ರೈತರಿಗಿನ್ನು ಸಿಗಲಿದೆ ಸ್ವಾಭಿಮಾನಿ ಕಾರ್ಡ್‌

| 2.18 ಲಕ್ಷ ರೈತರಲ್ಲಿ 18 ಸಾವಿರ ರೈತರಿಗೆ ವಿತರಣೆ

Team Udayavani, Mar 23, 2021, 12:53 PM IST

22kpl-11

ಕೊಪ್ಪಳ: ಗಣ್ಯ ವ್ಯಕ್ತಿಗಳಂತೆ ರೈತರು ಸಹ ಸ್ಮಾರ್ಟ್‌ ಕಾರ್ಡ್‌ ಹೊಂದಿರಬೇಕು. ಸರ್ಕಾರದ ಪ್ರತಿಯೊಂದು ಸೌಲಭ್ಯವೂ ಅವರಿಗೆ ನೇರವಾಗಿ ಸಿಗುವಂತಾಗಬೇಕೆಂಬ ಸದುದ್ದೇಶದಿಂದ ರಾಜ್ಯಸರ್ಕಾರವು ರೈತರಿಗಾಗಿ “ಸ್ವಾಭಿಮಾನಿ ಕಾರ್ಡ್‌’ ಯೋಜನೆ ಜಾರಿಗೊಳಿಸಿ ಜಿಲ್ಲೆಯಲ್ಲಿಯೇ ಮಾದರಿಯನ್ನಾಗಿ ಮಾಡಿದೆ. ಆದರೆ ಇಲ್ಲಿಯವರೆಗೂ 1.41 ಲಕ್ಷ ರೈತರ ಪೈಕಿ, 18 ಸಾವಿರ ರೈತರಿಗೆ ಮಾತ್ರಕಾರ್ಡ್‌ ವಿತರಿಸಲಾಗಿದೆ. ಇನ್ನೂ 1.23 ಲಕ್ಷ ರೈತರಿಗೆಕಾರ್ಡ್‌ ತಲುಪಿಸುವ ಕೆಲಸ ನಡೆಯಬೇಕಿದೆ.

ಆಧುನಿಕ ಕಾಲಘಟ್ಟದಲ್ಲಿ ಎಲ್ಲವೂ ಡಿಜಿಟಲ್‌ ಆಗಿ ರೂಪಗೊಳ್ಳುತ್ತಿದೆ. ಕೃಷಿ ಇಲಾಖೆಯೂ ಇದಕ್ಕೆಹೊರತಾಗಿಲ್ಲ. ಸಂಘ- ಸಂಸ್ಥೆಗಳು, ರಾಜಕೀಯಜನಪ್ರತಿನಿ ಧಿಗಳು, ನೌಕರ ವರ್ಗದವರು ಹೇಗೆತಮ್ಮ ಕೆಲಸದ ಗುರುತಿನ ಚೀಟಿ ಹೊಂದಿರುತ್ತಾರೋಅದೇ ಮಾದರಿಯಲ್ಲಿ ರೈತರೂ ತಮ್ಮದೇ ಸ್ಮಾರ್ಟ್‌ಕಾರ್ಡ್‌ ಹೊಂದಬೇಕು. ನಾನೊಬ್ಬ ಹೆಮ್ಮೆಯ ರೈತ, ಸ್ವಾಭಿಮಾನಿ ರೈತ ಎಂದು ಹೇಳಿಕೊಳ್ಳಲು ಅವರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಿಸಲು ಸರ್ಕಾರ ಯೋಜನೆ ಜಾರಿ ತಂದಿದೆ. ಕೃಷಿ ಸಚಿವ ಬಿ.ಸಿ.ಪಾಟೀಲ ಅವರುಕೊಪ್ಪಳ ಜಿಲ್ಲಾ ಉಸ್ತುವಾರಿಯಾಗಿದ್ದರಿಂದ ಈ ಜಿಲ್ಲೆಯಲ್ಲೇ ಎಲ್ಲ ರೈತರಿಗೂ ಸ್ವಾಭಿಮಾನಿ ಕಾರ್ಡ್‌ ವಿತರಿಸಲು ಮುಂದಾಗಿದ್ದಾರೆ.

