ರಾಹುಲ್ ಅಸ್ಸಾಂಗೆ ಭೇಟಿ ನೀಡೋದೇ ಪಿಕ್ನಿಕ್‌ಗಾಗಿ :ಕಾಂಗ್ರೆಸ್ ವಿರುದ್ಧ BJP ವಾಗ್ಧಾಳಿ
ಚಹಾದ ನಾಡಲ್ಲಿ ರಾಜಕೀಯ ಹಬೆ
Team Udayavani, Mar 22, 2021, 11:10 PM IST
ದಿಸ್ಪುರ: “ಚಹಾದ ನಾಡು’ ಅಸ್ಸಾಂನಲ್ಲಿ ರಾಜಕೀಯ ಹಬೆ ಮುಗಿಲು ಮುಟ್ಟಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಪ್ರಚಾರದ ಮರುದಿನವೇ ಬಿಜೆಪಿಯ ಧುರೀಣರಾದ ಅಮಿತ್ ಶಾ, ಜೆ.ಪಿ. ನಡ್ಡಾ ಸೋಮವಾರ ಅಸ್ಸಾಂನ ಉದ್ದಗಲ ರ‍್ಯಾಲಿ ನಡೆಸಿ, ಕಾಂಗ್ರೆಸ್ ವಿರುದ್ಧ ಪುಂಖಾನುಪುಂಖ ಆರೋಪಗಳನ್ನು ಸಿಡಿಸಿದರು.
ಉದಲ್ಗುರಿ, ಜೊನಾಯ್ ಸೇರಿದಂತೆ ವಿವಿಧೆಡೆ ರ್ಯಾಲಿ ನಡೆಸಿದ ಗೃಹ ಸಚಿವ ಅಮಿತ್ ಶಾ, “ಇತ್ತೀಚೆಗೆ ರಾಹುಲ್ ಬಾಬಾ ಅಸ್ಸಾಂ ಭೇಟಿ ನೀಡಿದ್ದರು. ರಾಹುಲ್ ಅಸ್ಸಾಂಗೆ ಭೇಟಿ ನೀಡೋದೇ ಪಿಕ್ನಿಕ್‌ಗಾಗಿ. ಕಾರ್ಮಿಕರ ಜೊತೆ ಅವರು ಮಾತಾಡೋವಾಗ ನಂಗೆ ನಗು ಬರ್ತಿತ್ತು. ಏಕೆಂದರೆ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವತ್ತೂ ಚಹಾ ತೋಟದ ಕಾರ್ಮಿಕರನ್ನು ಮಾತಾಡಿಸಿರಲಿಲ್ಲ’ ಎಂದು ಟೀಕಿಸಿದರು.
ಅದು ಹಿಂಸೆ ಯುಗ!: ಅಸ್ಸಾಂನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಕಾಲಘಟ್ಟ ಅದು ಹಿಂಸೆ ಯುಗ. ಅಂದು 5 ಸಾವಿರಕ್ಕೂ ಅಧಿಕ ಮಂದಿ ಉಗ್ರರಿಂದ ಹತರಾಗಿದ್ದರು. ಉಗ್ರರಿಗೆ ಕುಮ್ಮಕ್ಕು ನೀಡಿದ್ದ ಬೊಡೊ ಪೀಪಲ್ಸ್ ಫ್ರಂಟ್ ಮತ್ತು ಎಐಯುಡಿಎಫ್ ಜತೆಗೂಡಿಯೇ ಮತ್ತೆ ಕಾಂಗ್ರೆಸ್ ಮೈತ್ರಿ ಕಟ್ಟಿಕೊಂಡಿದೆ. ಇಂಥವರಿಂದ ಯಾವ ರೀತಿಯ ಶಾಂತಿ ನಿರೀಕ್ಷಿಸುವುದು ಸಾಧ್ಯ ಎಂದು ಪ್ರಶ್ನಿಸಿದರು.
