ಆಯುಷ್‌ಪ್ರದ ಆಮಲಕೀ ಏಕಾದಶಿ ಮಹತ್ವ !


Team Udayavani, Mar 25, 2021, 6:30 AM IST

ಆಯುಷ್‌ಪ್ರದ ಆಮಲಕೀ ಏಕಾದಶಿ ಮಹತ್ವ !

ಸಾಮಾನ್ಯವಾಗಿ ಏಕಾದಶಿ ದಿವಸವನ್ನು ವ್ರತ ಅಥವಾ ಉಪವಾಸ ಪೂರ್ವಕ ಆಚರಿಸುವವರು ಕೆಲವರಾದರೆ, ಅದರ ಹೆಸರನ್ನಾದರೂ ಕೇಳದವರು ಕಡಿಮೆ. ಏಕಾದಶಿ ವ್ರತ ಹಲವು. ಆಮಲಕೀ, ಜಯ, ನಿರ್ಜಲ, ರಮ, ಷಟಿ¤ಲ, ಅಪರ, ಮೋಕ್ಷದಾ, ಪರಮ ಮತ್ತು ಸಫ‌ಲ ಏಕಾದಶಿ. ಪಾಲ್ಗುಣ ಶುಕ್ಲ, ಏಕಾದಶಿ, ಆಮಲಕೀ ಅಥವಾ ಆಮಲಕ. ಫ‌ಲ್ಗುಣ ಶುಕ್ಷ ಏಕಾದಶಿ ಎಂದೂ ಕರೆಯಬಹುದು. ಭಕ್ತರು ಅಂದು ಉಪವಾಸದ ಹೊರತಾಗಿ ಆಮಲಕ, ನೆಲ್ಲಿ ಮರವನ್ನು ಪೂಜಿಸುತ್ತಾರೆ. ಅಂದು ಮಹಾವಿಷ್ಣುವಿನ ವಿಶೇಷ ಸನ್ನಿಧಾನ ಆ ಮರದಲ್ಲಿರುತ್ತದೆ ಎಂಬ ನಂಬಿಕೆ.

ಬ್ರಹ್ಮಾಂಡ ಪುರಾಣದಲ್ಲಿ ಅಮಲಕಿಯ ಉಲ್ಲೇಖ ವಿದೆ. ವಾಲ್ಮೀಕಿಯೂ ವರ್ಣಿಸುತ್ತಾನೆ. ಇದರ ಕುರಿ ತಾದ ಅನೇಕ ಕಥೆಗಳು ಪುರಾಣಗಳಲ್ಲಿವೆ. ಆಮಲಕೀ ಏಕಾದಶಿಯ ಮರುದಿನ ಗೋವಿಂದ ದ್ವಾದಶಿ! ಅಂದು ಆಮಲಕೀ ಮರದಲ್ಲಿ ಲಕ್ಷ್ಮೀ ಸನ್ನಿಧಾನವೂ ಇರುತ್ತದೆ. ಕೃಷ್ಣ-ರಾಧೆ ನೆಲೆಸುತ್ತಾರೆ ಎಂಬ ನಂಬಿಕೆಯೂ ಇದೆ. ಮುಖ್ಯವಾಗಿ ಆರೋಗ್ಯ ಮತ್ತು ಸಂಪತ್ತನ್ನು ಗಳಿಸಲು ಆಮಲಕೀ ವೃಕ್ಷವನ್ನು ಪೂಜಿಸುತ್ತಾರೆ.

ಅಮಲಕಿಯ ವ್ರತ ಕಥೆ: ರಾಜಾ ಚಿತ್ರಸೇನ ಆಮಲಕೀ ಏಕಾದಶೀ ವ್ರತವನ್ನು ಆಚರಿಸಿದ್ದರ ಫ‌ಲ ವಾಗಿ ಕಾಡಿನಲ್ಲಿ ಬೇಟೆಯಾಡುತ್ತಿದ್ದಾಗ ಅವನನ್ನು ಸೆರೆಹಿಡಿದಿದ್ದ ರಾಕ್ಷಸರು, ರಾಜನ ದೇಹದಿಂದ ಹೊರಟ ಒಂದು ದಿವ್ಯ ಪ್ರಭೆಯಿಂದಾಗಿ ಮೂರ್ಛೆಹೋದ ಪ್ರಸಂಗ. ಬ್ರಹ್ಮಾಂಡ ಪುರಾಣದ ವಸಿಷ್ಠ ಮಹರ್ಷಿಗಳು ಹೇಳುವ ಒಂದು ಕಥೆಯಂತೆ ವಿಧಿಶಾದ ರಾಜ ಚೈತ್ರರಥ ಆಮಲಕ ಏಕಾದಶಿ ವ್ರತವನ್ನಾಚರಿಸಿ, ಪರಶುರಾಮ ದೇವರನ್ನು ಪೂಜಿಸುತ್ತಿದ್ದಾಗ ಅಲ್ಲಿಗೆ ಆಗಮಿಸಿದ ಬೇಡನೊಬ್ಬನೂ ಶ್ರದ್ಧಾ ಭಕಿಯಿಂದ ವ್ರತವನ್ನಾಚರಿಸಿ, ತನ್ನ ಪುನಃರ್ಜನ್ಮದಲ್ಲಿ ರಾಜಾ ವಸುರಥನಾಗಿ ಜನಿಸಿದ. ಚಿತ್ರಸೇನನ ಕಥೆಯಂತೆ ವಸುರಥನೂ ಬೇಟೆಯ ಸಂದರ್ಭದಲ್ಲಿ ಶತ್ರುಗಳಿಂದ ಪಾರಾದ. ವಸುರಥ ತನ್ನ ಪೂರ್ವಜನ್ಮದಲ್ಲಿ ಅಮಲಕಿ ವ್ರತವನ್ನು ಆಚರಿಸಿದ್ದ.

