ಹೆರಕಲ್‌ ಬ್ಯಾರೇಜ್‌ಗೆ ಎತ್ತರ ಹೆಚ್ಚಳದ ಭಾಗ್ಯ!

| ಈಗಿರುವ 515 ರಿಂದ 517.50 ಮೀಟರ್‌ ಗೆ ಹೆಚ್ಚಳ

Team Udayavani, Mar 24, 2021, 12:09 PM IST

ಹೆರಕಲ್‌ ಬ್ಯಾರೇಜ್‌ಗೆ ಎತ್ತರ ಹೆಚ್ಚಳದ ಭಾಗ್ಯ!

ಬಾಗಲಕೋಟೆ: ಹಿನ್ನೀರು ಹಿಡಿದಿಟ್ಟುಕೊಂಡು ಮೂರು ತಾಲೂಕಿನ ನೀರಿನ ಭವಣೆ ನೀಗಿಸುವ ಬೀಳಗಿ ತಾಲೂಕಿನ ಹೆರಕಲ್‌ ಸೇತುವೆ ಸಹಿತ ಬ್ಯಾರೇಜ್‌ಎತ್ತರಿಸಲು ಕೃಷ್ಣಾ ಭಾಗ್ಯ ಜಲ ನಿಗಮಅನುಮತಿ ನೀಡಿದೆ. ಇದರಿಂದ ಇನ್ನೂ 2 ಟಿಎಂಸಿ ಅಡಿ ನೀರು ಹೆಚ್ಚುವರಿಯಾಗಿಲಭ್ಯವಾಗಲಿದ್ದು, ಇದರಿಂದ ಹೊಸದಾಗಿ ಅನುಮೋದನೆಗೊಂಡಿರುವ ಕೆರೂರ ಏತ ನೀರಾವರಿ ಯೋಜನೆಗೆ ಸದ್ಬಳಕೆಯಾಗಲಿದೆ.

ಹೌದು, ಬೀಳಗಿ ತಾಲೂಕಿನ ಹೆರಕಲ್‌ಮೂಗಿ ಬಳಿ ಒಟ್ಟು 72 ಕೋಟಿ ವೆಚ್ಚದಲ್ಲಿಜಿಲ್ಲೆಯಲ್ಲೇ ಮಾದರಿಯಾದ ಬ್ಯಾರೇಜ್ ‌ನಿರ್ಮಿಸಲಾಗಿದೆ. ಸದ್ಯ ಜಿಲ್ಲೆಯಮಲಪ್ರಭಾ, ಕೃಷ್ಣಾ ಹಾಗೂ ಘಟಪ್ರಭಾನದಿ ಪಾತ್ರದಲ್ಲಿರುವ ಅಷ್ಟೂ ಬ್ಯಾರೇಜ್‌ಗಳಲ್ಲಿ ಹೆರಕಲ್‌ ಬ್ಯಾರೇಜ್‌ನ ಡಿಸೈನ್‌ಹಾಗೂ ನೀರು ನಿಲ್ಲುವ ಸ್ಥಳ ಅತ್ಯಂತಅದ್ಬುತವಾಗಿದೆ. ಹೆರಕಲ್‌ ಮೂಕಿ ಎಂದೇಕರೆಯುತ್ತಿದ್ದ ಸ್ಥಳದಲ್ಲಿ ಈ ಬ್ಯಾರೇಜ್‌ ಇದ್ದು,ಇದೊಂದು ಪ್ರವಾಸಿ ತಾಣವಾಗಿ ರೂಪಿಸುವ ಚರ್ಚೆ ಕೂಡ ನಡೆಯುತ್ತಿವೆ.

