ಸರ್ಕಾರಿ ಶಾಲೆಗೆ ಡಿಜಿಟಲ್‌ ಟಚ್‌ ನೀಡಿದ ಹೆಡ್‌ ಮಾಸ್ಟರ್‌


Team Udayavani, Mar 23, 2021, 4:23 PM IST

ಸರ್ಕಾರಿ ಶಾಲೆಗೆ ಡಿಜಿಟಲ್‌ ಟಚ್‌ ನೀಡಿದ ಹೆಡ್‌ ಮಾಸ್ಟರ್‌

ಮಾಸ್ಟರ್‌ ಮೈಂಡ್‌ ಶಿಕ್ಷಕ ವೀರಣ್ಣ: ಅದೇ, ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನನಿಡಗುಂದಿ ಗ್ರಾಮದ ಅಂಬೇಡ್ಕರ್‌ ನಗರದಲ್ಲಿರುವಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಹಸಿರಿನಿಂದಕಂಗೊಳಿಸುವ ಶಾಲೆಯ ಅಂಗಳ, ಒಳಗಡೆ ಪ್ರವೇಶಿಸಿದರೆ ಗೋಡೆಗಳ ಮೇಲೆ ಬಣ್ಣ ಬಣ್ಣದ ಚಿತ್ತಾರ, ಸ್ಮಾರ್ಟ್‌ಕ್ಲಾಸ್‌ ರೂಮ್, ಟಿ.ವಿ.ಕಂಪ್ಯೂಟರ್‌, ಕಲರ್‌ ಕಲರ್‌ ಕುರ್ಚಿ, ಟೇಬಲ್,ಗ್ರೀನ್‌ ಬೋರ್ಡ್‌, ಹೈಟೆಕ್‌ ಶೌಚಾಲಯ, ನ್ಯೂಡ್ರೆಸ್‌ ಕೋಡ್‌ ಇತ್ಯಾದಿ…ಎಲ್ಲವೂ ಡಿಜಿಟಲ್‌ಮಯ, ಅಷ್ಟಕ್ಕೂ ಈ ಸಣ್ಣ ಊರಿನ ಸರ್ಕಾರಿ ಶಾಲೆಯನ್ನು ರಾಜ್ಯದ ನಂ. ಒನ್‌ ಶಾಲೆಯಾಗಿ ರೂಪಿಸಿದವರು ವೀರಣ್ಣ ಮಡಿವಾಳರ ಎನ್ನುವ ಪ್ರಧಾನ ಶಿಕ್ಷಕ.

ಹೌದು ಆಶ್ಚರ್ಯ ಎನಿಸಿದರೂ ಇದು ಸತ್ಯ. ವೀರಣ್ಣ ಅವರು ಮೂಲತಃ ಗದಗ ಜಿಲ್ಲೆ ಮುಂಡರಗಿತಾಲೂಕಿನ ಕಲಕೇರಿ ಗ್ರಾಮದವರು. ಕೃಷಿ ಕುಟುಂಬದಲ್ಲಿ ಜನಿಸಿದ ವೀರಣ್ಣ, ಹಾವೇರಿ ಜಿಲ್ಲೆ ಸವಣೂರು ತಾಲೂಕಿನಲ್ಲಿ 3 ವರ್ಷ, ಚಿಕ್ಕೋಡಿ ತಾಲೂಕಿನಲ್ಲಿ 6 ವರ್ಷ ಸೇವೆ ಸಲ್ಲಿಸಿ, ಸದ್ಯ ನಿಡಗುಂದಿ ಗ್ರಾಮದ ಅಂಬೇಡ್ಕರ್‌ ನಗರದ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.

ಕಾನ್ವೆಂಟ್‌ ಮೀರಿಸುವ ಗುರಿ :

ಸರ್ಕಾರ ಶಾಲೆಗಳು ಎಂದರೆ ಮುಗೀತು, ಶಿಕ್ಷಕರಿದ್ದರೆ ಮಕ್ಕಳಿರಲ್ಲ, ಮಕ್ಕಳಿದ್ದರೆ ಶಿಕ್ಷಕರಿರಲ್ಲ,ಮಕ್ಕಳು-ಶಿಕ್ಷಕರಿರುವ ಶಾಲೆಗಳಲ್ಲಿ ಮೂಲಭೂತಸೌಕರ್ಯಗಳ ಕೊರತೆ, ಇಂಥ ಅವಸ್ಥೆಯಿಂದ ಕೂಡಿರುತ್ತವೆ ಎಂಬುದು ಹಲವರ ಅನುಭವದಮಾತು. ಇದನ್ನು ಗಮನಿಸಿದ ವೀರಣ್ಣ ಅವರು, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನುಮೀರಿಸುವಂತೆ ಪ್ರಗತಿ ಕಾಣಬೇಕು ಎನ್ನುವ ಉದ್ದೇಶದಿಂದ “ಸರ್ಕಾರಿ ಶಾಲೆ ನಮ್ಮ ಹೆಮ್ಮೆ’ ಎನ್ನುವಆನ್‌ಲೈನ್‌ ಅಭಿಯಾನ ಆರಂಭಿಸಿದರು. ಮೊದಲಿಗೆತಮ್ಮ ಉಳಿತಾಯದ 70 ಸಾವಿರ ರೂ. ಹಣದಿಂದ ಶಾಲೆಯ ಕಾಂಪೌಂಡ್‌ ನಿರ್ಮಿಸಿ, ಅದಕ್ಕೆ ತಾವೇ ಸ್ವತಃ ಚಿತ್ರಗಳನ್ನು ಬಿಡಿಸಿ ಅಂದಗೊಳಿಸಿದರು.

