ಋತುಸ್ರಾವ ಸಮಸ್ಯೆ ನಿವಾರಣೆಗೆ ಪಪ್ಪಾಯಿ ಸಿದ್ದೌಷಧ..!
Team Udayavani, Mar 24, 2021, 5:58 PM IST
ಪಪ್ಪಾಯಿ ಹಣ್ಣನ್ನು ಯಾರು ಇಷ್ಟ ಪಡುವುದಿಲ್ಲ ಹೇಳಿ.? ಮೃದು ಮೃದುವಾಘಿ ಸಿಹಿ ಸಹಿಯಾಗಿ ಪಪ್ಪಾಯಿ ತಿನ್ನುವುದೆಂದರೇ ಎಲ್ಲರಿಗೂ ಇಷ್ಟ. ಪಪ್ಪಾಯಿ ತಿನ್ನುವುದಕ್ಕೆ ಮಾತ್ರವಲ್ಲ. ಅದು ಆರೋಗ್ಯಕ್ಕೂ ಪ್ರಯೊಜಕಾರಿ. ಮೃದು ಮೃದುವಾದ ಸಿಹಿ ಸಿಹಿಯಾದ ಪಪ್ಪಾಯಿ ಕ್ಯಾನ್ಸರ್ ಗೆ ರಾಮಬಾಣ ಅಂದರೇ ನೀವು ನಂಬುತ್ತೀರಾ..? ಯೆಸ್ ನೀವು ನಂಬಲೇಬೇಕು.
ಪಪ್ಪಾಯಿ ಹಣ್ಣು ಸಾಮಾನ್ಯವಾಗಿ ಜೀರ್ಣಕ್ರಿಯೆಗೆ ಸಹಕಾರಿ. ಜೀರ್ಣಕಾರಿ ಸೂಪರ್ ಕಿಣ್ವದ ಪಾಪೈನ್ ಉಪಸ್ಥಿತಿಯು ಪ್ರೋಟೀನ್‌ಗಳನ್ನು ಒಡೆಯುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಪಪ್ಪಾಯಿ. ಅಷ್ಟಲ್ಲದೇ, ಜೀರ್ಣಾಂಗವನ್ನು ಶುದ್ಧೀಕರಿಸುತ್ತದೆ.
ಓದಿ : ಎಲ್ಲರೂ ಏಕಪತ್ನಿ ವ್ರತಸ್ಥರಾ?; 224 ಶಾಸಕರ ವೈಯಕ್ತಿಕ ಜೀವನದ ಬಗ್ಗೆ ತನಿಖೆಯಾಗಲಿ: ಸುಧಾಕರ್
ತೂಕ ಇಳಿಸಿಕೊಳ್ಳಲು ಪಪ್ಪಾಯಿ ಬೆಸ್ಟ್..!
ದೈಹಿಕವಾಗಿ ತಮ್ಮ ತೂಕವನ್ನು ಯಾರು ಕಡಿಮೆ ಮಾಡಲು ಬಯಸುತ್ತಾರೋ ಅಂಥವರಿಗೆ ಪಪ್ಪಾಯಿ ತುಂಬಾ ಆರೋಗ್ಯ ಪೂರ್ಣವಾದ ಹಣ್ಣು. ಸಾಯಂಕಾಲ ಅಥವಾ ಬೆಳಿಗ್ಗೆ ಪ್ರತಿ ದಿನ ಪಪ್ಪಾಯಿ ಸೇವಿಸುವುದರಿಂದ ಬೇಗನೆ ತೂಕವನ್ನು ಕಳೆದುಕೊಳ್ಳಬಹುದು ಎನ್ನುತ್ತಾರೆ ತಜ್ಞರು.
ಹಲ್ಲುನೋವು ನಿವಾರಣೆಗೆ ಮುಲಾಮು ಈ ಪಪ್ಪಾಯಿ
ತಾಜಾ ಪಪ್ಪಾಯಿ ಬೇರುಗಳ ಪೇಸ್ಟ್ ಮಾಡಿ ಹಲ್ಲುಗಳು ಮತ್ತು ಒಸಡುಗಳ ಮೇಲೆ ಉಜ್ಜುವುದರಿಂದ ಹಲ್ಲಿನ ನೋವವನ್ನು ಶಮನ ಮಾಡಬಹುದಾಗಿದೆ.