ಸದ್ಯ 1.80 ಟಿಎಂಸಿ ಅಡಿ ನೀರು: ಹೆರಕಲ್‌ಮೂಕಿ ಬಳಿ ಘಟಪ್ರಭಾ ನದಿಯ ಆಲಮಟ್ಟಿಹಿನ್ನೀರು ವ್ಯಾಪ್ತಿಯ ನದಿ ತಳಮಟ್ಟ 503ಮೀಟರ್‌ನಿಂದ 515 ಮೀಟರ್‌ ವರೆಗೆನೀರು ಸಂಗ್ರಹಿಸಲಾಗುತ್ತಿದೆ. ಸಧ್ಯ 1.80ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯಹೊಂದಿದ್ದು, 178 ಮೀಟರ್‌ ಬ್ಯಾರೇಜ್‌ಉದ್ದ, 260 ಮೀಟರ್‌ ಸೇತುವೆ ಉದ್ದವಿದೆ. 7.50 ಮೀಟರ್‌ ಸೇತುವೆ ರಸ್ತೆ ಅಗಲವಿದ್ದು, ಬ್ಯಾರೇಜ್‌ನ ಪ್ರತಿ ಗೇಟ್‌ನ ಅಳತೆ 8ರಿಂದ 9.60 ಮೀಟರ್‌ ಅಂತರವಿದೆ.

ಈ ಬ್ಯಾರೇಜ್‌ನಲ್ಲಿ 506 ಮೀಟರ್‌ನಿಂದ 528 ಮೀಟರ್‌ ವರೆಗೆ ನೀರು ಸಂಗ್ರಹಿಸಲುಅವಕಾಶವಿದೆ. ಆದರೆ, ಕೃಷ್ಣಾ ಭಾಗ್ಯಜಲ ನಿಮಗದಿಂದ ಕಳೆದ 2016ರಲ್ಲಿಪೂರ್ಣಗೊಂಡ ಈ ಬ್ಯಾರೇಜ್‌ನಲ್ಲಿ515ರ ವರೆಗೆ ಮಾತ್ರ ನೀರು ಸಂಗ್ರಹಕ್ಕೆಅನುಮತಿ ನೀಡಿತ್ತು. 528 ಮೀಟರ್‌ ವರೆಗೆ ಸಂಗ್ರಹಿಸಲು ಅವಕಾಶಗಳಿದ್ದು,ಹೆಚ್ಚಿನ ನೀರು ಸಂಗ್ರಹಕ್ಕೆ ಅನುಮತಿ ಇರಲಿಲ್ಲ. ಹೀಗಾಗಿ ಕೇವಲ 1.80 ಟಿಎಂಸಿ ಅಡಿ ನೀರು ಹೆರಕಲ್‌ ಬ್ಯಾರೇಜ್‌ನಲ್ಲಿ ಹಿಡಿದಿಟ್ಟುಕೊಳ್ಳಲು ಅವಕಾಶವಿತ್ತು. ಇದೀಗ ಕೃಷ್ಣಾ ಭಾಗ್ಯ ಜಲ ನಿಮಗದಿಂದ 517.50ಮೀಟರ್‌ವರೆಗೆ ನೀರು ಸಂಗ್ರಹಕ್ಕೆ ಅನುಮತಿಸಿಕ್ಕಿದೆ. ಇದರಿಂದ 2 ಟಿಎಂಸಿ ಅಡಿ ನೀರುಹೆಚ್ಚುವರಿಯಾಗಿ ಲಭ್ಯವಾಗಲಿದೆ.