ಶಾಲೆಯ ದಿನನಿತ್ಯದ ಕಾರ್ಯಗಳನ್ನು ತಮ್ಮ ಫೇಸ್‌ಬುಕ್‌ ಜಾಲತಾಣದಲ್ಲಿ ಅಪ್‌ಡೇಟ್‌ ಮಾಡ ತೊಡಗಿದರು. ಶಾಲೆಯ ಪ್ರಗತಿಯ ಕೆಲಸಗಳಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯ್ತು. ಹಲವು ಗೆಳೆಯರು, ದಾನಿಗಳು ನೆರವು ನೀಡಲು ಮುಂದಾದರು. ಎಲ್ಲರಬೆಂಬಲದಿಂದ ಮಕ್ಕಳ ಕಲಿಕೆಗೆ ಅಗತ್ಯವಾದಪೀಠೊಪಕರಣ ಹಾಗೂ ಪಾಠೊಪಕರಣಗಳವ್ಯವಸ್ಥೆಯಾಯ್ತು, ಹೀಗೆ ಶಾಲೆಯ ಒಳಾವರಣ “ಡಿಜಿಟಲ್‌ ಟಚ್‌’ ಪಡೆಯಿತು.

“ಶ್ರೀಮಂತರ ಮಕ್ಕಳಿಗೆ ದೊರಕುವ ಶಿಕ್ಷಣ, ಹಳ್ಳಿಯ ಬಡ ಮಕ್ಕಳಿಗೂ ಸಿಗುವಂತೆ ಆಗಬೇಕು.ಕಾನ್ವೆಂಟ್‌ ಶಾಲೆಗಳು ಶ್ರೇಷ್ಠ, ಸರ್ಕಾರಿ ಶಾಲೆಗಳುಕನಿಷ್ಠ ಎಂಬುದೇ ಸುಳ್ಳು. ಗ್ರಾಮೀಣ ಪ್ರದೇಶದಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು, ಆ ವಾತಾವರಣ ನಿರ್ಮಿಸುವ ಗುರಿ ನನ್ನದು. ನಮ್ಮಶಾಲೆ ಒಂದೇ ಅಲ್ಲ, ರಾಜ್ಯದ ಪ್ರತಿ ಸರ್ಕಾರಿಶಾಲೆಗಳೂ ಈ ದಿಸೆಯಲ್ಲಿ ಬೆಳವಣಿಗೆ ಹೊಂದಬೇಕು ಎಂಬುವುದೇ ನನ್ನ ಸದಾಶಯ’ ಎನ್ನುತ್ತಾರೆ ವೀರಣ್ಣ

ಇಲ್ಲಿ ಎಲ್ಲವೂ ಉಂಟು :

ಈ ಶಾಲೆಯಲ್ಲಿ ಬರೀ ಎರಡು ಕೋಣೆಗಳು ಮಾತ್ರಇವೆ. ಅವೆರಡೂ ಈಗ ಡಿಜಿಟಲ್‌ ಕ್ಲಾಸ್‌ ಗಳಾಗಿ ರೂಪಾಂತರ ಹೊಂದಿವೆ. ಗೋಡೆಗಳ ಮೇಲೆ ಬಣ್ಣದ ಚಿತ್ತಾರ ಬಿಡಿಸಿ ಅಂದ ಹೆಚ್ಚಿಸಿರುವ ವೀರಣ್ಣ, ಶಾಲೆಯ ಮುಂದಿರುವ ಸಣ್ಣ ಮೈದಾನದಲ್ಲಿ ಕೈತೋಟವನ್ನೂ ನಿರ್ಮಿಸಿದ್ದಾರೆ. ಮಕ್ಕಳಿಗೆತರಗತಿಯಲ್ಲಿ ಕೂರಲು ಬಣ್ಣ ಬಣ್ಣದ ಕುರ್ಚಿಗಳುಮತ್ತು ಟೇಬಲ್‌ಗ‌ಳಿವೆ. ದೊಡ್ಡ ಟೀವಿ ಇದೆ, ಗ್ರೀನ್‌ಬೋರ್ಡ್‌ ಮೂಲಕ ಬೋಧನೆ ಮಾಡ್ತಾರೆ. ಮಕ್ಕಳಿಗೆಪಾಠ ಕೇಳಲು ಬೋರ್‌ ಎನಿಸಿದಾಗ ಯೂಟ್ಯೂಬ್‌ನಲ್ಲಿ ಟೀಚಿಂಗ್‌ ಕೊಡುವ ಸ್ಮಾರ್ಟ್‌ ಪ್ಲಸ್‌ ಕ್ಲಾಸ್‌ವ್ಯವಸ್ಥೆ ಇಲ್ಲಿದೆ.ವಾರಕ್ಕೊಮ್ಮೆ ಯೋಗತರಬೇತಿ ನೀಡ್ತಾರೆ. ಕಂಪ್ಯೂಟರ್‌ತರಬೇತಿ, ಜಾನಪದ ಗೀತಗಾಯನ, ಪದ್ಯ ರಚನೆ, ಹಾಡುಭಾಷಣ ಕಲೆ, ಆತ್ಮಸ್ಥೈರ್ಯತುಂಬುವ ಕಥಾವಾಚನ,ಮಕ್ಕಳಿಗೆ 4 ಜೋಡಿ ಕಲರ್‌ ಕಲರ್‌ ಸಮವಸ್ತ್ರ, ಮಕ್ಕಳಿಗೆ ಪ್ರತ್ಯೇಕ ಶೌಚಾಲಯ..ಹೀಗೆ ಎಲ್ಲಾ ಸೌಲಭ್ಯಗಳೂ ಇಲ್ಲುಂಟು.ಈ ಹಿಂದೆ 76 ಮಕ್ಕಳನ್ನುಹೊಂದಿದ್ದ ಶಾಲೆಯಲ್ಲಿ ಇಂದು 120 ಮಕ್ಕಳು ಖುಷಿಯಿಂದ ಓದುತ್ತಿದ್ದಾರೆ.

