ಆಲೂರಿಗೆ ಬಾರದ ಇಂದಿರಾ ಕ್ಯಾಂಟೀನ್
Team Udayavani, Mar 24, 2021, 6:42 PM IST
ಆಲೂರು: ಹಾಸನ ಜಿಲ್ಲೆಯಲ್ಲಿಯೇ ಆಲೂರು ತಾಲೂಕು ಅತಿ ಚಿಕ್ಕ ತಾಲೂಕು ಎಂದು ಎಲ್ಲಾವಿಚಾರದಲ್ಲಿಯೂ ಕಡೆಗಣಿ ಸುತ್ತಾ ಬಂದ ಜನಪ್ರತಿನಿಧಿಗಳು. ಹೀಗೆಯೇ ಎಲ್ಲಾವಿಚಾರದಲ್ಲಿಯೂ ನಿರ್ಲಕ್ಷ್ಯ ತೋರುತ್ತಾ ಬಡವರ ಹಸಿವನ್ನು ನೀಗಿಸಲು ಸಿದ್ದರಾಮಯ್ಯ ಸರಕಾರ ರೂಪಿಸಿದ ಇಂದಿರಾ ಕ್ಯಾಂಟೀನ್ ತರುವಲ್ಲಿಯೂ ಕೂಡ ವಿಫಲರಾಗಿದ್ದು ಇವರ ನಿರ್ಲಕ್ಷ್ಯದಿಂದ ಅದೆಷ್ಟೋ ಬಡವರು ನಿತ್ಯ ಹಸಿವಿನಿಂದ ಬಳಲುವ ಪಟ್ಟಣದಲ್ಲಿ ನಿರ್ಮಾಣವಾಗಿದೆ.
ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳನಡುವೆ ಆಲೂರು ಅಭಿವೃದ್ಧಿ ಗಮನಿಸಿದರೆ ಶೂನ್ಯ. ಇದು ಸಾರ್ವಜನಿಕರ ಮಾತಾಗಿದೆ. ತಾ.ಹಾಸನ ನಗರ ಪಕ್ಕದಲ್ಲಿ ಇರುವುದರಿಂದವು ಅಭಿವೃದ್ಧಿ ಕಂಡಿಲ್ಲ ಎನ್ನುವುದು ಕೂಡಸಾಮಾನ್ಯವಾಗಿ ಬರುವ ಉತ್ತರ. ಆದರೆ ಚಿಕ್ಕತಾಲೂಕು ಎಂದ ಮೇಲೆ ಬಡವರು ನಿರ್ಗತಿಕರು ಇರುವುದಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆ ?ಹಸಿವಿನಿಂದ ವಾಪಸ್ಸಾಗುವ ಜನತೆ: ತಾಲೂಕಿನಲ್ಲಿಯೂ ಬಡವರಿದ್ದಾರೆ. ಗ್ರಾಮೀಣ ಪ್ರದೇಶ ದಿಂದ 35 ರಿಂದ 40 ಕಿ.ಲೋ. ಮೀಟ ರ್‌ನಿಂದತಮ್ಮ ಕೆಲಸ ಕಾರ್ಯಗಳಿಗೆ ಪಟ್ಟ ಣಕ್ಕೆ ನಿತ್ಯಸಾವಿರಾರು ಮಂದಿ ಬಂದು ಹೋಗು ತ್ತಾರೆ. ಕಾಲೇಜಿಗೆ ಬರುವವಿದ್ಯಾ ರ್ಥಿ ಗಳು, ಆಟೋ ಚಾಲಕರು, ರಸ್ತೆಬದಿ ವ್ಯಾಪಾರಿ ಗಳು,ಆಸ್ಪತ್ರೆಗೆ ಬಂದೋಗುವವರು, ಹೀಗೆ ನಿತ್ಯ ಹಲವು ಕೆಲಸಕಾರ್ಯಗಳಿಗೆ ಸಾವಿರಾರೂ ಜನ ಪಟ್ಟಣಕ್ಕೆ ಬರುತ್ತಾರೆ.
ದುಬಾರಿ ಬೆಲೆ: ಖಾಸಗಿ ಹೋಟೆಲ್ ಊಟಕ್ಕೆ ತೆರಳಿದರೆ 80 ರಿಂದ 100 ರೂಪಾಯಿಗಳು ಖರ್ಚಾ ಗುತ್ತದೆ. ದುಡಿದ ಲಾಭವೆಲ್ಲ ಊಟಕ್ಕೆ ಖರ್ಚಾಗುತ್ತದೆ ಎಂದು ಸಾರ್ವಜನಿಕರು ಉಪವಾಸದಲ್ಲಿಕೆಲಸ ಮಾಡಿಕೊಂಡು ಮನೆಗೆ ಖಾಲಿ ಹೊಟ್ಟೆಯಲ್ಲಿ ವಾಪಸ್ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಸಕರೇ ಗಮನಹರಿಸಿ: ಶಾಸಕರು ಆಲೂರು ತಾಲೂಕಿಗೆ ಕೆಲವೊಂದು ಸೌಲಭ್ಯ ತರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.ಇಂದಿರಾ ಕ್ಯಾಂಟೀನ್ ನಂತಹ ಬಡವರಿಗೆ ಉಪಯುಕ್ತವಾಗುವಯೋಜನೆ ತರುವಲ್ಲಿ ಇವರಿಂದ ಸಾಧ್ಯ ವಾಗದಿದ್ದರೆ ತಾಲೂಕು ಅಭಿವೃದ್ಧಿ ಹೇಗೆ ಸಾಧ್ಯ ಎಂಬುದು ಸ್ಥಳೀಯ ಪ್ರಶ್ನೆಯಾಗಿದೆ.
