ಏಪ್ರಿಲ್ 1 ರಿಂದ ಬದಲಾಗಲಿದೆ ಇನ್ ಕಮ್ ಟ್ಯಾಕ್ಸ್ ನ ಹಲವು ನಿಯಮಗಳು.! ಇಲ್ಲಿದೆ ಮಾಹಿತಿ
Team Udayavani, Mar 24, 2021, 11:39 AM IST
ನವ ದೆಹಲಿ : 2021ರ ಏಪ್ರಿಲ್ 1 ರಿಂದ ಇನ್ ಕಮ್ ಟ್ಯಾಕ್ಸ್ ಅಥವಾ ಆದಾಯ ತೆರಿಗೆಗೆ ಸಂಬಂಧಿಸಿದ ಹಲವು ನಿಯಮಗಳನ್ನು ಬದಲಾವಣೆಯಾಗುತ್ತಿವೆ. ಕೇಂದ್ರ ಸರ್ಕಾರ ಈ ಭಾರಿಯ ಬಜೆಟ್ ನಲ್ಲಿ ಬಜೆಟ್ ನಲ್ಲಿ ಈ ಬಗ್ಗೆ ಘೋಷಿಸಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬದಲಾವಣೆಗಳ ಬಗ್ಗೆ ವಿಸ್ತೃತವಾಗಿ ತಿಳಿಸಿದ್ದರು.
ಏಪ್ರಿಲ್ 1ರಿಂದ ಯಾವೆಲ್ಲಾ ನಿಯಮಗಳು ಬದಲಾವಣೆ ಆಗಲಿವೆ.? ನಿಮ್ಮ ಮೇಲೆ ಇದು ಯಾವ ರೀತಿಯ ಪರಿಣಾಮ ಬೀರಲಿವೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಓದಿ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 300 ಅಂಕ ಕುಸಿತ, 14,800ಕ್ಕೆ ನಿಫ್ಟಿ ಇಳಿಕೆ
ಪಿ ಎಫ್ ಮೇಲಿನ ತೆರಿಗೆ ನಿಯಮಗಳು ಯಾವ ರೀತಿ ಪರಿಣಾಮ ಬಿರಲಿವೆ ?
ಏಪ್ರಿಲ್ 1ರಿಂದ ಪ್ರಾವಿಡೆಂಟ್ ಫಂಡ್ 2.5 ಲಕ್ಷ ರೂ.ಗಿಂತ ಹೆಚ್ಚು ವಂತಿಗೆ ಮೇಲೆ ಬಡ್ಡಿಗೆ ತೆರಿಗೆ ಕಟ್ಟಲಾಗುವುದು. ಇಪಿಎಫ್(EPF) ಅನ್ನು ಹೆಚ್ಚು ವಂತಿಗೆ ನೀಡುವ ಮೂಲಕ ಹೆಚ್ಚಿನ ಬಡ್ಡಿಯನ್ನು ಗಳಿಸಲು ಜನರು ತಮ್ಮ ವ್ಯಾಪ್ತಿಗೆ ಬರುತ್ತಾರೆ ಎಂದು ಸರ್ಕಾರ ಹೇಳಿದೆ.
ಇಪಿಎಫ್ ನೌಕರರ ಅನುಕೂಲಕ್ಕಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.
ಏಪ್ರಿಲ್ 1 ರಿಂದ ಆಗಲಿರುವ ಈ ಬದಲಾವಣೆಯಿಂದ ಒಂದು ತಿಂಗಳಲ್ಲಿ 2 ಲಕ್ಷ ಅಥವಾ ಕಡಿಮೆ ಆದಾಯ ಗಳಿಸುವವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಐಟಿಆರ್ ಟಿಡಿಎಸ್ ಏನ್ ಕಥೆ..?
ಇನ್ ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸುವುದರಿಂದ, 2021ರ ಬಜೆಟ್ ನಲ್ಲಿ ಹೆಚ್ಚು ಟಿಡಿಎಸ್ ಅಥವಾ ಟಿಸಿಎಸ್ ವಿಧಿಸುವ 206ಎಬಿ ಮತ್ತು 206ಸಿಸಿಎ ಎಂಬ ಎರಡು ವಿಭಾಗಗಳನ್ನು ಇನ್ ಕಮ್ ಟ್ಯಾಕ್ಸ್ ಆ್ಯಕ್ಟ್ ನಲ್ಲಿ ಸೇರಿಸಲು ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪ ಮಂಡಿಸಿದ್ದಾರೆ.
