ಕಲ್ಸಂಕ – ಈಶ್ವರನಗರ ಮಾರ್ಗದ ರಾ.ಹೆ. ಕತ್ತಲ ಕೂಪ
Team Udayavani, Mar 25, 2021, 5:55 AM IST
ತೀರ್ಥಹಳ್ಳಿ- ಕಲ್ಸಂಕ ರಾ.ಹೆ. ವಿಸ್ತರಣೆ ಕಾಮಗಾರಿ ನಗರ ಸಭೆ ಡಿವೈಡರ್ ಮಧ್ಯದಲ್ಲಿ ಅಳವಡಿಸಿದ್ದ ಬೀದಿದೀಪ, ಹೈಮಾಸ್ಟ್ ದೀಪದ ಕಂಬಗಳನ್ನು ತೆರವುಗೊಳಿಸಿತ್ತು. ಆ ಬಳಿಕ ಕಾಮಗಾರಿ ಆದ ಬಳಿಕವೂ ಅದನ್ನು ಮತ್ತೆ ಅಳವಡಿಸದೆ ಇಲ್ಲಿ ರಾತ್ರಿ ಹೊತ್ತಲ್ಲಿ ಜನರು ಭಯದಲ್ಲೇ ಸಂಚರಿಸುವಂತಾ ಗಿದೆ.
ಉಡುಪಿ: ನಗರದಿಂದ ತೀರ್ಥಹಳ್ಳಿ, ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ಕಡಿಯಾಳಿ- ಪರ್ಕಳದ ವರೆಗಿನ ರಾ.ಹೆ. ಕಳೆದೆರಡು ವರ್ಷದಿಂದ ಕತ್ತಲೆಯಲ್ಲಿ ಮುಳುಗಿದ್ದು, ರಾತ್ರಿ ವೇಳೆ ಈ ಮಾರ್ಗ ದಲ್ಲಿ ಓಡಾಡುವವರ ಸುರಕ್ಷತೆಗೆ ಅಭದ್ರತೆ ಕಾಡುತ್ತಿದೆ.
2019ರ ಕೊನೆಯಲ್ಲಿ ತೀರ್ಥಹಳ್ಳಿ- ಕಲ್ಸಂಕ ರಾ.ಹೆ. ವಿಸ್ತರಣೆ ಕಾಮಗಾರಿ ಪ್ರಾರಂಭವಾಗಿತ್ತು. ಆ ವೇಳೆ ನಗರಸಭೆ ಕಾಮಗಾರಿ ನಿಮಿತ್ತ ಹಿಂದೆ ಡಿವೈಡರ್ ಮಧ್ಯೆ ಅಳವಡಿಸಿದ್ದ ಬೀದಿ ದೀಪ, ಹೈಮಾಸ್ಟ್ ದೀಪಗಳನ್ನು ತೆರವುಗೊಳಿಸಿತ್ತು. ಇದೀಗ ಕಲ್ಸಂಕ- ಈಶ್ವರನಗರದ ವರೆಗಿನ ರಸ್ತೆ ಕಾಮಗಾರಿ ಪೂರ್ಣಗೊಂಡರೂ, ಬೀದಿ ದೀಪ, ಹೈಮಾಸ್ಟ್ ಅಳವಡಿಕೆಯಾಗಿಲ್ಲ. ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ ಹಲವಾರು ಮಂದಿ ನಗರಸಭೆಗೆ ನಿರಂತರವಾಗಿ ಆಗ್ರಹಿಸುತ್ತಾ ಬಂದಿದ್ದಾರೆ.