16 ಕೋಟಿ ಅನುದಾನ: ಸದ್ಯದ 515 ಮೀಟರ್‌ನಿಂದ 517.50 ಮೀಟರ್‌ ವರೆಗೆನೀರು ಸಂಗ್ರಹಿಸುವ ಸಾಮರ್ಥ್ಯ ಹೆಚ್ಚಿಸಲುಸರ್ಕಾರ 16 ಕೋಟಿ ರೂ. ಅನುದಾನ ನೀಡಿದೆ. ಈ ಬ್ಯಾರೇಜ್‌ನ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು, ಬೀಳಗಿಯ ಶಾಸಕರೂ ಆಗಿರುವ ಸಚಿವ ಮುರುಗೇಶನಿರಾಣಿ ಅವರು ಹಲವು ವರ್ಷಗಳಿಂದಸತತ ಪ್ರಯತ್ನ ಮಾಡಿದ್ದರು. ಅವರುಸಚಿವರಾದ ಬಳಿಕ ಇದಕ್ಕೆ ಹೆಚ್ಚಿನ ಒತ್ತುನೀಡಿದ್ದು, ಬ್ಯಾರೇಜ್‌ ಎತ್ತರಿಸಲು 16 ಕೋಟಿಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಮೂರು ತಾಲೂಕಿಗೆ ಆಸರೆ ಬ್ಯಾರೇಜ್‌: ಈ ಬ್ಯಾರೇಜ್‌ ಹಾಗೂಆಲಮಟ್ಟಿ ಜಲಾಶಯದ ಹಿನ್ನೀರುಬಳಸಿಕೊಂಡು ಹೆರಕಲ್‌(ದಕ್ಷಿಣ) ಏತನೀರಾವರಿ ಯೋಜನೆ ಕೈಗೊಂಡಿದ್ದು,ಇದರಿಂದ ದಕ್ಷಿಣ ಭಾಗದ ಜಲಗೇರಿ,ಯಂಕಂಚಿ, ನರೇನೂರ, ಸಾಗನೂರ,ನರೇನೂರ ತಾಂಡಾ, ಫಕೀರಬೂದಿಹಾಳ,ಮಾಳಗಿ, ಒಡೆಯನ ಹೊಸಕೋಟೆ,ಯರಗೊಪ್ಪ, ಕಲಬಂದಕೇರಿ, ಅಗಸನಗೊಪ್ಪ,ಕೆರೂರ, ಕಡಪಟ್ಟಿ , ಜಮ್ಮನಕಟ್ಟೆ, ಮತ್ತಿಕಟ್ಟೆ,ಚಿಂಚಲಕಟ್ಟಿ, ಮನಿನಗರ, ಹೂಲಗೇರಿ,ಗೂಬರಕೊಪ್ಪ ಸೇರಿ ಒಟ್ಟು 20 ಹಳ್ಳಿಗೆ ಆಸರೆಯಾಗಿದೆ.

ಇನ್ನು ಹೆರಕಲ್‌ ಉತ್ತರ ಯೋಜನೆಯಡಿಜಾನಮಟ್ಟಿ, ಅರಕೇರಿ, ಅರಕೇರೆ ತಾಂಡಾ,ಕುಂದರಗಿ, ಸುನಗ, ಸುನಗ ತಾಂಡಾ,ಬಾವಲತ್ತಿ, ಕೋವಳ್ಳಿ ಗ್ರಾಮಗಳಿಗೆ ನೀರು,ನೀರಾವರಿ ಒದಗಿಸಲು ಸಹಕಾರಿಯಾಗಿದೆ.

7 ಬಹುಹಳ್ಳಿ ಯೋಜನೆಗೂ ನೀರು:

ಈ ಬ್ಯಾರೇಜ್‌ ಎತ್ತರಿಸುವುದರಿಂದ ಬಾಗಲಕೋಟೆ ನಗರ ಸೇರಿದಂತೆ ಸುಮಾರುಏಳು ಬಹುಹಳ್ಳಿ ಕುಡಿಯುವ ನೀರುಪೂರೈಕೆ ಯೋಜನೆಯಡಿ ಸುಮಾರು 80ಕ್ಕೂಹೆಚ್ಚು ಹಳ್ಳಿ, ಪುನರ್‌ವಸತಿ ಕೇಂದ್ರಗಳಿಗೆ ನೀರಿನ ಸಮಸ್ಯೆ ನೀಗಲಿದೆ. 72 ಕೋಟಿವೆಚ್ಚದಲ್ಲಿ ಬ್ಯಾರೇಜ್‌ ನಿರ್ಮಿಸಿದ್ದರೂ ಕೇವಲ 1.80 ಟಿಎಂಸಿ ಅಡಿ ನೀರು ಸಂಗ್ರಹ ಮಾಡುತ್ತಿದ್ದ ಹೆರಕಲ್‌ ಬ್ಯಾರೇಜ್‌ನಲ್ಲಿಇನ್ನು 517.50 ಮೀಟರ್‌ವರೆಗೂ ನೀರು ಸಂಗ್ರಹ ಮಾಡಬಹುದು. ಇದರಿಂದಘಟಪ್ರಭಾ ನದಿಯಲ್ಲಿ (ಆಲಮಟ್ಟಿ ಹಿನ್ನೀರುಸಹಿತ) ಕಲಾದಗಿ ಬ್ಯಾರೇಜ್‌ ವರೆಗೆ ನೀರುಒತ್ತಿ ನಿಲ್ಲಲಿದೆ. ಹೀಗಾಗಿ ಬಾಗಲಕೋಟೆ,ಬಾದಾಮಿ ಹಾಗೂ ಬೀಳಗಿ ಸೇರಿ ಮೂರುತಾಲೂಕಿನ ನೀರಿನ ಬವಣೆ ನೀಗಿಸಲುಈ ಬ್ಯಾರೇಜ್‌ನ ಎತ್ತರ ಯೋಜನೆ ಪರಿಣಾಮಕಾರಿಯಾಗಲಿದೆ.