ಚರ್ಮದ ಚೈತನ್ಯಕ್ಕೆ ಪಪ್ಪಾಯಿ ಔಷಧ :
ಪಪ್ಪಾಯಿ ಚರ್ಮಕ್ಕೆ ಹೊಸ ಚೈತನ್ಯವನ್ನು ನೀಡುವುದರಿಂದ ಇದನ್ನು ಹಲವಾರು ಸೌಂದರ್ಯವರ್ಧಕಗಳಲ್ಲಿ ಬಳಸುತ್ತಾರೆ. ಹಾಗೂ ಅನೇಕ ಮಹಿಳೆಯರು ಮನೆಯಲ್ಲಿ ಇದನ್ನು ಫೇಸ್ ಪ್ಯಾಕ್ ಆಗಿ ತಯಾರು ಮಾಡುತ್ತಾರೆ. ಚರ್ಮವನ್ನು ಶುದ್ಧೀಕರಿಸುತ್ತದೆ. ಇದನ್ನು ಪ್ರತಿದಿನ ಬಳಸುವುದರಿಂದ ಸನ್ ಬರ್ನ್‌ನಿಂದ ರಕ್ಷಣೆ ದೊರೆಯುತ್ತದೆ. ಎಸ್ಜಿಮಾ, ಸೋರಿಯಾಸಿಸ್ ಮುಂತಾದ ಚರ್ಮದ ಅಸ್ವಸ್ಥತೆಗಳಿಗೆ ಪಪ್ಪಾಯವನ್ನು ಔಷಧ ರೂಪದಲ್ಲಿ ಬಳಸಲಾಗುತ್ತದೆ.
ಹೃದಯವನ್ನು ಸಮಸ್ಥಿತಿಯಲ್ಲಿರಿಸುತ್ತದೆ ಪಪ್ಪಾಯಿ
ತಜ್ಞರು ಹೇಳುವ ಪ್ರಕಾರ, ಪಪ್ಪಾಯಿಯ ಬೀಜಗಳು ಆರೋಗ್ಯಪೂರ್ಣ ಹೃದಯಕ್ಕೆ ಒಳ್ಳೆಯದು. ಪಪ್ಪಾಯಿಯಲ್ಲಿ ಮೂರು ವಿಟಮಿನ್ ಎ, ಸಿ, ಮತ್ತು ಇ ಇದ್ದುದರಿಂದ, ಪಪ್ಪಾಯಿಗಳು ಅಪಧಮನಿಕಾಠಿಣ್ಯ ಮತ್ತು ಮಧುಮೇಹ ಹೃದಯ ಕಾಯಿಲೆಗಳಂತಹ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಸಹಾಯಕವಾಗಿವೆ.
ಓದಿ : ಒನ್‌ಪ್ಲಸ್ 9 ಸರಣಿಯ ಮೊಬೈಲ್ ಗಳು ಭಾರತದಲ್ಲಿ ಬಿಡುಗಡೆ. ವಿಶೇಷತೆಗಳೇನು?
ಮೊಡವೆಯನ್ನು ಕಡಿಮೆ ಮಾಡುತ್ತದೆ
ಪಪ್ಪಾಯಿಯಿಂದ ಪಡೆಯಲಾದ ಲ್ಯಾಟೆಕ್ಸ್ ಮುಖದಲ್ಲಿನ ಮೊಡವೆಗಳನ್ನು ಹೋಗಲಾಗಿಸುತ್ತದೆ. ಪಪ್ಪಾಯಗಳನ್ನು ಒಳಗೊಂಡಿರುವ ಆಹಾರವು ಆಂತರಿಕವಾಗಿ ಸ್ಥಿತಿಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ, ಚರ್ಮವನ್ನು ಸ್ವಚ್ಛಗೊಳಿಸುತ್ತದೆ.
