ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್ : ಮೂರು ಚಿನ್ನ; ಭಾರತಕ್ಕೆ ಗೋಲ್ಡನ್ ಡೇ
Team Udayavani, Mar 22, 2021, 11:55 PM IST
ಹೊಸದಿಲ್ಲಿ: ಐಎಸ್‌ಎಸ್‌ಎಫ್ ವರ್ಲ್ಡ್ ಕಪ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಆತಿಥೇಯ ಭಾರತದ “ಯುತ್ ಬ್ರಿಗೇಡ್’ ಸಾಹಸ ಮುಂದುವರಿದಿದೆ. ಸೋಮವಾರ ಭಾರತ ತ್ರಿವಳಿ ಬಂಗಾರಗಳಿಂದ ಸಿಂಗಾರಗೊಂಡಿತು. ಇದರೊಂದಿಗೆ ಕೂಟದಲ್ಲಿ ಭಾರತದ ಚಿನ್ನದ ಬೇಟೆ ಆರಕ್ಕೆ ಏರಿದೆ. ಒಟ್ಟು ಪದಕಗಳ ಸಂಖ್ಯೆ 14ಕ್ಕೆ ತಲುಪಿದ್ದು, ಅಗ್ರಸ್ಥಾನ ಕಾಯ್ದುಕೊಂಡಿದೆ. ಅಮೆರಿಕ ದ್ವಿತೀಯ ಸ್ಥಾನದಲ್ಲಿದೆ (3 ಚಿನ್ನ, 2 ಬೆಳ್ಳಿ, 1 ಕಂಚು).
ಮೊದಲ ಎರಡು ಸ್ವರ್ಣ ಪದಕಗಳು ಮಿಶ್ರ ತಂಡ ವಿಭಾಗದಲ್ಲಿ ಒಲಿದವು. ಮೊದಲು 10 ಮೀ. ಏರ್ ರೈಫಲ್ ವಿಭಾಗದಲ್ಲಿ ಇಳವೆನಿಲ್ ವಲರಿವನ್-ದಿವ್ಯಾಂಶ್ ಪನ್ವಾರ್, ಬಳಿಕ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್-ಸೌರಭ್ ಚೌಧರಿ ಚಿನ್ನಕ್ಕೆ ಗುರಿ ಇರಿಸಿದರು.
10 ಮೀ. ಏರ್ ಪಿಸ್ತೂಲ್ ವಿಭಾಗದ ಕಂಚಿನ ಪದಕ ಕೂಡ ಭಾರತಕ್ಕೆ ಒಲಿಯಿತು. ಇದನ್ನು ಗೆದ್ದವರು ಯಶಸ್ವಿನಿ ಸಿಂಗ್ ದೇಸ್ವಾಲ್-ಅಭಿಷೇಕ್ ವರ್ಮ ಜೋಡಿ.
ದಿನದ ಕೊನೆಯಲ್ಲಿ ಪುರುಷರ ಸ್ಕೀಟ್ ತಂಡವೂ ಬಂಗಾರ ಜಯಿಸಿತು. ಮೈರಾಜ್ ಖಾನ್, ಅಂಗದ್ ಬಾಜ್ವಾ ಮತ್ತು ಗುರುಜ್ಯೋತ್ ಖಂಗುರ ಅವರನ್ನೊಳಗೊಂಡ ಭಾರತ ತಂಡ ಕತಾರ್ ವಿರುದ್ಧ 6-2 ಮೇಲುಗೈ ಸಾಧಿಸಿತು.