ಆಮಲಕೀ ಔಷಧೀಯ ಮಹತ್ವ: ವಿಶೇಷ ವಾಗಿ ಆಮಲಕೀಯನ್ನು ಆಯುರ್ವೇದ ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ. ವಿಟಮಿನ್‌ ಸಿ ಒಳಗೊಂಡಿರುವ ಅದರಲ್ಲಿ ಉತ್ತಮ ಔಷಧೀಯ ಗುಣವಿದೆ. ಸೃಷ್ಟಿಯಲ್ಲಿ ಮೊತ್ತಮೊದಲ ಮರ ಎಂದರೆ ಆಮಲಕೀ ಮರ ಎಂದು ಹೇಳಲಾಗುತ್ತದೆ. ಇದರ ವಿಶಿಷ್ಟ ಔಷಧೀಯ ಮಹತ್ವದಿಂದಾಗಿ, ಇದರ ಉಲ್ಲೇಖಗಳನ್ನು ವೇದಗಳು, ಶಿವಪುರಾಣ, ಸ್ಕಂದಪುರಾಣ, ಪದ್ಮಪುರಾಣ, ರಾಮಾಯಣ, ಕಾದಂಬರಿ, ಚರಕ ಸಂಹಿತಾ, ಶುಶ್ರುತ ಸಂಹಿತಾಗಳಲ್ಲಿ ಕಾಣಬಹುದು. ಇದರಲ್ಲಿನ ಹಣ್ಣು ಅಮೃತ ಫ‌ಲ ಎಂದು ಪ್ರಸಿದ್ಧಿ. ಆ್ಯಂಟಿ ಏಜಿಯಿಂಗ್‌ ಔಷಧ ತಯಾರಿಯಲ್ಲಿ ಆಮಲಕೀ ಪ್ರಮುಖವಾಗಿದೆ.

ಅದು ಜೀವಕೋಶವನ್ನು ಯೌವನವಾಗಿರಿಸುವ ಅತ್ಯುತ್ತಮ ಗಿಡಮೂಲಿಕೆ. ಆ್ಯಂಟಿ ಓಕ್ಸಿಡೆಂಟ್‌, ವಿಟಮಿನ್‌ ಸಿ, ಟ್ಯಾನಿನ್‌, ಮತ್ತು ಗ್ಯಾಲಿಕ್‌ ಆಮ್ಲದಿಂದೊಡಗೂಡಿದ ಪುಷ್ಟಿಯುಕ್ತ ಔಷಧ. ಅದರಲ್ಲಿ ರಸಾಯನ (ಎಡಾಪ್ರೋಜನಿಕ್‌) ಅಜರ (ಆ್ಯಂಟಿ ಏಜಿಯಿಂಗ್‌), ಆಯುಷ್‌ಪ್ರದ (ದೀರ್ಘ‌ ಜೀವಕೋಶ ಆಯುಷ್ಯ) ಸಂಧಣಿಯ (ಜೀವಕೋಶ ಸ್ಥಳಾಂತರ ಇತ್ಯಾದಿ ವೃದ್ಧಿಸುತ್ತದೆ). ಆಮಲಕೀ ಯೌವನಾವಸ್ಥೆಯನ್ನು ಉಳಿಸುತ್ತದೆ. “ಆಮಲಕೀ ವಯಸ್ಥಾಪ್ನನಮಂ ಶ್ರೇಷ್ಠಂ’ ಎನ್ನುತ್ತದೆ ಚರಕ ಸಂಹಿತೆ. ಆಮಲಕೀಯಲ್ಲಿ ಕಡಿಮೆ ತೂಕದ ಹೈಡ್ರೋಲಿಸೆಬಲ್‌ ಟ್ಯಾನಿನ್‌ ಪರಮಾಣು ಗುಂಪುಗಳಿವೆ (ಎಂಬ್ಲಿಕ್ಯಾನಿನ್‌ ಎ ಮತ್ತು ಬಿ). ಆದ್ದರಿಂದ ಅದು ಒಂದು ಶಕ್ತಿಶಾಲೀ ಆ್ಯಂಟಿಆಕ್ಸಿಡೆಂಟ್‌ ಗಿಡಮೂಲಿಕೆ ಎಂದು ಆಯುರ್ವೇದದಲ್ಲಿ ಪರಿಗಣಿಸ ಲ್ಪಟ್ಟಿದೆ. ಆಮಲಕೀ ಹಣ್ಣು, ಬೀಜ, ಎಲೆ, ಹೂವು ಎಲ್ಲವೂ ಔಷಧೀಯ ಗುಣವನ್ನು ಹೊಂದಿವೆ.

