ಕಾಸು ಪಡೆಯುವ ಸುಂಕದ ಕಟ್ಟೆಗೂ ಗತಿಗೇಡು ! ರಾ.ಹೆ.75ರ ಬ್ರಹ್ಮರಕೂಟ್ಲು ಟೋಲ್ ಫ್ಲಾಜಾ
Team Udayavani, Mar 23, 2021, 5:10 AM IST
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ರಸ್ತೆಗಳ ಸ್ಥಿತಿ ಒಂದು ರೀತಿಯಾದರೆ, ಟೋಲ್ ಪ್ಲಾಜಾದ ಕತೆ ಇನ್ನೊಂದು ರೀತಿ. ರಸ್ತೆಯ ಅವ್ಯವಸ್ಥೆ ಕುರಿತು ಬೇಸತ್ತುಕೊಂಡ ಬಳಿಕ ಟೋಲ್ ಪಾವತಿಗೆ ಕಾಯುವುದೂ ಬೇಸರದ ಸಂಗತಿಯೇ ಆಗಿದೆ. ಇರುವ ಎರಡೇ ಎರಡು ಬೂತ್‌ಗಳಲ್ಲಿ ದಿನದ ಹೆಚ್ಚಿನ ಸಮಯ ಟೋಲ್ ಪಾವತಿಗಾಗಿ ಕಾಯುತ್ತಿರುವ ವಾಹನಗಳ ಉದ್ದನೆಯ ಸಾಲು!
ಬಿ.ಸಿ.ರೋಡು ಬಳಿಯ ಬ್ರಹ್ಮರಕೂಟ್ಲು ಟೋಲ್ ಫ್ಲಾಝಾವನ್ನು ವೀಕ್ಷಿಸಬೇಕು. ಉಳಿದೆಡೆ ಟೋಲ್ ಸಂಗ್ರಹಕ್ಕೆ ಅಚ್ಚುಕಟ್ಟಾದ ವ್ಯವಸ್ಥೆಗಳಿದ್ದರೆ ಇಲ್ಲಿ ಅವ್ಯವಸ್ಥೆಯಲ್ಲೇ ಟೋಲ್ ಸಂಗ್ರಹ ನಡೆಯುತ್ತಿದೆ.
ಒಂದು ಟ್ರಸ್ ಮಾದರಿಯ ಮೇಲ್ಛಾವಣಿಯನ್ನು ನಿರ್ಮಿಸಿ ಎರಡು ಬೂತ್‌ಗಳನ್ನಿಟ್ಟು ಟೋಲ್ ಶುಲ್ಕ ಸಂಗ್ರಹ ಮಾಡಲಾಗುತ್ತಿದೆ. ಇಲ್ಲಿ ಸರಕಾರಕ್ಕೆ ದುಡ್ಡು ಮಾಡುವ ಯೋಚನೆ ಇದೆಯೇ ವಿನಾ ಜನರಿಗೆ ಸೇವೆ ನೀಡಬೇಕೆಂಬ ಎಳ್ಳಷ್ಟು ಇಚ್ಛೆಯೂ ಇಲ್ಲ ಎಂಬುದು ಅವ್ಯವಸ್ಥೆಯಿಂದ ಸ್ಪಷ್ಟವಾಗಿ ತಿಳಿಯುತ್ತದೆ.
ಸರಕಾರವೇ ರೂಪಿಸಿದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಇಲ್ಲಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. “ಇಲ್ಲ ಎಲ್ಲ ವ್ಯವಸ್ಥೆ ಸರಿಯಾಗಿಯೇ ಇದೆ’ ಎಂದು ಯಾವೊಬ್ಬ ಅಧಿಕಾರಿಯೂ ಹೇಳುತ್ತಿಲ್ಲ. ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.
ಉಳಿದ ಟೋಲ್ ಫ್ಲಾಜಾಗಳ ವ್ಯವಸ್ಥೆ ಗಳನ್ನು ಕಾಣುವಾಗ ಶುಲ್ಕ ಪಾವತಿಸಬೇಕು ಅನ್ನಿಸುತ್ತದೆ. ಆದರೆ ಬ್ರಹ್ಮರಕೂಟ್ಲುನಲ್ಲಿ ಅಂತಹ ಯಾವುದೇ ವ್ಯವಸ್ಥೆಗಳಿಲ್ಲ. ದಶಕಗಳ ಹಿಂದೆ ಅನುಷ್ಠಾನಗೊಳಿಸಿದ ವ್ಯವಸ್ಥೆಗಳನ್ನೇ ಮುಂದುವರಿಸಲಾಗಿದೆ. ಬೂತ್‌ಗಳಿಗೆ ಟರ್ಪಾಲು ಹಾಕಿ ಸಿಬಂದಿ ರಕ್ಷಣೆ ಪಡೆದುಕೊಳ್ಳಬೇಕಾದ ವ್ಯವಸ್ಥೆ ಇದೆ. ಇಲ್ಲಿನ ಮೇಲ್ಛಾವಣಿಯ ಕಬ್ಬಿಣಗಳು ತುಕ್ಕು ಹಿಡಿದು ಯಾವಾಗ ಮೇಲೆ ಬೀಳುತ್ತದೆ ಎಂದು ಹೇಳುವಂತಿಲ್ಲ!
