ಸಿಡಿ ಪ್ರಕರಣ: ಎಸ್‌ಐಟಿ ಅಧಿಕಾರಿಗಳ ವಾಟ್ಸ್ ಆ್ಯಪ್‌ಗೆ ಕನ್ನ?
ಮೊಬೈಲ್ ಹ್ಯಾಕ್‌ಗೆ ಮುಂದಾಗಿದ್ದ ಶ್ರವಣ್?
Team Udayavani, Mar 25, 2021, 6:45 AM IST
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ತಮ್ಮ ವಿರುದ್ಧ ಯಾವ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ತಿಳಿಯಲು ತನಿಖಾಧಿಕಾರಿಗಳ ಮೊಬೈಲ್‌ಗಳನ್ನೇ ಹ್ಯಾಕ್ ಮಾಡಲು ಮುಂದಾಗಿದ್ದರೆಂಬ ವಿಚಾರ ಬೆಳಕಿಗೆ ಬಂದಿದೆ.
ಪ್ರಕರಣದ ಕಿಂಗ್‌ಪಿನ್ ಎನ್ನಲಾದ ಪತ್ರಕರ್ತ ನರೇಶ್ ಡ, ಶ್ರವಣ್, ಸಿಡಿ ಪ್ರಕರಣದ ಯುವತಿ, ಉದ್ಯಮಿ ಶಿವಕುಮಾರ್, ಕಾರು ಚಾಲಕ ನಾಪತ್ತೆಯಾಗಿದ್ದಾರೆ. ಈ ಪೈಕಿ ಶ್ರವಣ್ ತಾಂತ್ರಿಕ ಪರಿಣಿತ . ಕೆಲವು ಆ್ಯಪ್‌ಗಳು, ಸಾಫ್ಟ್ವೇರ್ ಗಳನ್ನು ಬಳಸಿ ಲೊಕೇಶನ್ ಗಳನ್ನೇ ಹ್ಯಾಕ್ ಮಾಡಿ ಉತ್ತರ ಭಾರತದ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದಾರೆ. ಬೆನ್ನು ಬಿದ್ದಿರುವ ಎಸ್‌ಐಟಿ ಅಧಿಕಾರಿಗಳ ದಿಕ್ಕುತಪ್ಪಿಸುತ್ತಿದ್ದಾರೆ ಎನ್ನಲಾಗಿದೆ.
ಗೊತ್ತಾಗಿದ್ದು ಹೇಗೆ?
ಇತ್ತೀಚೆಗೆ ಎಸ್‌ಐಟಿಯ ಕೆಲವು ಅಧಿಕಾರಿಗಳಿಗೆ ನಿರಂತರವಾಗಿ ವಾಟ್ಸ್ ಆ್ಯಪ್ ಒಟಿಪಿ ಸಂದೇಶಗಳು ಬಂದಿವೆ. ಅನುಮಾನಗೊಂಡ ಅಧಿಕಾರಿಗಳು ಸೈಬರ್ ವಿಭಾಗದಲ್ಲಿ ಪರಿಶೀಲಿಸಿದಾಗ ಹ್ಯಾಕಿಂಗ್ ಒಟಿಪಿಗಳಾಗಿದ್ದು, ನಿರ್ದಿಷ್ಟ ವ್ಯಕ್ತಿಯೇ ಈ ರೀತಿ ಮಾಡುತ್ತಿದ್ದಾನೆ ಎಂಬುದು ಪತ್ತೆಯಾಗಿದೆ. ಅದರ ಜಾಡು ಹಿಡಿದಾಗ ಸಿಡಿ ಆರೋಪಿಗಳೇ ಈ ಕೃತ್ಯ ಎಸಗುತ್ತಿದ್ದಾರೆ ಎಂಬುದು ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಐವರು ನಾಪತ್ತೆ
ಆರೋಪಿಗಳ ಬೆನ್ನುಬಿದ್ದ ಎಸ್‌ಐಟಿಗೆ ಮತ್ತೂಂದು ಸ್ಫೋಟಕ ವಿಚಾರ ತಿಳಿದುಬಂದಿದೆ. ಮಾ. 10ರಿಂದ 18ರ ವರೆಗೆ ನರೇಶ್ ಗೌಡ, ಶ್ರವಣ್, ಸಿಡಿ ಲೇಡಿ, ಉದ್ಯಮಿ ಶಿವಕುಮಾರ್, ಆತನ ಕಾರು ಚಾಲಕ ಒಟ್ಟಿಗೆ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹೊಟೇಲ್, ಲಾಡ್ಜ್ ಗಳ ನೋಂದಣಿ ಪುಸ್ತಕದಲ್ಲಿ ಒಬ್ಬರ ಹೆಸರು ಬರೆದು +2, +5 ಎಂದು ನಮೂದಿಸಿದ್ದಾರೆ. ಅನಂತರ ಪ್ರತ್ಯೇಕವಾಗಿ ತೆರಳಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಮಾ. 2ರಂದು ಸಿಡಿ ಬಿಡುಗಡೆ ಬಳಿಕ ಮಾ. 7ರ ವರೆಗೆ ನಗರದಲ್ಲಿ ವಾಸ್ತವ್ಯ ಹೂಡಿದ್ದರು. ಬಂಧನ ಭೀತಿಯಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದರು. ಆರೋ ಪಿ ಗಳ ಜತೆ ನಿಕಟ ಸಂಪರ್ಕದಲ್ಲಿದ್ದವರು, ಸ್ನೇಹಿತರು, ಸಂಬಂಧಿಕರು ಸೇರಿ ಹಲವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಎಸ್‌ಐಟಿ ಮುಂದಾಗಿದೆ.
ನಕಲಿ ನಂಬರ್, ನಕಲಿ ಹೆಸರು!
ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ತಾವು ತಂಗುವ ಹೊಟೇಲ್, ಲಾಡ್ಜ್ ಗಳು, ರೆಸಾರ್ಟ್‌ಗಳ ನೋಂದಣಿ ಪುಸ್ತಕದಲ್ಲಿ ಅಪರಿಚಿತರ ಹೆಸರು, ಮೊಬೈಲ್ ನಂಬರ್ ಗಳನ್ನು ಉಲ್ಲೇಖೀಸಿದ್ದಾರೆ. ಆರೋಪಿಗಳ ಲೊಕೇಷನ್ ಸಂಗ್ರಹಿಸಿ ನಿಗದಿತ ಸ್ಥಳಕ್ಕೆ ಹೋಗುವ ಕೆಲ ಹೊತ್ತಿನಲ್ಲೇ ಸ್ಥಳದಲ್ಲಿ ಕಾಲ್ಕಿಳುತ್ತಿದ್ದಾರೆ. ಬಳಿಕ ಅಲ್ಲಿನ ಸಿಸಿ ಕೆಮರಾ ಶೋಧಿಸಿದಾಗ ಆರೋಪಿಗಳು ಓಡಾಡಿರುವ ದೃಶ್ಯ ಗಳು ಸೆರೆಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.