ಬಿಹಾರ: ಪ್ರವಾಸಿಗರು ಹಾಗೂ ಸಾಹಸಿಗರಿಗಾಗಿ ತಯಾರಾದ ನೇಚರ್ ಸಫಾರಿ. ಏನೇನಿದೆ?
Team Udayavani, Mar 23, 2021, 12:35 PM IST
ನವದೆಹಲಿ: ಪ್ರವಾಸಿಗರಿಗಾಗಿ ಬರೋಬ್ಬರಿ 19 ಕೋಟಿ ವೆಚ್ಚದಲ್ಲಿ ರೂಪಿಸಲಾಗಿರುವ ದೇಶದ ಮೊದಲ ಅತ್ಯಾಧುನಿಕ ನೇಚರ್ ಸಫಾರಿಯನ್ನು ಬಿಹಾರದ ನಳಂದಾ ಜಿಲ್ಲೆಯಲ್ಲಿರುವ ರಾಜ್ ಗೀರ್ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಾರ್ಚ್ 26 ರಂದು ಉದ್ಘಾಟನೆಗೊಳಿಸುವ ಮೂಲಕ ಪ್ರವಾಸಿಗರ ಬಳಕೆಗೆ ಮುಕ್ತವಾಗಿಸಲಿದ್ದಾರೆ.
ಈ ಕುರಿತಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅಧಿಕಾರಿಗಳು ಈ ನೇಚರ್ ಸಫಾರಿಯನ್ನು ಅರಣ್ಯ ಇಲಾಖೆಯು ಅಭಿವೃದ್ಧಿ ಪಡಿಸಿದ್ದು, ಇದು ಬರೋಬ್ಬರಿ 500 ಹೆಕ್ಟೇರ್ ವಿಸ್ತೀರ್ಣವನ್ನು ಒಳಗೊಂಡಿದೆ. ಈ ನೇಚರ್ ಸಫಾರಿಯಲ್ಲಿ ಪ್ರವಾಸಿಗರು ಗ್ಲಾಸ್ ಸ್ಕೈ ವಾಕ್ , ಸಸ್ಪೆನ್ಷನ್ ಬ್ರಿಡ್ಜ್, ಅಡ್ವೆಂಚರ್ ಪಾರ್ಕ್ ಹಾಗೂ ವಿವಿಧ ಬಗೆಯ ಚಿಟ್ಟೆಗಳನ್ನು ಒಳಗೊಂಡಿರುವ ಪಾರ್ಕ್ ನ ಸುಂದರ ಅನುಭವವನ್ನು ಸವಿಯಬಹುದಾಗಿದೆ ಎಂದಿದ್ದಾರೆ.
ಇದಿಷ್ಟೇ ಅಲ್ಲದೆ ಈ ನೇಚರ್ ಸಫಾರಿಯಲ್ಲಿ ಬಿಲ್ಲುಗಾರಿಕೆಯ ಅನುಭವವನ್ನು ಸವಿಯುವವರಿಗೂ ಅವಕಾಶಗಳಿದ್ದು, ಜೊತೆ ಜೊತೆಗೆ ರಾಕ್ ಕ್ಲೈಬಿಂಗ್ ಗೋಡೆಗಳು ಹಾಗೂ ಕುಸ್ತಿ ವಲಯಗಳನ್ನು ಒಳಗೊಂಡಂತೆ ಇನ್ನೂ ಹಲವಾರು ವೈವಿಧ್ಯಮಯ ಸೌಲಭ್ಯಗಳನ್ನು ಕಾಣಬಹುದಾಗಿದೆ.
ಇದನ್ನೂ ಓದಿ:ನೂರಾರು ಕರುಗಳ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ರಸ್ತೆಯಲ್ಲಿ ಎಸೆದ ಕಿಡಿಗೇಡಿಗಳು!
ಮುಖ್ಯಮಂತ್ರಿಗಳು ನೇಚರ್ ಸಫಾರಿ ಉದ್ಘಾಟನೆ ಜೊತೆ ಜೊತೆಯಲ್ಲಿಯೇ ರಾಜ್ ಗೀರ್ ನಲ್ಲಿರುವ ರತ್ನಗಿರಿ ಬೆಟ್ಟದಲ್ಲಿ ರೂಪಿಸಲಾಗಿರುವ ಕ್ಯಾಬಿನ್ ಕಾರ್ ರೋಪ್ ವೇ ಗೂ ಕೂಡಾ ಚಾಲನೆ ನೀಡುತ್ತಿದ್ದು, ಈ ರೋಪ್ ವೇ ನಲ್ಲಿ ಒಟ್ಟು ಎಂಟು ಆಸನಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರವಾಸಿಗರು ಈ ವ್ಯವಸ್ಯೆಯ ಮೂಲಕ ರಾಜ್ ಗೀರ್ ನ ರತ್ನಾಗಿರಿ ಬೆಟ್ಟದ ಮೇಲಿರುವ ವಿಶ್ವ ಶಾಂತಿ ಸ್ತೂಪಕ್ಕೆ ಪ್ರಯಾಣ ಬೆಳೆಸಲು ಅನುಕೂಲವಾಗಲಿದೆ ಎಂದು ವರದಿ ತಿಳಿಸಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಹಿರಿಯ ಅರಣ್ಯ ಅಧಿಕಾರಿ ಗೋಪಾಲ್ ಸಿಂಗ್ , ಗ್ಲಾಸ್ ಸ್ಕೈ ವಾಕ್ ಸೇರಿದಂತೆ ಹಲವು ವಿಭಿನ್ನ ಸೌಲಭ್ಯಗಳನ್ನು ಕಲ್ಪಿಸಿರುವ ಭಾರತದ ಮೊದಲ ಸಫಾರಿ ಇದಾಗಿದ್ದು, ಪ್ರವಾಸಿಗರನ್ನು ಒಳಗೊಂಡಂತೆ ಸಾಹಸಿಗರು ಇಲ್ಲಿ ಅತ್ಯಂತ ಸುಂದರ ಅನುಭವಗಳನ್ನು ಪಡೆದುಕೊಳ್ಳಬಹುದಾಗಿದೆ. ಮುಂಬರುವ ಹೋಳಿ ಹಬ್ಬಕ್ಕಿಂತ ಮೊದಲು ಇದು ಜನರ ಬಳಕೆಗೆ ಲಭ್ಯವಾಗಲಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.