ಕೇರಳ ಚುನಾವಣಾ ಅಖಾಡ: ಮಹಿಳೆಯರಿಂದ ನಿಯಂತ್ರಣ ಕೊಠಡಿಯ “ಕಂಟ್ರೋಲ್”
1950 ಸಹಾಯ ನಂಬ್ರಕ್ಕೆ ದೂರು, ಸಂಶಯ ನಿವಾರಣೆ ಸಂಬಂಧ ಈ ವರೆಗೆ 96 ದೂರುಗಳು ಬಂದಿವೆ.
Team Udayavani, Mar 22, 2021, 6:26 PM IST
ಕಾಸರಗೋಡು : ವಿಧಾನಸಭೆ ಚುನಾವಣೆ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ನಿಯಂತ್ರಣ ಕೊಠಡಿಯ ನಿಯಂತ್ರಣ ಮಹಿಳೆಯರ ಕೈಯಲ್ಲಿದೆ. ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ 24 ತಾಸುಗಳೂ ಚಟುವಟಿಕೆ ನಡೆಸುತ್ತಿರುವ ನಿಯಂತ್ರಣ ಕೊಠಡಿಯು ಜಿಲ್ಲಾಧಿಕಾರಿ ಕಚೇರಿಯ ಹುಸೂರ್ ಶಿರಸ್ತೇದಾರ್ ಎಸ್.ಶ್ರೀಜಾ ಅವರ ನೇತೃತ್ವದಲ್ಲಿ ಚಟುವಟಿಕೆ ನಡೆಸುತ್ತಿದೆ.
ಇದನ್ನೂ ಓದಿ:ಉತ್ತರಾಖಂಡ್ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಗೆ ಕೋವಿಡ್ ದೃಢ
ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ದೂರುಗಳು, ಮತದಾರರ ಸಹಾಯವಾಣಿ ನಿಯಂತ್ರಣ, ಫೀಲ್ಡ್ ಇನ್ವೆಸ್ಟಿಗೇಷನ್ ಟೀಂ ಮಾನಿಟರಿಂಗ್ ಸಹಿತ ಹೊಣೆ ಈ ನಿಯಂತ್ರಣ ಕೊಠಡಿಯದು. ಇದರ ಹೊಣೆ ಅಧಿಕಾರಿ ಮುಮ್ತಾಝ್ ಹಸನ್, ಸುಜಾ ವರ್ಗೀಸ್, ಸಹಾಯಕಿಯರಾದ ಕೆ.ಪ್ರಸೀದಾ, ಕೆ.ಎಸ್.ಶ್ರೀಕಲಾ, ಪಿ.ಸುಜಾ, ಪಿ.ಮಮತಾ, ಪದ್ಮಾವತಿ. ನಿಯಂತ್ರಣ ಕೊಠಡಿ ತಂಡ ಬೆಳಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ ನಿಯಂತ್ರಣ ಕೊಠಡಿ ನಿಯಂತ್ರಿಸುತ್ತಾರೆ. ತದನಂತರ ರಾತ್ರಿ ಹೊಣೆಯ ಅಧಿಕಾರಿಗಳಾದ ಡಿ.ಎಸ್.ಸೆಲ್ವರಾಜ್, ಅನಿಲ್ ಕುಮಾರ್, ಸಹಾಯಕರಾದ ಕೆ.ಪಿ.ಶಶಿಧರನ್, ಸಲೀಂ ಕುಮಾರ್, ಶ್ರೀರಾಂ, ಅರುಣ್ ಲಾರೆನ್ಸ್ ನಿಯಂತ್ರಣ ಕೊಠಡಿಯನ್ನು ನಿಯಂತ್ರಿಸುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ದೂರುಗಳನ್ನು ಸ್ವೀಕರಿಸುವ ಸಿ-ವಿಜಿಲ್ ಅಪ್ಲಿಕೇಷನ್, 1950 ಎಂಬ ಟೋಲ್ ಫ್ರೀ ನಂಬ್ರ, ಸಹಾಯವಾಣಿ ನಂಬ್ರಗಳಾದ 04994-255325, 255324ಕ್ಕೆ ಬರುವ ದೂರುಗಳು , ಚುನಾವಣೆ ಸಂಬಂಧ ಸಂಶಯಗಳು ಇತ್ಯಾದಿಗಳಿಗೆ ನಿಯಂತ್ರಣ ಕೊಠಡಿಯಲ್ಲಿ ಉತ್ತರ ಲಭಿಸಲಿದೆ. 1950 ಸಹಾಯ ನಂಬ್ರಕ್ಕೆ ದೂರು, ಸಂಶಯ ನಿವಾರಣೆ ಸಂಬಂಧ ಈ ವರೆಗೆ 96 ದೂರುಗಳು ಬಂದಿವೆ.
ಸಿ-ವಿಜಿಲ್ ನಲ್ಲಿ ದಾಖಲಾಗುವ ದೂರುಗಳು 5 ನಿಮಿಷದ ಅವಧಿಯಲ್ಲಿ ಫೀಲ್ಡ್ ಇನ್ವೆಸ್ಟಿಗೇಷನ್ ಟೀಂ ಗೆ ಹಸ್ತಾಂತರಗೊಳ್ಳುತ್ತಿದ್ದು, ಇದರ ಹೊಣೆ ನಿಯಂತ್ರಣ ಕೊಠಡಿಯದ್ದಾಗಿದೆ. ನೂರು ನಿಮಿಷಗಳ ಅವಧಿಯಲ್ಲಿ ದೂರಿಗೆ ಪರಿಹಾರ ಲಭ್ಯವಾಗಲಿದೆ. ಈ ಬಾರಿಯ ಚುನಾವಣೆ ಸಂಬಂಧ ಸಿ-ವಿಜಿಲ್‌ಗೆ ಈ ವರೆಗೆ 666 ದೂರು ಬಂದಿದೆ. ಇವುಗಳಲ್ಲಿ ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ 292 ದೂರುಗಳು, ಕಾಸರಗೋಡು ಕ್ಷೇತ್ರದಲ್ಲಿ 191 ದೂರುಗಳು, ಉದುಮ ಕ್ಷೇತ್ರದಲ್ಲಿ 91 ದೂರುಗಳು, ಕಾಂಞಂಗಾಡ್ ಕ್ಷೇತ್ರದಲ್ಲಿ 69 ದೂರುಗಳು, ತ್ರಿಕರಿಪುರ ಕ್ಷೇತ್ರದಲ್ಲಿ 23 ದೂರುಗಳು ಬಂದಿವೆ. ಸಿ-ವಿಜಿಲ್ ಆ್ಯಪ್ ನಲ್ಲಿ ನೋಂದಣಿಗೊಂಡಿದ್ದು, ಎಲ್ಲ ದೂರುಗಳೂ ಪರಿಹಾರಗೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.