್ತದೆ.
ಗೃಹ ಅಲಂಕಾರಿಕ ವಸ್ತುಗಳು: ಸಾಮಾನ್ಯವಾಗಿ ಮನೆಯನ್ನು ಅಂದವಾಗಿ ಮತ್ತು ಆಕರ್ಷಕವಾಗಿಕಾಣುವಂತೆ ಮಾಡಲು ಜನ ವಿವಿಧರೀತಿಯ ಅಲಂಕಾರಿಕ ವಸ್ತುಗಳನ್ನುಬಳಸುತ್ತಾರೆ. ಇದನ್ನು ಗಮನಿಸಿದದಿವಾಕರ ಅವರು, ಪ್ಲಾಸ್ಟಿಕ್‌ಉತ್ಪನ್ನಗಳ ಬದಲು ಗೋಮಯದಿಂದ ಮಾಡಿದ ವಸ್ತುಗಳನ್ನು ತಯಾರಿಸಿದ್ದಾರೆ. ಶ್ರೀ, ಓಂ, ಸ್ವಸ್ತಿಕ್ ಸೇರಿ ಹಲವುಚಿಹ್ನೆಗಳನ್ನು ಅಲಂಕಾರಿಕ ವಸ್ತುಗಳರೂಪದಲ್ಲಿ ತಯಾರಿಸಿದ್ದಾರೆ. ಉಲನ್ ದಾರ, ಬಟ್ಟೆ, ಕೆಲವುಧಾನ್ಯಗಳನ್ನು ಅಂಟಿಸಿ ಮಾಡಿದತೋರಣ, ಬಾಗಿಲು ಪಟ್ಟಿಗಳುಮನೆಗೆ ಒಂದು ವಿಶಿಷ್ಟ ಸೊಬಗು ತಂದು ಕೊಡುತ್ತವೆ.ಗೋಮಯದೊಂದಿಗೆಅನೇಕ ಆಯುರ್ವೇದಿಕ್ ಅಂಶವುಳ್ಳವಸ್ತುಗಳನ್ನು ಶುದ್ಧ ತುಪ್ಪ ಮತ್ತು ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ, ಮನೆಯಲ್ಲಿಯೇ ಧೂಪ ತಯಾರಿಸುತ್ತಿದ್ದಾರೆ. ವಿವರಗಳಿಗೆ- ಶ್ರೀನಿವಾಸ ದಿವಾಕರ್ ಮುರಡಿ, ಮೊ. 9449024192, 8105445112ಕ್ಕೆ ಸಂಪರ್ಕಿಸಬಹುದು.
ಭಾರತೀಯ ಸಂಸ್ಕೃತಿಯಲ್ಲಿ ಗೋವಿನ ಉತ್ಪನ್ನಗಳಿಗೆ ಬಹಳ ಮಹತ್ವವಿದೆ. ಶ್ರೀನಿವಾಸ್ ದಿವಾಕರ ದಂಪತಿಗೋಮಯದಿಂದ ಮಾಡಿರುವ ಹಲವಾರುಉತ್ಪನ್ನಕ್ಕೆ ಹೆಚ್ಚಿನ ಬೇಡಿಕೆಯಿದೆ. ಪರಿಸರಸ್ನೇಹಿ ಈ ಉತ್ಪನ್ನಗಳು ಗ್ರಾಹಕರ ಜೇಬಿಗೆ ಹೆಚ್ಚಿನ ಹೊರೆಯಾಗಲ್ಲ. ಆತ್ಮ ನಿರ್ಭರಭಾರತದ ಮಹತ್ವಾಕಾಂಕ್ಷೆಗೆ ಸ್ವದೇಶಿ ತಳಿಯಈ ಉತ್ಪನ್ನಗಳು ಸಹಕಾರಿ. -ಡಾ.ಪಿ.ಆರ್.ಬದರಿ ಪ್ರಸಾದ್, ಕೀಟಶಾಸ್ತ್ರ ವಿಜ್ಞಾನಿ, ಕೊಪ್ಪಳ.
– ಶ್ರೀನಾಥ ಮುರಕುಂಬಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.