ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ


Team Udayavani, Mar 22, 2021, 7:36 PM IST

ವನಹಗ್ಹನಗ

ಇಂಡಿ: ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ. ನಾನು ಸಣ್ಣ ನೀರಾವರಿ ಮಂತ್ರಿಯಾದ ಬಳಿಕ ಈಶ್ವರಪ್ಪನವರ ಸಹಾಯ ಸಹಕಾರದೊಂದಿಗೆ ವಿಜಯಪುರ ಜಿಲ್ಲೆಯ ಕೆರೆ ತುಂಬುವ ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ, ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಕಾಜೋಳ ಹೇಳಿದರು.

ರವಿವಾರ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಮುಳವಾಡ ಏತ ನೀರಾವರಿ ಹಂತ-3ರ ಅಡಿಯಲ್ಲಿ ತಿಡಗುಂದಿ ಶಾಖಾ ಕಾಲುವೆಯ ಕಿ.ಮೀ 56ರಿಂದ 66ರವರೆಗೆ ಕಾಮಗಾರಿ ಮುಖಾಂತರ ರಾಜನಾಳ, ತಡವಲಗಾ, ಹಂಜಗಿ ಕೆರೆಗಳನ್ನು ತುಂಬುವ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಜಿಲ್ಲೆಯ ಜನತೆ ಇಂದಿ ರಾ ಗಾಂಧಿ ಯವರನ್ನು ಬಂಗಾರದಲ್ಲಿ ಕೂಡಿಸಿ ತುಲಾಭಾರ ಮಾಡಿಸಿದ ಹೃದಯ ಶ್ರೀಮಂತಿಕೆಯವರು.

60 ವರ್ಷಗಳಿಂದ ಆಡಳಿತ ಮಾಡಿದ ಸರಕಾರಗಳು ಗಡಿಭಾಗ ಅಂತಲೋ ಅಥವಾ ಉದಾಸೀನತೆಯೋ, ಇಚ್ಛಾಶಕ್ತಿ ಕೊರೆತಯೋ ಈ ಭಾಗ ನಿರಂತರ ಶೋಷಣೆ, ಅನ್ಯಾಯಕ್ಕೆ ಒಳಗಾಗಿದೆ. ಕಳೆದ ಬಾರಿ ಬಿಜೆಪಿ ಸರಕಾರದ ಅವ  ಧಿಯಲ್ಲಿ ಯಡಿಯೂರಪ್ಪನವರಿಗೆ ಕೃಷ್ಣಾ ಕೊಳ್ಳದ ಯೋಜನೆಗಳಿಗೆ 10 ಸಾವಿರ ಕೋಟಿ ಕೊಡಬೇಕು ಎಂದು ಕೇಳಿಕೊಂಡಾಗ ಒಪ್ಪಿಗೆ ಸೂಚಿಸಿರುವಾಗ ಕೋವಿಡ್‌ -19 ರೋಗ ವಿಶ್ವದಲ್ಲಿ ವ್ಯಾಪಿಸಿರುವಾಗ ಯೋಜನೆ ಫಲಪ್ರದವಾಗಲಿಲ್ಲ.

ಆದರೆ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಜಯಪುರ ಜಿಲ್ಲೆಗೆ ಬ್ರಿಜೇಶ್‌ ವರದಿಯಂತೆ 130 ಟಿಎಂಸಿ ನೀರು ಬಳಕೆ ಮಾಡಲು 5 ವರ್ಷಗಳಲ್ಲಿಯೇ ಈ ಕಾರ್ಯಕ್ರಮ ರೂಪಿಸಲಾಗುವುದು. ಕೇಂದ್ರ ಸರಕಾರ ಅಧಿ ಕಾರಕ್ಕೆ ಬಂದ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅನೇಕ ಜನಪರ ಕಾರ್ಯಗಳು ಮಾಡಿದ್ದಾರೆ ಎಂದರು. ಅಂದಿನ ಕಾಂಗ್ರೆಸ್‌ ಪಕ್ಷದ ಪ್ರಧಾನಿ ದಿ| ರಾಜೀವ್‌ ಗಾಂಧಿ  ಹೇಳಿರುವಂತೆ ಕೇಂದ್ರದಿಂದ 1 ರೂ. ಅನುದಾನ ನೀಡಿದರೆ ಫಲಾನುಭವಿಗಳಿಗೆ 15 ಪೈಸ್‌ ಮುಟ್ಟುತ್ತವೆ ಎಂದಿದ್ದರು. ಆದರೆ ನರೇಂದ್ರ ಮೋದಿ ಸರಕಾರ ಅನುದಾನವನ್ನು ಮಧ್ಯವರ್ತಿಗಳಿಲ್ಲದೆ ನೇರ ಬ್ಯಾಂಕ ಖಾತೆಗೆ ಜಮಾ ಮಾಡುತ್ತಿದೆ.

ಇದೇ ನರೇಂದ್ರ ಮೋದಿಯವರ ಹಾಗೂ ಯಡಿಯೂರಪ್ಪನವರ ಬದಲಾವಣೆಯ ದೂರದೃಷ್ಟಿಯ ಆಡಳಿತ ಎಂದು ಹೇಳಿದರು. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಬರಕ್ಕೆ ಇನ್ನೊಂದು ಹೆಸರೆ ವಿಜಯಪುರ ಜಿಲ್ಲೆ. ಅವಳಿ ಜಿಲ್ಲೆಯ ಜನತೆ ತಮ್ಮ ಮನೆ, ಮಠಗಳನ್ನು ಉದಾರವಾಗಿ ಧಾರೆ ಎರೆದು ಬೇರೆಯವರಿಗೆ ನೀರು ಕೊಟ್ಟಿದ್ದಾರೆ.