ಸೌಕರ್ಯಗಳಿಗಾಗಿ ಬೇಡುವ ಸ್ಥಿತಿ ದೂರದೂರಿಂದ ಬಡವರು, ಕೂಲಿ ಕಾರ್ಮಿಕರು, ತಮ್ಮಮ್ಮ ಕೆಲಸ ಕಾರ್ಯಗಳಿಗೆ ಆಲೂರು ಪಟ್ಟಣಕ್ಕೆ ಬರುತ್ತಾರೆ. ಸರಿಯಾದ ಊಟ ಸಿಗದೇ ಅಲೆಯು ವಂತಾಗಿದೆ. ಇಂದಿರಾಕ್ಯಾಂಟೀನ್ ಯಾರ ಹೆಸರಿನಲ್ಲಿ ಇರಲಿಬಡವರ ಹಸಿವು ನೀಗಿದರೆ ಸಾಕು.ಶಾಸಕರು ಈ ಬಗ್ಗೆ ಇವತ್ತಿನವರೆಗೂಸಂಬಂಧಪಟ್ಟ ಅಧಿಕಾರಿಗಳ ಜೊತೆಚರ್ಚಿಸಿಲ್ಲ. ಕೇಂದ್ರ ಹಾಗೂ ರಾಜ್ಯಸರ್ಕಾರದ ಅನುದಾನಗಳಿಗೆ ಗುದ್ದಲಿಪೂಜೆ ಮಾಡುವುದು ಬಿಟ್ಟರೇ ಬಡವರು,ಕೂಲಿಕಾರ್ಮಿಕರು, ದೀನ ದಲಿತರು ತಮ್ಮ ಮೂಲಭೂತ ಸೌಕರ್ಯಗಳಿಗಾಗಿ ಅಂಗಲಾಚಿ ಬೇಡುವಂತಹ ಪರಿಸ್ಥಿತಿನಿರ್ಮಾಣವಾಗಿದೆ ಎಂದು ಬಿಜೆಪಿ ಮುಖಂಡ ಎಚ್.ಬಿ. ಧರ್ಮರಾಜ್ ಹೇಳಿದರು.
ಹಿಂದೆಯೇ ಇಂದಿರಾ ಕ್ಯಾಂಟೀನ್ ಮಂಜೂರಾಗಿ ಹಳೇ ಪೊಲೀಸ್ ಕ್ವಾಟ್ರಸ್ ತೆರವುಗೊಳಿಸಿಇಂದಿರಾ ಕ್ಯಾಂಟೀನ್ ತೆರೆಯಲುತೀರ್ಮಾನಿಸ ಲಾಯಿತ್ತು. ಆದರೆಅದಕ್ಕೆ ಯಾವ ಕಾನೂನುಅಡಚಣೆ ಯಾಯಿತು ಎಂದು ಗೊತ್ತಾಗುತ್ತಿಲ್ಲ. ತಮ್ಮ ಕೆಲಸಕ್ಕಾಗಿದೂರದಿಂದ ಬರುವಜನಸಾಮಾನ್ಯ ರಿಗೆ ಊಟಕ್ಕಾಗಿ ಅಲೆಯುವಂತಾಗಿದೆ. ಇಂದಿರಾ ಕ್ಯಾಂಟೀನ್ ತೆರದರೆ ಕಡಿಮೆಬೆಲೆಯಲ್ಲಿ ಹಸಿವು ನೀಗಿಸಲು ಅನುಕೂಲವಾಗುತ್ತದೆ ಆದ್ದರಿಂದ ಶಾಸಕರು ಜತೆ ಚರ್ಚಿಸಲಾಗುವುದು. –ಕೆ.ಎಸ್.ಮಂಜೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ
ಶೇ.70ರಷ್ಟು ಕೂಲಿ ಕಾರ್ಮಿಕರು ಬಡವರು ಹೆಚ್ಚಿರುವ ಆಲೂರು ಪಟ್ಟಣದಲ್ಲಿ ಇಂದಿರಾಕ್ಯಾಂಟೀನ್ ಅವಶ್ಯಕತೆ ತುಂಬಾ ಇದೆ.ನಾಲ್ಕೈದು ವರ್ಷಗಳ ಹಿಂದೆಯೇ ಇಂದಿರಾಕ್ಯಾಂಟೀನ್‌ಆಗಬೇಕಿತ್ತು. ಜನಪ್ರತಿನಿಧಿಗಳ ಇಚ್ಛಾ ಶಕ್ತಿಕೊರೆತೆ ಎದ್ದು ಕಾಣುತ್ತಿದೆ. ಆದ್ದರಿಂದ ಈಗಲಾದರೂ ಇಂದಿರಾ ಕ್ಯಾಂಟೀನ್ ಬಗ್ಗೆ ಶಾಸಕರು ಗಮನ ಹರಿಸಬೇಕಿದೆ. –ಲೋಕೇಶ್ ಅಜ್ಜೆನಹಳ್ಳಿ, ಕಾಂಗ್ರೆಸ್ ಮುಖಂಡ
–ಟಿ.ಕೆ.ಕುಮಾರಸ್ವಾಮಿ ಆಲೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.