![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 23, 2021, 2:15 PM IST
ಚಿಕ್ಕಮಗಳೂರು: ಎಲೆ ಕೋಸಿಗೆ ಸೂಕ್ತ ಬೆಲೆ ಇಲ್ಲದ ಕಾರಣ ನಿರಾಶನಾದ ರೈತ ಟ್ರ್ಯಾಕ್ಟರ್ ಹೊಡಿಸಿ ಎರಡು ಎಕರೆ ಎಲೆ ಕೋಸಿನ ಬೆಳೆ ನಾಶ ಮಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದಲ್ಲಿ ನಡೆದಿದೆ.
ಬಸವರಾಜು ಎನ್ನುವವರೇ ತನ್ನ ಹೊಲಕ್ಕೆ ಟ್ರ್ಯಾಕ್ಟರ್ ಹೊಡೆಸಿದ ರೈತ.
ಇದನ್ನೂ ಓದಿ:ವಿಡಿಯೋ: ನೋಡು ನೋಡುತ್ತಲೇ ದೋಣಿ ಒಳಗಡೆ ಎಂಟ್ರಿ ಕೊಟ್ಟ ಸಮುದ್ರ ಸಿಂಹ
ಇವರು ಕಳೆದೊಂದು ವರ್ಷದಿಂದ ಎಲೆ ಕೋಸು ಬೆಳೆಯುತ್ತಿದ್ದರು. ಮೂರು ಬಾರಿ ಬೆಳೆದರೂ ಸೂಕ್ತ ಬೆಲೆ ಸಿಗಲಿಲ್ಲ. ಈ ಬಾರಿಯೂ 30-40 ಸಾವಿರ ಖರ್ಚು ಮಾಡಿ ಬೆಳೆ ಬೆಳೆದಿದ್ದರು. ಆದರೆ ಈ ಬಾರಿಯೂ ಬೆಲೆ ಇಲ್ಲ ಎಂದು ನೊಂದುಕೊಂಡು ಟ್ರ್ಯಾಕ್ಟರ್ ಹೊಡೆಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.