ಗುಯಾನಾದಿಂದ ಭಾರತಕ್ಕೆ ತೈಲ ಹೊತ್ತ ನೌಕೆಯ ಪಯಣ! ಹೊಸ ತೈಲ ಉತ್ಪಾದಕ ದೇಶದಿಂದ ತೈಲ ಖರೀದಿ
ಮಧ್ಯಪ್ರಾಚ್ಯಗಳ ಮೇಲಿನ ತೈಲ ಅವಲಂಬನೆ ತಗ್ಗಿಸಲು ಕ್ರಮ
Team Udayavani, Mar 24, 2021, 6:34 PM IST
ನವದೆಹಲಿ: ಕಚ್ಚಾ ತೈಲಕ್ಕಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ಭಾರತ, ಈಗ ಜಗತ್ತಿನ ಹೊಸ ತೈಲ ಉತ್ಪಾದಕ ದೇಶವೊಂದರಿಂದ ತೈಲ ಖರೀದಿ ಪ್ರಕ್ರಿಯೆ ಆರಂಭಿಸಿದೆ.
ಜಗತ್ತಿನಲ್ಲೇ ಮೂರನೇ ಅತಿದೊಡ್ಡ ತೈಲ ಆಮದು ದೇಶವಾಗಿರುವ ಭಾರತವು ಈಗ ದಕ್ಷಿಣ ಅಮೆರಿಕದ ರಾಷ್ಟ್ರ ಗುಯಾನಾದಿಂದ ತೈಲವನ್ನು ಖರೀದಿಸಿದೆ. 10 ಲಕ್ಷ ಬ್ಯಾರೆಲ್ನಷ್ಟು ತೈಲ ಹೊತ್ತ ನೌಕೆಯು ಗುಯಾನಾದ ಕರಾವಳಿಯಿಂದ ಸಂಚಾರ ಆರಂಭಿಸಿದೆ.
ಏಪ್ರಿಲ್ ತಿಂಗಳವರೆಗೂ ಉತ್ಪಾದನೆಗೆ ಕಡಿವಾಣ ಹಾಕುವ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಒಪೆಕ್ ರಾಷ್ಟ್ರಗಳು ಪಟ್ಟು ಹಿಡಿದಿದ್ದೇ ಭಾರತ ಪರ್ಯಾಯ ದಾರಿಯತ್ತ ಮುಖ ಮಾಡಲು ಕಾರಣ.
ಇದನ್ನೂ ಓದಿ :14ನೇ ಐಪಿಎಲ್ನಲ್ಲಿ ಪಾಲ್ಗೊಳ್ಳಲು ಮುಂಬಯಿಗೆ ಬಂದಿಳಿದ ರಸೆಲ್, ನಾರಾಯಣ್
ಏ.8ಕ್ಕೆ ತಲುಪಲಿದೆ ಗುಯಾನಾ ತೈಲ:
ಗುಯಾನಾದ ಲಿಝಾ ಲೈಟ್ ಸ್ವೀಟ್ ಕ್ರೂಡ್ನಿಂದ 10 ಲಕ್ಷ ಬ್ಯಾರೆಲ್ ಕಚ್ಚಾ ತೈಲ ತುಂಬಿದ ನೌಕೆಯು ಮಾ.2ರಂದೇ ಸಂಚಾರ ಆರಂಭಿಸಿದ್ದು, ಏ.8ರ ವೇಳೆಗೆ ಭಾರತದ ಮುಂದ್ರಾ ಬಂದರನ್ನು ತಲುಪಲಿದೆ. 2020ರ ಆರಂಭದಲ್ಲೇ ಗುಯಾನಾವು ತೈಲ ರಫ್ತು ಆರಂಭಿಸಿದೆ. ಇಲ್ಲಿಂದ ಬಹುತೇಕ ತೈಲವನ್ನು ಅಮೆರಿಕ, ಚೀನಾ, ಪನಾಮಾ ಮತ್ತು ಕೆರಿಬಿಯನ್ಗಳಿಗೆ ಸಾಗಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Delhi: 5ಜಿ ಸೇವೆಗಾಗಿ ಬಿಎಸ್ಎನ್ಎಲ್ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.