ಬರ ಎಂಬುದು ಬ್ರಿಟಿಷರ ಕಾಲದಿಂದಲೂ ಇದೆ. ಆ ಕಾಲದಲ್ಲಿಯೇ ವಿಜಯಪುರ ಜಿಲ್ಲೆಯಲ್ಲಿ ಬರಗಾಲ ಸಂಸ್ಥೆ ಹುಟ್ಟು ಹಾಕಿದ್ದಾರೆ. ಸ್ವಂತಂತ್ರ ಭಾರತದ ಆಡಳಿತ ಮಾಡಿದ ಸರಕಾರಗಳು ನೀರಾವರಿಗಾಗಿ ಅನೇಕ ಯೋಜನೆಗಳು ಮಾಡಿವೆ. ಆದರೆ ಇದರಿಂದ ಇನ್ನೂ ಮುಕ್ತವಾಗಿಲ್ಲ. ಈ ಭಾಗದ ಜನರು ಕೃಷಿ ಆಧಾರಿತ ಬದಕು ಸಾಗಿಸುವ ಜನರು. ಲಿಂಬೆ, ದಾಳಿಂಬೆ, ದ್ರಾಕ್ಷಿ ಬೆಳೆಯುವದರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದ್ದಾರೆ ಎಂದರು. ಮೇಘರಾಜನ ಅವಕೃಪೆಯಿಂದ ಈ ಭಾಗದ ರೈತರು ಸಾಕಷ್ಟು ಕಷ್ಟದ ದಿನಗಳನ್ನು ಕಳೆದಿದ್ದಾರೆ. ಅನೇಕ ರೈತಾಪಿ ವರ್ಗ ಸಾಲದ ಸುಳಿಯಲ್ಲಿ ಸಿಲುಕಿ ಅಧೈರ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಗವಂತ ದಯೆಯಿಂದ ಈ ಭಾರಿ ಮೇಘ‌ರಾಜನ ಕೃಪೆಯಿಂದ ಮಳೆಯಾಗಿ ಭೂಮಿತಾಯಿ ಹಸಿರಾಗಿ ರೈತರು ಅಲ್ಪಸ್ವಲ್ಪ ಧೈರ್ಯದಿಂದ ಇರುವಂತಾಗಿದೆ. 2017ರಲ್ಲಿ ಅಣಚಿ, ಬುಯ್ನಾರ, ಹತ್ತಿರ ಭೀಮಾನದಿಯಿಂದ ನೀರು ಲಿಫ್ಟ್‌ ಮಾಡಿ ಕೆರೆ ತುಂಬಲಾಗಿದೆ. ಆದರೆ ಈ ಯೋಜನೆ ಕೂಡಾ ಅಷ್ಟೊಂದು ಯಶಸ್ವಿ ಕಂಡಿಲ್ಲ. ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ಹಾಗೂ ನೀರಾವರಿ ಸಚಿವರಾದ ಡಿ.ಕೆ. ಶಿವಕುಮಾರ ಅವರು ಕೆರೆಗಳನ್ನು ಗ್ರಾÂವಿಟಿ ಆಧಾರದಲ್ಲಿ ತುಂಬಲು ಸಹಾಯ ಮಾಡಿದ್ದಾರೆ ಎಂದರು. ದಯಾಸಾಗರ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.

ವೇದಿಕೆಯಲ್ಲಿ ಸಂಸದ ರಮೇಶ ಜಿಗಜಿಣಗಿ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಜಿಪಂ ಸದಸ್ಯ ಭೀಮು ಬಿರಾದಾರ, ನವೀನ ಅರಕೇರಿ, ತಾಪಂ ಅಧ್ಯಕ್ಷ ಅಣ್ಣಪ್ಪ ಬಿದರಕೋಟಿ, ಗ್ರಾಪಂ ಅಧ್ಯಕ್ಷೆ ಸುವರ್ಣಾ ಶಿವೂರ, ಉಪ ವಿಭಾಗಾ  ಧಿಕಾರಿ ರಾಹುಲ್‌ ಸಿಂಧೆ, ಕಾಸುಗೌಡ ಬಿರಾದಾರ, ಅಣ್ಣಪ್ಪ ಖೈನೂರ, ಶ್ರೀಶೈಲ ಪೂಜಾರಿ, ಸಾಂಬಾಜಿರಾವ್‌ ಮಿಸಾಳೆ, ಡಿವೈಎಸ್‌ಪಿ ಶ್ರೀಧರ ದಡ್ಡಿ, ಅಶೋಕಗೌಡ ಬಿರಾದಾರ, ಗಣಪತಿ ಬಾಣಿಕೋಲ, ಮಲ್ಲಪ್ಪ ಪತಂಗೆ, ಶಿವಾನಂದ ಬಿರಾದಾರ,ರಮೇಶ ರಾಠೊಡ, ಬಸು ಸಾಹುಕಾರ, ಇಲಿಯಾಸ್‌ ಬೋರಾಮಣಿ, ವಿದ್ಯಾಧರ ಜೇವೂರ, ಗೋವಿಂದ ರಾಠೊಡ, ಪ್ರಭಾಕರ ಎಚ್‌. ಚಿಣಿ, ಜಗದೀಶ ರಾಠೊಡ ಇದ್ದರು.

ಟಾಪ್ ನ್ಯೂಸ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Leopard spotted in Vijayapura city: CCTV footage captured

Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

arrested

Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ

Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು

Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.