ನಗರಸಭೆಯಲ್ಲಿ ಜನಪ್ರತಿನಿಧಿಗಳು ಅಧಿಕಾರ ಸ್ವೀಕರಿಸಿ ಹಲವು ತಿಂಗಳಾಗಿದೆ. 4 ಸಾಮಾನ್ಯ ಸಭೆಯಲ್ಲಿ ಬೀದಿ ದೀಪಗಳ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಪ್ರಸ್ತಾವಿಸಿದರೂ, ಮಣಿಪಾಲ ರಾ.ಹೆ. ಕುರಿತು ಯಾರೂ ಮಾತನಾಡುತ್ತಿಲ್ಲ. ಸರಗಳ್ಳತನ, ದರೋಡೆ ಪ್ರಕರಣಗಳು ಹೆಚ್ಚುತ್ತಿರುವ ಸಮಯದಲ್ಲಿ ದೀಪಗಳನ್ನು ಅಳವಡಿಸಲು ಮುಂದಾಗದೆ ಇರು ವುದು ವಿಪರ್ಯಾಸ. ದೊಡ್ಡ ಅನಾಹುತ ಸಂಭವಿಸುವವರೆಗೂ ಜನಪ್ರತಿನಿಧಿ ಗಳಿಗೆ ಹಾಗೂ ಅಧಿಕಾರಿಗಳಿಗೆ ಸಮಸ್ಯೆ ತೀವ್ರತೆಯ ಅರಿವು ಮೂಡುವುದಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.
ನಿರ್ವಹಣೆ ನಗರಸಭೆ ಜವಾಬ್ದಾರಿ
ಎನ್‌ಎಚ್ ಅಧಿಕಾರಿಗಳು ಕಾಮಗಾರಿ ಪೂರ್ಣಗೊಂಡ ಮಾರ್ಗದಲ್ಲಿ ಹೊಸ ಬೀದಿ ದೀಪಗಳನ್ನು ಅಳವಡಿಸುವುದಾಗಿ ಹಾಗೂ ಅದರ ಸಂಪೂರ್ಣ ನಿರ್ವ ಹಣೆಯ ವೆಚ್ಚವನ್ನು ನಗರಸಭೆ ಭರಿಸಬೇಕು ಎಂಬುದಾಗಿ ಜಿಲ್ಲಾಧಿಕಾರಿಗಳ ನೇತೃತ್ವ ದಲ್ಲಿ ನಡೆದ ಸಭೆಯಲ್ಲಿ ಮೌಖೀಕವಾಗಿ ತಿಳಿಸಿದ್ದಾರೆ. ಈ ಬಗ್ಗೆ ಯಾವುದೇ ಪತ್ರ ವ್ಯವ ಹಾರ ಗಳ ನಡೆದಿಲ್ಲ.
ಪ್ರಸ್ತುತ ಕಲ್ಸಂಕದಿಂದ ಕಡಿಯಾಳಿ ದೇವಸ್ಥಾನದ ವರೆಗೆ ಬೀದಿ ದೀಪಗಳು ಕಾರ್ಯಾ ಚರಿಸುತ್ತಿದೆ. ಇದರ ನಿರ್ವಹಣೆಯನ್ನು ಗುತ್ತಿಗೆದಾರರೊಬ್ಬರಿಗೆ ನೀಡಲಾಗಿದೆ.
ಮೊಬೈಲ್ ಬೆಳಕಿನಲ್ಲೇ ತೆರಳಬೇಕಾದ ಪರಿಸ್ಥಿತಿ
ರಾತ್ರಿ ವೇಳೆ ಬಸ್ ಇಲ್ಲದ ಹಿನ್ನೆಲೆಯಲ್ಲಿ ಮಣಿಪಾಲದ ಟೈಗರ್ ಸರ್ಕಲ್‌ನಿಂದ ಈಶ್ವರ ನಗರದ ವರೆಗೆ ನಡೆದುಕೊಂಡು ಹೋಗಬೇಕಾಗಿದೆ. ಮಣಿಪಾಲದ ಎಂಐಟಿವರೆಗೆ ಅಂಗಡಿಗಳಿಂದ ಹೊರ ಸೂಸುವ ಬೆಳಕಿನ ಸಹಾಯದಿಂದ ಯಾವುದೇ ಭಯವಿಲ್ಲದೆ ಹೋಗ ಬಹುದು. ಅನಂತರ ಹಾದಿಯನ್ನು ಮೊಬೈಲ್ ಬೆಳಕಿನಿಂದಲೇ ಕ್ರಮಿಸಬೇಕಾದ ಪರಿಸ್ಥಿತಿ. ಸಾರ್ವಜನಿಕರ ಹಿತದೃಷ್ಟಿಯಿಂದ ಬೀದಿ ದೀಪಗಳನ್ನು ಅಳವಡಿಸಿದರೆ ಉತ್ತಮ.