75 ವರ್ಷ ಮೇಲ್ಪಟ್ಟವರಿಗೆ ರಿಲೀಫ್ :
ಈ ಭಾರಿಯ ಬಜೆಟ್ ನಲ್ಲಿ 75 ವರ್ಷ ಮೇಲ್ಪಟ್ಟ ವೃದ್ಧರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಹಿರಿಯರ ಮೇಲಿನ ಅನುಸರಣೆಯ ಹೊರೆಯನ್ನು ಕಡಿಮೆ ಮಾಡುವ ಕಾರಣದಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಐಟಿಆರ್ ಸಲ್ಲಿಸುವುದರಿಂದ ವಿನಾಯಿತಿ ನೀಡುವುದಾಗಿ ಘೋಷಿಸಿದ್ದರು.
ಹಿರಿಯರ ಆದಾಯ ಬೇರೆಯೇನಾದರೂ ಇದ್ದರೆ, ಅವರು ಐ ಟಿ ಆರ್ ಫೈಲ್ ಮಾಡಬೇಕು.
ಇನ್ ಕಮ್ ಟ್ಯಾಕ್ಸ್ ರಿಟರ್ನ್ಸ್ ನಮೂನೆಗಳನ್ನು ಬಗ್ಗೆ ಏನಿದೆ..?
ಏಪ್ರಿಲ್ 1ರಿಂದ ಇನ್ ಕಮ್ ಟ್ಯಾಕ್ಸ್ ರಿಟರ್ನ್ಸ್ ಅರ್ಜಿಯಲ್ಲಿ ನಲ್ಲಿ ಸಾಕಷ್ಟು ಮಾಹಿತಿಗಳನ್ನು ತುಂಬಬೇಕಿದೆ. ತೆರಿಗೆದಾರರ ಸಂಬಳ, ತೆರಿಗೆ ಪಾವತಿ, ಟಿಡಿಎಸ್ ಮುಂತಾದ ಮಾಹಿತಿಗಳು ಈಗಾಗಲೇ ಐಟಿಆರ್ ರೂಪದಲ್ಲಿ ಲಭ್ಯವಿದ್ದು, ಇದು ಅನುಸರಣೆಯ ಹೊರೆಯನ್ನು ಕಡಿಮೆ ಮಾಡುತ್ತದೆ. ಈಗ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್, ಡಿವಿಡೆಂಡ್ ಆದಾಯ ಮತ್ತು ಬ್ಯಾಂಕ್ ಗಳಿಂದ ಬರುವ ಬಡ್ಡಿ, ಅಂಚೆ ಕಚೇರಿಯ ಮಾಹಿತಿಯನ್ನೂ ತೆರಿಗೆದಾರರ ಪಟ್ಟಿಮಾಡಿದ ಭದ್ರತೆಗಳಿಂದ ಮುಂಚಿತವಾಗಿ ಭರ್ತಿ ಮಾಡಲಾಗುತ್ತದೆ. ಇದರ ಕಾರಣದಿಂದಾಗಿ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆ ಇನ್ಮುಂದೆ ಸುಲಭವಾಗಲಿದೆ.
ಎಲ್ ಟಿ ಸಿ ಗೆ ರಿಲೀಫ್ :
ಕೋವಿಡ್ ಮತ್ತು ಲಾಕ್ ಡೌನ್ ನಿಂದಾಗಿ, ಸರ್ಕಾರಿ ನೌಕರರು ಲೀವ್ ಟ್ರಾವೆಲ್ ಕನ್ಸಿಶನ್ ಪ್ರಯೋಜನವನ್ನು ಪಡೆಯಲು ಸಾಧ್ಯವಾಗಲಿಲ್ಲ, ಎಲ್ ಟಿ ಸಿ ಗೆ ನಗದು ಭತ್ಯೆಯ ಮೇಲೆ ತೆರಿಗೆ ವಿನಾಯಿತಿ ಯನ್ನು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ.
ಇನ್ನು, ಎಲ್ ಟಿ ಸಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಹಿಂದೆ Udayavani.com ವಿಸ್ತೃತ ವರದಿಯನ್ನು ಮಾಡಿತ್ತು.
ಓದಿ : ಬಿಜೆಪಿಯ ಬೆಂಬಲದಿಂದಾಗಿ ನಮ್ಮ ಸರ್ಕಾರ ಸುಸೂತ್ರವಾಗಿ ಅಧಿಕಾರ ನಡೆಸುತ್ತಿದೆ : ಪಳನಿಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.