ಪಪ್ಪಾಯ ಹಣ್ಣಿನ ಲ್ಯಾಟೆಕ್ಸ್ ಅಂಶವನ್ನು ಸುಟ್ಟ ಜಾಗಕ್ಕೆ ಅನ್ವಯಿಸಿದಾಗ, ಸುಟ್ಟ ಭಾಗದ ಕಲೆಗಳನ್ನು ಹೋಗಲಾಡಿಸಲು ಇದು ಸಹಾಯ ಮಾಡುತ್ತದೆ.
ಮಲಬದ್ಧತೆ ನಿವಾರಣೆಗೆ ಪಪ್ಪಾಯಿ ಬೆಸ್ಟ್
ಪಪ್ಪಾಯಿಯಲ್ಲಿನ ಫೋಲೇಟ್, ವಿಟಮಿನ್ ಸಿ, ಮತ್ತು ವಿಟಮಿನ್ ಇ ಇರುವುದರಿಂದ ಹೊಟ್ಟೆಯಲ್ಲಿ ಮತ್ತು ಕರುಳಿನಲ್ಲಿ ಟಾನಿಕ್ ಪರಿಣಾಮವನ್ನು ಉಂಟುಮಾಡುವ ಮೂಲಕ ಚಲನೆಯ ಅನಾರೋಗ್ಯವನ್ನು ಕಡಿಮೆ ಮಾಡುತ್ತದೆ. ಪಪ್ಪಾಯಿ ರಸ ಮತ್ತು ಅದರ ಪಕ್ವವಾದ ರೂಪ ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ.
ಪಪ್ಪಾಯಿ ಋತುಸ್ರಾವ ಸಮಸ್ಯೆಗೆ ಸಹಕಾರಿ
ಅನಿಯಮಿತ ಮುಟ್ಟಿನ ಸಮಯ ಹೊಂದಿರುವ ಮಹಿಳೆಯರಿಗೆ ಪಪ್ಪಾಯಿ ರಸವು ಹೆಚ್ಚಿನ ಸಹಾಯ ಮಾಡುತ್ತದೆ. ಹಸಿರು, ಬಲಿಯದ ಪಪಾಯಗಳು ಸೇವನೆಯು ಋತು ಚಕ್ರವನ್ನು ಸಮಗೊಳಿಸುತ್ತದೆ. ಪಪ್ಪಾಯಗಳನ್ನು ‘ಹೀಟ್’ ಎಂದು ಪರಿಗಣಿಸಲಾಗುತ್ತದೆ, ಅಂದರೆ ದೇಹದಲ್ಲಿ ಶಾಖವನ್ನು ಉತ್ಪತ್ತಿ ಮಾಡುತ್ತದೆ. ಈ ಶಾಖದ ಅತಿಯಾದ ಉತ್ಪತ್ತಿಯು ಈಸ್ಟ್ರೊಜೆನ್ ಹಾರ್ಮೋನನ್ನು ಉತ್ತೇಜಿಸುತ್ತದೆ. ಇದು ಸ್ತ್ರೀಯರ ಅವಧಿಗಳನ್ನು ಪ್ರಚೋದಿಸುತ್ತದೆ. ಆದ್ದರಿಂದ, ಪಪ್ಪಾಯಿ ಮಹಿಳೆಯರ ಋತುಸ್ರಾವ ಸಮಸ್ಯೆಯ ನಿವಾರಣೆಗೆ ಪಪ್ಪಾಯಿ ಪ್ರಮುಖ ಪಾತ್ರ ವಹಿಸುತ್ತದೆ.
ಓದಿ : ನನಗೆ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಕನಸಿಲ್ಲ, ಪಕ್ಷ ಸಂಘಟನೆಯೊಂದೇ ಗುರಿ : ಗೌರವ್ ಗೊಗೊಯ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
World Diabetes Day; ಮಧುಮೇಹದಲ್ಲಿದೆ ಹಲವು ರೀತಿ; ಇಲ್ಲಿದೆ ಅದರ ಸಂಪೂರ್ಣ ವಿವರ
Mother: ತಾಯಂದಿರ ಮಾನಸಿಕ ಆರೋಗ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.