ಪ್ರತಿನಿಧಿಗಳಿಂದ ಸಮಸ್ಯೆಗಳ ಅನಾವರಣ
Team Udayavani, Mar 23, 2021, 3:18 PM IST
ಕೋಲಾರ: ನಗರಸಭೆಯ 2020-21ನೇ ಸಾಲಿನಆಯವ್ಯಯ ಸಿದ್ಧತಾ ಪೂರ್ವ ಭಾವಿ ಸಭೆಯಲ್ಲಿಹಾಜರಿದ್ದ ಚುನಾಯಿತ ಮತ್ತು ಸಂಘ-ಸಂಸ್ಥೆಗಳಪ್ರತಿನಿ ಧಿಗಳು ನಗರದ ಜನತೆ ಎದುರಿಸುತ್ತಿರುವಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟು, ನಗರಸಭೆಆಡಳಿತದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ನಗರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಆಯವ್ಯಯ ಸಿದ್ಧತಾ ಪೂರ್ವ ಚನಾಯಿತ, ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಯುಜಿಡಿ ಸಮಸ್ಯೆ,ತೆರಿಗೆ ವಸೂಲಿ, ಉದ್ಯಾನ ನಿರ್ವಹಣೆ, ರಸ್ತೆ ಅವ್ಯವಸ್ಥೆ, ಅಮೃತ ಸಿಟಿ ಯೋಜನೆಯಲ್ಲಿನ ಅಕ್ರಮ,ನಗರವಾಸಿಗಳ ಆಸ್ತಿಗೆ ಸಂಬಂಧಿ ಸಿದ ದಾಖಲೆನೀಡುವಲ್ಲಿನ ವಿಳಂಬ ಧೋರಣೆ, ನೀರಿನ ಸಮಸ್ಯೆಹೀಗೆ ಸಮಸ್ಯೆಗಳ ಪಟ್ಟಿಯನ್ನೇ ಹೊರ ಹಾಕಿದರು.ತೆರಿಗೆ ವಸೂಲಿಮಾಡಿ: ನಗರಸಭೆ ಸದಸ್ಯ ಎಸ್.ಆರ್.ಮುರಳಿಗೌಡ ಮಾತನಾಡಿ, ನಗರಸಭೆ ನಿಧಿಯಿಂದನಗರದ ಅಭಿವೃದ್ಧಿ ಸಾಧ್ಯ. ಅದಾಯ ಹೆಚ್ಚಿಸಲು ತೆರಿಗೆವಸೂಲಿ ಗುರಿ ಸಾಧನೆ ಮಾಡಬೇಕು. ತೆರಿಗೆ ವಸೂಲಿಆಗದಿರಲು ಕಾರಣವೇನು, ಅದನ್ನು ಹೆಚ್ಚಿಸಲು ಏನುಮಾಡಬೇಕು ಎಂಬುದರ ಕುರಿತು ಆಲೋಚಿಸಿ ಎಂದು ಒತ್ತಾಯಿಸಿದರು.
ನಿವಾಸಿಗಳಿಗೆ ಸಂಬಂಧಿಸಿದ ಆಸ್ತಿಯ ಖಾತೆ, ಇ- ಖಾತೆ ದಾಖಲೆ ಮಾಡಿಕೊಡದೆ ಇರುವುದು ತೆರಿಗೆ ವಸೂಲಿ ಕುಂಠಿತವಾಗಲು ಕಾರಣವಾಗಿದೆ. ಇದಕ್ಕೆ ಕ್ರಮ ಕೈಗೊಳ್ಳಬೇಕು. ಸರ್ಕಾರಗಳಿಂದ ಬರುವ ಅನುದಾನ ನಂಬಿಕೊಂಡು ನಗರದ ಅಭಿವೃದ್ಧಿ ಸಾಧ್ಯವಿಲ್ಲ. ಆದಾಯ ವೃದ್ಧಿಗೆ ಕ್ರಮವಹಿಸಿ ಎಂದರು.
