ಬೇರೆಯವರ ಮೇಲೆ ರಾಡಿ ಎರಚುವ ಕೆಲಸ ಬಿಜೆಪಿ ಮಾಡುತ್ತಿದೆ : ಹೆಚ್.ಡಿ ಕುಮಾರಸ್ವಾಮಿ
Team Udayavani, Mar 24, 2021, 4:24 PM IST
ಬೆಂಗಳೂರು : ಭಗವಂತ ಭೂಮಿಯಲ್ಲಿ ಸೃಷ್ಟಿ ಮಾಡಿರುವ ಜೀವಿಗಳಲ್ಲಿ ಸಹಜವಾದ ಪ್ರಕ್ರಿಯೆ ನಡೆಯಲಿದೆ. ನಿಮ್ಮ ನಿಮ್ಮ ಮುಖಕ್ಕೆ ರಾಡಿ ಎಸೆದುಕೊಂಡಿದ್ದೀರಾ ? ಬೇರೆಯವರ ಮೇಲೆ ರಾಡಿ ಎರಚುವ ಕೆಲಸ ಬಿಜೆಪಿ ಸರ್ಕಾರ ಬಂದ ಮೇಲೆ ನಡೆಯುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಜೆಪಿಭವನದಲ್ಲಿ ಮಾತಾನಾಡಿದ ಅವರು, ಸಚಿವರು ತಪ್ಪು ಮಾಡಿಕೊಂಡಿದ್ದಾರೆ. ಇವರು ಯಾಕೆ ಕೋರ್ಟ್ ಗೆ ಹೋಗಬೇಕಾಯಿತು. ಸ್ವತಃ ಇವರೇ ಸಮಸ್ಯೆಗಳನ್ನ ಉದ್ಭವ ಮಾಡಿಕೊಂಡಿದ್ದಾರೆ. ಇಲ್ಲಿ ಯಾರೂ ಸತ್ಯಹರಿಶ್ಚಂದ್ರ ಅಲ್ಲಾ .ನಾನು ಧೈರ್ಯವಾಗಿಯೇ ಹೇಳಿದ್ದೇನೆ. ನಾನು ಒಮ್ಮೆ ತಪ್ಪು ಮಾಡಿದ್ದೇನೆ .ಎಲ್ಲರ ಮನೆಯಲ್ಲೂ ದೋಸೆ ತೂತೆ ಎಲ್ಲಾ 224 ಶಾಸಕರು ಅಷ್ಟೇ ಅಲ್ಲಾ ಭೂಮಿ ಮೇಲಿನ ಜೀವಿಗಳಲ್ಲೂ ನಡೆಯುವಂತಹ ಸಹಜ ಪ್ರಕ್ರಿಯೆ ಇದು. ಇದರ ಬಗ್ಗೆ ಮಾತನ್ನಾಡುವ ಅಗತ್ಯವಾದರೂ ಏನಿದೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ಮದ್ಯ ಸಿಗದೆ ಸ್ಯಾನಿಟೈಸರ್ ಸೇವಿಸಿ ಮೂವರು ಸಹೋದರರ ಸಾವು..!
ಜೆಪಿಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು, ಯಾವ ಸರ್ಕಾರಗಳು ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಯೋಚಿಸಿಯೇ ಇಲ್ಲ. ಆ ಮಸೂದೆ ಎರಡು ದಶಕಗಳಿಂದ ಸಂಸತ್ ನಲ್ಲಿ ನೆನೆಗುದಿಗೆ ಬಿದ್ದಿದೆ .ರಾಜಕೀಯವಾಗಿ ಅಷ್ಟೇ ಅಲ್ಲಾ ಎಲ್ಲಾ ರಂಗಗಳಲ್ಲೂ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ರಷ್ಟು ಮಹಿಳೆಯರು ಆಯ್ಕೆಯಾಗ್ತಿದ್ದಾರೆ ಎಂದರು.