ಸೈನ್ಸ್ ಮ್ಯೂಸಿಯಂ ನಿರ್ಮಿಸುವ ಗುರಿ : “ಮಕ್ಕಳು ಬರೀ ಪಠ್ಯಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಕಡೆಗೂ ಹೆಚ್ಚು ಆಸಕ್ತಿ ತೋರ ಬೇಕು, ಶಾಲೆಯ ವಾತಾವರಣ ಬದಲಾವಣೆಮಾಡಿದರೆ, ಮಕ್ಕಳ ಕೌಶಲ್ಯ ತಂತಾನೇ ಬದಲಾ ಗುತ್ತದೆ. ಶಾಲೆಯಲ್ಲಿ ಮೂಲ ಸೌಕ ರ್ಯಗ ‌ಳಿಲ್ಲದೇ ಬರೀಅವಸ್ಥೆ ತುಂಬಿದರೆ ಶಾಲೆಯಲ್ಲಿ ಮಕ್ಕಳು ಹೇಗೆ ತಾನೇ ಓದಲು ಆಸಕ್ತಿ ತೋರುವರು? ಈಗ ನಮ್ಮ ಶಾಲೆಯವಾತಾವರಣ ಬದಲಾ ವಣೆ ಆಗಿದೆ. ಖಾಸಗಿಶಾಲೆಯ ಮಕ್ಕಳು ನಮ್ಮ ಶಾಲೆಗೆ ಬರುತ್ತಿದ್ದಾರೆ. ಪ್ರತಿವರ್ಷ ದಾಖಲಾತಿ ಹೆಚ್ಚುತ್ತಿದೆ.

ಜಾಲತಾಣ ಬಳಕೆ :

ಈ ಶಾಲೆಯು ತನ್ನದೇ ಆದ ವೆಬ್‌ಸೈಟ್‌ ಹೊಂದಿದೆ. ತಮ್ಮ ಶಾಲೆಗೆ ಸಂಬಂಧಿಸಿದ ಎಲ್ಲಾ ಸಂಗತಿಯನ್ನೂ ವಿಡಿಯೋ, ಪೋಟೋ ರೂಪದಲ್ಲಿ http://www.nannashale.in/klpsambe dkarnidagundi   ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಾರೆ. ವೆಬ್‌ ಸೈಟ್‌ ಹೊಂದಿರುವ ರಾಜ್ಯದ ಮೊದಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೆಗ್ಗಳಿಕೆಗೂ ಈ ಶಾಲೆ ಪಾತ್ರವಾಗಿದೆ. ಶಾಲೆಯಪ್ರಗತಿಯನ್ನು ಸೋಶಿಯಲ್‌ ಮೀಡಿಯಾದಲ್ಲಿಕಂಡು ಹಲವು ಸ್ನೇಹಿತರು, ಶಿಕ್ಷಣ ತಜ್ಞರು, ವಿದೇಶದ ಸ್ನೇಹಿತರು ಶಾಲೆಗೆ ಅವಶ್ಯವಾಗಿರುವ ಸಾಮಗ್ರಿಗಳನ್ನು ದೇಣಿಗೆ ನೀಡಿದ್ದಾರೆ. ಹಲವರು ಆರ್ಥಿಕ ನೆರವು ನೀಡಿದರೆ, ಮತ್ತೂಬ್ಬರು ಹೊಸ ಕೋಣೆ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ.

 

– ಬಾಲಾಜಿ ಕುಂಬಾರ, ಚಟ್ನಾಳ

ಟಾಪ್ ನ್ಯೂಸ್

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.