ಇದನ್ನೂ ಓದಿ :ರಾಹುಲ್ ಅಸ್ಸಾಂಗೆ ಭೇಟಿ ನೀಡೋದೇ ಪಿಕ್ನಿಕ್‌ಗಾಗಿ :ಕಾಂಗ್ರೆಸ್ ವಿರುದ್ಧ BJP ವಾಗ್ಧಾಳಿ
ಇದಕ್ಕೂ ಮೊದಲು ಭಾರತದ ವನಿತಾ ಸ್ಕೀಟ್ ತಂಡ ಬೆಳ್ಳಿ ಜಯಿಸಿತ್ತು. ಪರ್ನಿನಾಜ್ ಧಾಲೀವಾಲ್, ಕಾರ್ತಿಕಿ ಶಕ್ತಾವತ್ ಮತ್ತು ಗಾನೆ ಮತ್ ಶೆಖೋನ್ ಈ ತಂಡದ ಸದಸ್ಯ ರಾಗಿದ್ದರು. ಇವರು ಕಜಾಕ್‌ಸ್ಥಾನ್ ವಿರುದ್ಧ 4-6 ಅಂತರದ ಹಿನ್ನಡೆ ಅನುಭವಿಸಿದರು.
ಮನು ಜೋಡಿಗೆ 5ನೇ ಚಿನ್ನ
19 ವರ್ಷದ ಮನು ಭಾಕರ್ ಹಾಗೂ 18 ವರ್ಷದ ಸೌರಭ್ ಚೌಧರಿ ಇರಾನಿನ ಗೋಲೌ°ಶ್ ಸೆಬಾತೋಲ್ಲಾಹಿ-ಜಾವೇದ್ ಫರೂ ವಿರುದ್ಧ 16-12 ಅಂತರದ ಮೇಲುಗೈ ಸಾಧಿಸಿತು. ಇದು ಮನು-ಸೌರಭ್ ಜೋಡಿಗೆ ಒಲಿದ 5ನೇ ಬಂಗಾರ.
ಇದೇ ಸ್ಪರ್ಧೆಯಲ್ಲಿ ಯಶಸ್ವಿನಿ ಸಿಂಗ್ ದೇಸ್ವಾಲ್-ಅಭಿಷೇಕ್ ವರ್ಮ 17-13 ಅಂತರದಿಂದ ಟರ್ಕಿಯ ಸೆವ್ವಲ್ ಇಲ್ಯಾದಾ ತರಾನ್-ಇಸ್ಮಾಯಿಲ್ ಕೆಲೆಸ್ ಅವರನ್ನು ಪರಾಭವಗೊಳಿಸಿ 3ನೇ ಸ್ಥಾನ ಪಡೆದರು.
ಇದಕ್ಕೂ ಮೊದಲು ನಡೆದ 10 ಮೀ. ಏರ್ ರೈಫಲ್ ಮಿಶ್ರ ವಿಭಾಗದ ಸ್ಪರ್ಧೆಯಲ್ಲಿ 21 ವರ್ಷದ ಇಳವೆನಿಲ್-18 ವರ್ಷದ ದಿವ್ಯಾಂಶ್ ಪನ್ವಾರ್ ಸೇರಿಕೊಂಡು ಹಂಗೇರಿಯ ವಿಶ್ವದ ನಂ.1 ಖ್ಯಾತಿಯ ಇಸ್ತವಾನ್ ಪೆನಿ-ಎಸ್ತರ್ ಡೆನೆಸ್ ಜೋಡಿಯನ್ನು 16-10 ಅಂತರದಿಂದ ಪರಾಭವಗೊಳಿಸಿತು.
ಸ್ಪರ್ಧೆಯಲ್ಲಿದ್ಧ ಭಾರತದ ಮತ್ತೂಂದು ಜೋಡಿ ಅಂಜುಮ್ ಮೌದ್ಗಿಲ್- ಅರ್ಜುನ್ ಬಬುಟ ಫೈನಲ್ ಏರಲು ವಿಫಲವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
MUST WATCH
ಹೊಸ ಸೇರ್ಪಡೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Lawyer Jagadish: ಮತ್ತೆ ಬಿಗ್ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್ ಜಗದೀಶ್ ಎಂಟ್ರಿ..!
Bengaluru: 54 ಎಂಜಿನಿಯರಿಂಗ್ ಸೀಟ್ ಬ್ಲಾಕ್: ಕೆಇಎ ಶಂಕೆ
Hospitalised: ಚಂದ್ರಬಾಬು ನಾಯ್ಡು ಅವರ ಸಹೋದರನ ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.