– ಶಶಾಂತ್ ಭಟ್, ಸ್ಥಳೀಯರು
ಬೀದಿ ದೀಪಗಳನ್ನು ಅಳವಡಿಸಲು ಕ್ರಮ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬೀದಿ ದೀಪಗಳನ್ನು ಅಳವಡಿಸಿಕೊಡುವುದಾಗಿ ಮೌಖೀಕವಾಗಿ ಹೇಳಿದ್ದು, ದೀಪಗಳ ನಿರ್ವಹಣೆಯನ್ನು ನಗರಸಭೆಯಿಂದ ಮಾಡುವ ಕುರಿತು ಪತ್ರವನ್ನು ಕೇಳಿದ್ದಾರೆ. ಶೀಘ್ರದಲ್ಲಿ ಈ ಮಾರ್ಗದಲ್ಲಿ ದೀಪಗಳನ್ನು ಅಳವಡಿಸುವತ್ತ ಗಮನ ಹರಿಸಲಾಗುತ್ತದೆ.
-ಸುಮಿತ್ರಾ ಆರ್. ನಾಯಕ್ ಅಧ್ಯಕ್ಷೆ, ನಗರಸಭೆ ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ನಗರದ ಎಲ್ಲೆಡೆ ಖರೀದಿ ಭರಾಟೆ; ಬೆಳಕಿನ ಹಬ್ಬ ದೀಪಾವಳಿಗೆ ಇನ್ನು ಒಂದೇ ದಿನ ಬಾಕಿ
Udupi: ಸಿಗುತ್ತಿಲ್ಲ ಡಾಮರು ಮಿಶ್ರಣ!; ಹಾನಿಗೊಂಡ ರಸ್ತೆಗಳ ದುರಸ್ತಿಗೆ ಕೂಡಿಬರದ ಕಾಲ
Sports; ಕುಚ್ಚೂರು: ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
Ajekar:ಪ್ರಿಯಕರನೊಂದಿಗೆ ಸೇರಿ ಪತಿಯ ಹ*ತ್ಯೆ ಪ್ರಕರಣ:ಪೊಲೀಸರ ತಂಡದಿಂದ ಸಾಕ್ಷ್ಯಗಳ ಹುಡುಕಾಟ
Udupi: ಇಂದ್ರಾಳಿ ಮೇಲ್ಸೇತುವೆ: ಜ. 15 ರೊಳಗೆ ಮುಗಿಸಲು ಗಡುವು
MUST WATCH
ಹೊಸ ಸೇರ್ಪಡೆ
Darshan: ಜೈಲಿನಿಂದ ಹೊರಬರುತ್ತಿದ್ದಂತೆ ದರ್ಶನ್ ಕಾರು ಅಡ್ಡಗಟ್ಟಿ ಜೈಕಾರ ಕೂಗಿದ ಫ್ಯಾನ್ಸ್
Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
ನಿರಾಶ್ರಿತ ರೋಹಿಂಗ್ಯಾ ಮಕ್ಕಳ ಶಾಲೆ ಪ್ರವೇಶಕ್ಕೆ ಅನುಮತಿ ಕೊಡಿ: PIL ವಜಾಗೊಳಿಸಿದ ಹೈಕೋರ್ಟ್
Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು
ಕೃಷಿ ಭೂಮಿ ಉಳಿಸುವ ಪ್ರಯತ್ನವಾಗಲಿ: ರಾಮಕೃಷ್ಣ ಶ್ರೀಪಾದ ಹೆಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.