ಆಮಲಕೀ, ಜೀವಕೋಶಕ್ಕೆ ವಯಸ್ಸಾಗುವುದನ್ನು ತಡೆಯುತ್ತದೆ, ಹೃದಯ ಸಂಬಂಧೀ ಕಾಯಿಲೆಯಿಂದ ರಕ್ಷಣೆ ಒದಗಿಸುತ್ತದೆ, ಹೆಪಟೋಟಾಕ್ಸಿಕ್‌ ನಿಂದ ರಕ್ಷಿಸುತ್ತದೆ, ಕ್ಯಾನ್ಸರ್‌ನಿಂದ ರಕ್ಷಣೆ ಒದಗಿಸುತ್ತದೆ. ಅದು ಇಮ್ಯುನೋಮೋಡ್ಯುಲೇಟರ್‌. ಸೈಟೋ ಪ್ರೊಟೆಕ್ಟಿವ್‌, ಕಣ್ಣಿನ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. ಗ್ಯಾಸ್ಟ್ರಿಕ್‌, ಪಚನ ಕ್ರಿಯೆ ಸಂಬಂಧೀ ರೋಗಗಳಿಗೆ ಉಪಶಮನಕಾರಿಯಾಗಿದೆ. ಅದು ಆ್ಯಂಟೀ ಇನ್‌ಫ್ಲೇಮೇಟರಿ ಮತ್ತು ಆ್ಯಂಟಿ ಪೈರೆಟಿಕ್‌. ಆಂಟಿಹೈಪರ್‌ಥೈರಾಯ್ಡ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆಗೊಳಿಸುತ್ತದೆ.

ಬ್ಯಾಕ್ಟೀರಿಯಾ ನಾಶಕಾರಿ. ನೆಫೋ› ಮತ್ತು ನ್ಯೂರೋ ಪ್ರೊಟೆಕ್ಟಿವ್‌. ವಿವಿಧ ಮನೆ ಔಷಧಗಳನ್ನೂ ಆಮಲಕೀಯನ್ನು ಬಳಸಿ ಸೇವಿಸ ಬಹುದು. ಮನುಕುಲದ ಶ್ರೇಯಸ್ಸಿಗೆ, ಒಳಿತಿಗೆ, ನಮ್ಮ ಪ್ರಾಚೀನರು ಆಮಲಕೀಯ ಔಷಧೀಯ ಮಹತ್ವವನ್ನು ಅರಿತೇ ಏಕಾದಶಿಯನ್ನು ಆಮಲಕೀಯ ಹೆಸರಿನಲ್ಲಿ ವ್ರತರೂಪದಲ್ಲಿ ಆಚರಿಸಬೇಕೆಂದು ವಿವಿಧ ಗ್ರಂಥಗಳಲ್ಲಿ ಸಾರಿದ್ದಾರೆ. ಇದರ ಔಷಧೀಯ ಗುಣಗಳನ್ನಾದರೂ ತಿಳಿಯುವ ಪ್ರಯತ್ನ ಮಾಡೋಣ.

– ಜಲಂಚಾರು ರಘುಪತಿ ತಂತ್ರಿ ಉಡುಪಿ

ಟಾಪ್ ನ್ಯೂಸ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್‌ ಇದ್ರು: ಫೋಟೋ ಸಾಕ್ಷ್ಯ ಲಭ್ಯ!

Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್‌ ಇದ್ರು: ಫೋಟೋ ಸಾಕ್ಷ್ಯ ಲಭ್ಯ!

7-dharmasthala

Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

6-siruguppa

Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.