ಫೋಟೋ ಮಿಸ್‌ಮ್ಯಾಚ್‌ : ರೈತರಿಗೆ ಸರ್ಕಾರದಸ್ವಾಭಿಮಾನಿ ರೈತರ ಕಾರ್ಡ್‌ ವಿತರಣೆಗೆ ರೈತರಫೋಟೋಗಳ ಮಿಸ್‌ಮ್ಯಾಚ್‌ನಿಂದ ತೊಂದರೆ ಎದುರಾಗುತ್ತಿದೆ. ಕೃಷಿ ಇಲಾಖೆಯು ಮೊದಲೆಲ್ಲಾ ಸರ್ಕಾರಿ ಸೌಲಭ್ಯಕ್ಕೆ ಕೇವಲ ಅವರಿಂದ ದಾಖಲೆ ಪಡೆದಿದೆ. ಫ್ರೊಟ್‌ ಐಡಿಯಲ್ಲೂ ದಾಖಲೆಗಳು ಮಾತ್ರ ಲಿಂಕ್‌ ಆಗಿದ್ದು, ಫೋಟೋಗಳು ಲಿಂಕ್‌ ಇಲ್ಲ. ಹಾಗಾಗಿ ಸ್ವಾಭಿಮಾನಿ ರೈತರ ಕಾರ್ಡ್‌ಗೆ ಫೋಟೋಅವಶ್ಯವಾಗಿ ಬೇಕಿದ್ದರಿಂದ ಕೆಲವುಕಡೆ ಫೋಟೋಗಳು ಮಿಸ್‌ಮ್ಯಾಚ್‌ ಆಗುತ್ತಿವೆ. ಹಾಗಾಗಿ ಕಾರ್ಡ್‌ ವಿತರಣೆಯಲ್ಲಿ ತೊಂದರೆಯಾಗುತ್ತಿದೆ.

18 ಸಾವಿರ ಕಾರ್ಡ್‌ ವಿತರಣೆ: ಜಿಲ್ಲೆಯಲ್ಲಿ ಇಲ್ಲಿವರೆಗೂ ಆಯಾ ರೈತ ಸಂಪರ್ಕ ಕೇಂದ್ರಗಳ ಮೂಲಕ 18,903 ರೈತರಿಗೆ ಸ್ವಾಭಿಮಾನಿ ಕಾರ್ಡ್‌ ವಿತರಿಸಲಾಗಿದೆ.ಈ ಪೈಕಿ ಕೊಪ್ಪಳ ತಾಲೂಕಿನಲ್ಲಿ 5502, ಕುಷ್ಟಗಿ ತಾಲೂಕಿನಲ್ಲಿ 4815, ಯಲಬುರ್ಗಾ ತಾಲೂಕಿನಲ್ಲಿ 5631, ಗಂಗಾವತಿ ತಾಲೂಕಿನಲ್ಲಿ 2955 ಸೇರಿ ಒಟ್ಟಾರೆ 18903 ರೈತರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಿಸಲಾಗಿದೆ. 1.23 ಕಾರ್ಡ್‌ ವಿತರಣೆ ಬಾಕಿ: ಕೃಷಿ ಇಲಾಖೆಯ ಲೆಕ್ಕಾಚಾರದ ಪ್ರಕಾರ ಜಿಲ್ಲೆಯಲ್ಲಿ ಒಟ್ಟಾರೆ 2.18 ಲಕ್ಷರೈತರಿದ್ದಾರೆ. ಆದರೆ ಇಲಾಖೆಯ ಪ್ರೂÂಟ್‌ ಸಾಫ್ಟವೇರ್‌ ನಲ್ಲಿ 1.41 ಲಕ್ಷ ರೈತರು ನೋಂದಣಿಯಾಗಿದ್ದಾರೆ.ಅವರು ಮೊದಲ ಹಂತದಲ್ಲಿ ಸ್ಮಾರ್ಟ್‌ ಕಾರ್ಡ್‌ಪಡೆಯಲು ಅರ್ಹರಿದ್ದಾರೆ. ಅವರಿಗೆ ಕಾರ್ಡ್‌ವಿತರಿಸಲು ಸರ್ಕಾರ ಯೋಜನೆ ರೂಪಿಸಿದ್ದು, ಈ ಪೈಕಿ18 ಸಾವಿರ ಕಾರ್ಡ್‌ ವಿತರಿಸಿದರೆ, ಇನ್ನೂ 1.23 ಲಕ್ಷರೈತರಿಗೆ ಕಾರ್ಡ್‌ ವಿತರಿಸುವುದು ಬಾಕಿಯಿದೆ.