ವಸತಿ ರಹಿತರಿಗೆ ಸೌಲಭ್ಯ ಕಲ್ಪಿಸಿ: ನಗರಸಭೆ ಸದಸ್ಯ ಅಂಬರೀಶ್ ಮಾತನಾಡಿ, ನಗರದಲ್ಲಿ ಸಾಕಷ್ಟು ಮಂದಿನಿವೇಶನ, ವಸತಿ ರಹಿತರಿಗೆ ಸೌಲಭ್ಯ ಕಲ್ಪಿಸಬೇಕು.ಕ್ರೀಡಾಪಟುಗಳನ್ನು ಉತ್ತೇಜನ ನೀಡಲು ಬಜೆಟ್‌ನಲ್ಲಿ ಹಣ ಮೀಸಲಿರಿಸಬೇಕು. ಸ್ಲಂ ಬೋರ್ಡ್ ವಾಸಿಗಳಿಗೆವಸತಿ ಕಲ್ಪಿಸಲು ಜಾಗ ಗುರುತಿಸಿ, ಮನೆ ನಿರ್ಮಾಣಕ್ಕೆಕ್ರಮ ಕೈಗೊಳ್ಳಬೇಕು. ಮುನ್ಸಿಪಾಲ್ ಮಾರುಕಟ್ಟೆ,ಹಳೇ ಬಸ್ ನಿಲ್ದಾಣದ ಬಳಿ ನಗರಸಭೆಗೆ ಸೇರಿದಖಾಲಿ ಜಾಗ ಇದೆ. ಅಲ್ಲಿ ಕಾಂಪ್ಲೆಕ್ಸ್ ನಿರ್ಮಾಣ ಮಾಡಿದರೆ ಅದಾಯ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು.ನೀರಿನ ಸಮಸ್ಯೆ ಎದುರಾದಾಗ ಯಾರ ಮೇಲೂಗೂಬೆ ಕೂರಿಸೊದು ಬೇಡ. ಸ್ವಂತ ಶಕ್ತಿಯಿಂದ ಸಮಸ್ಯೆ ನಿವಾರಣೆ ಮಾಡಿ. ತೆರಿಗೆ ವಸೂಲಿಗೆ ಯಾರುವಿರೋಧ ಮಾಡಲ್ಲ, ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.
ವಾರ್ಡ್ ಸಮಿತಿ ರಚಿಸಿ: ನಗರದಲ್ಲಿ ಪ್ರತಿ ವಾರ್ಡಿನಲ್ಲೂ ವಾರ್ಡ್ ಸಮಿತಿ ರಚಿಸಬೇಕು.ಇದರಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲುಸಹಕಾರಿಯಾಗುತ್ತದೆ. ಯುಜಿಡಿ ಕಟ್ಟಿಕೊಂಡುಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ.ಕಾಮಗಾರಿ ಕಳಪೆಯಾಗಿರುವುದರಿಂದ ಮ್ಯಾನ್‌ಹೋಲ್ ಹಾನಿಯಾಗಿದೆ. ಕೂಡಲೇ ದುರಸ್ತಿಪಡಿಸಬೇಕು. ನಗರ ಕೇಂದ್ರ ಸ್ಥಾನದಲಿಯುವಮುನ್ಸಿಪಾಲ್ ಆಸ್ಪತ್ರೆ ಶಿಥಿಲಗೊಂಡಿದೆ ಎಂದು ತಿಳಿಸಿದರು.
ನಿರ್ಲಕ್ಷ್ಯದಿಂದ ಅನುದಾನ ಕಡಿತ: ಸದಸ್ಯ ಬಿ.ಎಂ.ಮುಬಾರಕ್, ಮಂಡನೆಯಾಗಿರುವ ಬಜೆಟ್‌ಕಾರ್ಯಗತಗೊಳ್ಳಬೇಕು. ಅದು ಕೇವಲ ಖರ್ಚುವೆಚ್ಚಕ್ಕೆ ಸಿಮೀತಗೊಳ್ಳಬಾರದು. 15ನೇ ಹಣಕಾಸು,ಎಂಪಿ, ಎಂಎಲ್‌ಎ, ಎಂಎಲ್ಸಿ ನಿ ಹೀಗೆ ಅನೇಕಅನುದಾನಗಳು ಬರುತ್ತದೆ. ನಗರೋತ್ಥಾನ 4ನೇಹಂತದ ಅನುದಾನ ಶೂನ್ಯ ತೋರಿಸಿದ್ದಾರೆ, ಇದನ್ನುನೀವು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯವಹಿಸಿದರೆ ಸರ್ಕಾರದಿಂದ ಬರೋ ಅನುದಾನಕಡಿತಗೊಳ್ಳುತ್ತದೆ ಎಂದರು.