ಸರತಿ ನಿಲ್ಲವುದು ತಪ್ಪಲಿಲ್ಲ
ಟೋಲ್‌ಗಳಲ್ಲಿ ಜನರನ್ನು ಕಾಯಿಸಬಾರದು ಎಂದು ಸರಕಾರವು ಹಲವು ವ್ಯವಸ್ಥೆಗಳನ್ನು ಟೋಲ್ ಫ್ಲಾಜಾಗಳಲ್ಲಿ ಅನುಷ್ಠಾನಗೊಳಿಸಿದ್ದು, ಇತ್ತೀಚೆಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಿತ್ತು. ಆದರೆ ಬ್ರಹ್ಮರಕೂಟ್ಲು ಟೋಲ್ ಫ್ಲಾಜಾದಲ್ಲಿ ಫಾಸ್ಟ್ಯಾಗ್ ಬರಲಿ, ಇನ್ನೊಂದು ವ್ಯವಸ್ಥೆಯೇ ಬರಲಿ; ವಾಹನಗಳು ಸರತಿಯಲ್ಲಿ ನಿಂತು ಕಾಯುವುದು ಮಾತ್ರ ತಪ್ಪಿಲ್ಲ.
ಟೋಲ್ ಸಂಗ್ರಹಕ್ಕೆ ಎರಡೇ ಬೂತ್‌ಗಳಿದ್ದು, ಹೀಗಾಗಿ ಕಾಯುವುದು ಅನಿವಾರ್ಯವಾಗಿದೆ. ಬೆಳಗ್ಗಿನಿಂದ ಹೊತ್ತು ಬಿ.ಸಿ. ರೋಡು ಭಾಗದಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳ ಸರತಿ ಕಂಡುಬಂದರೆ, ಸಂಜೆಯ ಹೊತ್ತು ಮಂಗಳೂರು ಕಡೆಯಿಂದ ಬಿ.ಸಿ. ರೋಡು ಭಾಗಕ್ಕೆ ಬರುವ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ.
ಬ್ರಹ್ಮರಕೂಟ್ಲುನಲ್ಲಿ 3ನೇ ಬೂತ್‌ಗಾಗಿ ಕಳೆದ ಹಲವು ವರ್ಷಗಳಿಂದ ಒತ್ತಾಯ ಕೇಳಿಬರುತ್ತಿದ್ದರೂ ಇನ್ನೂ ಅದು ಅನುಷ್ಠಾನಗೊಂಡಿಲ್ಲ. 3ನೇ ಬೂತಿಗೆ ಹೆದ್ದಾರಿ ವಿಸ್ತ ರಣೆಯ ಕಾಮಗಾರಿ ಆಮೆಗತಿಯಲ್ಲಿದೆ. ಹೀಗಾಗಿ ಅದು ಸದ್ಯಕ್ಕೆ ಅನುಷ್ಠಾನ ಗೊಳ್ಳುವ ಲಕ್ಷಣ ಗಳು ಕಾಣುತ್ತಿಲ್ಲ. ಫಾಸ್ಟಾಗ್ ಬರುವುದಕ್ಕೆ ಮುನ್ನ ಟೋಲ್ ಸಿಬಂದಿಯ ಜತೆಗೆ ಒಳ ಹೊಂದಾಣಿಕೆಯಿಂದ ಕೆಲವು ನಿತ್ಯ ಸಂಚಾರಿ ವಾಹನಗಳು ಹತ್ತೋ ಇಪ್ಪತ್ತೋ ನೀಡಿ ಮುಂದಕ್ಕೆ ಸಾಗುವ ಕ್ರಮವೂ ಇಲ್ಲಿತ್ತು!
ಶೌಚಾಲಯ ವ್ಯವಸ್ಥೆ ಇಲ್ಲ
ಪ್ರತಿ ಟೋಲ್ ಫ್ಲಾಜಾಗಳಲ್ಲೂ ಸಾರ್ವಜನಿಕರ ಉಪಯೋಗಕ್ಕಾಗಿ ಶೌಚಾಲಯ ಇರುವುದು ನಿಮಯ. ಆದರೆ ಈ ಟೋಲಿಗೆ ಅಂತಹ ಯಾವುದೇ ನಿಯಮ ಅನ್ವಯಿ ಸುವುದಿಲ್ಲ. ಆರಂಭದಲ್ಲಿ ಮಾಡಿದ ಶೌಚಾಲಯ ಅವ್ಯವಸ್ಥೆ ಯಿಂದ ಕೂಡಿದೆ. ಪ್ರತಿವರ್ಷ ಟೋಲ್‌ನಲ್ಲಿ ಕೋಟ್ಯಂತರ ರೂ.ಸಂದಾಯ ವಾಗುತ್ತಿದೆಯೇ ವಿನಾ ಅದರಿಂದ ಕನಿಷ್ಠ ಮೊತ್ತವೂ ನಿರ್ವಹಣೆಗೆ ವಿನಿಯೋಗವಾಗದೇ ಇರುವುದು ವಿಪ ರ್ಯಾಸವೇ ಸರಿ.
ಕಾಳಗಕ್ಕೆ ವೇದಿಕೆಯಾಗಿತ್ತು !
ಬ್ರಹ್ಮರಕೂಟ್ಲು ಟೋಲ್ ಫ್ಲಾಜಾವು ಒಂದು ಕಾಲದಲ್ಲಿ ಹಲವು ಕಾಳಗಕ್ಕೆ ವೇದಿಕೆಯಾಗಿತ್ತು. ಅಧಿಕಾರಿಗಳ ಅವ್ಯವಸ್ಥೆಯಿಂದ ಬೂತ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಅಮಾಯಕ ಸಿಬಂದಿ ಪೆಟ್ಟು ತಿಂದ ಘಟನೆಗಳೂ ನಡೆದಿದ್ದವು. ಈಗಲೂ ಸಣ್ಣ ಪುಟ್ಟ ಗಲಾಟೆಗಳು ನಡೆಯುತ್ತಲೇ ಇರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.