ಕೋವಿಡ್ ಸಂದರ್ಭದಲ್ಲೂ ಮಹಿಳೆಯರು ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ಶಾರದಾ ಪೂರ್ಯ ನಾಯ್ಕ್ ಅವರನ್ನು ಬೆಳೆಸುತ್ತಿದ್ದೇನೆ. ನನ್ನ ತಂಗಿಯಂತೆ ಅವರನ್ನು ರಾಜಕೀಯವಾಗಿ ಬೆಳೆಸುತ್ತಿದ್ದೇನೆ. ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡರೂ ಹೋರಾಟ ನಡೆಸುತ್ತಿದ್ದಾರೆ ತಮ್ಮದೇ ಆದ ಶಕ್ತಿಯನ್ನ ಅವರು ಬೆಳೆಸಿಕೊಂಡಿದ್ದಾರೆ ಇದು ನಿಮಗೆ ಮಾದರಿಯಾಗಬೇಕು ಎಂದು ಹೇಳಿದರು.
ಈ ಹಿಂದಿನ ಪರಿಸ್ಥಿತಿಯೇ ಬೇರೆ ಈಗಿನ ಪರಿಸ್ಥಿತಿಯೇ ಬೇರೆ. ಹಣ ಇಲ್ಲದೇ ಇದ್ರೆ ಚುನಾವಣೆ ನಡೆಸಲು ಸಾಧ್ಯವಿಲ್ಲ.ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಹಣವೇ ಪ್ರಮುಖವಾಗಿದೆ.ಇವರು ಹಣದಿಂದ ಏನು ಬೇಕಾದರೂ ಕೊಂಡುಕೊಳ್ತಾರೆ ಬೇಕಾದರೆ ರಾಜ್ಯ ಸರ್ಕಾರವನ್ನೇ ಕೊಂಡುಕೊಳ್ತಾರೆ ಎಂದು ಟೀಕಿಸಿದರು.
ಪಶ್ಚಿಮ ಬಂಗಾಳದಲ್ಲಿ ಮಹಿಳೆ ವಿರುದ್ಧ ಏನೆಲ್ಲಾ ನಡೆಯುತ್ತಿದೆ ಅನ್ನುವುದು ಗೊತ್ತಿದೆ. ಮಮತಾ ಬ್ಯಾನರ್ಜಿ ಹಂತ ಹಂತವಾಗಿ ಬೆಳೆದು ಬಂದಿದ್ದಾರೆ.ಈಗ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದಾರೆ. ಕೆಲವರು ಅವರ ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಇಂದು ಚುನಾವಣೆ ಗೆಲ್ಲಲು ಬಿಜೆಪಿ ನಾಯಕರ ದಂಡೇ ಅಲ್ಲಿಗೆ ಹೋಗಿದೆ .ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ. ದೇವರ ದಯೆಯಿಂದ ಏನಾಗಲಿದೆಯೋ ನೋಡಬೇಕು ಚುನಾವಣಾ ಸಮೀಕ್ಷೆಗಳು ಅವರೇ ಗೆಲ್ಲುತ್ತಾರೆ ಅಂತಾ ಹೇಳಿವೆ ಈಗಿನ ಪರಿಸ್ಥಿತಿಯನ್ನ ನೋಡಿದ್ರೆ ಮಮತಾ ಬ್ಯಾನರ್ಜಿ ಅವರೇ ಗೆಲ್ಲಬೇಕು ಅವರನ್ನೇ ಮಹಿಳೆಯರು ರೋಲ್ ಮಾಡೆಲ್ ನ್ನಾಗಿ ಮಾಡಿಕೊಳ್ಳಬೇಕು ನಾವು ಮೈಸೂರು ಪಾಲಿಕೆಯಲ್ಲಿ ಮಹಿಳೆಯನ್ನೇ ಮೇಯರ್ ಮಾಡಿದ್ದೇವೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.