ಎಲ್ಲ ಸೌಲಭ್ಯಕ್ಕೂ ಅರ್ಹ: ಇನ್ಮುಂದೆ ರೈತರು ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಕೃಷಿಸೇರಿ ಇತರೆ ಇಲಾಖೆಗೆ ನೂರೆಂಟು ದಾಖಲೆಗಳನ್ನುಹಿಡಿದು ಅಲೆದಾಡುವ ಅಗತ್ಯವಿಲ್ಲ. ಬದಲಾಗಿ ಈಸ್ಮಾರ್ಟ್‌ ಕಾರ್ಡ್‌ ಒಂದೇ ತೆಗೆದುಕೊಂಡು ಹೋಗಿಕೊಟ್ಟರೆ ಸಾಕು. ಕಾರ್ಡ್‌ನಲ್ಲಿಯೇ ರೈತರ ಪಹಣಿ,ಬ್ಯಾಂಕ್‌ ಖಾತೆ, ಯಾವ ಜಮೀನು, ದೊಡ್ಡ, ಸಣ್ಣಹಿಡುವಳಿದಾರ, ನೀರಾವರಿ, ಒಣ ಬೇಸಾಯಸೇರಿದಂತೆ ಪ್ರತಿ ಮಾಹಿತಿ ಅದರಲ್ಲಿ ಅಡಕವಾಗಿರಲಿದೆ.ಸರ್ಕಾರದ ಮುಂದಿನ ಪ್ರತಿ ಸೌಲಭ್ಯಕ್ಕೂ ಇದುಬೇಕಾಗಲಿದೆ. ಆ ಉದ್ದೇಶದಿಂದಲೇ ಸರ್ಕಾರ ಈ ಕಾರ್ಡ್‌ ವಿತರಣೆಗೆ ಮುಂದಾಗಿದೆ. ಆದರೆ ವಿತರಣೆ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆದಿದೆ.

ರೈತರ ಸ್ವಾಭಿಮಾನಿ ಕಾರ್ಡ್‌ ವಿತರಣೆಗೆ ಸದ್ಯ ರೈತರಿಂದ ಯಾವುದೇ ದಾಖಲೆಪಡೆದಿಲ್ಲ. ಈಗಾಗಲೇ ನಮ್ಮ ಇಲಾಖೆಯಲ್ಲಿ ಸೌಲಭ್ಯ ಪಡೆದ ರೈತರ ದಾಖಲೆ ಆಧಾರದಲ್ಲೇ ಅಂತಹ ರೈತರಿಗೆ ಕಾರ್ಡ್‌ ವಿತರಿಸುತ್ತಿದ್ದೇವೆ. ಅದರಲ್ಲೂ ಪ್ರೊಟ್‌ ಐಡಿಯಲ್ಲಿ ರೈತರ ಫೋಟೋ ಮಿಸ್‌ಮ್ಯಾಚ್‌ ಬಂದಿವೆ. ಅವುಗಳನ್ನು ಸರಿಪಡಿಸಲು ನಮಗೆ ಲಾಗಿನ್‌ನಲ್ಲಿ ಅವಕಾಶಕೊಡುವಂತೆ ರಾಜ್ಯ ಇಲಾಖೆ ಕೇಳಿದ್ದೇವೆ. ಹಂತಹಂತವಾಗಿ ಪ್ರಿಂಟ್‌ ಆದ ಕಾರ್ಡ್‌ಗಳನ್ನುರೈತರಿಗೆ ವಿತರಿಸುತ್ತಿದ್ದು, ಏಪ್ರಿಲ್‌ ಅಂತ್ಯದೊಳಗೆ ಬಹುಪಾಲು ರೈತರಿಗೆ ಕಾರ್ಡ್‌ ವಿತರಿಸಲಿದ್ದೇವೆ. – ಶಿವಕುಮಾರ, ಜಂಟಿ ಕೃಷಿ ನಿರ್ದೇಶಕ ಕೊಪ್ಪಳ

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-koppala

Koppala ಗವಿಮಠ ಜಾತ್ರೆಗೆ ನಟ ಅಮಿತಾಬ್‌ ಬಚ್ಚನ್‌?

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್

Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್

ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ

ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ

ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು

ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.