ಪೌರಕಾರ್ಮಿಕರು ಸ್ಥಿತಿ ಅತಂತ್ರ: ಪೌರಕಾರ್ಮಿಕರು ಅತಂತ್ರದ ಸ್ಥಿತಿಯಲ್ಲಿದ್ದಾರೆ. ನಿವೃತ್ತರಾದರೆ ಪಿಂಚಣಿಬರುತ್ತಿಲ್ಲ. ದಿನಗೂಲಿ, ಹೊರಗುತ್ತಿಗೆ ಆಧಾರದಮೇಲೆ ಕಾರ್ಮಿಕರು, ಜಲಗಾರರು ಕಾರ್ಯನಿರ್ವಹಿಸುತ್ತಿದ್ದಾರೆ, ಅವರು ನಿವೃತ್ತರಾದರೆ ಕನಿಷ್ಠ 5ಲಕ್ಷ ಹಣ ಬರುವ ಹಾಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಚಾರ ಜಾಹಿರಾತುಗಳಿಗೆ ತೆರಿಗೆ ವಿ ಧಿಸುತ್ತಿಲ್ಲ,ನಗರಸಭೆ ಕಾಯ್ದೆ ಪ್ರಕಾರ ಟ್ಯಾಕ್ಸ್ ವಸೂಲಿಮಾಡಬೇಕು. ಈ ಬಗ್ಗೆ ತೆರೆದ ಟೆಂಡರ್ ನೀಡಿದರೆಆದಾಯ ಹೆಚ್ಚುತ್ತದೆ. ನಗರದಲ್ಲಿ ಕೇವಲ ಶೇ.25ರಷ್ಟುಮಂದಿ ಟ್ರೇಡ್ ಲೆ„ಸನ್ಸ್ ಪಡೆದುಕೊಂಡಿದ್ದಾರೆ.ಟ್ರೇಡ್ ಲೆ„ಸನ್ಸ್ ನೀಡಲು ಇರುವ ನಿಯಮಗಳ ಸಡಿಲಿಕೆ ಮಾಡಬೇಕು. ನಗರದಲ್ಲಿ ನೆಲ ಹಂತ ಬಿಟ್ಟುಎರಡು ಅಂತಸ್ತು ಮಹಡಿ ನಿರ್ಮಾಣ ಮಾಡಿಕೊಳ್ಳಲುಅವಕಾಶ ಇದೆ. ಆದರೆ, ಇದು ಮೀತಿ ಮೀರಿ ಹೋಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷೆ ಶ್ವೇತಾಶಬರೀಷ್ ವಹಿಸಿದ್ದು, ಉಪಾಧ್ಯಕ್ಷ ಪ್ರವೀಣ್ ಗೌಡ,ಆಯುಕ್ತ ಶ್ರೀಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಎಲ್ಲಾ ನಗರ ಸಭಾ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು ಸಭೆಯಲ್ಲಿ ಹಾಜರಿದ್ದರು.
ಸಿಬ್ಬಂದಿ ಕೊರತೆ ನೀಗಿಸಿ :
ಕಚೇರಿಯಲ್ಲಿನ ಸಿಬ್ಬಂದಿ ಕೊರತೆ ನೀಗಿಸಬೇಕು.ಇದರಿಂದ ಅದಾಯವೂ ಹೆಚ್ಚಾಗತ್ತದೆ. ಇಲ್ಲಿನಸಿಬ್ಬಂದಿಯನ್ನು ಮತ್ತೂಂದೆಡೆಗೆ ನಿಯೋಜನೆಮಾಡುವುದನ್ನು ರದ್ದು ಮಾಡಬೇಕು. ಬಜೆಟ್‌ನಲ್ಲಿ ಸಿಬ್ಬಂದಿ ವೇತನಕ್ಕೆ ಹಣ ಮೀಸಲಿಟ್ಟು, ನೇಮಕ ಮಾಡಿಕೊಳ್ಳಬೇಕು ಎಂದು ಸದಸ್ಯ ರಾಕೇಶ್ ಗೌಡ ಸಲಹೆ ನೀಡಿದರು.
ಸೊಳ್ಳೆಕಾಟಕ್ಕೆ ಫಾಗಿಂಗ್ ಮಾಡಿ :
ನಗರದಲ್ಲಿ ಸೊಳ್ಳೆಕಾಟ ಹೆಚ್ಚಾಗಿದ್ದು, ಫಾಗಿಂಗ್‌ಮಾಡಿ ಸಾಂಕ್ರಾಮಿಕ ರೋಗ ಹರಡುವಿಕೆ ನಿಯಂತ್ರಿಸಬೇಕು. ನಗರದಲ್ಲಿ ಸ್ಮಶಾನಗಳು ಸಮರ್ಪಕವಾಗಿ ನಿರ್ವಹಣೆಯಾಗಬೇಕು. ಉದ್ಯಾನವನಗಳು ಹಾಳಾಗಿವೆ, ಮಕ್ಕಳಿಗಾಗಿ ಅಳವಡಿಸಲಾಗಿರುವ ಜಿಮ್ ಉಪಕರಣಗಳು ಹಾಳಾಗಿವೆ. ಕಳಪೆಸಾಮಾಗ್ರಿ ಅಳವಡಿಸಿರುವುದರಿಂದ ಉಪಯೋಗಕ್ಕೆ ಬಾರದೆ ಹೋಗಿದೆ ಎಂದು ವರ್ತಕರ ಸಂಘದ ಪ್ರತಿನಿಧಿ ಮನೋಹರ್ ವಿಷಾದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.