ಹೆರಕಲ್‌ ಬ್ಯಾರೇಜ್‌ ಎತ್ತರಿಸಬೇಕು ಎಂಬುದು ನನ್ನ ಬಹುದಿನಗಳ ಆಶಯವಾಗಿತ್ತು. ನಾನು ಬೀಳಗಿ ಕ್ಷೇತ್ರದಿಂದ 2018ರಚುನಾವಣೆಯಲ್ಲಿ ಆಯ್ಕೆಯಾದಾಗಿನಿಂದಲೂ ಪ್ರಯತ್ನಿಸುತ್ತಿದ್ದೆ.ಹಿಂದಿನ ಸಮ್ಮಿಶ್ರ ಸರ್ಕಾರ ಇದಕ್ಕೆ ಅನುದಾನ, ಅನುಮತಿ ಕೊಡಲಿಲ್ಲ.ಇದೀಗ ನಮ್ಮದೇ ಸರ್ಕಾರ ಬಂದಿದ್ದು, ಸಚಿವನೂ ಆಗಿದ್ದೇನೆ. ಹೀಗಾಗಿಜಲ ಸಂಪನ್ಮೂಲ ಇಲಾಖೆ, ಮುಖ್ಯಮಂತ್ರಿಗಳ ಮನವೊಲಿಸಿ, ಬ್ಯಾರೇಜ್‌ ಎತ್ತರಿಸುವುದರಿಂದ ಆಗುವ ಲಾಭಗಳ ಕುರಿತು ಯೋಜನೆ ಸಲ್ಲಿಸಿ, 16 ಕೋಟಿಅನುದಾನ ಪಡೆಯಲಾಗಿದೆ. ಇದರಿಂದ ಮೂರು ತಾಲೂಕಿನ ರೈತರಿಗೆ ಕುಡಿಯುವನೀರಿಗೆ ಅನುಕೂಲವಾಗಲಿದೆ. ಮುರುಗೇಶ ನಿರಾಣಿ, ಗಣಿ ಮತ್ತು ಭೂ ವಿಜ್ಞಾನ ಸಚಿವ

­- ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್‌ ಮತ್ತು ಬಾಬಾ ನಡುವಿನ ಹೋರಾಟ

Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್‌ ಮತ್ತು ಬಾಬಾ ನಡುವಿನ ಹೋರಾಟ

Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ

Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ

RSS ವಿರುದ್ಧ ಹೇಳಿಕೆ ಪ್ರಕರಣ: ಗೀತ ರಚನೆಕಾರ ಜಾವೇದ್‌ ಅಖ್ತರ್‌ ಖುಲಾಸೆ

RSS ವಿರುದ್ಧ ಹೇಳಿಕೆ ಪ್ರಕರಣ: ಗೀತ ರಚನೆಕಾರ ಜಾವೇದ್‌ ಅಖ್ತರ್‌ ಖುಲಾಸೆ

SC: ಬಿಯಾಂತ್‌ ಹಂತಕ ಬಲ್ವಂತ್‌ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ

SC: ಬಿಯಾಂತ್‌ ಹಂತಕ ಬಲ್ವಂತ್‌ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ

ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್‌ ಮತ್ತು ಬಾಬಾ ನಡುವಿನ ಹೋರಾಟ

Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್‌ ಮತ್ತು ಬಾಬಾ ನಡುವಿನ ಹೋರಾಟ

Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ

Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ

Ullala-Swim-1

Ullala Resort: ಮೃತ ಯುವತಿಯ ಕುಟುಂಬಸ್ಥರ ಆಕ್ರಂದನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.