ಅಸ್ಸಾಂಗೆ ನಾವು ಕೊಟ್ಟ ಎಲ್ಲ ಆಶ್ವಾಸನೆಗಳನ್ನೂ ಈಡೇರಿಸಿದ್ದೇವೆ. ಬೊಡೊ ಅಕಾರ್ಡ್ ಸೇರಿದಂತೆ ಎಲ್ಲವನ್ನೂ ಕೇವಲ ಎರಡೂವರೆ ವರ್ಷಗಳಲ್ಲಿ ಪೂರೈಸಿದ್ದೇವೆ. ಬೊಡೊ ಪ್ರದೇಶಗಳಲ್ಲಿ ನಮಗೆ ಶಾಂತಿ ಬೇಕೇ ವಿನಾಃ ಕಾಂಗ್ರೆಸ್ ಬಯಸುವ ಅಶಾಂತಿ ಬೇಕಿಲ್ಲ ಎಂದು ಖಡಕ್ಕಾಗಿ ಹೇಳಿದರು.
ಆನೆಯಂತೆ ಕಾಂಗ್ರೆಸ್‌ಗೆ 2 ಹಲ್ಲು: ನಡ್ಡಾ
ಅಸ್ಸಾಂನಲ್ಲಿನ ಕಾಂಗ್ರೆಸ್ ಮೈತ್ರಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಆನೆಯ ಎರಡು ಹಲ್ಲುಗಳಿಗೆ ಹೋಲಿಸಿದ್ದಾರೆ. “ಆನೆ ಹೇಗೆ ಒಂದು ಪ್ರದರ್ಶಿಸಲು, ಮತ್ತೂಂದು ಜಗಿಯಲು ಹಲ್ಲುಗಳನ್ನು ಇಟ್ಟುಕೊಂಡಿದೆಯೋ, ಹಾಗೆ ಕಾಂಗ್ರೆಸ್ ಕೂಡ’ ಎಂದು ಆರೋಪಿಸಿದ್ದಾರೆ.
“ಕೇರಳದಲ್ಲಿ ಮುಸ್ಲಿಂ ಲೀಗ್, ಸಿಪಿಐ (ಎಂ) ವಿರುದ್ಧ ಸ್ಪರ್ಧೆ… ಆದರೆ, ಪ. ಬಂಗಾಳ- ಅಸ್ಸಾಂನಲ್ಲಿ ಅವುಗಳೊಂದಿಗೆ ಮೈತ್ರಿ. ರಾಜಕೀಯ ಅವಕಾಶವಾದಿಗಳಿಂದ ಮಾತ್ರ ಇಂಥ ಮೈತ್ರಿ ಸಾಧ್ಯ’ ಎಂದು ಟಿಂಗ್ ಖಾಂಗ್ ಕ್ಷೇತ್ರದಲ್ಲಿನ ಪ್ರಚಾರದಲ್ಲಿ ಟೀಕಿಸಿದರು.
“ನಿಮಗೆ ಕಗ್ಗತ್ತಲು ಬೇಕಿದ್ದರೆ ಕಾಂಗ್ರೆಸ್ ಜತೆಗೆ ಹೋಗಿ. ಅಭಿವೃದ್ಧಿ ಬೇಕಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೈಜೋಡಿಸಿ’ ಎಂದು ಕರೆಕೊಟ್ಟರು.
ಚಹಾದ ಎಲೆಗಳನ್ನು ಕೊಯ್ಯೋದು ಏಪ್ರಿಲ್ ಬಳಿಕ. ಆದರೆ, ಪ್ರಿಯಾಂಕಾ ವಾದ್ರಾ ಕೇವಲ ಫೋಟೋ ಶೂಟ್‌ಗಾಗಿ ಎಲೆ ಕೊಯ್ದಿದ್ದಾರೆ. ಇದು ಅಸ್ಸಾಮಿಗರ ಕಣ್ ಕಟ್ಟುವ ಪ್ರಯತ್ನ.
– ಜೆ.ಪಿ. ನಡ್ಡಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.